AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JEE Main Result 2022: ಜೆಇಇ ಮುಖ್ಯ ಪರೀಕ್ಷೆಯ ಜೂನ್​ ಸೆಷನ್​ನ ಫಲಿತಾಂಶ ಇಂದು ಪ್ರಕಟ ಸಾಧ್ಯತೆ

JEE ಮೇನ್ 2022 ಪರೀಕ್ಷೆಗಳನ್ನು ಜೂನ್ 23ರಿಂದ 29ರವರೆಗೆ ನಡೆಸಲಾಗಿತ್ತು. ಫಲಿತಾಂಶದ ಲಿಂಕ್ ಇಂದು ಸಕ್ರಿಯಗೊಳ್ಳುವ ನಿರೀಕ್ಷೆಯಿದೆ.

JEE Main Result 2022: ಜೆಇಇ ಮುಖ್ಯ ಪರೀಕ್ಷೆಯ ಜೂನ್​ ಸೆಷನ್​ನ ಫಲಿತಾಂಶ ಇಂದು ಪ್ರಕಟ ಸಾಧ್ಯತೆ
ಸಾಂದರ್ಭಿಕ ಚಿತ್ರImage Credit source: NDTV
TV9 Web
| Updated By: ಸುಷ್ಮಾ ಚಕ್ರೆ|

Updated on:Jul 09, 2022 | 9:26 AM

Share

ನವದೆಹಲಿ: 2022ನೇ ಸಾಲಿನ ಜೆಇಇ (JEE) ಮುಖ್ಯ ಪರೀಕ್ಷೆಯ ಜೂನ್ ಸೆಷನ್​ನ ಫಲಿತಾಂಶ ಇಂದು ಪ್ರಕಟವಾಗುವ ಸಾಧ್ಯತೆಯಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) JEE ಮೇನ್ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ ಆದ jeemain.nta.nic.inನಲ್ಲಿ ಬಿಡುಗಡೆ ಮಾಡಲಾಗುತ್ತದೆ. NTA ಈಗಾಗಲೇ JEE ಮುಖ್ಯ ಪರೀಕ್ಷೆಯ ಪ್ರಾವಿಷನಲ್ ಫೈನಲ್ ಆನ್ಸರ್ ಕೀಯನ್ನು ಜುಲೈ 6ರಂದು ಬಿಡುಗಡೆ ಮಾಡಿದೆ.

JEE ಮುಖ್ಯ ಪರೀಕ್ಷೆಯನ್ನು ಅನೇಕ ಪಾಳಿಗಳಲ್ಲಿ ನಡೆಸಲಾಗಿದೆ. JEE ಮೇನ್ಸ್​ 2022ರ ಫಲಿತಾಂಶ ಸಿದ್ಧವಾಗಿದೆ ಮತ್ತು ಫಲಿತಾಂಶದ ಲಿಂಕ್ ಇಂದು ಸಕ್ರಿಯಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಜೆಇಇ ಮೇನ್‌ನಲ್ಲಿ ಇಬ್ಬರು ಅಥವಾ ಎರಡಕ್ಕೂ ಹೆಚ್ಚಿನ ಅಭ್ಯರ್ಥಿಗಳು ಒಂದೇ ಅಂಕಗಳನ್ನು ಗಳಿಸಿದರೆ ಟೈ ಬ್ರೇಕಿಂಗ್ ವಿಧಾನವನ್ನು ಅನುಸರಿಸಲಾಗುತ್ತದೆ.

ಇದನ್ನೂ ಓದಿ: TS SSC Result 2022: ಇಂದು ತೆಲಂಗಾಣ 10ನೇ ತರಗತಿ ಫಲಿತಾಂಶ ಪ್ರಕಟ: ನೋಡುವುದು ಹೇಗೆ?

ಇದನ್ನೂ ಓದಿ
Image
Career Guidelines: ಬೆರಳ ತುದಿಯಲ್ಲೇ ಇದೆ ಬದುಕು ರೂಪಿಸಿಕೊಳ್ಳುವ ಅಸ್ತ್ರ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇಲ್ಲಿವೆ ಸುಗಮ ಮೆಟ್ಟಿಲುಗಳು
Image
ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಶಿಕ್ಷಕರ ನೇಮಕ -ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಕಟ
Image
CBSE 10th Result 2022: ಇಂದು ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ ಸಾಧ್ಯತೆ

ಜೆಇಇ ಮುಖ್ಯ ಸೆಷನ್ 2ಕ್ಕೆ ನೋಂದಣಿ ಕಾರ್ಯ ಶುರುವಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jeemain.nta.nic.inನಲ್ಲಿ ಇಂದೇ ಅರ್ಜಿ ಸಲ್ಲಿಸಬಹುದು. JEE ಮುಖ್ಯ ಸೆಷನ್ 2 ಜುಲೈ 21ರಿಂದ ಜುಲೈ 30ರವರೆಗೆ ನಡೆಯಲಿದೆ. ಫಲಿತಾಂಶಗಳು ಹೊರಬಂದ ನಂತರ NTA ತನ್ನ ಅಧಿಕೃತ ವೆಬ್‌ಸೈಟ್ www.jeemain.nta.nic.in ನಲ್ಲಿ JEE ಅಂತಿಮ ಕಟ್-ಆಫ್ ಅನ್ನು ಪ್ರಕಟಿಸುತ್ತದೆ. ತಮ್ಮ JEE ಮುಖ್ಯ ಫಲಿತಾಂಶವನ್ನು ಚೆಕ್ ಮಾಡಲು ಅಭ್ಯರ್ಥಿಗಳಿಗೆ ರೋಲ್ ನಂಬರ್ ಮತ್ತು ಹುಟ್ಟಿದ ದಿನಾಂಕದ ಅಗತ್ಯವಿರುತ್ತದೆ.

ಇದನ್ನೂ ಓದಿ: CBSE 10th Result 2022: ಇಂದು ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ ಸಾಧ್ಯತೆ

JEE ಮೇನ್ 2022 ಪರೀಕ್ಷೆಗಳನ್ನು ಜೂನ್ 23ರಿಂದ 29ರವರೆಗೆ ನಡೆಸಲಾಗಿತ್ತು.

ಫಲಿತಾಂಶ ವೀಕ್ಷಿಸಲು ಹೀಗೆ ಮಾಡಿ.

NTA JEE Main 2022 ಅಧಿಕೃತ ವೆಬ್‌ಸೈಟ್‌ಗೆ www.jeemain.nta.nic.in ಭೇಟಿ ನೀಡಿ.

‘JEE ಮುಖ್ಯ ಫಲಿತಾಂಶ 2022 ಡೌನ್‌ಲೋಡ್ ಮಾಡಿ’ ಅಥವಾ ‘ಸ್ಕೋರ್ ಕಾರ್ಡ್ ವೀಕ್ಷಿಸಿ’ ಲಿಂಕ್ ಅನ್ನು ಕ್ಲಿಕ್ ಮಾಡಿ.

ಅಪ್ಲಿಕೇಶನ್ ಸಂಖ್ಯೆ, DOB ನಂತಹ ನಿಮ್ಮ ವಿವರಗಳನ್ನು ನಮೂದಿಸಿ.

‘ಸಲ್ಲಿಸು’ (ಸಬ್ಮಿಟ್) ಎಂಬಲ್ಲಿ ಕ್ಲಿಕ್ ಮಾಡಿ.

ಜೂನ್ ಸೆಷನ್‌ನ JEE ಮುಖ್ಯ 2022 ಫಲಿತಾಂಶವನ್ನು ಸ್ಕೋರ್‌ಗಳೊಂದಿಗೆ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತದೆ.

JEE ಮೇನ್ಸ್ 2022 ಫಲಿತಾಂಶ ಮತ್ತು ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್‌ಔಟ್ ತೆಗೆದುಕೊಳ್ಳಿ.

Published On - 9:21 am, Sat, 9 July 22