Jwala Gutta: 4 ತಿಂಗಳಲ್ಲಿ 30 ಲೀ. ಎದೆ ಹಾಲು ದಾನ ಮಾಡಿ ನವಜಾತ ಶಿಶುಗಳ ಜೀವ ಉಳಿಸಿದ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ
ಕಾಮನ್‌ವೆಲ್ತ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತಕ್ಕಾಗಿ ಹಲವು ಪದಕಗಳನ್ನು ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಈಗ ನಿಸ್ವಾರ್ಥ ಸೇವೆಯ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ಗುಟ್ಟಾ ತಮ್ಮ ಮಗುವಿಗೆ ಹಾಲುಣಿಸಿದ ನಂತರ ಉಳಿದ ಎದೆಹಾಲನ್ನು ನವಜಾತ ಶಿಶುಗಳಿಗೆ ದಾನ ಮಾಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಪ್ರತಿದಿನ 600 ಮಿಲಿಲೀಟರ್ ಹಾಲನ್ನು ಸರ್ಕಾರಿ ಆಸ್ಪತ್ರೆಗೆ ದಾನ ಇವರು ಮಾಡುತ್ತಿದ್ದಾರೆ. ಈ ಮೂಲಕ ಅವರು ಅಸಹಾಯಕ ಶಿಶುಗಳಿಗೆ ಜೀವದಾನ ಮಾಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕಾಮನ್ವೆಲ್ತ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತಕ್ಕಾಗಿ ಹಲವು ಪದಕಗಳನ್ನು ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಈಗ ನಿಸ್ವಾರ್ಥ ಸೇವೆಯ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ವಿಶಾಲ್ ಮತ್ತು ಜ್ವಾಲಾ ಗುಟ್ಟಾ ದಂಪತಿಗೆ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದು, ತನ್ನ ಮಗುವಿಗೆ ಹಾಲುಣಿಸಿದ ನಂತರ, ಉಳಿದ ಎದೆ ಹಾಲನ್ನು ಗುಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ದಾನ ಮಾಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ, ಅವರು ಪ್ರತಿದಿನ ಸರ್ಕಾರಿ ಆಸ್ಪತ್ರೆಗಳಿಗೆ 600 ಮಿಲಿಲೀಟರ್ ಅಂದರೆ ನಾಲ್ಕು ತಿಂಗಳಲ್ಲಿ 30 ಲೀಟರ್ ಹಾಲು ಎದೆಹಾಲು ದಾನ ಮಾಡಿದ್ದು, ಇದೀಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಮೂಲಕ ಜ್ವಾಲಾ ಗುಟ್ಟಾ ಅವರು ತಾಯಂದಿರಿಂದ ಹಾಲು ಪಡೆಯಲು ಸಾಧ್ಯವಾಗದ ಅಸಹಾಯಕ ಶಿಶುಗಳಿಗೆ ತಾಯಿಯಾಗಿದ್ದಾರೆ. ಅವರ ಆಪ್ತ ವೈದ್ಯೆ ಮಂಜುಳಾ ಅಂಗಾನಿ ಈ ನಿರ್ಧಾರಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದು ಗುಟ್ಟಾ ಹೇಳಿದ್ದಾರೆ. ತಾಯಿಯ ಹಾಲನ್ನು ‘ಮಕರಂದ’ ಎಂದು ಪರಿಗಣಿಸಲಾಗುತ್ತದೆ. ಇದು ಮಗುವಿನ ದೇಹವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಜ್ವಾಲಾ ಅವರ ಈ ದಾನವು ಕೇವಲ ಸಹಾಯವಲ್ಲ, ಬದಲಾಗಿ ನೂರಾರು ಮುಗ್ಧ ಜೀವಗಳಿಗೆ ನೀಡಿದ ಹೊಸ ಜೀವನವಾಗಿದೆ.
ಇದನ್ನೂ ಓದಿ: ಉನ್ನತ ಶಿಕ್ಷಣಕ್ಕಾಗಿ ಬಾಲಕಿಯರಿಗೆ 30,000 ರೂ. ವಿದ್ಯಾರ್ಥಿವೇತನ, ಸೆ.30 ರೊಳಗೆ ಅರ್ಜಿ ಸಲ್ಲಿಸಿ
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
“Breast milk saves lives.For premature and sick babies, donor milk can be life changing. If you’re able to donate, you could be a hero to a family in need. Learn more, share the word, and support milk banks! 💜 #BreastMilkDonation #DonateMilk #InfantHealth pic.twitter.com/qbMle3pgpR
— Gutta Jwala 💙 (@Guttajwala) August 17, 2025
ಆಟಗಾರ್ತಿಯಾಗಿ ಜ್ವಾಲಾ ಗುಟ್ಟಾ ಅವರ ಸಾಧನೆ ಅಪಾರವಾದುದು. ಈಕೆ 2010 ಮತ್ತು 2014 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕಾಗಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇದಲ್ಲದೇ ತಮ್ಮ ಜೋಡಿ ಅಶ್ವಿನಿ ಪೊನ್ನಪ್ಪ ಅವರೊಂದಿಗೆ ಅನೇಕ ಐತಿಹಾಸಿಕ ಪಂದ್ಯಗಳನ್ನು ಗೆದ್ದ ಖ್ಯಾತಿ ಅವರಿಗೆ ಸಲ್ಲುತ್ತದೆ. ಡಬಲ್ಸ್‌ನಲ್ಲಿ ಭಾರತವನ್ನು ವಿಶ್ವ ಸ್ಥಾನಮಾನಕ್ಕೆ ತರುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಇದರ ಹೊರತಾಗಿ, 2011 ರಲ್ಲಿ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದು, 2014 ರಲ್ಲಿ ಥಾಮಸ್ ಮತ್ತು ಉಬರ್ ಕಪ್‌ಗಳಲ್ಲಿ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:
Published On - 5:45 pm, Sat, 13 September 25
