ವಿದ್ಯಾರ್ಥಿಗಳ ಗಮನಕ್ಕೆ! ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ

2nd PUC Exam 1 Final Timetable: 2027ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಫೆಬ್ರವರಿ 27ರಿಂದ ಮಾರ್ಚ್‌ 18ರವರೆಗೆ ಪರೀಕ್ಷೆಗಳು ನಡೆಯಲಿವೆ. ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿದ್ಯಾರ್ಥಿಗಳ ಗಮನಕ್ಕೆ! ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ
ಪ್ರಾತಿನಿಧಿಕ ಚಿತ್ರ
Image Credit source: Getty images
Edited By:

Updated on: Oct 29, 2026 | 5:19 PM

ಮುಖ್ಯಾಂಶಗಳು

  • ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ
  • ಶಾಲಾ ಪರೀಕ್ಷೆ, ಮೌಲ್ಯ ನಿರ್ಣಯ ಮಂಡಳಿಯಿಂದ ವೇಳಾಪಟ್ಟಿ ಪ್ರಕಟ
  • ಫೆಬ್ರವರಿ 27ರಿಂದ ಮಾರ್ಚ್‌ 18ರವರೆಗೆ ದ್ವಿತೀಯ ಪಿಯು ಪರೀಕ್ಷೆ

ಬೆಂಗಳೂರು, ಅಕ್ಟೋಬರ್​​ 29: 2026-27ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಗುರುವಾರ ಪ್ರಕಟಿಸಿದೆ. ಕರ್ನಾಟಕದಲ್ಲಿ ಫೆಬ್ರವರಿ 27ರಿಂದ ಮಾರ್ಚ್‌ 18ರವರೆಗೆ ದ್ವಿತೀಯ ಪಿಯು ಪರೀಕ್ಷೆಗಳು  ಜರುಗಲಿವೆ.

ದ್ವಿತೀಯ ಪಿಯುಸಿ ಪರೀಕ್ಷೆ 1ರ ವೇಳಾಪಟ್ಟಿ ಹೀಗಿದೆ

  • ಫೆ.27ರಂದು ಕನ್ನಡ ಮತ್ತು ಅರೇಬಿಕ್ ಪರೀಕ್ಷೆಯೊಂದಿಗೆ ಆರಂಭ
  • ಮಾ.1ರಂದು ಇಂಗ್ಲಿಷ್​​
  • ಮಾ.2ರಂದು ಪ್ರಾದೇಶಿಕ ಭಾಷೆಗಳ ಪರೀಕ್ಷೆ- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಮತ್ತು ಫ್ರೆಂಚ್​
  • ಮಾ.3ರಂದು ಭೂಗೋಳ ಶಾಸ್ತ್ರ ಮತ್ತು ಮನಃಶಾಸ್ತ್ರ
  • ಮಾ.4ರಂದು ಸಮಾಜಶಾಸ್ತ್ರ ಮತ್ತು ಭೌತಶಾಸ್ತ್ರ
  • ಮಾ.5ರಂದು ಲೆಕ್ಕಶಾಸ್ತ್ರ
  • ಮಾ.6ರಂದು ಮಹಾಶಿವರಾತ್ರಿ ಹಿನ್ನೆಲೆ ರಜೆ (ಪರೀಕ್ಷೆ ಇಲ್ಲ)
  • ಮಾ.8ರಂದು ರಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ ಮತ್ತು ಮೂಲ ಗಣಿತ

ಇದನ್ನೂ ಓದಿ: ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ಮಾತ್ರ!

  • ಮಾ.9ರಂದು ಅರ್ಥಶಾಸ್ತ್ರ ಮತ್ತು ಭೂಗರ್ಭ ಶಾಸ್ತ್ರ
  • ಮಾ.10ರಂದು ರಂಜಾನ್ ಹಿನ್ನೆಲೆ ರಜೆ (ಪರೀಕ್ಷೆ ಇಲ್ಲ)
  • ಮಾ.11ರಂದು ಹಿಂದೂಸ್ತಾನಿ ಸಂಗೀತ ಹಾಗೂ ವೃತ್ತಿಪರ ವಿಷಯಗಳ ಪರೀಕ್ಷೆ
  • ಮಾ.12ರಂದು ವ್ಯವಹಾರ ಅಧ್ಯಯನ ಮತ್ತು ಗಣಿತ
  • ಮಾ.13ರಂದು ಐಚ್ಛಿಕ ಕನ್ನಡ, ತರ್ಕಶಾಸ್ತ್ರ ಮತ್ತು ಗೃಹವಿಜ್ಞಾನ
  • ಮಾ.15ರಂದು ರಾಜ್ಯಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಕಶಾಸ್ತ್ರ
  • ಮಾ.16ರಂದು ಸಂಖ್ಯಾಶಾಸ್ತ್ರ ಮತ್ತು ವಿದ್ಯುನ್ಮಾನ ಶಾಸ್ತ್ರ
  • ಮಾ.17ರಂದು ಹಿಂದಿ
  • ಮಾರ್ಚ್ 18ರಂದು ಇತಿಹಾಸ ಪರೀಕ್ಷೆಯೊಂದಿಗೆ ಪರೀಕ್ಷೆ-1 ಮುಕ್ತಯಗೊಳ್ಳಲಿದೆ.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ-ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಎರಡೇ ಮುಖ್ಯ ಪರೀಕ್ಷೆ!

ಇನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಲ್ಲಾ ಪರೀಕ್ಷೆಗಳು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಸಲು ನಿರ್ಧಾರಿಸಿದೆ. ಹಿಂದೂಸ್ತಾನಿ ಸಂಗೀತ ಮತ್ತು ಕೆಲವು ವೃತ್ತಿಪರ ವಿಷಯಗಳಿಗೆ 2 ಗಂಟೆ 15 ನಿಮಿಷ ಪರೀಕ್ಷಾ ಅವಧಿ ನಿಗದಿ ಪಡಿಸಲಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:05 pm, Thu, 29 October 26

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us