Karnataka 2nd PUC Result 2026 highlights: ದ್ವಿತೀಯ ಪಿಯು ಫಲಿತಾಂಶದ ಹೈಲೈಟ್ಸ್

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಲೈವ್: 2025-26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದೆ. ಪ್ರಸಕ್ತ ಸಾಲಿನಲ್ಲಿ ಶೇಕಡಾ 86ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಆ ಮೂಲಕ ಫಲಿತಾಂಶದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.

Karnataka 2nd PUC Result 2026 highlights: ದ್ವಿತೀಯ ಪಿಯು ಫಲಿತಾಂಶದ ಹೈಲೈಟ್ಸ್
Puc Live
Image Credit source: tv9 kannada
Edited By:

Updated on: Apr 09, 2026 | 11:08 PM

Karnataka 2nd PUC Results 2026 highlights News Updates: 2025-26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, ದಾಖಲೆ ಮಟ್ಟದಲ್ಲಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಏರಿಕೆ ಕಂಡಿದೆ. karresults.nic.in ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡಬಹುದು. ಸುಮಾರು 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಫಲಿತಾಂಶದಲ್ಲಿ ಅಂಕಗಳ ಬಗ್ಗೆ ಸಮಾಧಾನವಿಲ್ಲದಿದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ನಿಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿಯನ್ನು ಪಡೆಯಲು ಮಂಡಳಿಯ ವೆಬ್‌ಸೈಟ್‌ನಲ್ಲಿ ನಿಗದಿಪಡಿಸಿದ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಕ್ಷಣ ಕ್ಷಣ ದ್ವಿತೀಯ ಪಿಯುಸಿ ಫಲಿತಾಂಶ ಸುದ್ದಿಗಳಿಗಾಗಿ ಟಿವಿ9 ವೆಬ್​​​ ಸೈಟ್​ ನೋಡಿ

LIVE NEWS & UPDATES

The liveblog has ended.
  • 09 Apr 2026 10:08 PM (IST)

    ರಾಜ್ಯಕ್ಕೆ ದ್ವಿತೀಯ ಸ್ಥಾನ‌ ಪಡೆದ ವಿಜಯಪುರ ಜಿಲ್ಲೆಯ ವಿದ್ಯಾರ್ಥಿನಿ

    ವಿಜಯಪುರ ನಗರದ ರೇಡಿಯಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ನುಝತ್ ಫಾತೀಮಾ ತಾಳಿಕೋಟೆ  596 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ‌ ಪಡೆದಿದ್ದಾರೆ.

  • 09 Apr 2026 08:25 PM (IST)

    ಮುಂದಿನ ವರ್ಷದಿಂದ ಆನ್‌ಲೈನ್‌ನಲ್ಲಿ ಅಂಕಪಟ್ಟಿ

    ಪ್ರಸಕ್ತ ವರ್ಷ ಭೌತಿಕ ಹಾಗೂ ಆನ್‌ಲೈನ್‌ನಲ್ಲಿ ಅಂಕಪಟ್ಟಿ ಕೊಡಲಾಗುತ್ತಿದೆ. ಮುಂದಿನ ವರ್ಷದಿಂದ ಆನ್‌ಲೈನ್‌ನಲ್ಲಿ ಮಾತ್ರ ಅಂಕಪಟ್ಟಿ ನೀಡಲಾಗುತ್ತೆ.

  • 09 Apr 2026 08:22 PM (IST)

    ಮೂರನೇ ಪರೀಕ್ಷೆ ಇರಲ್ಲ

    ಪ್ರಸಕ್ತ ವರ್ಷ ದ್ವಿತೀಯ ಪಿಯುಸಿಗೆ ಮೂರನೇ ಪರೀಕ್ಷೆ ಇರಲ್ಲ. ಮುಂದಿನ ವರ್ಷ 3ನೇ ಪರೀಕ್ಷೆ ನಡೆಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆ ಚರ್ಚಿಸಿ ನಿರ್ಧಾರ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

  • 09 Apr 2026 07:36 PM (IST)

    ವಿಜ್ಞಾನ ವಿಭಾಗದಲ್ಲಿ ಪ್ರಿನ್ಸಿಲ್ಲಾ ಕರ್ಝೋಡಾ ಟಾಪರ್

    ಮಂಗಳೂರಿನ ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜು ವಿದ್ಯಾರ್ಥಿನಿ ಪ್ರಿನ್ಸಿಲ್ಲಾ ಕರ್ಝೋಡಾ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 599 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

  • 09 Apr 2026 07:16 PM (IST)

    ಕಲಾ ವಿಭಾಗದಲ್ಲಿ ಮೂವರು ವಿದ್ಯಾರ್ಥಿನಿಯರು ಟಾಪರ್ಸ್

    ಕಲಾ ವಿಭಾಗದಲ್ಲಿ ಮೂವರು ವಿದ್ಯಾರ್ಥಿನಿಯರು ಟಾಪರ್ಸ್ ಆಗಿದ್ದಾರೆ. ಬಳ್ಳಾರಿಯ ಇಂದು ಪಿಯು ಕಾಲೇಜಿನ ಅರ್ಚನಾ.ಡಿ.ಎಂ ಮತ್ತು ಸಂಗೀತಾ ಸೇರಿದಂತೆ ಕಲಬುರಗಿಯ ಎಸ್‌ಎಂಟಿವಿಜಿ ಮಹಿಳಾ ಕಾಲೇಜಿನ ವಿದ್ಯಾರ್ಥಿ ಸೃಷ್ಟಿ 600ಕ್ಕೆ 598 ಅಂಕ ಪಡೆಯುವ ಮೂಲಕ ಟಾಪರ್ಸ್ ಆಗಿ ಹೊರಹೊಮ್ಮಿದ್ದಾರೆ.

  • 09 Apr 2026 07:10 PM (IST)

    ಯಾವ ಜಿಲ್ಲೆಗೆ ಯಾವ ಸ್ಥಾನ

    ಉಡುಪಿ; ಮೊದಲ ಸ್ಥಾನ; 96.39 %
    ದಕ್ಷಿಣ ಕನ್ನಡ; ಎರಡನೇ ಸ್ಥಾನ ; 96.35 %
    ಕೊಡಗು; ಮೂರನೇ ಸ್ಥಾನ; 92.34 %
    ವಿಜಯಪುರ; ನಾಲ್ಕನೇ ಸ್ಥಾನ; 92.00%
    ಉತ್ತರ ಕನ್ನಡ; ಐದನೇ ಸ್ಥಾನ ; 91.78%
    ಬೆಂಗಳೂರು ಗ್ರಾಮಾಂತರ; ಆರನೇ ಸ್ಥಾನ; 91.00%
    ಚಿಕ್ಕಮಗಳೂರು; ಏಳನೇ ಸ್ಥಾನ ; 90.80%
    ಬೆಂಗಳೂರು ದಕ್ಷಿಣ‌; ಎಂಟನೇ ಸ್ಥಾನ; 90.55%
    ಚಿಕ್ಕಬಳ್ಳಾಪುರ; ಒಂಭತ್ತನೆಯ ಸ್ಥಾನ; 90.24%
    ಬೆಂಗಳೂರು ಉತ್ತರ; ಹತ್ತನೇ ಸ್ಥಾನ; 90/05%
    ಕೊನೆ ಸ್ಥಾನ‌; ಯಾದಗಿರಿ; 71.21 %

  • 09 Apr 2026 07:05 PM (IST)

    ವಾಣಿಜ್ಯ ವಿಭಾಗದ ಟಾಪರ್ಸ್

    ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳು.

    • ಬೆಂಗಳೂರಿನ ಎಸ್​ಬಿ ಮಾಹವೀರ ಜೈನ್ ಕಾಲೇಜ್​ ವಿದ್ಯಾರ್ಥಿನಿ ಅದಿತಿ ಎ ಬಾಪು
      600ಕ್ಕೆ 600 ಅಂಕ
    • ಮಂಗಳೂರು ಆಳ್ವಾಸ್ ಕಾಲೇಜ್ ವಿದ್ಯಾರ್ಥಿನಿ ದಿಶಾಗೆ 600ಕ್ಕೆ 600 ಅಂಕ

    ದ್ವಿತೀಯ ಸ್ಥಾನ

    • ಧ್ವನಿ ಕುಲಕರ್ಣಿ 600ಕ್ಕೆ 599 ಅಂಕ
    • ರಾಚೇಲ್ ಡಿಸೋಜಾ 600ಕ್ಕೆ 599 ಅಂಕ

     

  • 09 Apr 2026 06:56 PM (IST)

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ‌ ಫಲಿತಾಂಶ

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಬಾರಿಗಿಂತ ಈ ಬಾರಿ ಉತ್ತಮ‌ ಫಲಿತಾಂಶ ಬಂದಿದೆ. ಕಳೆದ ಬಾರಿ ಶೇಕಡಾ 61% ಇದ್ದ ಫಲಿತಾಂಶ, ಈ ಬಾರಿ ಶೇಕಡಾ 79% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಮೂಲಕ
    ಫಲಿತಾಂಶದಲ್ಲಿ ಶೇಕಡಾ 18% ಏರಿಕೆ ಆಗಿದೆ.

  • 09 Apr 2026 06:49 PM (IST)

    1,80,529 ವಿದ್ಯಾರ್ಥಿಗಳು ಡಿಸ್ಟಿಂಗ್ಸನ್

    ಈ ಸಾಲಿನಲ್ಲಿ 1,80,529 ವಿದ್ಯಾರ್ಥಿಗಳು ಡಿಸ್ಟಿಂಗ್ಸನ್ ಬಂದಿದ್ದಾರೆ. ತೇರ್ಗಡೆ ಆಗದ ಮಕ್ಕಳಿಗೆ ಮತ್ತೊಂದು ಅವಕಾಶ ಇದೆ. ಮಕ್ಕಳು ಆತ್ಮ ವಿಶ್ವಾಸ ಇಟ್ಟುಕೊಳ್ಳಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

  • 09 Apr 2026 06:43 PM (IST)

    ಉಡುಪಿ ಜಿಲ್ಲೆ ಪ್ರಥಮ, ಯಾದಗಿರಿ ಜಿಲ್ಲೆಗೆ ಕೊನೇ ಸ್ಥಾನ

    ಕಲಾ ವಿಭಾಗದಲ್ಲಿ ಶೇಕಡಾ 72.86ರಷ್ಟು, ವಾಣಿಜ್ಯ ವಿಭಾಗದಲ್ಲಿ ಶೇಕಡಾ 88.04ರಷ್ಟು ಮತ್ತು ವಿಜ್ಞಾನ ವಿಭಾಗದಲ್ಲಿ ಶೇಕಡಾ 91.69ರಷ್ಟು ಫಲಿತಾಂಶ ಬಂದಿದೆ. ಶೇಕಡಾ 96.39ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆ ಪ್ರಥಮ. ಶೇ.96.35ರಷ್ಟು ಫಲಿತಾಂಶ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಗೆ 2ನೇ ಸ್ಥಾನ, ಶೇ.92.34ರಷ್ಟು ಫಲಿತಾಂಶ ಪಡೆದಿರುವ ಕೊಡಗು ಜಿಲ್ಲೆಗೆ 3ನೇ ಸ್ಥಾನ ಮತ್ತು ಶೇ.71.21ರಷ್ಟು ಫಲಿತಾಂಶ ಪಡೆದ ಯಾದಗಿರಿ ಜಿಲ್ಲೆಗೆ ಕೊನೇ ಸ್ಥಾನ.

  • 09 Apr 2026 06:36 PM (IST)

    ಈ ಬಾರಿಯೂ ಬಾಲಕಿಯರೇ ಮೇಲುಗೈ

    ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇಕಡಾ 88.70ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಶೇಕಡಾ 83.65ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.

  • 09 Apr 2026 06:34 PM (IST)

    ಫಲಿತಾಂಶದಲ್ಲಿ ದಾಖಲೆ ಮಟ್ಟದ ಏರಿಕೆ

    ಈ ಬಾರಿ ಫಲಿತಾಂಶದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡುಬಂದಿದ್ದು, ಕಳೆದ ವರ್ಷ ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದರು. ಈ ಹಿನ್ನೆಲೆ ಈ ವರ್ಷದ ಫಲಿತಾಂಶ ವಿಶೇಷ ಗಮನ ಸೆಳೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

  • 09 Apr 2026 06:32 PM (IST)

    ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ಆರಂಭ

    ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ಮಾಡಿದ್ದು, ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 86.48ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 7,10,363 ವಿದ್ಯಾರ್ಥಿಗಳ ಪೈಕಿ ಸುಮಾರು 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಹೇಳಿದ್ದಾರೆ.

     

  • 09 Apr 2026 06:03 PM (IST)

    ಕೆಲವೇ ಕ್ಷಣಗಳಲ್ಲಿ ಶಿಕ್ಷಣ ಸಚಿವರಿಂದ ಸುದ್ದಿಗೋಷ್ಠಿ

    2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಹಿನ್ನೆಲೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ದ್ವಿತೀಯ ಪಿಯುಸಿ ಫಲಿತಾಂಶದ ಸಂಪೂರ್ಣ ವಿವರವನ್ನು ನೀಡಲಿದ್ದಾರೆ.

  • 09 Apr 2026 05:29 PM (IST)

    600ಕ್ಕೆ 590 ಅಂಕ ಪಡೆದ ಜೀವಿತ್ ಗೌಡ

    ಬೆಂಗಳೂರಿನ ಜೀವಿತ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಜೀವಿತ್ ಗೌಡ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಲ್ಲಿ 590 ಅಂಕಗಳನ್ನು ಪಡೆದು ಶೇಕಡಾ 98.3% ಗಳಿಸಿದ್ದಾರೆ.

  • 09 Apr 2026 04:44 PM (IST)

    ಜೈನ್ ಕಾಲೇಜಿನ ವಿದ್ಯಾರ್ಥಿನಿಗೆ 600 ಅಂಕ

    ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ಜೈನ್ ಕಾಲೇಜಿನ ವಿದ್ಯಾರ್ಥಿನಿ ಅದಿತಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಪಡೆದು ಸಾಧನೆ ಮಾಡಿದ್ದಾರೆ.

  • 09 Apr 2026 04:22 PM (IST)

    SDC ಕಾಲೇಜಿನ ವಿದ್ಯಾರ್ಥಿನಿಗೆ 595 ಅಂಕ

    ಕೋಲಾರ ಜಿಲ್ಲೆಯ ಬಂಗಾರಪೇಟೆಯ SDC ಕಾಲೇಜಿನ ವಿದ್ಯಾರ್ಥಿನಿ ಅರ್ಚನಾ ವಿಜ್ಞಾನ ವಿಭಾಗದಲ್ಲಿ 600ಕ್ಕೆ 595 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿ ಅರ್ಚನಾ ಬಂಗಾರಪೇಟೆ ಪಟ್ಟಣದ ಶ್ರೀನಗರ ಬಡಾವಣೆ ನಿವಾಸಿ.

  • 09 Apr 2026 04:07 PM (IST)

    ಕಲಾ ವಿಭಾಗದಲ್ಲಿ 600ಕ್ಕೆ 598 ಅಂಕ ಪಡೆದ ಅರ್ಚನಾ, ಸಂಗೀತಾ

    ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರುವ ಪಿಯು ಕಾಲೇಜಿನ ಅರ್ಚನಾ ಮತ್ತು ಸಂಗೀತಾ ಕಲಾ ವಿಭಾಗದಲ್ಲಿ 600ಕ್ಕೆ 598 ಅಂಕ ಪಡೆದು ಸಾಧನೆ ಮಾಡಿದ್ದಾರೆ.

  • 09 Apr 2026 03:57 PM (IST)

    ಮಂಗಳೂರಿನ ಇಬ್ಬರಿಗೆ 598 ಅಂಕ

    ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಎಕ್ಸ್​ಪರ್ಟ್ ಪಿಯು​ ಕಾಲೇಜಿನ ವಿದ್ಯಾರ್ಥಿಗಳಾದ ಶಮನ್ಯು ಎಸ್.ಶೆಟ್ಟಿ ಮತ್ತು ನಂದನ್ ನಾಯಕ್​ ವಿಜ್ಞಾನ ವಿಭಾಗದಲ್ಲಿ ಇಬ್ಬರಿಗೆ 600ಕ್ಕೆ 598 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

     

     

  • 09 Apr 2026 03:51 PM (IST)

    ಉಡುಪಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳಿಗೆ 600ಕ್ಕೆ 597 ಅಂಕ

    ಉಡುಪಿ ಜಿಲ್ಲೆಯ ಕಾರ್ಕಳದ ಜ್ಞಾನಸುಧಾ ಪಿಯು ಕಾಲೇಜು ವಿದ್ಯಾರ್ಥಿನಿ ವೈಷ್ಣವಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಅದೇ ರೀತಿಯಾಗಿ ಕಾರ್ಕಳದ ಜ್ಞಾನಸುಧಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಆರ್ನವಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 597 ಅಂಕ ಗಳಿಸಿದ್ದಾರೆ.

  • 09 Apr 2026 03:29 PM (IST)

    600ಕ್ಕೆ 600 ಅಂಕ ಪಡೆದು ಸಾಧನೆ ಮಾಡಿದ ದಿಶಾ

    2025-26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

  • 09 Apr 2026 03:19 PM (IST)

    ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.86ರಷ್ಟು ಮಕ್ಕಳು ಉತ್ತೀರ್ಣ

    ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.86ರಷ್ಟು ಮಕ್ಕಳು ಉತ್ತೀರ್ಣಗೊಂಡಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ.

  • 09 Apr 2026 03:01 PM (IST)

    ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

    ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ https://karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಿದೆ. ಅಲ್ಲದೇ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್‌ಗೆ SMS ಮೂಲಕ ಮಂಡಳಿ ಫಲಿತಾಂಶ ರವಾನೆ ಮಾಡಿದೆ.

  • 09 Apr 2026 01:26 PM (IST)

    ಈ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶಲ್ಲಿ ಯಾವ ಜಿಲ್ಲೆ ಸಾಧನೆ ಮಾಡಬಹುದು

    ಒಟ್ಟಾರೆ ಫಲಿತಾಂಶಗಳ ಜೊತೆಗೆ, ಕೆಎಸ್ಇಎಬಿ ವಿವರವಾದ ಜಿಲ್ಲಾವಾರು ಮತ್ತು ಕಾಲೇಜುವಾರು ಕಾರ್ಯಕ್ಷಮತೆಯ ಡೇಟಾವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಇದು ಪ್ರಾದೇಶಿಕ ಪ್ರವೃತ್ತಿಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತದೆ. ಹಿಂದಿನ ವರ್ಷಗಳಲ್ಲಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರು (ನಗರ) ಜಿಲ್ಲೆಗಳು ನಿರಂತರವಾಗಿ ಉನ್ನತ ಪ್ರದರ್ಶನ ನೀಡುವವರಾಗಿ ಹೊರಹೊಮ್ಮಿವೆ, ಇದು ಈ ಪ್ರದೇಶಗಳಲ್ಲಿ ಬಲವಾದ ಶೈಕ್ಷಣಿಕ ಫಲಿತಾಂಶಗಳು ಮತ್ತು ಸಾಂಸ್ಥಿಕ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ.

  • 09 Apr 2026 12:01 PM (IST)

    ಕರ್ನಾಟಕಒನ್ ಆ್ಯಪ್ ಮೂಲಕ ಫಲಿತಾಂಶಗಳನ್ನು ಪರಿಶೀಲಿಸುವುದು ಹೇಗೆ?

    ವಿದ್ಯಾರ್ಥಿಗಳು ಕರ್ನಾಟಕ ಒನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಮ್ಮ ಫಲಿತಾಂಶಗಳನ್ನು ಪ್ರವೇಶಿಸಲು ಈ ಹಂತಗಳನ್ನು ಅನುಸರಿಸಬಹುದು.

    ಹಂತ 1: ಪ್ಲೇಸ್ಟೋರ್ ಅಥವಾ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಿಂದ ಕರ್ನಾಟಕ ಒನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

    ಹಂತ 2: ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಖಾತೆಯನ್ನು ರಚಿಸಿ.

    ಹಂತ 3: ‘SSLC/IIPU ಪರೀಕ್ಷೆ’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

    ಹಂತ 4: ‘ಪಿಯುಸಿ’ ಮೇಲೆ ಕ್ಲಿಕ್ ಮಾಡಿ ಮತ್ತು ‘ಪಿಯುಸಿ ಪರೀಕ್ಷಾ ಫಲಿತಾಂಶ’ ಆಯ್ಕೆಮಾಡಿ.

    ಹಂತ 5: ನಿಮ್ಮ ವಿಷಯ ಸಂಯೋಜನೆಯನ್ನು ಆರಿಸಿ ಮತ್ತು ನಿಮ್ಮ ಪಿಯುಸಿ ನೋಂದಣಿ ಸಂಖ್ಯೆಯನ್ನು ನಮೂದಿಸಿ.

    ಹಂತ 6: ‘ಹುಡುಕಾಟ’ ಕ್ಲಿಕ್ ಮಾಡಿ ಮತ್ತು ಫಲಿತಾಂಶವು ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲ್ಪಡುತ್ತದೆ.

     

  • 09 Apr 2026 11:57 AM (IST)

    ಫಲಿತಾಂಶ ಘೋಷಣೆಯ ನಂತರ ಈ ವೇಳಾಪಟ್ಟಿ ಪ್ರಕಟಣೆ

    ಮಧ್ಯಾಹ್ನ 3:00 ಗಂಟೆಗೆ ಅಧಿಕೃತ ಫಲಿತಾಂಶ ಬಿಡುಗಡೆ ಮತ್ತು ಸಂಜೆ 6:15 ಕ್ಕೆ ವಿವರವಾದ ಪತ್ರಿಕಾಗೋಷ್ಠಿಯ ನಂತರ, KSEAB ವಿದ್ಯಾರ್ಥಿಗಳಿಗೆ ಮುಂದಿನ ಹಂತಗಳನ್ನು ವಿವರಿಸುತ್ತದೆ. ಇದರಲ್ಲಿ ಪೂರಕ (ವಿಭಾಗ) ಪರೀಕ್ಷೆಗಳ ವೇಳಾಪಟ್ಟಿಗಳ ಪ್ರಕಟಣೆ, ಮರುಮೌಲ್ಯಮಾಪನ ಕಾರ್ಯವಿಧಾನಗಳು ಮತ್ತು ಉತ್ತರ ಪತ್ರಿಕೆಗಳ ನಕಲು ಪ್ರತಿಗಳನ್ನು ಪಡೆಯಲು ಅರ್ಜಿಗಳು ಸೇರಿವೆ. ಕನಿಷ್ಠ ಉತ್ತೀರ್ಣ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮುಂಬರುವ ವಿಭಾಗೀಯ ಪರೀಕ್ಷೆಗಳ ಮೂಲಕ ತಮ್ಮ ಅಂಕಗಳನ್ನು ಸುಧಾರಿಸಲು ಮತ್ತೊಂದು ಅವಕಾಶವನ್ನು ನೀಡಲಾಗುವುದು, ಅವರು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತಾರೆ.

  • 09 Apr 2026 11:16 AM (IST)

    ಈ ವರ್ಷ ಕನಿಷ್ಠ ಉತ್ತೀರ್ಣ ಅಂಕಗಳನ್ನು 30% ಕ್ಕೆ ಇಳಿಸಲಾಗಿದೆ.

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಪರಿಷ್ಕೃತ ಉತ್ತೀರ್ಣ ಮಾನದಂಡವನ್ನು ಪರಿಚಯಿಸಿದ್ದು, ಉತ್ತೀರ್ಣರಾಗಲು ಅಗತ್ಯವಿರುವ ಕನಿಷ್ಠ ಅಂಕಗಳನ್ನು ಕಡಿಮೆ ಮಾಡಿದೆ. ವಿದ್ಯಾರ್ಥಿಗಳು ಈಗ ಪ್ರತಿ ವಿಷಯದಲ್ಲಿ ಕನಿಷ್ಠ 30 ಅಂಕಗಳನ್ನು ಪಡೆಯಬೇಕಾಗುತ್ತದೆ, ಜೊತೆಗೆ ಅರ್ಹತೆ ಪಡೆಯಲು ಒಟ್ಟಾರೆ 33% ಅಂಕಗಳನ್ನು ಪಡೆಯಬೇಕಾಗುತ್ತದೆ. ಈ ಹಿಂದೆ, ಅಭ್ಯರ್ಥಿಗಳು ಕನಿಷ್ಠ 35% ಅಂಕಗಳನ್ನು ಗಳಿಸಬೇಕಾಗಿತ್ತು, ಇದು ಮೌಲ್ಯಮಾಪನ ನೀತಿಯಲ್ಲಿ ಗಮನಾರ್ಹ ಸಡಿಲಿಕೆಯಾಗಿದೆ. ಈ ಕ್ರಮವು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪರಿಹಾರವನ್ನು ನೀಡುತ್ತದೆ, ಒಟ್ಟಾರೆ ಉತ್ತೀರ್ಣ ಶೇಕಡಾವಾರುಗಳನ್ನು ಸುಧಾರಿಸುತ್ತದೆ ಮತ್ತು ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣರಾಗಲು ಸಹಾಯ ಮಾಡುತ್ತದೆ

  • 09 Apr 2026 11:01 AM (IST)

    ನಕಲಿ ಫಲಿತಾಂಶ ಲಿಂಕ್‌ಗಳ ವಿರುದ್ಧ ಕೆಎಸ್‌ಇಎಬಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ

    ಫೆಬ್ರವರಿ ಅಂತ್ಯದಲ್ಲಿ ವರದಿಯಾದ ನಕಲಿ ಪ್ರಶ್ನೆ ಪತ್ರಿಕೆ ಘಟನೆಯ ನಂತರ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಲು ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಅವಲಂಬಿಸುವಂತೆ ಮಂಡಳಿಯು ಬಲವಾದ ಸಲಹೆಯನ್ನು ನೀಡಿದೆ. ಫಲಿತಾಂಶಗಳಿಗೆ ಆರಂಭಿಕ ಪ್ರವೇಶವನ್ನು ಒದಗಿಸುವುದಾಗಿ ಹೇಳಿಕೊಳ್ಳುವ ಯಾವುದೇ ಅನಧಿಕೃತ ಲಿಂಕ್‌ಗಳು ಅಥವಾ ಪ್ಲಾಟ್‌ಫಾರ್ಮ್‌ಗಳು ಮೋಸದ ಸಾಧ್ಯತೆಯಿದೆ ಮತ್ತು ತಪ್ಪು ಮಾಹಿತಿ ಅಥವಾ ಡೇಟಾ ಕಳ್ಳತನದಂತಹ ಅಪಾಯಗಳನ್ನು ಉಂಟುಮಾಡಬಹುದು ಎಂದು ಅದು ಎಚ್ಚರಿಸಿದೆ.

  • 09 Apr 2026 09:34 AM (IST)

    ಅನುತ್ತೀರ್ಣರಾದರೆ ಭಯಪಡುವ ಅವಶ್ಯಕತೆ ಇಲ್ಲ

    ಈ ವರ್ಷವೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ವಿದ್ಯಾರ್ಥಿಗಳು ಧೃತಿಗೆಡಬೇಕಿಲ್ಲ. ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಹೊಸ ಮೂರು ಪರೀಕ್ಷೆಗಳ ವ್ಯವಸ್ಥೆಯಡಿ (Exam 1, 2, & 3) ನಿಮಗೆ ಅಂಕ ಸುಧಾರಿಸಿಕೊಳ್ಳಲು ಹಾಗೂ ಅನುತ್ತೀರ್ಣರಾದ ವಿಷಯಗಳನ್ನು ಪಾಸು ಮಾಡಲು ಉತ್ತಮ ಅವಕಾಶವಿದೆ.

  • 09 Apr 2026 09:32 AM (IST)

    ಪಿಯುಸಿ ಫಲಿತಾಂಶ ಡಿಜಿಲಾಕರ್‌ನಲ್ಲೂ ಲಭ್ಯ

    ಪ್ರತಿ ವರ್ಷದಂತೆ ಈ ಬಾರಿಯೂ ಸರ್ವರ್ ಕೈಕೊಡುವ ಭೀತಿ ಎದುರಾಗಿದೆ. ಇಂತಹ ಹೊತ್ತಿನಲ್ಲಿ, ನೀವು ವೆಬ್‌ಸೈಟ್‌ಗಿಂತಲೂ ವೇಗವಾಗಿ ನಿಮ್ಮ ಫಲಿತಾಂಶವನ್ನು ನೋಡಬಹುದು. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿಲಾಕರ್​ ನಲ್ಲಿ ಲಭ್ಯಗೊಳಿಸಲಾಗುತ್ತದೆ.

  • 09 Apr 2026 09:24 AM (IST)

    ಫಲಿತಾಂಶ ಘೋಷಣೆ ಮಾಡಲಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ

    ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಏಪ್ರಿಲ್ 9ರಂದು ಮಾಧ್ಯಹ್ನ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಅವರೇ ಇಂದು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಣೆ ಮಾಡಲಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ

Published On - 9:21 am, Thu, 9 April 26

Follow Us