2 ಹಂತಗಳಲ್ಲಿ ಸೆಪ್ಟೆಂಬರ್​ನಲ್ಲಿಯೇ ಪ್ರಾಥಮಿಕ ಶಾಲೆ ಆರಂಭಕ್ಕೆ ಸಕಲ ಸಿದ್ಧತೆ; ಸಿಎಂ ಬೊಮ್ಮಾಯಿ ಹಸಿರು ನಿಶಾನೆ ಸೂಚಿಸುವುದೇ ಬಾಕಿ

ಈಗಾಗಲೆ ಕೆಲವು ತರಗತಿಗಳಿಗೆ ಶಾಲೆ ಆರಂಭ ಮಾಡಲಾಗಿದ್ದು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಯಾವುದೇ ಶಾಲೆ ಸೀಲ್ ಡೌನ್ ಮಾಡಲಾಗಿಲ್ಲ.

2 ಹಂತಗಳಲ್ಲಿ ಸೆಪ್ಟೆಂಬರ್​ನಲ್ಲಿಯೇ ಪ್ರಾಥಮಿಕ ಶಾಲೆ ಆರಂಭಕ್ಕೆ ಸಕಲ ಸಿದ್ಧತೆ; ಸಿಎಂ ಬೊಮ್ಮಾಯಿ ಹಸಿರು ನಿಶಾನೆ ಸೂಚಿಸುವುದೇ ಬಾಕಿ
ಸಾಂದರ್ಭಿಕ ಚಿತ್ರ
Edited By:

Updated on: Aug 29, 2021 | 5:54 PM

ಚಿಕ್ಕಮಗಳೂರು: ಪ್ರಾಥಮಿಕ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಸಿದ್ಧವಾಗಿದೆ. ಮೊದಲು 6ರಿಂದ 8ನೇ ತರಗತಿಯವರೆಗೆ ಶಾಲೆ ಆರಂಭಿಸಿ, ನಂತರ 1-5ನೇ ತರಗತಿ ಅರಂಭಿಸಬೇಕೆಂಬ ಅಭಿಪ್ರಾಯವಿದೆ. ತಜ್ಞರ ಜತೆ ಸಭೆಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಈಗಾಗಲೆ ಕೆಲವು ತರಗತಿಗಳಿಗೆ ಶಾಲೆ ಆರಂಭ ಮಾಡಲಾಗಿದ್ದು. ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಯಾವುದೇ ಶಾಲೆ ಸೀಲ್ ಡೌನ್ ಮಾಡಲಾಗಿಲ್ಲ. ಹೀಗಾಗಿ ಶಾಲಾರಂಭಕ್ಕೆ ಸಕಲ ಸಿದ್ಧತೆಯಲ್ಲಿ ಶಿಕ್ಷಣ ಇಲಾಖೆ ನಿರತವಾಗಿದೆ ಎಂದು ತಿಳಿದುಬಂದಿದೆ. ನಾಳೆ (ಆಗಸ್ಟ್ 30) ನಡೆಯಲಿರುವ ಸಭೆಯಲ್ಲಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಹಸಿರು ನಿಶಾನೆ ದೊರೆತಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಶಾಲೆಗಳ ಬಾಗಿಲು ತೆರೆಯುವ ಎಲ್ಲ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 

ಶಾಲೆ ಆರಂಭ: ಕೊರೊನಾ ಬಗ್ಗೆಯೇ ಮಕ್ಕಳಿಗೆ ಮೊದಲ ಪಾಠ; ಜಾಗೃತಿ ಮೂಡಿಸುತ್ತಿರುವ ಶಿಕ್ಷಕರು

Afghanistan Natural Resources: ಅಫ್ಘಾನಿಸ್ತಾನದಲ್ಲಿ ಅಗಾಧ ಖನಿಜ ಸಂಪತ್ತು ಲೆಕ್ಕಕ್ಕೆ ಸಿಕ್ಕಲ್ಲ, ಕೈಗೆ ದಕ್ಕಲ್ಲ ಏಕೆ ಗೊತ್ತಾ?

(Karnataka Education Department ready to open primary schools in September by 2 steps sources)

TV9 Web

TV9 Kannada

Read More
Loading...
Unable to load recommendations.
Follow Us