SSLC PUC Exam 2024 Time Table: ದ್ವಿತೀಯ ಪಿಯುಸಿ, ಎಸ್ಎಸ್ಎಲ್​ಸಿ ಪರೀಕ್ಷೆ ದಿನಾಂಕ ಪ್ರಕಟ

2nd PUC and SSLC Exam Date Schedule: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್​ 1 ರಿಂದ 22ರ ವರೆಗೆ ನಡೆಯಲಿವೆ. ಎಸ್ಎಸ್ಎಲ್​ಸಿ ಪರೀಕ್ಷೆಗಳು ಮಾರ್ಚ್​​ 25 ರಿಂದ ಜೂನ್​ 06ರ ವರೆಗೆ ನಡೆಯಲಿವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

SSLC PUC Exam 2024 Time Table: ದ್ವಿತೀಯ ಪಿಯುಸಿ, ಎಸ್ಎಸ್ಎಲ್​ಸಿ ಪರೀಕ್ಷೆ ದಿನಾಂಕ ಪ್ರಕಟ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ವಿವೇಕ ಬಿರಾದಾರ

Updated on:Feb 21, 2024 | 7:39 AM

ಬೆಂಗಳೂರು, ಫೆಬ್ರವರಿ 20: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು (2nd PUC Exam)  ಮಾರ್ಚ್​ 1 ರಿಂದ 22ರ ವರೆಗೆ ನಡೆಯಲಿವೆ. ಎಸ್ಎಸ್ಎಲ್​ಸಿ ಪರೀಕ್ಷೆಗಳು (SSLC Exam) ಮಾರ್ಚ್​​ 25 ರಿಂದ ಜೂನ್​ 06ರ ವರೆಗೆ ನಡೆಯಲಿವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ವಿಕಾಸಸೌಧದಲ್ಲಿ ಪೂರ್ವಭಾವಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ವರ್ಷ 8,96,271 ಮಕ್ಕಳು ಎಸ್​ಎಸ್​ಎಲ್​ಸಿ ಪರೀಕ್ಷೆ ಪರೀಕ್ಷೆ ಬರೆಯತ್ತಿದ್ದಾರೆ. 2,741 ಪರೀಕ್ಷಾ ಕೇಂದ್ರಗಳಿವೆ. ಇನ್ನು 6,98, 624 ಮಕ್ಕಳು ದ್ವೀತಿಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಮೂರೂ ಪರೀಕ್ಷೆಯಲ್ಲಿನ ಗರಿಷ್ಠ ಅಂಕ ಪರಿಗಣನೆ ತೆಗೆದುಕೊಳ್ಳಲಾಗುತ್ತದೆ. ಹಾಗಂತ ಮೂರೂ ಪರೀಕ್ಷೆ ಬರೆಯವುದು ಕಡ್ಡಾಯವಲ್ಲ. ಯಾವ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆಯುತ್ತಾರೆ ಅದನ್ನು ಮಾತ್ರ ಪರಿಗಣನೆ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

2023-24 ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ  20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಹಾಗೂ ಎಸ್ ಎಸ್ಎಲ್​ಸಿ ಪರೀಕ್ಷೆ-2 ಅನ್ನು ಎಪ್ರಿಲ್ ಕೊನೆಯ ವಾರದಲ್ಲಿ ನಡೆಸುತ್ತೇವೆ ಎಂದರು.

ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಿಜಾಬ್ ಅವಕಾಶ ವಿಚಾರವಾಗಿ ಮಾತನಾಡಿದ ಅವರು, ನ್ಯಾಯಾಲಯದ ನಿರ್ದೇಶನದಂತೆ ಸಮವಸ್ತ್ರ ನಿಯಮ ಪಾಲನೆ ಮಾಡಲಾಗುತ್ತೆ. ಅಡ್ವಕೇಟ್ ಜನರಲ್ ಅವರ ಸಲಹೆ ಪಡೆದು ಹಿಜಾಬ್ ವಿಚಾರ ನಿರ್ಧರಿಸಲಾಗುತ್ತದೆ ಎಂದು ಜಾರಿಕೊಂಡರು.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹೇಳಿದರು. ಇದುವರೆಗೆ ಕೆಲವು ಖಾಸಗಿ ಶಾಲೆಗಳಲ್ಲಿ ಮಾತ್ರ ತರಗತಿಯ ಒಳಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.

2024 ಎಸ್​ಎಸ್ಎಲ್​ಸಿ ವೇಳಾಪಟ್ಟಿ​
ದಿನಾಂಕ ವಿಷಯ ಸಮಯ
ಕನ್ನಡ ಬೆ. 10.15 ರಿಂದ ಮಧ್ಯಾಹ್ನ 1.30
ತೆಲಗು ಬೆ. 10.15 ರಿಂದ ಮಧ್ಯಾಹ್ನ 1.30
ಹಿಂದಿ ಬೆ. 10.15 ರಿಂದ ಮಧ್ಯಾಹ್ನ 1.30
ಮರಾಠಿ ಬೆ. 10.15 ರಿಂದ ಮಧ್ಯಾಹ್ನ 1.30
25/03/2024 ತಮಿಳು ಬೆ. 10.15 ರಿಂದ ಮಧ್ಯಾಹ್ನ 1.30
ಉರ್ದು ಬೆ. 10.15 ರಿಂದ ಮಧ್ಯಾಹ್ನ 1.30
ಇಂಗ್ಲಿಷ್​ ಬೆ. 10.15 ರಿಂದ ಮಧ್ಯಾಹ್ನ 1.30
ಇಂಗ್ಲಿಷ್​ (NCERT) ಬೆ. 10.15 ರಿಂದ ಮಧ್ಯಾಹ್ನ 1.30
ಸಂಸ್ಕೃತ ಬೆ. 10.15 ರಿಂದ ಮಧ್ಯಾಹ್ನ 1.30
====== ================== =============
27/03/2024 ಸಮಾಜ ವಿಜ್ಞಾನ ಬೆ. 10.15 ರಿಂದ ಮಧ್ಯಾಹ್ನ 1.30
ವಿಜ್ಞಾನ ಬೆ. 10.15 ರಿಂದ ಮಧ್ಯಾಹ್ನ 1.30
ರಾಜ್ಯಶಾಸ್ತ್ರ ಬೆ. 10.15 ರಿಂದ ಮಧ್ಯಾಹ್ನ 1.30
30/03/2024 ಹಿಂದೂಸ್ಥಾನಿ ಸಂಗೀತ ಮ.2:00 ರಂದ ಸಾ.5:15
ಕರ್ನಾಟಕ ಸಂಗೀತ ಮ.2:00 ರಂದ ಸಾ.5:15
ಕರ್ನಾಟಕ ಸಂಗೀತ / ಹಿಂದೂಸ್ಥಾನಿ ಸಂಗೀತ ಮ.2:00 ರಂದ ಸಾ.5:15
====== ============== ========
02/04/2024 ಗಣಿತ ಬೆ. 10.15 ರಿಂದ ಮಧ್ಯಾಹ್ನ 1.30
ಸಮಾಜ ಶಾಸ್ತ್ರ ಬೆ. 10.15 ರಿಂದ ಮಧ್ಯಾಹ್ನ 1.30
===== ============= ========
ಎಲಿಮೆಂಟ್ಸ್​ ಆಫ್​ ಎಲೆಕ್ಟ್ರಿಕ್​ ಇಂಜಿನಿಯರಿಂಗ್ – IV ಬೆ. 10.15 ರಿಂದ ಮಧ್ಯಾಹ್ನ 1.30
ಎಲಿಮೆಂಟ್ಸ್​ ಆಫ್​ ಮೆಕಾನಿಕಲ್​ & ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​-2 ಬೆ. 10.15 ರಿಂದ ಮಧ್ಯಾಹ್ನ 1.30
ಎಲಿಮೆಂಟ್ಸ್​ ಆಫ್​ ಮೆಕ್ಯಾನಿಕಲ್​ ಇಂಜಿನಿಯರಿಂಗ್​- IV ಬೆ. 10.15 ರಿಂದ ಮಧ್ಯಾಹ್ನ 1.30
03/04/2024 ಇಂಜಿನಯರಿಂಗ್​ ಗ್ರಾಫಿಕ್ಸ್​-2 ಮ.2:30 ರಂದ ಸಾ.5:45
ಎಲಿಮೆಂಟ್ಸ್​ ಆಫ್​ ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್​- IV ಬೆ. 10.15 ರಿಂದ ಮಧ್ಯಾಹ್ನ 1.30
ಎಲಿಮೆಂಟ್ಸ್​ ಆಫ್​ ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್​ ಬೆ. 10.15 ರಿಂದ ಮಧ್ಯಾಹ್ನ 1.30
ಎಲಿಮೆಂಟ್ಸ್ ಆಫ್​ ಕಂಪ್ಯೂಟರ್​ ಸೈನ್ಸ್​​ ಬೆ. 10.15 ರಿಂದ ಮಧ್ಯಾಹ್ನ 1.30
ಅರ್ಥಶಾಸ್ತ್ರ ಬೆ. 10.15 ರಿಂದ ಮಧ್ಯಾಹ್ನ 1.30
===== ========== ======
(ತೃತೀಯ ಭಾಷೆ) ಹಿಂದಿ (NCERT) ಬೆ. 10.15 ರಿಂದ ಮಧ್ಯಾಹ್ನ 1.15
ಹಿಂದಿ ಬೆ. 10.15 ರಿಂದ ಮಧ್ಯಾಹ್ನ 1.15
ಕನ್ನಡ ಬೆ. 10.15 ರಿಂದ ಮಧ್ಯಾಹ್ನ 1.15
ಇಂಗ್ಲಿಷ್​ ಬೆ. 10.15 ರಿಂದ ಮಧ್ಯಾಹ್ನ 1.15
ಅರೇಬಿಕ್​ ಬೆ. 10.15 ರಿಂದ ಮಧ್ಯಾಹ್ನ 1.15
ಪರ್ಶಿಯನ್​ ಬೆ. 10.15 ರಿಂದ ಮಧ್ಯಾಹ್ನ 1.15
ಉರ್ದು ಬೆ. 10.15 ರಿಂದ ಮಧ್ಯಾಹ್ನ 1.15
ಸಂಸ್ಕೃತ ಬೆ. 10.15 ರಿಂದ ಮಧ್ಯಾಹ್ನ 1.15
04/04/2024 ಕೊಂಕಣಿ ಬೆ. 10.15 ರಿಂದ ಮಧ್ಯಾಹ್ನ 1.15
ತುಳು ಬೆ. 10.15 ರಿಂದ ಮಧ್ಯಾಹ್ನ 1.15
(ಎನ್​.ಎಸ್​.ಕ್ಯೂ. ಎಫ್​ ವಿಷಯಗಳು) ಮಾಹಿತಿ ತಂತ್ರಜ್ಞಾನ ಬೆ. 10.15 ರಿಂದ ಮಧ್ಯಾಹ್ನ 12.30
ರೀಟೇಲ್​​ ಬೆ. 10.15 ರಿಂದ ಮಧ್ಯಾಹ್ನ 12.30
ಆಟೋಮೊಬೈಲ್​ ಬೆ. 10.15 ರಿಂದ ಮಧ್ಯಾಹ್ನ 12.30
ಹೆಲ್ತ್​ ಕೇರ್​ ಬೆ. 10.15 ರಿಂದ ಮಧ್ಯಾಹ್ನ 12.30
ಬ್ಯೂಟಿ ಆ್ಯಂಡ್​ ವೆಲ್​ನೆಸ್​ ಬೆ. 10.15 ರಿಂದ ಮಧ್ಯಾಹ್ನ 12.30
ಅಪರೆಲ್​ ಮೇಡ್​ ಅಪ್ಸ್​​ & ಹೋಮ್​ ಫರ್ನಿಷಿಂಗ್​​ ಬೆ. 10.15 ರಿಂದ ಮಧ್ಯಾಹ್ನ 12.30
ಎಲೆಕ್ಟ್ರಾನಿಕ್​ & ಹಾರ್ಡ್​ವೇರ್​ ಬೆ. 10.15 ರಿಂದ ಮಧ್ಯಾಹ್ನ 12.30
===== ========== =====
06/04/2024 (ತೃತೀಯ ಭಾಷೆ) ಇಂಗ್ಲಿಷ್​ ಬೆ. 10.15 ರಿಂದ ಮಧ್ಯಾಹ್ನ 1.15
ಕನ್ನಡ ಬೆ. 10.15 ರಿಂದ ಮಧ್ಯಾಹ್ನ 1.15
2024 ಪಿಯುಸಿ ವೇಳಾಪಟ್ಟಿ​
ದಿನಾಂಕ ವಿಷಯ ಸಮಯ
01/03/2024 ಕನ್ನಡ ಬೆ.10:15 – ಮ.1:30
ಅರೇಬಿಕ್ ಬೆ.10:15 – ಮ.1:30
==== ==== ====
04/03/2024 ಗಣಿತ ಬೆ.10:15 – ಮ.1:30
ಶಿಕ್ಷಣ ಶಾಸ್ತ್ರ ಬೆ.10:15 – ಮ.1:30
=== ==== ====
05/03/2024 ರಾಜ್ಯಶಾಸ್ತ್ರ ಬೆ.10:15 – ಮ.1:30
ಸಂಖ್ಯಾಶಾಸ್ತ್ರ ಬೆ.10:15 – ಮ.1:30
===== ====== ====
06/03/2024 ಮಾಹಿತಿ ತಂತ್ರಜ್ಞಾನ ಬೆ.10:15 – ಮ.1:30
ರೀಟೈಲ್​ ಬೆ.10:15 – ಮ.1:30
ಆಟೋಮೊಬೈಲ್​ ಬೆ.10:15 – ಮ.1:30
ಹೆಲ್ತಕೇರ್​ ಬೆ.10:15 – ಮ.1:30
ಬ್ಯೂಟಿ ಆ್ಯಂಡ್​ ವೆಲ್​ನೆಸ್​ ಬೆ.10:15 – ಮ.1:30
==== ===== ====
07/03/2024 ಇತಿಹಾಸ ಬೆ.10:15 – ಮ.1:30
ಭೌತಶಾಸ್ತ್ರ ಬೆ.10:15 – ಮ.1:30
===== ====== ====
09/03/2024 ಐಚ್ಛಿಕ ಕನ್ನಡ ಬೆ.10:15 – ಮ.1:30
ಲೆಕ್ಕಶಾಸ್ತ್ರ ಬೆ.10:15 – ಮ.1:30
ಭೂಗರ್ಭಶಾಸ್ತ್ರ ಬೆ.10:15 – ಮ.1:30
ಗೃಹ ವಿಜ್ಞಾನ ಬೆ.10:15 – ಮ.1:30
==== === ====
11/03/2024 ತರ್ಕಶಾಸ್ತ್ರ ಬೆ.10:15 – ಮ.1:30
ವ್ಯವಹಾರ ಅಧ್ಯಯನ ಬೆ.10:15 – ಮ.1:30
==== ==== ===
13/03/2024 ಇಂಗ್ಲಿಷ್​ ಬೆ.10:15 – ಮ.1:30
==== ==== ====
15/03/2024 ಹಿಂದೂಸ್ತಾನಿ ಸಂಗೀತ ಬೆ.10:15 – ಮ.12:30
ಮನಃಶಾಸ್ತ್ರ ಬೆ.10:15 – ಮ.1:30
ರಾಸಾಯನಶಾಸ್ತ್ರ ಬೆ.10:15 – ಮ.1:30
ಮೂಲ ಗಣಿತ ಬೆ.10:15 – ಮ.1:30
==== ==== ===
16/03/2024 ಅರ್ಥಶಾಸ್ತ್ರ ಬೆ.10:15 – ಮ.1:30
==== ==== ====
18/03/2024 ಭೂಗೋಳಶಾಸ್ತ್ರ ಬೆ.10:15 – ಮ.1:30
ಜೀವಶಾಸ್ತ್ರ ಬೆ.10:15 – ಮ.1:30
===== ==== ====
20/03/2024 ಸಮಾಜಶಾಸ್ತ್ರ ಬೆ.10:15 – ಮ.1:30
ವಿದ್ಯುನ್ಮಾನಶಾಸ್ತ್ರ ಬೆ.10:15 – ಮ.1:30
ಗಣಗ ವಿಜ್ಞಾನ ಬೆ.10:15 – ಮ.1:30
==== ===== ====
21/03/2024 ತಮಿಳು ಬೆ.10:15 – ಮ.1:30
ತೆಲಗು ಬೆ.10:15 – ಮ.1:30
ಮಲಯಾಳಂ ಬೆ.10:15 – ಮ.1:30
ಮರಾಠಿ ಬೆ.10:15 – ಮ.1:30
ಉರ್ದು ಬೆ.10:15 – ಮ.1:30
ಸಂಸ್ಕೃತ ಬೆ.10:15 – ಮ.1:30
ಫ್ರೆಂಚ್​ ಬೆ.10:15 – ಮ.1:30
==== ==== ====
22/03/2024 ಹಿಂದಿ ಬೆ.10:15 – ಮ.1:30

ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್, ಆಯುಕ್ತೆ ಬಿಬಿ ಕಾವೇರಿ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:04 pm, Tue, 20 February 24

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್