Karnataka NEET PG 2022: ನೀಟ್ ಪಿಜಿ ಕೌನ್ಸೆಲಿಂಗ್‌ಗಾಗಿ 2ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ ಬಿಡುಗಡೆ
ಕರ್ನಾಟಕ NEET PG 2022 ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು kea.kar.nic.in ನಲ್ಲಿ ಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸಲು ಸೂಚಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2022 ರ ಸ್ನಾತಕೋತ್ತರ ಪದವಿಗಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (NEET PG) ಕೌನ್ಸೆಲಿಂಗ್‌ಗಾಗಿ 2 ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೀಟು ಹಂಚಿಕೆ ಪಟ್ಟಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ kea.kar.nic.in ಪರಿಶೀಲಿಸಬಹುದು. ಕರ್ನಾಟಕ NEET PG ಸೀಟು ಹಂಚಿಕೆ ಪಟ್ಟಿಯನ್ನು ಪ್ರವೇಶಿಸಲು, ಅಭ್ಯರ್ಥಿಗಳು ತಮ್ಮ PGET ಸಂಖ್ಯೆಯನ್ನು ಬಳಸಿಕೊಂಡು ಅಧಿಕೃತ ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು. ಸೀಟು ಹಂಚಿಕೆ ಪಟ್ಟಿಯ ಘೋಷಣೆಯ ನಂತರ, ಅರ್ಹ ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಬೇಕು. ನವೆಂಬರ್ 17 ಮತ್ತು ನವೆಂಬರ್ 18, 2022 ರ ನಡುವೆ ಹಂಚಿಕೆ ಆದೇಶವನ್ನು ಸಂಗ್ರಹಿಸಬೇಕು. ಕೌನ್ಸೆಲಿಂಗ್‌ನ 2 ನೇ ಸುತ್ತಿನಲ್ಲಿ ಸೀಟುಗಳನ್ನು ಪಡೆದ ಅಭ್ಯರ್ಥಿಗಳು ನವೆಂಬರ್ 20, 2022 (ಸಂಜೆ 5.30 ರವರೆಗೆ)ರ ಒಳಗೆ ತಮ್ಮ ಕಾಲೇಜುಗಳಿಗೆ ತಿಳಿಸಬೇಕು.
ಕರ್ನಾಟಕ ನೀಟ್ ಪಿಜಿ 2022: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಡೌನ್‌ಲೋಡ್ ಮಾಡಲು ಹೀಗೆ ಮಾಡಿ
ಹಂತ 1. KEA ಯ ಅಧಿಕೃತ ವೆಬ್‌ಸೈಟ್ kea.kar.nic.inಗೆ ಭೇಟಿ ನೀಡಿ
ಹಂತ 2. ಮುಖಪುಟದಲ್ಲಿ, PGET 2022 Medical/DNB first round allotment result (excluding in-service candidates) ಎಂದು ಬರೆದಿರುವ ಸಾಲಿನ ಮೇಲೆ ಕ್ಲಿಕ್ ಮಾಡಿ.
ಹಂತ 3. ಹೊಸ ಪುಟ ತೆರೆಯುತ್ತದೆ, ನಿಮ್ಮ PGET ಸಂಖ್ಯೆಯನ್ನು ಭರ್ತಿ ಮಾಡಿ ಮತ್ತು submit ಬಟನ್ ಕ್ಲಿಕ್ ಮಾಡಿ
ಹಂತ 4. ಕರ್ನಾಟಕ ನೀಟ್ ಪಿಜಿ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ
ಹಂತ 5. ಇದನ್ನು ಡೌನ್‌ಲೋಡ್ ಮಾಡಿ ಮತ್ತು ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ
ಅಧಿಕೃತ ಅಧಿಸೂಚನೆಯ ಪ್ರಕಾರ, ಎರಡನೇ ಸುತ್ತಿನಲ್ಲಿ ಬೇರೆ ಕಾಲೇಜುಗಳನ್ನು ಆಯ್ಕೆ ಮಾಡುವುದು ಇರುವುದಿಲ್ಲ. ಆದ್ದರಿಂದ, 2 ನೇ ಸುತ್ತಿನಲ್ಲಿ ಹಂಚಿಕೆ ಪಡೆಯುವ ಅಭ್ಯರ್ಥಿಗಳು ಕಡ್ಡಾಯವಾಗಿ ನಿಗದಿಪಡಿಸಿದ ಕಾಲೇಜಿಗೆ ವರದಿ ಮಾಡಬೇಕು ಏಕೆಂದರೆ ಸೀಟು ಹಂಚಿಕೆಯು ಅಭ್ಯರ್ಥಿಗಳು ನಮೂದಿಸಿದ ಆಯ್ಕೆಗಳ ಆದ್ಯತೆಯ ಮೇಲೆ ಇದು ಇರುತ್ತದೆ.
ಕರ್ನಾಟಕ NEET PG 2022 ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು kea.kar.nic.in ನಲ್ಲಿ ಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸಲು ಸೂಚಿಸಲಾಗಿದೆ.
ಶಿಕ್ಷಣ ವಿಭಾಗದಲ್ಲಿನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:39 pm, Thu, 17 November 22