ಶುಲ್ಕ ವಿವರ ಪ್ರಕಟಿಸಿದೆ ಖಾಸಗಿ ಶಾಲೆಗಳ ಉದ್ಧಟತನ: ಶಿಕ್ಷಣ ಇಲಾಖೆ ಆದೇಶಕ್ಕೂ ಡೋಂಟ್ ಕೇರ್!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳ ಶುಲ್ಕ ಏರಿಕೆ ಮಾಡಿಕೊಂಡು ದಾಖಲಾತಿ ಶುರು ಮಾಡಿವೆ. ಇದರಿಂದ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ಶುಲ್ಕದ ವಿವರ ಬಹಿರಂಗಪಡಿಸದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಶುಲ್ಕದ ವಿವರಗಳನ್ನು ಬಹಿರಂಗಪಡಿಸುವಂತೆ ಶಿಕ್ಷಣ ಇಲಾಖೆ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ.

ಶುಲ್ಕ ವಿವರ ಪ್ರಕಟಿಸಿದೆ ಖಾಸಗಿ ಶಾಲೆಗಳ ಉದ್ಧಟತನ: ಶಿಕ್ಷಣ ಇಲಾಖೆ ಆದೇಶಕ್ಕೂ ಡೋಂಟ್ ಕೇರ್!
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Apr 20, 2025 | 7:58 AM

ಬೆಂಗಳೂರು, ಏಪ್ರಿಲ್​ 20: ಕರ್ನಾಟಕದಲ್ಲಿ ಬೆಲೆ ಏರಿಕೆ (price hike) ಪರ್ವ ಶುರುವಾಗಿದೆ. ಖಾಸಗಿ ಶಾಲೆಗಳು (Private schools) ಶುಲ್ಕ ಏರಿಕೆ ಮಾಡಿಕೊಂಡಿವೆ. ಈ ನಡುವೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ. ಪೋಷಕರ ನೂರಾರು ಕನಸುಗಳು ನುಚ್ಚು ನೂರು ಮಾಡುತ್ತಿವೆ. ಮನಸಿಗೆ ಬಂದಹಾಗೆ ಶುಲ್ಕ ಏರಿಕೆ ಮಾಡಿಕೊಂಡು ಪೋಷಕರ ಸಂಕಷ್ಟಕ್ಕೆ ಕಾರಣವಾಗಿವೆ. ಖಾಸಗಿ ಶಾಲೆಗಳ ವಿಚಾರದಲ್ಲಿ ಶಿಕ್ಷಣ ಇಲಾಖೆ ಕೂಡ ದಿವ್ಯ ನಿರ್ಲಕ್ಷ್ಯ ತೊರುತ್ತಿದ್ದು, ಈಗ ಶುಲ್ಕ ಪಟ್ಟಿ ನೀಡುವಂತೆ ಪೋಷಕರು ಹಾಗೂ ಶಿಕ್ಷಣ ಇಲಾಖೆ ಕೆಳಿದರೂ ಖಾಸಗಿ ಶಾಲೆಗಳು ಕ್ಯಾರೆ ಅನ್ನುತ್ತಿಲ್ಲ.

ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಬೆಲೆ ಏರಿಕೆಯ ಪರ್ವ ಶುರುವಾಗಿದೆ. ಹಾಲು, ಕಾಫಿ- ಟೀ , ವಿದ್ಯುತ್ ಹೀಗೆ ಬೆಲೆ ಸಮರ ಶುರುವಾಗಿದೆ. ಈ ನಡುವೆ ಪ್ರತಿ ವರ್ಷವೂ ಖಾಸಗಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಶುಲ್ಕ ಏರಿಕೆ ಮಾಡಿ ಬರೆ ಎಳೆಯಲು ಮುಂದಾಗಿವೆ. ಈ ವರ್ಷವೂ ರಾಜ್ಯದಲ್ಲಿ ಖಾಸಗಿ ಶಾಲೆಗಳು 10 % ರಿಂದ 15 % ಶಾಲಾ ಶುಲ್ಕ ಏರಿಕೆಗೆ ಮುಂದಾಗಿವೆ. ಹೀಗಾಗಿ ಪೋಷಕರು ಹಾಗೂ ಶಾಲಾ ಶಿಕ್ಷಣ ಇಲಾಖೆ ಶುಲ್ಕ ವಿವರವನ್ನ ಶಾಲೆಗಳಲ್ಲಿ ಅನೌನ್ಸ್ ಮಾಡಬೇಕು. ವೆಬ್ ಸೈಟ್​ನಲ್ಲಿ ಪ್ರಕಟ ಮಾಡಬೇಕು ಅಂತಾ ಹೇಳಿದೆ. ಆದರೆ ಖಾಸಗಿ ಶಾಲೆಗಳು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದು, ಮಾಹಿತಿ ಪ್ರಕಟಿಸುತ್ತಿಲ್ಲ ಅಂತಿದ್ದಾರೆ ಪೋಷಕರು.

ಖಾಸಗಿ ಶಾಲೆಗಳ ಶುಲ್ಕ ಕಳ್ಳಾಟಕ್ಕೆ ಬ್ರೇಕ್ ಹಾಕ್ತೀಲ್ಲ ಶಿಕ್ಷಣ ಇಲಾಖೆ

ಹೆಸರಿಗಷ್ಟೇ ಆದೇಶ ಮಾಡೋದು ನಿರ್ಲಕ್ಷ್ಯಕ್ಕೆ ಪೋಷಕರು ಪುಲ್ ಗರಂ ಆಗಿದ್ದಾರೆ. ಖಾಸಗಿ ಶಾಲೆಗಳು ಶುಲ್ಕದ ವಿವರ STATS ನಲ್ಲಿ ಅಪ್ಲೋಡ್ ಮಾಡಬೇಕು. ಎಷ್ಟು ಶುಲ್ಕ ಏರಿಕೆ ಮಾಡಿವೆ? ಎಷ್ಟು ಟ್ಯೂಷನ್ ಫೀಸ್? ಡೋನೆಷನ್ ಎಷ್ಟು ಅಂತಾ ಡಿಟೇಲ್ ವಿವರ ಹಾಕಬೇಕು. ಆದರೆ ಯಾವ ಶಾಲೆಗಳು ಈ ವಿವವರಗಳನ್ನ ಆನ್ಲೈನ್ STATSನಲ್ಲಿ ಅಪ್ಲೋಡ್​​ ಮಾಡ್ತೀರಲಿಲ್ಲ . ಶಿಕ್ಷಣ ಇಲಾಖೆಯ ಪೋರ್ಟಲ್​ಗೂ ಹಾಕುತ್ತಿಲ್ಲ. ಹೀಗಾಗಿ ಪೋಷಕರು ಗರಂ ಆಗಿದ್ದರು.

ಇದನ್ನೂ ಓದಿ
ಹೊಸ ಸಂಘರ್ಷಕ್ಕೆ ಕಾರಣವಾಯ್ತು 1ನೇ ತರಗತಿ ಸೇರ್ಪಡೆ ವಯೋಮಿತಿ ಸಡಿಲಿಕೆ:ಏನದು?
ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ: ಸಚಿವ ಮಧು ಬಂಗಾರಪ್ಪ ಘೋಷಣೆ
ಶಾಲಾ ಶುಲ್ಕವಾಯ್ತು, ಇದೀಗ ಶಾಲಾ ವಾಹನ ಶುಲ್ಕ ಏರಿಕೆ ಸರದಿ: ಪೋಷಕರು ಪರದಾಟ
ಕರ್ನಾಟಕದಲ್ಲಿ ಬೆಲೆ ಏರಿಕೆಯ ಪರ್ವಕಾಲ: ಏಕಾಏಕಿ ಶಾಲಾ ಫೀಸ್​ನಲ್ಲಿ ಏರಿಕೆ

ಇದನ್ನೂ ಓದಿ: ಹೊಸ ಸಂಘರ್ಷಕ್ಕೆ ಕಾರಣವಾಯ್ತು 1ನೇ ತರಗತಿ ಸೇರ್ಪಡೆ ವಯೋಮಿತಿ ಸಡಿಲಿಕೆ: ಮುಂದಿನ ವರ್ಷಕ್ಕೂ ನೀಡುವಂತೆ ಪೋಷಕರ ಆಗ್ರಹ

ರಾಜ್ಯದಲ್ಲಿ ಖಾಸಗಿ ಶಾಲೆಗಳ ಶುಲ್ಕ ಏರಿಕೆ ಮಾಡಿಕೊಂಡು ದಾಖಲಾತಿ ಶುರು ಮಾಡಿವೆ. ಶುಲ್ಕ ಏರಿಕೆಯ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಹಾಗೂ ಶುಲ್ಕ ದರ ಪಟ್ಟಿಯನ್ನ ಶಾಲೆಗಳಲ್ಲಿ ಅಳವಡಿಸುತ್ತಿರಲಿಲ್ಲ. ಈಗ ಶಾಲಾ ಶಿಕ್ಷಣ ಇಲಾಖೆ ಚಾಟಿ ಬೀಸಿದ್ದು ಕಡ್ಡಾಯ ಮಾಹಿತಿ ಹಾಕುವಂತೆ ಹೇಳಿದೆ. ಇಲಾಖೆಯ STATS ಹಾಗೂ ಶಾಲೆಗಳ ನೋಟಿಸ್ ಬೊರ್ಡ್​ಗಳಲ್ಲಿ ಶುಲ್ಕದ ಪಟ್ಟಿಯನ್ನ ಅಳವಡಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ನೀಡಿದೆ. ಜೊತೆಗೆ ಇನ್ಮುಂದೆ ಖಾಸಗಿ ಶಾಲೆಗಳು ಶಾಲಾ ದಾಖಲಾತಿ ವೇಳೆ ವಿದ್ಯಾರ್ಥಿ ಹಾಗೂ ಪೋಷಕರನ್ನ ಪರೀಕ್ಷೆ ಹಾಗೂ ಸಂದರ್ಶನ ನಡೆಸುವಂತಿಲ್ಲ ಅಂತಾ ಎಚ್ಚರಿಸಿದೆ.

ಇನ್ನು 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗಳ ಆರಂಭಕ್ಕೂ ಮುನ್ನವೇ ಖಾಸಗಿ ಶಾಲೆಗಳು ಶುಲ್ಕ ಏರಿಕೆ ಮಾಡಿಕೊಂಡು ದಾಖಲಾತಿ ಶುರು ಮಾಡಿವೆ. ಶುಲ್ಕ ಏರಿಕೆಯ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಹಾಗೂ ಶುಲ್ಕ ದರ ಪಟ್ಟಿಯನ್ನ ಶಾಲೆಗಳಲ್ಲಿ ಅಳವಡಿಸಿಲ್ಲ. ಇದಕ್ಕೆ ಶಿಕ್ಷಣ ಇಲಾಖೆ ಕಡಿವಾಣ ಕೂಡ ಹಾಕುತ್ತಿಲ್ಲ. ಹೀಗಾಗಿ ಶಾಲೆಗಳ ನೋಟಿಸ್ ಬೊರ್ಡ್​ಗಳಲ್ಲಿ ಶುಲ್ಕದ ಪಟ್ಟಿಯನ್ನ ಅಳವಡಿಸುವಂತೆ ಪೋಷಕರಿಂದ ಒತ್ತಾಯ ಕೇಳಿ ಬಂದಿದೆ. ಮಾಹಿತಿ ಹಾಕದ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ತಗೆದುಕೊಳ್ಳುವಂತೆ ಒತ್ತಾಯ ಕೇಳಿ ಬಂದಿದೆ.

ಇದನ್ನೂ ಓದಿ: ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ

ಒಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಯಾವುದನ್ನು ಲೆಕ್ಕಿಸದೇ ಪ್ರತಿ ವರ್ಷ ಶುಲ್ಕ ಏರಿಕೆ ಮಾಡಿಕೊಂಡು ಖಾಸು ಮಾಡಲು ಮುಂದಾಗಿದ್ದು, ಶುಲ್ಕದ ವಿವರವನ್ನ ಬಹಿರಂಗ ಪಡಿಸುತ್ತಿಲ್ಲ. ವೆಬ್ ಸೈಟ್ ನಲ್ಲಿಯೂ ಮಾಹಿತಿ ನೀಡಿಲ್ಲ. ಇದು ಪೋಷಕರ ಪರದಾಟಕ್ಕೆ ಕಾರಣವಾಗಿದೆ. ಇನ್ನಾದರೂ ಶಾಲಾ ಶಿಕ್ಷಣ ಇಲಾಖೆ ಸುತ್ತೊಲೆ ಅಷ್ಟೇ ಅಲ್ಲದೆ ಈ ಬಗ್ಗೆ ಕೊಂಚ ಗಮನ ಹರಿಸಬೇಕಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.