ಮೊಬೈಲ್ ಫೋನ್, ಆಕರ್ಷಣೀಯ ವಸ್ತುಗಳಿಂದ ದೂರ ಇದ್ದಿದ್ದಕ್ಕೆ ನಾನು ಈ ಸಾಧನೆ ಮಾಡುವುದಕ್ಕಾಯ್ತು -ದರ್ಶನ್
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮಾರಿಕಾಂಬಾ ಪ್ರೌಢ ಶಾಲೆಯ ವಿದ್ಯಾರ್ಥಿ ದರ್ಶನ್ 625ಕ್ಕೆ 624 ಅಂಕ ಗಳಿಸಿ ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದಿದ್ದಾನೆ. ಮೊಬೈಲ್ ಫೋನ್ ಸೇರಿದಂತೆ ಇನ್ನಿತರ ಆಕರ್ಷಣೆಯ ವಸ್ತುಗಳಿಂದ ನಾನು ದೂರ ಇದ್ದೆ. ಹೀಗಾಗಿ ನಾನು 624 ಮಾರ್ಕ್ಸ್ ಪಡೆದಿದ್ದೇನೆ ಎಂದು ತಿಳಿಸಿದ್ದಾನೆ.
ಉತ್ತರ ಕನ್ನಡ, ಮೇ.09: ಎಸ್ಎಸ್ಎಲ್ಸಿ ಫಲಿತಾಂಶ (SSLC Result 2024) ಹೊರಬಿದ್ದಿದೆ. ಸತತ ಪರಿಶ್ರಮಕ್ಕೆ ಫಲ ಸಿಕ್ಕ ಖುಷಿಯಲ್ಲಿ ವಿದ್ಯಾರ್ಥಿಗಳು ಮಿಂದೆದ್ದಿದ್ದಾರೆ. ನೂರಾರು ಕನಸನ್ನೇ ಹೊತ್ತು ಓದಿದವರಿಗೆ ಗೆಲವು ಸಿಕ್ಕಿದೆ. ರೈತನ ಮಗಳು ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು ಇಡೀ ರಾಜ್ಯಕ್ಕೇ ಮೊದಲ ಸ್ಥಾನ ಪಡೆದು ಬೇಷ್ ಎನಿಸಿಕೊಂಡಿದ್ದಾಳೆ. ಇನ್ನು 7 ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ ಸಿಕ್ಕಿದ್ದು ಈ ಪೈಕಿ ಶಿರಸಿ ನಗರದ ಮಾರಿಕಾಂಬಾ ಪ್ರೌಢ ಶಾಲೆಯ ವಿದ್ಯಾರ್ಥಿ ದರ್ಶನ್ ಮನೆಯಲ್ಲಿ ಹಬ್ಬದ ವಾತಾವರಣವಿದೆ. ಪೋಷಕರು ಮಗನಿಗೆ ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮಾರಿಕಾಂಬಾ ಪ್ರೌಢ ಶಾಲೆಯ ವಿದ್ಯಾರ್ಥಿ ದರ್ಶನ್ 625ಕ್ಕೆ 624 ಅಂಕ ಗಳಿಸಿ ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದಿದ್ದಾನೆ. ದರ್ಶನ್ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಗನಿಗೆ ಸಿಹಿ ತಿನ್ನಿಸಿ ತಾಯಿ ಅಭಿನಂದಿಸಿದ್ದಾರೆ. ಇನ್ನು ಟಿವಿ9 ಜೊತೆಗೆ ತನ್ನ ಖುಷಿಯನ್ನು ಹಂಚಿಕೊಂಡ ದರ್ಶನ್, ನಾನು ರಾಜ್ಯಕ್ಕೆ ಎರಡನೇ ಸ್ಥಾನ ಬಂದಿರೋದು ಖುಷಿ ತಂದಿದೆ. 624 ಮಾರ್ಕ್ಸ್ ಪಡೆಯುವುದು ತುಂಬಾ ಕಷ್ಟದ ಕೆಲಸ. ಈ ಖುಷಿ ಸಂದರ್ಭದಲ್ಲಿ ನನ್ನ ಗುರುಗಳು ಮತ್ತು ತಂದೆ ತಾಯಿನಾ ನಾನು ನೆನಪಿಸಿಕೊಳ್ತೀನಿ. ಗುರುಗಳು ಮತ್ತು ತಂದೆ ತಾಯಿಯ ಸಹಕಾರ ಇಲ್ಲದೆ ನಾನು ಸಾಧನೆ ಮಾಡುವುದಕ್ಕೆ ಆಗುತ್ತಿರಲಿಲ್ಲ. ಶಾಲೆಯಲ್ಲಿ ಹೇಳಿದ ಹೋಮ್ ವರ್ಕ್ ನಾನು ತಪ್ಪದೇ ಮಾಡುತ್ತಿದ್ದೆ. ಯಾವುದೇ ವಿಷಯವನ್ನು ಓದುವಾಗ ಫೋಕಸ್ ಕೊಟ್ಟು ಓದುತ್ತಿದ್ದೆ. ಮೊಬೈಲ್ ಫೋನ್ ಸೇರಿದಂತೆ ಇನ್ನಿತರ ಆಕರ್ಷಣೆಯ ವಸ್ತುಗಳಿಂದ ನಾನು ದೂರ ಇದ್ದೆ. ಹೀಗಾಗಿ ನಾನು 624 ಮಾರ್ಕ್ಸ್ ಪಡೆದಿದ್ದೇನೆ ಎಂದು ದರ್ಶನ್ ತಿಳಿಸಿದ್ದಾನೆ.
ಇದನ್ನೂ ಓದಿ:ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾದ ವಿದ್ಯಾರ್ಥಿ; ಮಗನಿಗಾಗಿ ಪೋಷಕರ ಹುಡುಕಾಟ
ಕಳೆದ ಬಾರಿಯಂತೆ ಈ ಬಾರಿಯೂ ಪರೀಕ್ಷೆಯಲ್ಲಿ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯಾದ್ಯಂತ 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಗೆ ಹೋಲಿಸಿದ್ರೆ ಈ ಬಾರಿ ಶೇ.10ರಷ್ಟು ಫಲಿತಾಂಶ ಕುಸಿದಿದೆ. ಪರೀಕ್ಷಾ ಮಂಡಳಿ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ನೋಡ್ಬೋದಾಗಿದೆ. ಪರೀಕ್ಷೆಯಲ್ಲಿ 6,31,204 ವಿದ್ಯಾರ್ಥಿಗಳು ಪಾಸ್ ಆಗಿದ್ದು, 8,69,968 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:07 pm, Thu, 9 May 24