KCET Toppers 2023: ಸಿಇಟಿ ಟಾಪರ್ಸ್ ಪಟ್ಟಿ; ಇಂಜಿನಿಯರಿಂಗ್ ವಿಭಾಗದಲ್ಲಿ​ ವಿಘ್ನೇಶ್​ ಪ್ರಥಮ

ಕರ್ನಾಟಕ ಸಿಇಟಿ ಫಲಿತಾಂಶ 2023: ವಿವಿಧ ಕೋರ್ಸ್​ಗಳಲ್ಲಿನ ಟಾಪರ್ಸ್ ಪಟ್ಟಿಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

KCET Toppers 2023: ಸಿಇಟಿ ಟಾಪರ್ಸ್ ಪಟ್ಟಿ; ಇಂಜಿನಿಯರಿಂಗ್ ವಿಭಾಗದಲ್ಲಿ​ ವಿಘ್ನೇಶ್​ ಪ್ರಥಮ
ಸಾಂದರ್ಭಿಕ ಚಿತ್ರ Image Credit source: Hindustan Times
Follow us
| Updated By: ನಯನಾ ಎಸ್​ಪಿ

Updated on:Jun 15, 2023 | 11:06 AM

2023-24ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಕಳೆದ ತಿಂಗಳು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ, ಸಿಇಟಿ ಫಲಿತಾಂಶ (KCET Results 2023) ಇಂದು(ಜೂನ್ 15) ಪ್ರಕಟವಾಗಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ವಿಗ್ನೇಶ್ ನಾಟರಾಜ್ ಕುಮಾರ್ ಪ್ರಥಮ ಸ್ಥಾನವನ್ನುಗಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು ಇಂದು ಬೆಳಗ್ಗೆ 9.30ಕ್ಕೆ ಸುದ್ದಿಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದ್ದಾರೆ. ವಿವಿಧ ಕೋರ್ಸ್​ಗಳಲ್ಲಿನ ಟಾಪರ್ಸ್ ಪಟ್ಟಿಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಇಂಜಿನಿಯರಿಂಗ್ ವಿಭಾಗದಲ್ಲಿ​ ವಿಘ್ನೇಶ್​ ಪ್ರಥಮ ಸ್ಥಾನ

  • ವಿಘ್ನೇಶ್​ ಪ್ರಥಮ ಸ್ಥಾನ (97.8%)
  • ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನ (97.5%)
  • ಸಮೃದ್ಧ್​ ಶೆಟ್ಟಿ ತೃತೀಯ ಸ್ಥಾನ (97.1 %)
  • ಎಸ್.ಸುಮೇಧ್​ಗೆ 4ನೇ ಸ್ಥಾನ
  • ಮಾಧವ ಸೂರ್ಯಗೆ 5ನೇ ಸ್ಥಾನ

ಕೃಷಿ ವಿಭಾಗದಲ್ಲಿ ಬೈರೇಶ್ ಎಸ್.ಎಚ್ ಅವರಿಗೆ ಪ್ರಥಮ ಸ್ಥಾನ

ಕೃಷಿ ವಿಭಾಗದಲ್ಲಿ ಬೈರೇಶ್ ಎಸ್.ಎಚ್ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಮಂಗಳೂರಿನ ಎಕ್ಸ್​ಪರ್ಟ್ ಯುನಿವರ್ಸಿಟಿ ಕಾಲೇಜ್ ವಿಧ್ಯಾರ್ಥಿಯಾದ ಬೈರೇಶ್, ಕ್ವಾಲಿಫಿಕೇಷನ್​ನಲ್ಲಿ 99.75 ಅಂಕ ಪಡೆದಿದ್ದು, ಸಿಟಿಟಿಯಲ್ಲಿ 93.75 ಅಂಕ ಪಡೆದು ಮೊದಲ ರ‍್ಯಾಂಕ್ ಪಡೆದಿದ್ದಾರೆ.

ವೆಟನರಿ ಸೈನ್ಸ್ ವಿಭಾಗದಲ್ಲಿ ಮಾಳವಿಕ ಕಾಪೂರ್​ಗೆ ಮೊದಲ ರ‍್ಯಾಂಕ್

ವೆಟನರಿ ಸೈನ್ಸ್ ವಿಭಾಗದಲ್ಲಿ ಮಾಳವಿಕ ಕಾಪೂರ್​ ಮೊದಲ ರ‍್ಯಾಂಕ್ ಪಡೆದಿದ್ದು, ಸಿಇಟಿಯಲ್ಲಿ ಒಟ್ಟು 97.222 ಅಂಕ ಪಡೆದಿದ್ದಾರೆ. ಇವರು ಚಾಮರಾಜಪೇಟೆಯ ಮಹೇಶ್ ಪಿಯು ಕಲೇಜಿನ ವಿಧ್ಯಾರ್ಥಿಯಾಗಿದ್ದಾರೆ.

ಬಿ ಫಾರ್ಮಾದಲ್ಲಿ ಪ್ರತೀಕ್ಷಾ ಆರ್ ಪ್ರಥಮ

ಬೆಂಗಳೂರಿನ ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್ ಕಾಂಪೋಸಿಟ್ ಪ್ರಿ-ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ ಆರ್, ಬಿ ಫಾರ್ಮಾದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಮಹೇಶ್ ಪಿಯು ಕಾಲೇಜಿನ ಮಾಳವಿಕಾ ಕಪೂರ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ನಾರಾಯಣ್ ಇ ಟೆಕ್ನೋ ಶಾಲೆಯ ಮಾಧವ್ ಸೂರ್ಯ ತಾಡೆಪಲ್ಲಿ ತೃತೀಯದಲ್ಲಿದ್ದಾರೆ.

ಬಿಎಸ್‌ಸಿಯಲ್ಲಿ ಬೈರೇಶ್​ಗೆ ಪ್ರಥಮ ರ‍್ಯಾಂಕ್

ಮಂಗಳೂರಿನ ಎಕ್ಸ್‌ಪರ್ಟ್ ಪ್ರಿ-ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಬಿಎಸ್‌ಸಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ರಾಯಚೂರಿನ ಪ್ರಮಾಣ ಪಿಯು ಕಾಲೇಜಿನ ಅನಯಾರಾಗ್ ರಂಜನ್ ದ್ವಿತೀಯ ರ‍್ಯಾಂಕ್ ಗಳಿಸಿದ್ದಾರೆ. ರಾಜಸ್ಥಾನ ರಾಜ್ಯದ ಲೇಡಿ ಅನ್ಸೂಯಾ ಸಿಂಘಾನಿ ಅವರ ಅಕಾಡೆಮಿ ಆಫ್ ಎಜುಕೇಶನ್‌ನ ಕಾರ್ತಿಕ್ ಮನೋಹರ್ ಸಿಂಹಸನ್ ಮೂರನೇ ರ‍್ಯಾಂಕ್ ಗಳಿಸಿದ್ದಾರೆ.

ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ, ಬಾಲಕಿಯರದ್ದೇ ಮೇಲುಗೈ

ಬಿಎನ್‌ವೈಎಸ್‌ನಲ್ಲಿ ಪ್ರತೀಕ್ಷಾ ಆರ್​ ಅವರಿಗೆ ಪ್ರಥಮ ರ‍್ಯಾಂಕ್

ಬೆಂಗಳೂರಿನ ಶ್ರೀ ಕುಮಾರನ್ಸ್ ಕಾಲೇಜಿನ ಪ್ರತೀಕ್ಷಾ ಆರ್ ಬಿಎನ್‌ವೈಎಸ್‌ನಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ಭೈರೇಶ್ ಎಸ್.ಎಚ್ ದ್ವಿತೀಯ, ಹುಬ್ಬಳ್ಳಿಯ ಬೇಸ್ ಪಿಯು ಕಾಲೇಜಿನ ಸೃಜನ್ ಎಂ.ಎಚ್ ತೃತೀಯ ರ‍್ಯಾಂಕ್ ಗಳಿಸಿದ್ದಾರೆ.

Published On - 11:02 am, Thu, 15 June 23

ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು