ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ರಾಜ್ಯದ NEET PG ಕೌನ್ಸೆಲಿಂಗ್ 2022 ದಾಖಲೆ ಪರಿಶೀಲನೆ ದಿನಾಂಕವನ್ನು ವಿಸ್ತರಿಸಿದೆ. ಕರ್ನಾಟಕ NEET PGET 2022 ಕೌನ್ಸೆಲಿಂಗ್‌ಗೆ ನೋಂದಾಯಿಸಿದ ಅಭ್ಯರ್ಥಿಗಳು ಅಕ್ಟೋಬರ್ 10, 2022 ರವರೆಗೆ KEA, ಬೆಂಗಳೂರು ಕಚೇರಿಯಲ್ಲಿ ದಾಖಲೆಗಳು/ಪ್ರಮಾಣಪತ್ರಗಳ ಆಫ್‌ಲೈನ್ ಪರಿಶೀಲನೆಗೆ ಹಾಜರಾಗಬೇಕಾಗುತ್ತದೆ. ಈ ಮೊದಲು ದಾಖಲೆ ಪರಿಶೀಲನೆಗೆ ಹಾಜರಾಗಲು ಕೊನೆಯ ದಿನಾಂಕ ಅಕ್ಟೋಬರ್ 3 ಆಗಿತ್ತು. ಅಭ್ಯರ್ಥಿಗಳು ಪಿಜಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಅರ್ಹತೆಯನ್ನು ಪಡೆಯಲು ಒರಿಜಿನಲ್ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ದಾಖಲೆ ಪರಿಶೀಲನೆ ಪ್ರಕ್ರಿಯೆಯ ನಂತರ, ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಮತ್ತು ಪರಿಶೀಲನಾ ಅಧಿಕಾರಿಯಿಂದ ಪರಿಶೀಲನೆ ಸ್ಲಿಪ್ ಪಡೆದುಕೊಳ್ಳಬೇಕು. ಅಭ್ಯರ್ಥಿಗಳು ಪರಿಶೀಲನೆ ಕೌಂಟರ್‌ನಿಂದ ಹೊರಡುವ ಮೊದಲು ಪರಿಶೀಲನೆ ಸ್ಲಿಪ್‌ನಲ್ಲಿ ಮುದ್ರಿಸಲಾದ ವಿವರಗಳನ್ನು ಕ್ರಾಸ್-ವೆರಿಫೈ ಮಾಡಬೇಕು. ಇದರ ನಂತರ ಕರ್ನಾಟಕ NEET PG ಕೌನ್ಸೆಲಿಂಗ್ 2022 ಆಯ್ಕೆಯ ಪ್ರವೇಶವು ಪ್ರಾರಂಭವಾಗುತ್ತದೆ. ಇದರಲ್ಲಿ ಅಭ್ಯರ್ಥಿಗಳು ಆದ್ಯತೆಯ ಕ್ರಮದಲ್ಲಿ ಕೋರ್ಸ್‌ಗಳು ಮತ್ತು ಕಾಲೇಜುಗಳ ಆಧಾರದ ಮೇಲೆ ಆದ್ಯತೆಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅಭ್ಯರ್ಥಿಗಳು ನಮೂದಿಸಿದ ಆಯ್ಕೆಗಳ ಆದ್ಯತೆ ಮತ್ತು ಅರ್ಹತೆಯ ಆಧಾರದ ಮೇಲೆ, ಕರ್ನಾಟಕ ನೀಟ್ ಪಿಜಿ ಸೀಟು ಹಂಚಿಕೆ ನಡೆಯುತ್ತದೆ.
ಕರ್ನಾಟಕ ರಾಜ್ಯದಲ್ಲಿ ಪಿಜಿ ವೈದ್ಯಕೀಯ ಅಥವಾ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳುವುದು ಮತ್ತು ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಪರಿಶೀಲನೆಯ ಸಮಯದಲ್ಲಿ ಅಗತ್ಯವಿರುವ ದಾಖಲೆಗಳು ಹೀಗಿವೆ.
KEA ‘PGET 2022’ ನೋಂದಣಿ ಅರ್ಜಿ ತುಂಬಿರಬೇಕು
ಫೋಟೊ ಐಡೆಂಟಿಟಿ ಮತ್ತು ವಿಳಾಸದ ದಾಖಲೆ
NEET PG 2022, NEET MDS 2022 ಪ್ರವೇಶ ಕಾರ್ಡ್ ಮತ್ತು ಸ್ಕೋರ್ ಕಾರ್ಡ್
SSLC ಅಥವಾ 2nd PUC ಅಂಕಗಳ ಕಾರ್ಡ್
ಅರ್ಹತಾ ಪದವಿ ಪ್ರಮಾಣಪತ್ರ
ತಾತ್ಕಾಲಿಕ ಪದವಿ ಪ್ರಮಾಣಪತ್ರ (2021 ರಲ್ಲಿ MBBS,BDS ಉತ್ತೀರ್ಣರಾದವರಿಗೆ ಮಾತ್ರ)
ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ಪ್ರಮಾಣಪತ್ರ
ರಾಜ್ಯ, ಕೇಂದ್ರ ವೈದ್ಯಕೀಯ ಅಥವಾ ದಂತ ಕೌನ್ಸಿಲ್ ನೋಂದಣಿ ಪ್ರಮಾಣಪತ್ರ.