AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NEET UG 2025 ಫಲಿತಾಂಶ: ಕರ್ನಾಟಕದ ನಿಖಿಲ್‌ಗೆ 17ನೇ ರ‍್ಯಾಂಕ್: ಇಲ್ಲಿದೆ ಕನ್ನಡಿಗರ ಸಾಧನೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2025ರ ಫಲಿತಾಂಶವನ್ನು ಪ್ರಕಟಿಸಿದ್ದು, ದೇಶದಾದ್ಯಂತ ಒಟ್ಟು 12.36 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಅರ್ಹತೆ ಪಡೆದಿದ್ದಾರೆ. ಈ ಪೈಕಿ ರಾಜಸ್ಥಾನದ ಮಹೇಶ್ ಕುಮಾರ್ ಫ್ಟಸ್ಟ್ ರ್ಯಾಂಕ್ ಪಡೆದುಕೊಂಡಿದ್ದರೆ, ಕರ್ನಾಟಕದ ನೀಖಿಲ್ ಸೋನದ್ ದೇಶಕ್ಕೆ 17ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಇನ್ನು ಟಾಪ್ 100ರಲ್ಲಿ ಸ್ಥಾನ ಪಡೆದ ರಾಜ್ಯದ ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ.

NEET UG 2025 ಫಲಿತಾಂಶ: ಕರ್ನಾಟಕದ ನಿಖಿಲ್‌ಗೆ 17ನೇ ರ‍್ಯಾಂಕ್: ಇಲ್ಲಿದೆ ಕನ್ನಡಿಗರ ಸಾಧನೆ
Neet
ರಮೇಶ್ ಬಿ. ಜವಳಗೇರಾ
|

Updated on: Jun 14, 2025 | 4:37 PM

Share

ಬೆಂಗಳೂರು, (ಜೂನ್ 14): ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಂದು (ಜೂನ್ 14) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) 2025 ರ ಪದವಿ  ಫಲಿತಾಂಶ ಪ್ರಕಟಿಸಿದೆ. 12.36 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ರಾಜಸ್ಥಾನದ ಮಹೇಶ್ ಕುಮಾರ್ ಟಾಪರ್ ಆಗಿ ಹೊರಹೊಮ್ಮಿದರೆ, ಮಧ್ಯಪ್ರದೇಶದ ಉತ್ಕರ್ಷ್ ಅವಧಿಯಾ ಎರಡನೇ ಸ್ಥಾನ ಪಡೆದಿದ್ದಾರೆ. ಮಹಿಳಾ ವಿಭಾಗದಲ್ಲಿ ದೆಹಲಿಯ ಅವಿಕಾ ಅಗರ್ವಾಲ್ ಟಾಪರ್ ಆಗಿದ್ದಾರೆ. ಇನ್ನು ಕರ್ನಾಟಕದ ನೀಖಿಲ್ ಸೋನದ್ ದೇಶಕ್ಕೆ 17ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ನೀಟ್ ಯುಜಿ 2025 ಗೆ ನೋಂದಾಯಿಸಿಕೊಂಡಿದ್ದ 22,76,069 ಅಭ್ಯರ್ಥಿಗಳಲ್ಲಿ 22,09,318 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 9,37,411 ಪುರುಷರು, 12,71,896 ಮಹಿಳೆಯರು ಮತ್ತು 11 ತೃತೀಯ ಲಿಂಗಿಗಳು. ಇದರಲ್ಲಿ ಪಟ್ಟು 12,36,531 ಅಭ್ಯರ್ಥಿಗಳು ಪಾಸಾಗಿದ್ದಾರೆ. ಇದರಲ್ಲಿ 5,14,063 ಪುರುಷರು, 7,22,462 ಮಹಿಳೆಯರು ಮತ್ತು 6 ತೃತೀಯ ಲಿಂಗಿಗಳಾಗಿದ್ದಾರೆ.

ಇದನ್ನೂ ಓದಿ: NEET UG Result 2025: NEET UG ಫಲಿತಾಂಶ ಪ್ರಕಟ; ರಿಸಲ್ಟ್​​​​ ಪರಿಶೀಲಿಸಲು ಲಿಂಕ್​​ ಇಲ್ಲಿದೆ

ಕರ್ನಾಟಕದ ಸಾಧನೆ

ಕರ್ನಾಟಕದ ಒಟ್ಟು 1,47,782 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದರು. ಆದ್ರೆ, 1,42,369 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 83,582 ಅರ್ಹತೆ ಪಡೆದುಕೊಂಡರು.

ಟಾಪ್ 10 ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿ

  1. ಮಹೇಶ್ ಕುಮಾರ್  ಫಸ್ಟ್​ ರ‍್ಯಾಂಕ್
  2.  ಉತ್ಕರ್ಷ್ ಅವಧಿಯಾ ಸೆಕೆಂಡ್ ರ‍್ಯಾಂಕ್
  3. ಕೃಶಾಂಗ್ ಜೋಶಿ ಮೂರನೇ ರ‍್ಯಾಂಕ್
  4. ಮೃಣಾಲ್ ಕಿಶೋರ್ ಝಾ ನಾಲ್ಕನೇ ರ‍್ಯಾಂಕ್
  5. ಅವಿಕಾ ಅಗ್ಗರ್ವಾಲ್ ಐದನೇ ರ‍್ಯಾಂಕ್
  6.  ಜೆನಿಲ್ ವಿನೋದ್‌ಭಾಯಿ ಭಾಯಾನಿ 6ನೇ ರ‍್ಯಾಂಕ್
  7. ಕೇಶವ್ ಮಿತ್ತಲ್ 7ನೇ ರ‍್ಯಾಂಕ್
  8. ಝಾ ಭಾವ್ಯ ಚಿರಾಗ್ 8ನೇ ರ‍್ಯಾಂಕ್
  9.  ಹರ್ಷ್ ಕೆಡವತ್ 9ನೇ ರ‍್ಯಾಂಕ್
  10.  ಆರವ್ ಅಗ್ರವಾಲ್ 10ನೇ ರ‍್ಯಾಂಕ್

ಟಾಪ್ 100ರಲ್ಲಿ ಸ್ಥಾನ ಪಡೆದ ಕರ್ನಾಟಕದ ವಿದ್ಯಾರ್ಥಿಗಳ ಪಟ್ಟಿ

  • ನೀಖಿಲ್ ಸೋನದ್ ದೇಶದಕ್ಕೆ 17ನೇ  ರ್ಯಾಂಕ್​,
  • ರುಚಿರ್ ಗುಪ್ತಾ ದೇಶದಕ್ಕೆ 22ನೇ ರ್ಯಾಂಕ್
  • ತೇಜಸ್ ಸೈಲೇಶ್ 38ನೇ  ರ್ಯಾಂಕ್.
  • ಪಿ ಜಾಗಿರ್ದಾರ್ 42 ನೇ ನೀಟ್ ರ್ಯಾಂಕ್
  • ಹರಿಣಿ ಶರ್ಮಾ 72 ನೇ ನೀಟ್ ರ್ಯಾಂಕ್
  • ದಿಗಂತ್ 80 ನೇ ನೀಟ್ ರ್ಯಾಂಕ್
  • ನಿಧಿ ಕೆ ಜಿ 84 ನೇ ನೀಟ್ ರ್ಯಾಂಕ್

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್