AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲಾ ವಿದ್ಯಾರ್ಥಿಗಳಿಗಿಲ್ಲ ಶೂ ಭಾಗ್ಯ: ಕಂಪನಿ ವಿರುದ್ಧ ದಂಡಾಸ್ತ್ರಕ್ಕೆ ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿಯ ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇನ್ನೂ ಶೂ ಭಾಗ್ಯ ಸಿಗದಂತಾಗಿದೆ. ಬೆಂಗಳೂರಿನ ಬಿಬಿಎಂಪಿಯ ಶಾಲೆಗಳಲ್ಲಿ ಓದುತ್ತಿರುವ ಸುಮಾರು 24 ಸಾವಿರ ವಿದ್ಯಾರ್ಥಿಗಳಿಗೆ ಇನ್ನೂ ಶೂ ಹಂಚಿಕೆಯಾಗಿಲ್ಲ. ಡೆಡ್ ಲೈನ್ ಮುಗಿದರೂ ಶೂ ಪೂರೈಸದೇ ಕಂಪನಿ ಮೀನಾಮೇಷ ಎಣಿಸುತ್ತಿದೆ.

ಶಾಲಾ ವಿದ್ಯಾರ್ಥಿಗಳಿಗಿಲ್ಲ ಶೂ ಭಾಗ್ಯ: ಕಂಪನಿ ವಿರುದ್ಧ ದಂಡಾಸ್ತ್ರಕ್ಕೆ ಮುಂದಾದ ಬಿಬಿಎಂಪಿ
ಶಾಲಾ ವಿದ್ಯಾರ್ಥಿಗಳಿಗಿಲ್ಲ ಶೂ ಭಾಗ್ಯ: ಕಂಪನಿ ವಿರುದ್ಧ ದಂಡಾಸ್ತ್ರಕ್ಕೆ ಮುಂದಾದ ಬಿಬಿಎಂಪಿ
ಶಾಂತಮೂರ್ತಿ
| Edited By: |

Updated on:Oct 18, 2024 | 6:28 PM

Share

ಬೆಂಗಳೂರು, ಅಕ್ಟೋಬರ್​ 18: ಸದಾ ಒಂದಿಲ್ಲೊಂದು ಸಮಸ್ಯೆಯಿಂದ ಸದ್ದು ಮಾಡುತ್ತಿರುವ ಬಿಬಿಎಂಪಿ, ಇದೀಗ ಬಿಬಿಎಂಪಿಯ (BBMP) ಶಾಲಾ ಮಕ್ಕಳಿಗೆ ಕೊಡುವ ಶೂ ನಲ್ಲೂ ನಿರ್ಲಕ್ಷ್ಯ ವಹಿಸಿದ್ದು ಕಂಡುಬಂದಿದೆ. ಸದ್ಯ ಶಾಲೆಗಳು ಆರಂಭವಾಗಿ ಐದಾರು ತಿಂಗಳು ಕಳೆದರೂ ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಸಿಗದಂತಾಗಿದೆ. ಅತ್ತ ಶೂ ಕೊಡುವುದಕ್ಕೂ ವಿಳಂಬ ಮಾಡುತ್ತಿರುವ ಕಂಪನಿಗೆ ಪಾಲಿಕೆಯ ವಿಶೇಷ ಆಯುಕ್ತರು ನೋಟಿಸ್ ನೀಡಿದ್ದು ದಂಡ ಹಾಕುವ ಎಚ್ಚರಿಕೆ ಕೊಟ್ಟಿದ್ದಾರೆ. ಇತ್ತ ಪಾಲಿಕೆ ಆಯುಕ್ತರು ಪ್ರತಿವರ್ಷ ಇದು ಕಾಮನ್​ ಅಂತಾ ಬೇಜವಾಬ್ದಾರಿಯ ಉತ್ತರ ನೀಡಿ ಸೈಲೆಂಟ್ ಆಗಿದ್ದಾರೆ.

ಬಿಬಿಎಂಪಿ ಶಾಲೆಗಳ ವಿದ್ಯಾರ್ಥಿಗಳಿಗಿಲ್ಲ ಶೂ ಭಾಗ್ಯ

ರಾಜ್ಯ ರಾಜಧಾನಿಯ ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇನ್ನೂ ಶೂ ಭಾಗ್ಯ ಸಿಗದಂತಾಗಿದೆ. ಬೆಂಗಳೂರಿನ ಬಿಬಿಎಂಪಿಯ ಶಾಲೆಗಳಲ್ಲಿ ಓದುತ್ತಿರುವ ಸುಮಾರು 24 ಸಾವಿರ ವಿದ್ಯಾರ್ಥಿಗಳಿಗೆ ಇನ್ನೂ ಶೂ ಹಂಚಿಕೆಯಾಗದ ಹಿನ್ನಲೆ ಶಾಲಾ ಮಕ್ಕಳು ಚಪ್ಪಲಿ, ಹಳೇ ಶೂಗಳನ್ನೇ ಹಾಕೊಂಡು ಶಾಲೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಜೂನ್​ನಲ್ಲೇ ಶೂ ತಯಾರಿಕೆ ಕಂಪನಿಗೆ ಸರಬರಾಜು ಆದೇಶ ಕೊಡಲಾಗಿತ್ತು, ಅಲ್ಲದೇ ಅಕ್ಟೋಬರ್ 4ನೇ ತಾರೀಕಿನ ಒಳಗೆ ಶೂ ಪೂರೈಸಬೇಕಿದ್ದ ಸುದರ್ಶನ್ ಆಂಡ್ ಕೋ ಕಂಪನಿ ಇದೀಗ ಡೆಡ್ ಲೈನ್ ಮುಗಿದರೂ ಶೂ ಪೂರೈಸದೇ ಮೀನಾಮೇಷ ಎಣಿಸುತ್ತಿದೆ.

ಇದನ್ನೂ ಓದಿ: ಗುಡ್​ನ್ಯೂಸ್: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಫ್ರೀ ಟ್ಯೂಷನ್ ಭಾಗ್ಯ.. !

ಅಕ್ಟೋಬರ್ 4ಕ್ಕೆ ಶೂ ಪೂರೈಸಬೇಕಿದ್ದ ಕಂಪನಿ ಇದೀಗ ಇನ್ನೂ ಕೂಡ ಶೂ ಪೂರೈಕೆ ಮಾಡದಿರುವುದರಿಂದ ವಿದ್ಯಾರ್ಥಿಗಳು ಶೂ ಇಲ್ಲದೇ ಪರದಾಡುವಂತಾಗಿದೆ. ಸದ್ಯ ಈ ಬಗ್ಗೆ ಪಾಲಿಕೆಯ ವಿಶೇಷ ಆಯುಕ್ತರು ಶೂ ಪೂರೈಸಬೇಕಿದ್ದ ಕಂಪನಿಗೆ ನೋಟಿಸ್ ನೀಡಿದ್ದು, ಸೂಕ್ತ ಕಾರಣ ಕೊಡುವ ಜೊತೆಗೆ ತಡವಾದ ದಿನಗಳಿಗೆ ಆದೇಶದಲ್ಲಿರುವ ಹಣದ 2% ರಷ್ಟು ದಂಡ ವಿಧಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ಸದ್ಯ ಒಂದೆಡೆ ಬಿಬಿಎಂಪಿಯ ವಿಶೇಷ ಆಯುಕ್ತರು ಕಂಪನಿಗೆ ನೋಟಿಸ್ ನೀಡಿದರೆ ಇತ್ತ ಬಿಬಿಎಂಪಿಯ ಆಯುಕ್ತ ತುಷಾರ್ ಗಿರಿನಾಥ್, ಪರೋಕ್ಷವಾಗಿ ಕಂಪನಿ ಪರವಾಗಿ ಬ್ಯಾಟ್ ಬೀಸಿದ್ದಾರೆ. ಕಳೆದ ವರ್ಷ ಕೂಡ ಶೂ, ಸಾಕ್ಸ್ ಕೊಡೋದು ತಡವಾಗಿತ್ತು. ಲಿಡ್ ಕರ್ ಪೂರೈಕೆ ಮಾಡಲ್ಲ ಅಂದಿದ್ದಕ್ಕೆ ಖಾಸಗಿ ಕಂಪನಿಗೆ ನೀಡಿದ್ದೇವೆ. ಇನ್ನೂ ವರ್ಷ ಮುಗಿದಿಲ್ಲ ನೋಡೋಣ ಅಂತಾ ಜಾರಿಕೊಂಡಿದ್ದಾರೆ.

ಇದನ್ನೂ ಓದಿ: ವ್ಯಾಪಕ ಮಳೆ: ಬೆಂಗಳೂರಿನಲ್ಲಿ ಅ.16ರಂದು ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

ಪಾಲಿಕೆ ಹಾಗೂ ಕಂಪನಿ ನಡುವಿನ ಸಮನ್ವಯತೆ ಕೊರತೆ ಹಾಗೂ ವಿಳಂಬನೀತಿಯಿಂದ ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶೂ ಸಿಗದಂತಾಗಿದೆ. ಸದ್ಯ ಪಾಲಿಕೆ ನೋಟಿಸ್ ಪಡೆದಿರುವ ಕಂಪನಿ ಈಗಲಾದರೂ ಶೀಘ್ರವಾಗಿ ಶೂ, ಸಾಕ್ಸ್ ಪೂರೈಸುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:27 pm, Fri, 18 October 24

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ