AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಶಾಲೆಗಳಲ್ಲಿ ಮುಂಚಿತವಾಗಿ ಸೀಟ್ ಬ್ಲಾಕ್ ಮಾಡಿ ಹಣ ಪಡೆದ್ರೆ ಕಾನೂನು ಕ್ರಮ -ಶಿಕ್ಷಣ ಇಲಾಖೆ ಖಡಕ್ ವಾರ್ನಿಂಗ್

ಖಾಸಗಿ ಶಾಲೆಗಳು ಪೋಷಕರ ಸುಲಿಗೆಗೆ ಒಂದಲ್ಲ ಒಂದು ಪ್ಲಾನ್ ಮಾಡ್ತಾನೆ ಇರ್ತಾವೆ. ಜೊತೆಗೆ ಪೋಷಕರನ್ನ ಖೆಡ್ಡಾಕ್ಕೆ ಕೆಡವಿ ಸುಲಿಗೆ ಮಾಡ್ತಾನೆ ಇರ್ತಾರೆ. ಈ ಬಾರಿ ಆಫರ್ ಹೆಸರಲ್ಲಿ 6 ತಿಂಗಳ ಮೊದಲೇ ಶಾಲಾ ದಾಖಲಾತಿಗೆ ಮುಂದಾಗಿದ್ವು ಈಗ ಶಾಲಾ ಶಿಕ್ಷಣ ಇಲಾಖೆ ಇತಂಹ ಶಾಲೆಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.

ಖಾಸಗಿ ಶಾಲೆಗಳಲ್ಲಿ ಮುಂಚಿತವಾಗಿ ಸೀಟ್ ಬ್ಲಾಕ್ ಮಾಡಿ ಹಣ ಪಡೆದ್ರೆ ಕಾನೂನು ಕ್ರಮ -ಶಿಕ್ಷಣ ಇಲಾಖೆ ಖಡಕ್ ವಾರ್ನಿಂಗ್
ಖಾಸಗಿ ಶಾಲೆ
Vinay Kashappanavar
| Edited By: |

Updated on:Oct 15, 2024 | 3:30 PM

Share

ಬೆಂಗಳೂರು, ಅ.15: ಪ್ರತಿವರ್ಷ ಮಕ್ಕಳ ಶೈಕ್ಷಣಿಕ ದಾಖಲಾತಿ ಮಾರ್ಚ್ ನಲ್ಲಿ ಶುರುವಾಗುತ್ತೆ. ಇನ್ನು ಕೆಲವು ಖಾಸಗಿ ಶಾಲೆಗಳು ಜನವರಿಯಲ್ಲಿಯೇ ಮಾಡುತ್ತಿದ್ದರು. ಆದ್ರೆ ಈಗ ಇದು 6 ತಿಂಗಳ ಮೊದಲೇ ಮಕ್ಕಳ ದಾಖಲಾತಿಗೆ ಖಾಸಗಿ ಶಾಲೆಗಳು ಮುಂದಾಗಿವೆ. ಶೈಕ್ಷಣಿಕ ಪ್ರವೇಶ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಖಾಸಗಿ ಶಾಲೆಗಳು ವ್ಯಾಪಾರ ಶುರು ಮಾಡಿವೆ. 2025ನೇ ಶೈಕ್ಷಣಿಕ ಪ್ರವೇಶಕ್ಕೆ ಈಗಿಂದಲೇ ಮುಗಿಬಿದ್ದ ಶಾಲೆಗಳು ಪ್ರವೇಶ ಶುಲ್ಕ, ಸ್ಕಾಲರ್ ಶಿಪ್, ಸೇರಿ ವಿವಿಧ ಬಗೆಯ ಆಫರ್ ಕೊಟ್ಟು ಪೋಷಕರನ್ನ ಸೆಳೆಯುತ್ತಿವೆ. ಬೆಂಗಳೂರಿನ ಕೆಲವು ಪ್ರತಿಷ್ಟಿತ ಶಾಲೆಗಳಿಂದ ಆಫರ್ ಶುರುವಾಗಿದೆ. ಈಗಲೇ ದಾಖಲಾತಿ ಮಾಡಿ 30%, 50% ಶುಲ್ಕ ವಿನಾಯತಿ ಕೊಡ್ತೀವಿ ಅಂತಾ ಆಫರ್ ಶುರು ಮಾಡಿಕೊಂಡು ಸೀಟ್ ಬ್ಲಾಕ್ ಮಾಡಿಕೊಂಡು ದಾಖಲಾತಿ ಮಾಡ್ತೀವೆ ಇದು ಪೋಷಕರ ಪರದಾಟಕ್ಕೆ ಕಾರಣವಾಗಿತ್ತು. ಈಗ ಇತಂಹ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಚಾಟಿ ಬೀಸಿದೆ.

ಹೇಳ್ದೆ ಕೇಳ್ದೆ ಪೋಷಕರ ಬಳಿ ಇನ್ಮುಂದೆ ಶುಲ್ಕ ಪಡೆದು ದಾಖಲಾತಿ ಮಾಡಂಗಿಲ್ಲ. ಮುಂಚಿತವಾಗಿ ಸೀಟ್ ಬ್ಲಾಕ್ ಮಾಡಿ ಹಣ ಪಡೆದು ದಾಖಲಾತಿ ಮಾಡಿದ್ರೆ ಕಾನೂನು ಕ್ರಮ ಫಿಕ್ಸ್ ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ಕೆಲವು ವರ್ಷಗಳಿಂದ ರಾಜಧಾನಿಯಲ್ಲಿ ಪ್ರತಿಷ್ಟಿತ ಖಾಸಗಿ ಶಿಕ್ಷಣ ಸಂಸ್ಥೆಗಳು 6 ತಿಂಗಳು ಮುಂಚಿತವಾಗಿಯೇ ಮುಂದಿನ ವರ್ಷದ ಸೀಟ್ ಬ್ಲಾಕಿಂಗ್ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಮೊದಲೆ ಪೋಷಕರ ಬಳಿ ಶುಲ್ಕ ಕಟ್ಟಿಸಿಕೊಂಡು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ದಾಖಲಾತಿ ನೀಡ್ತಾ ಇದ್ದಾರೆ..

ಮುಂಚಿತ ಸೀಟ್ ನೋಂದಣಿ ಮಾಡಿಸಿದ್ರೆ 10,000 – 25000 ಸಾವಿರ ರಿಯಾಯಿತಿ ಅಂತ ಆಫರ್ ಕೂಡಾ ಕೊಡ್ತೀದ್ದಾರೆ. ಸರ್ಕಾರದ ಶೈಕ್ಷಣಿಕ ಪ್ರವೇಶ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ದಾಖಲಾತಿ ಮಾಡ್ತೀದ್ದಾರೆ. ಆದ್ರೆ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಾರಂಭಕ್ಕೂ ಮುಂಚೆ ಶುಲ್ಕ ಸ್ವೀಕರಿಸುವಂತಿಲ್ಲ. ದಾಖಲಾತಿ ಮಾಡುವಂತಿಲ್ಲ. ಒಂದು ವೇಳೆ ಪ್ರವೇಶ ಶುಲ್ಕ ಸಂಗ್ರಹಿಸಿದರೆ ಅದು ಕಾನೂನು ಉಲ್ಲಂಘನೆ. ಹೀಗಾಗಿ ಈಗ ಶಾಲಾ ಶಿಕ್ಷಣ ಇಲಾಖೆ ಕಾನಾನು ಉಲ್ಲಂಘಿಸುವ ಶಾಲೆಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಶಿಕ್ಷಣ ಇಲಾಖೆಯ ಕಾನೂನು ಉಲ್ಲಂಘಿಸಿ ದಾಖಲಾತಿ ಸೀಟ್ ಬ್ಲಾಕ್ ಮಾಡ್ತೀರೊ ಶಾಲೆಗಳ ಮಾನ್ಯತೆ ರದ್ದು ಮಾಡಲು ಕೂಡಾ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಪುನಃ ಮಳೆ, ಹಲವೆಡೆ ಟ್ರಾಫಿಕ್ ಜಾಮ್, ಸಾಮಾನ್ಯ ಜನಜೀವನ ಅಸ್ತವ್ಯಸ್ತ

ಖಾಸಗಿ ಶಾಲೆಗಳಿಂದ ಏನು ಆಫರ್?

  • ಈಗಾಗಲೇ ನೋಂದಣಿ ಮಾಡಿದವರಿಗೆ ಶುಲ್ಕದಲ್ಲಿ ರಿಯಾಯಿತಿ
  • 10,000-25000 ಸಾವಿರದವರೆಗೂ ರಿಯಾಯತಿ
  • 50% ಪರ್ಸೆಂಟ್ ಫೀಸ್ ಆಫರ್
  • ಸ್ಕಾಲರ್ ಶಿಪ್ ಜಾಸ್ತಿ ಕೊಡಿಸ್ತೇವೆ
  • ಬೇರೆ ಸ್ಕೂಲ್ನಲ್ಲಿ ಓದುತಿದ್ದರೇ ಉಚಿತ ಅಡ್ಮಿಷನ್ ಕೊಡ್ತೇವೆ
  • ನಿರ್ವಹಣೆ ಶುಲ್ಕ ಉಚಿತ ಮಾಡ್ತೇವೆ
  • ಒಂದು ವರ್ಷದ ಫೀಸ್ ಫ್ರೀ ಮಾಡ್ತೇವೆ

ಆಫರ್ ಕೊಡಲು ಕಾರಣ ಏನು?

  • ಪ್ರತಿ ವರ್ಷವೂ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ
  • ಹೊಸ ಶಾಲೆಗಳ ಅನುಮತಿಯಿಂದ ಪೈಪೋಟಿ ಹೆಚ್ಚು
  • ಕೆಲವು ಶಾಲೆಗಳಿಗೆ ಬೇಡಿಕೆ ಕಮ್ಮಿಯಾಗಿದೆ. ಹಾಗಾಗಿ ಬೇಡಿಕೆ ಉಳಿಸಿಕೊಳ್ಳುವ ಯತ್ನ
  • ಹೆಚ್ಚು ಹೆಚ್ಚು ಶಾಲೆಗಳು ತೆರೆಯುವುದರಿಂದ ಮಕ್ಕಳು ಹಂಚಿಕೆ ಆಗ್ತಿದ್ದಾರೆ
  • ಇದರಿಂದ ಕೆಲವು ಶಾಲೆಗಳಲ್ಲಿ ಮಕ್ಕಳ ಅಡ್ಮಿಷನ್ ಕುಸಿದಿದೆ
  • ದಾಖಲಾತಿ ಹೆಚ್ಚಿಸಿಕೊಳ್ಳಲು ಆಫರ್
  • ಶಾಲೆಗಳ ಮೇಲೆ ದೊಡ್ಡ ಬಂಡವಾಳ ಹಾಕಿರ್ತಾರೆ
  • ಆದಾಯ ಮತ್ತು ನಿರ್ವಹಣೆ ಸವಾಲಾಗಿರುತ್ತದೆ
  • ಆಫರ್ ಕೊಟ್ಟು ಪೋಷಕರನ್ನ ಸೆಳೆಯುವ ಯತ್ನ
  • ರಿಜಿಸ್ಟರ್ ಮಾಡ್ಕೊಂಡ್ರೆ ದಾಖಲಾತಿ ಕನ್ಫರ್ಮ್ ಆಗುತ್ತೆ ಎನ್ನುವ ಭರವಸೆ

ಒಟ್ನಲ್ಲಿ ರಾಜಧಾನಿಯಲ್ಲಿ ಖಾಸಗಿ ಶಾಲೆಗಳು ಪೋಷಕರ ಸುಲಿಗೆಗೆ ಹೊಸ ಅಸ್ತ್ರ ಪ್ರಯೋಗಿಸುತ್ತಿದ್ದು ಶೈಕ್ಷಣಿಕ ವರ್ಷದ ದಾಖಲಾತಿ ಪ್ರಾರಂಭಕ್ಕೂ ಮುಂಚೆ ಶುಲ್ಕ ಸುಲಿಗೆಗೆ ಮುಂದಾಗಿವೆ. ಈಗ ಶಿಕ್ಷಣ ಸಚಿವರು ಇತಂಹ ಶಾಲೆಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದು ಇದು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೆ ಅಂತಾ ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:46 pm, Tue, 15 October 24