ತುಂಗಭದ್ರಾ ನದಿ ಆಂಧ್ರದಲ್ಲಿದ್ಯಾ? ಶಿಕ್ಷಣ ಇಲಾಖೆಯಿಂದ ಮತ್ತೊಂದು ಯಡವಟ್ಟು, ವಿವಾದದ ಸುಳಿಯಲ್ಲಿ CBSE ಪಠ್ಯ..!

ಸಿಲೆಬಸ್ ನಲ್ಲಿನಲ್ಲಿ ಕರ್ನಾಟಕದ ಇತಿಹಾಸವನ್ನ ಮರೆಮಾಚುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ,

ತುಂಗಭದ್ರಾ ನದಿ ಆಂಧ್ರದಲ್ಲಿದ್ಯಾ? ಶಿಕ್ಷಣ ಇಲಾಖೆಯಿಂದ ಮತ್ತೊಂದು ಯಡವಟ್ಟು, ವಿವಾದದ ಸುಳಿಯಲ್ಲಿ CBSE ಪಠ್ಯ..!
ತುಂಗಭದ್ರಾ ನದಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 16, 2022 | 8:16 PM

ಬೆಂಗಳೂರು: ಟಿಪ್ಪು ಪಠ್ಯ ಪರಿಷ್ಕರಣೆ ವಿವಾದ ತಣ್ಣಗಾಯ್ತು. ಆದ್ರೆ, ಇದೀಗ ಕೇಂದ್ರೀಯ ಸಿಲೆಬಸ್ ನಲ್ಲಿನ ಅಂಶಗಳು ಮತ್ತೊಂದು ಪ್ರಮಾದಕ್ಕೆ ಕಾರಣವಾಗಿದೆ. ಶಾಲಾ ಕಾಲೇಜುಗಳ ಪಠ್ಯದಲ್ಲಿ ಟಿಪ್ಪು ಸುಲ್ತಾನ್, ವೈದ್ಯಕೀಯ ಸಮಾಜಶಾಸ್ತ್ರ ವಿವಾದ ತಣ್ಣಗಾಗುವ ಹೊತ್ತಲ್ಲೇ ಮತ್ತೊಂದು ಯಡವಟ್ಟು ಆಗಿದೆ. ಈ ಮೂಲಕ ಕರ್ನಾಟಕದ ಇತಿಹಾಸವನ್ನ ಮರೆಮಾಚುವ ಹುನ್ನಾರ ನಡೆದಿದೆ ಎಂದು ಗಂಭೀರ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಗುಡ್​ನ್ಯೂಸ್: ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚ ಏರಿಕೆ

ಅದು ನದಿಗಳ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡುವ ಕೆಲಸವಾಗುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸುತ್ತಿದೆ. ಇದೀಗ ಪುಸ್ತಕದಲ್ಲಿ ತುಂಗಭದ್ರಾಯರ ಹೆಸರಲ್ಲಿ ಹೊಸ ಪಾಲಿಟಿಕ್ಸ್ ಶುರುವಾಗಿದೆ. ಅದೇನೆಂದರೆ, ತುಂಗಾಭದ್ರಾ ಜಲಾಶಯ ನಮ್ಮದೇ ಅಂತ ಆಂಧ್ರ ಸರ್ಕಾರ ಹೇಳುತ್ತಿದ್ದರೆ, ಇದಕ್ಕೆ ಪುಷ್ಟಿ ಕೊಡುವಂತೆ 4ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕ ಸಾಕ್ಷಿಯಾಗಿದೆ.

ತುಂಗಭದ್ರಾ ಆಂಧ್ರದಲ್ಲಿದೆ ಎಂದು ಉಲ್ಲೇಖ

2020ರ ಹೊಸ ಶಿಕ್ಷಣ ನೀತಿಯ ಅನ್ವಯ ಸಿಬಿಎಸ್ಇ ಸಿಲೆಬಸ್ ರಚನೆಯಾಗಿದೆ. ಈ ಪೈಕಿ 4ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪುಸ್ತಕದಲ್ಲಿ ದೊಡ್ಡ ಯಡವಟ್ಟು ನಡೆದಿದೆ. 10ನೇ ಪಾಠ ವಾಟರ್ ರಿಸೋಸರ್ಸ್ ಎಂಬ ಅಧ್ಯಾಯನದಲ್ಲಿ ನದಿ, ಅಣೆಕಟ್ಟುಗಳ ಪರಿಚಯ ಅಂಶ ಇರುತ್ತೆ. ಇದರಲ್ಲಿ ತುಂಗಾಭದ್ರ ಜಲಾಶಯ ಆಂಧ್ರ ಪ್ರದೇಶದಲ್ಲಿ ಇದೆ ಎಂದು ಉಲ್ಲೇಖ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲೂ ಸಾವಿರಾರು ಶಾಲೆಗಳು ಸಿಬಿಎಸ್ಇ ಪಠ್ಯ ಆಧಾರಿತ ಶಾಲೆಗಳಿವೆ. ಇದೀಗ ಪುಸ್ತಕ ಸಮಿತಿ ಮಾಡಿರುವ ಯಡವಟ್ಟಿಗೆ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವರ ವಿರುದ್ಧ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಹಬ್ಬ-ಹರಿದಿನ, ವಿಶೇಷ ಸಂದರ್ಭಗಳಲ್ಲಿ ಶಾಲಾ ಮಕ್ಕಳಿಗೆ ವಿಶೇಷ ಭೋಜನ ಯೋಜನೆ

ಅತಿದೊಡ್ಡ ಅಣೆಕಟ್ಟೆಗಳಲ್ಲಿ ಒಂದಾದ ತುಂಗಭದ್ರಾ ನೀರಾವರಿ ಯೋಜನೆಯು ಆಂಧ್ರಪ್ರದೇಶದಲ್ಲಿಲ್ಲ. ಕರ್ನಾಟಕದ ಹೊಸಪೇಟೆ ಭಾಗದಲ್ಲಿ ಟಿಬಿ ಡ್ಯಾಮ್ ಇದೆ. ಆದರೆ, ಸಿಬಿಎಸ್‌ಇ ನಾಲ್ಕನೇ ತರಗತಿ ಪಠ್ಯಪುಸ್ತಕದಲ್ಲಿ ದೇಶದ ಪ್ರಮುಖ ವಿವಿಧೋದ್ದೇಶ ನದಿ ಯೋಜನೆಗಳ ಪಟ್ಟಿಯನ್ನು ನೀಡಲಾಗಿದೆ. ಅದರಲ್ಲಿ ತುಂಗಭದ್ರಾ ನೀರಾವರಿ ಯೋಜನೆಯು ಆಂಧ್ರ ಪ್ರದೇಶದಲ್ಲಿದೆ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಹೊಸಪೇಟೆಯಲ್ಲಿರುವ, ಬರೋಬ್ಬರಿ 135 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಅಣೆಕಟ್ಟು ಅಥವಾ ಪಂಪ ಸಾಗರವನ್ನು ಆಂಧ್ರ ಪ್ರದೇಶದಲ್ಲಿರುವ ಯೋಜನೆ ಎಂದು ಮಕ್ಕಳಿಗೆ ಕಲಿಸುವುದು ಎಷ್ಟು ಸರಿ?ಎಂದು ಮೋಹನ್‌ ದಾಸರಿ ಪ್ರಶ್ನೆ ಮಾಡಿದ್ದಾರೆ.

ಇಂದೆಂತಹ ನಾಚಿಕೆಯ ವಿಷಯ ಸಿಎಂ ಬಸವರಾಜ ಬೊಮ್ಮಾಯಿಯವರೇ ಎಂದು ದಾಸರಿ ಟ್ವೀಟ್ ಮಾಡಿ ಕಾಲೆಳೆದಿದ್ದು, ನಿಮ್ಮ ಶಿಗ್ಗಾವಿ ಕ್ಷೇತ್ರದಲ್ಲೂ ಹರಿಯುವ ತುಂಗಭದ್ರಾ ನದಿಗೆ ಸಂಬಂಧಿಸಿದ ಯೋಜನೆ ಬಗ್ಗೆಯೇ ತಪ್ಪು ಮಾಹಿತಿ ನೀಡಲಾಗಿದೆ ಅಂತ ಟ್ವೀಟ್ ಮಾಡಿ ಮುಖ್ಯಮಂತ್ರಿಗೆ ಕುಟುಕಿದ್ದಾರೆ. ಅಲ್ಲದೆ, ಕೂಡಲೇ ಒಂದರಿಂದ ಹನ್ನೆರಡನೇ ತರಗತಿಯ ಎಲ್ಲ ಸಿಬಿಎಸ್ಇ ಪಠ್ಯಕ್ರಮವನ್ನ ಪರಿಶೀಲನೆ ನಡೆಸುವಂತೆ ಮೋಹನ್ ದಾಸರಿ ಆಗ್ರಹಿಸಿದ್ದಾರೆ.

ಸಿಬಿಎಸ್ ಇ ಪಠ್ಯದಲ್ಲಿ ಕರ್ನಾಟಕದ ಇತಿಹಾಸ ತಿರುಚಲಾಗಿದ್ಯಾ..?

1 ರಿಂದ 12ನೇ ತರಗತಿಯ ಸಿಬಿಎಸ್ಇ ಸಿಲೆಬಸ್ ನಲ್ಲಿ ಕರ್ನಾಟಕ ಇತಿಹಾಸವನ್ನ ಮರೆಮಾಚಲಾಗಿದೆ ಎಂದು ಆರೋಪ ಬಲವಾಗಿ ಕೇಳಿ ಬರ್ತಿದೆ. ಕರ್ನಾಟಕದಲ್ಲಿ ಪ್ರಸಿದ್ದ ಪಡೆದ ಜಿಲ್ಲೆಗಳನ್ನ ಇತಿಹಾಸವನ್ನ ಸಿಬಿಎಸ್ಇ ಪಠ್ಯ ಕ್ರಮದಲ್ಲಿ ತಿರುಚಲಾಗಿದೆಯಂತೆ. ರಾಜ್ಯದ ಪ್ರಸಿದ್ದ ಕಾರ್ಖಾನೆ, ಕಂಪನಿ, ನದಿ, ಸಮುದ್ರ, ಹಬ್ಬಗಳು ಸೇರಿದಂತೆ ಹೆಸರುವಾಸಿ ಪಡೆದ ಜಿಲ್ಲೆಗಳನ್ನ ಕೈಬಿಡಲಾಗಿದೆಂತೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಳಿಕ ಸಿದ್ದವಾದ ಪಠ್ಯದಲ್ಲಿ ಮಹಾ ಯಡವಟ್ಟು ನಡೆದಿದೆ. ಕೂಡಲೇ ಪರಿಶೀಲನೆ ನಡೆಸಿ, ರಾಜ್ಯದಲ್ಲಿನ ಸಿಬಿಎಸ್ಇ ಪಠ್ಯವನ್ನ ಬದಲಿಸುವಂತೆ ಶಿಕ್ಷಣ ತಜ್ಞರು, ಪೋಷಕರು ಹಾಗೂ ಆಮ್ ಆದ್ಮಿ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಒಟ್ಟಾರೆ, ರಾಜ್ಯಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಸಿಬಿಎಸ್ಇ ಶಾಲೆಗಳು ಇದೇ ಪಠ್ಯವನ್ನ ಒಳಗೊಂಡಿದೆ. ಇದೀಗ ತಪ್ಪು ಮಾಹಿತಿ ನೀಡಿರುವುದು ಪ್ರಮಾದಕ್ಕೆ ಕಾರಣವಾಗಿದ್ದು, ಕರ್ನಾಟಕದ ಇತಿಹಾಸ ತಿರುಚಿ, ಮರೆಮಾಚುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಬಾಕಿ ವಿಷಯಗಳ ಪುಸ್ತಕಗಳನ್ನು ಪರಿಶೀಲನೆ ನಡೆಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಆದರೆ, ಶಿಕ್ಷಣ ಇಲಾಖೆ ಈ ವಿಚಾರವನ್ನ ಎಷ್ಟು ಗಂಭೀರವಾಗಿ ಪರಿಗಣಿಸುತ್ತೆ ಎಂದು ಕಾದು ನೋಡಬೇಕಿದೆ.

ವರದಿ: ಅನಿಲ್ ಕಲ್ಕೆರೆ, ಟಿವಿ9, ಬೆಂಗಳೂರು.

Published On - 8:14 pm, Fri, 16 December 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್