ನಿಮ್ಮ ಆಯ್ಕೆ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಹೋಟೆಲ್ ಮ್ಯಾನೇಜ್ಮೆಂಟ್ ಯಾಕೆ ಆಗಿರಬೇಕು? ಇಲ್ಲಿದೆ 10 ಕಾರಣಗಳು

ಹೋಟೆಲ್ ಉದ್ಯಮಕ್ಕೆ ಸೇರಲು ಬಯಸುವ ಪ್ರತಿಯೊಬ್ಬ ವಿದ್ಯಾರ್ಥಿಯು ಮೊದಲು ಹೋಟೆಲ್ ಮ್ಯಾನೇಜ್ಮೆಂಟ್ ಪದವಿಯನ್ನು ಪಡೆಬೇಕು ಮತ್ತು ಅದರ ಬಗ್ಗೆ ತರಬೇತಿ ಪಡೆಯುವುದು ಅಗತ್ಯ. ಅದಕ್ಕಾಗಿ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (IIHM Hotel School) ಪ್ರಮುಖ ಸಂಸ್ಥೆಯಾಗಿದೆ. IIHM ಒಂದು ಉತ್ತಮ ಸಂಸ್ಥೆಯಾಗಿದೆ.

ನಿಮ್ಮ ಆಯ್ಕೆ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಹೋಟೆಲ್ ಮ್ಯಾನೇಜ್ಮೆಂಟ್ ಯಾಕೆ ಆಗಿರಬೇಕು? ಇಲ್ಲಿದೆ 10 ಕಾರಣಗಳು
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 01, 2024 | 5:32 PM

ಉದ್ಯಮಗಳು ವಿಸ್ತಾರವಾಗಿ ಬೆಳೆಯುತ್ತಿರುವ ಕಾಲಘಟ್ಟದಲ್ಲಿ ಹೊಟೆಲ್ ಉದ್ಯಮವು ಪ್ರಾಧಾನ್ಯತೆಯನ್ನು ಪಡೆಯುತ್ತಿದ್ದು, ಹೊಟೆಲ್ ಉದ್ಯಮವನ್ನು ಪ್ರಾರಂಭಿಸಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಹೋಟೆಲ್ ಮ್ಯಾನೇಜ್ಮೆಂಟ್ ಬೆಂಗಳೂರು ಮುಕ್ತ ಅವಕಾಶವನ್ನು ನೀಡುತ್ತಿದೆ. ಹೋಟೆಲ್ ಉದ್ಯಮಕ್ಕೆ ಸೇರಲು ಬಯಸುವ ಪ್ರತಿಯೊಬ್ಬ ವಿದ್ಯಾರ್ಥಿಯು ಮೊದಲು ಹೋಟೆಲ್ ಮ್ಯಾನೇಜ್ಮೆಂಟ್ ಪದವಿಯನ್ನು ಪಡೆಬೇಕು ಮತ್ತು ಅದರ ಬಗ್ಗೆ ತರಬೇತಿ ಪಡೆಯುವುದು ಅಗತ್ಯ. ಅದಕ್ಕಾಗಿ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (IIHM Hotel School) ಪ್ರಮುಖ ಸಂಸ್ಥೆಯಾಗಿದೆ. IIHM ಒಂದು ಉತ್ತಮ ಸಂಸ್ಥೆಯಾಗಿದ್ದು, ಅಂತರರಾಷ್ಟ್ರೀಯ ಗುಣಮಟ್ಟದ ತರಬೇತಿ ಮಾತ್ರವಲ್ಲದೆ, ಈ ಸಂಸ್ಥೆಯಿಂದ ಹೊರ ಹೋಗುವ ಪ್ರತಿಯೊಬ್ಬ ಅಭ್ಯರ್ಥಿಗೆ ಉತ್ತಮ ಮಾರ್ಗದರ್ಶವನ್ನು ನೀಡುತ್ತದೆ.

ಇಲ್ಲಿದೆ IIHM ಸಂಸ್ಥೆಯನ್ನು ಆಯ್ಕೆ ಮಾಡಲು 10 ಕಾರಣಗಳು

1.ಅಂತರರಾಷ್ಟ್ರೀಯ ಪದವಿ ಕಾರ್ಯಕ್ರಮಗಳು:

IIHMನಿಂದ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಉನ್ನತ ಕಲಿಕೆಯ ಅವಕಾಶಗಳನ್ನು ಹೊಂದಿರುತ್ತಾರೆ ಮತ್ತು ಅಂತರರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶಿಕ್ಷಣಕ್ಕಾಗಿ IIHMನ್ನು ವಿದ್ಯಾರ್ಥಿಗಳು ಆಯ್ಕೆ ಮಾಡುತ್ತಾರೆ. ವಿದ್ಯಾರ್ಥಿಗಳು ಯುಕೆ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲೆಂಡ್ ಮತ್ತು ಇತರ ಹಲವು ದೇಶಗಳಲ್ಲಿ ಅಧ್ಯಯನ ಮಾಡಬಹುದು ಮತ್ತು ಭಾರತದಲ್ಲೂ ಕೂಡ ಈ ಅವಕಾಶ ಇದೆ.

2. ಜಗತ್ತಿನ ಬೇರೆ ಬೇರೆ ಹೋಟೆಲ್ ಮ್ಯಾನೇಜ್ಮೆಂಟ್ ಸಂಸ್ಥೆಗಳ ಜತೆಗೆ ಸಂಪರ್ಕ:

IIHM ಪ್ರಪಂಚದ 55ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಇದು ಶೈಕ್ಷಣಿಕ ಮತ್ತು ಉದ್ಯಮ ವಿನಿಮಯ ಕಾರ್ಯಕ್ರಮಗಳಿಗಾಗಿ 55 ಜಾಗತಿಕ ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಇವುಗಳಿಂದ ಮಾಸ್ಟರ್‌ಕ್ಲಾಸ್‌ಗಳು, ವಿವಿಧ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಭೇಟಿ ನೀಡುವ ಅವಕಾಶಗಳು ಇದೆ.

3. ಜಾಗತಿಕ ವೇದಿಕೆಯಲ್ಲಿ YCO ಕಾರ್ಯಕ್ರಮ

ವಿಶ್ವದ ಅತಿದೊಡ್ಡ ಪಾಕಶಾಲೆಯ ಸಂಭ್ರಮವಾದ ಯಂಗ್ ಚೆಫ್ ಒಲಿಂಪಿಯಾಡ್ (YCO)ನ್ನು ಕೂಡ IIIHM ಆಯೋಜಿಸಿದೆ. ಯುವ ಪ್ರತಿಭೆಗಳಿಗಾಗಿ YCO ಅತ್ಯಂತ ಜನಪ್ರಿಯ ಪಾಕಶಾಲೆಯ ಸ್ಪರ್ಧೆಗಳಲ್ಲಿ ಒಂದಾಗಿದೆ, ಈ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. YCO ಮೂಲಕ, IIIHM ರಾಷ್ಟ್ರಗಳ ನಡುವೆ ಸ್ನೇಹ ಮತ್ತು ಸೌಹಾರ್ದತೆಯನ್ನು ಹೊಂದಿರುತ್ತದೆ. ಇನ್ನು ಈ YCO 17 ಯುಎನ್ ಸುಸ್ಥಿರ ಅಭಿವೃದ್ಧಿ ಗುರಿಗಳ (SDGs) ಮೂಲಕ ಒಂದು ಒಳ್ಳೆಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಯುವ ಪ್ರತಿಭೆಗಳ ಜೊತೆಗೆ, ಪ್ರೊಫೆಸರ್ ಡೇವಿಡ್ ಫಾಸ್ಕೆಟ್ ನೇತೃತ್ವದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. YCO ಪ್ರಧಾನ ತೀರ್ಪುಗಾರರು ಮತ್ತು ಮಾರ್ಗದರ್ಶಕರು ಪದ್ಮಶ್ರೀ ಬಾಣಸಿಗ ಸಂಜೀವ್ ಕಪೂರ್ ಮತ್ತು ಒಲಿಂಪಿಯಾಡ್ ಹಾಸ್ಪಿಟಾಲಿಟಿ ಶಿಕ್ಷಣತಜ್ಞ ಮತ್ತು ಲೇಖಕ ಪ್ರೊಫೆಸರ್ ಡೇವಿಡ್ ಫೋಸ್ಕೆಟ್ ಒಬಿಇ, ಸೆಲೆಬ್ರಿಟಿ ಚೆಫ್ ಬ್ರಿಯಾನ್ ಟರ್ನರ್ ಸಿಬಿಇ, ಮಿಚೆಲಿನ್ ಸ್ಟಾರ್ಡ್ ಚೆಫ್ ಕ್ರಿಸ್ ಗಾಲ್ವಿನ್, ರಾಷ್ಟ್ರೀಯ ಬಾಣಸಿಗ ಸೇರಿದಂತೆ ಸ್ಟಾರ್ ತೀರ್ಪುಗಾರರ ಈ ಕಾರ್ಯಕ್ರಮದಲ್ಲಿ ಇರುತ್ತಾರೆ. ಸ್ಕಾಟ್ಲೆಂಡ್, ಚೆಫ್ ಗ್ಯಾರಿ ಮ್ಯಾಕ್ಲೀನ್, ಚೆಫ್ ಜಾನ್ ವುಡ್, ಮ್ಯಾನೇಜಿಂಗ್ ಡೈರೆಕ್ಟರ್, ಕಿಚನ್‌ಕಟ್, ಮೈಕೆಲಿನ್ ಹಾಗೂ ಬಾಣಸಿಗ ಮಂಜುನಾಥ್ ಮ್ಯೂರಲ್, ಬಾಣಸಿಗರ ಕ್ರಾಫ್ಟ್ ಗಿಲ್ಡ್ನ ಉಪಾಧ್ಯಕ್ಷ ಚೆಫ್ ಸ್ಟೀವ್ ಮಂಕ್ಲಿ, ಡಾಟೊ ಚೆಫ್ ಅಬ್ದುಲ್ ವಹಾಬ್ ಝಮ್ಜಾನಿ, ಮಲೇಷಿಯಾದ ಪ್ರಸಿದ್ಧ ಬಾಣಸಿಗ, ಹೆಸರಾಂತ ಸಿಸಿಲಿಯನ್ ಬಾಣಸಿಗ, ಬಾಣಸಿಗ ಎಂಜೊ ಒಲಿವೇರಿ, ಬಾಣಸಿಗ ರಣವೀರ್ ಬ್ರಾರ್ ಮತ್ತು ಇನ್ನೂ ಅನೇಕರು ಈ ಕಾರ್ಯಕ್ರದಲ್ಲಿ ಭಾಗವಹಿಸುತ್ತಾರೆ.

4. IIIHM ಉದ್ಯಮದ ಐಕಾನ್‌ ಅಧ್ಯಾಪಕರಿಂದ ತರಬೇತಿ

IIIHM ಕೆಲವು ಅತ್ಯುತ್ತಮ ಅಧ್ಯಾಪಕರನ್ನು ಹೊಂದಿದ್ದು, ವಿದ್ಯಾರ್ಥಿಗಳಲ್ಲಿ ಮಾಸ್ಟರ್‌ಕ್ಲಾಸ್‌ಗಳನ್ನು ನಡೆಸಲು ಭಾರತದ IIIHM ಕ್ಯಾಂಪಸ್‌ಗಳಿಗೆ ಭೇಟಿ ನೀಡುತ್ತಾರೆ. ಪ್ರೊಫೆಸರ್ ಡೇವಿಡ್ ಫಾಸ್ಕೆಟ್ ನೇತೃತ್ವದಲ್ಲಿ, ಜಗತ್ತಿನ ಬೇರೆ ಬೇರೆ ದೇಶದಲ್ಲಿರುವ IIIHM ಸಂಸ್ಥೆಗಳಿಗೆ ಭೇಟಿ ನೀಡಿ ಅತಿಥಿ ಅಧ್ಯಾಪಕರಾಗಿ ತರಬೇತಿ ನೀಡುತ್ತಾರೆ. ಇಟಲಿಯ ಚೆಫ್ ಎಂಝೋ ಒಲಿವೆರಿ, ಯುಕೆಯ ಬಾಣಸಿಗ ಜಾನ್ ವುಡ್, ಯುಕೆಯ ಬಾಣಸಿಗ ಕ್ರಿಸ್ ಗಾಲ್ವಿನ್ ಮತ್ತು ಸ್ಕಾಟ್ಲೆಂಡ್‌ನ ಗ್ಯಾರಿ ಮ್ಯಾಕ್ಲೀನ್ ಮತ್ತು ಇನ್ನೂ ಅನೇಕ ತಜ್ಞರು IIIHM ಸಂಸ್ಥೆಗೆ ಭೇಟಿ ನೀಡುತ್ತಾರೆ. ಅವರು ಪಾಕಶಾಲೆಯ ಕಲೆಗಳು ಮತ್ತು ಆತಿಥ್ಯ ನಿರ್ವಹಣೆಯ ಕ್ಷೇತ್ರದಲ್ಲಿ ಹೆಚ್ಚು ಪ್ರಾಯೋಗಿಕ ಜ್ಞಾನವನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಾರೆ. ಪ್ರಸಿದ್ಧ ಬಾಣಸಿಗ ಮತ್ತು ಪಾಕಶಾಲೆಯ ಶಿಕ್ಷಣತಜ್ಞರಾದ ನೀಲ್ ರಿಪ್ಪಿಂಗ್ಟನ್ IIIHM ಸಂಸ್ಥೆಯ ಜತೆಗೆ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಇನ್ನು ಭಾರತದಿಂದ IIIHM ಅಧ್ಯಾಪಕರಾಗಿ ಮತ್ತು ಮಾರ್ಗದರ್ಶಕರ ಪದ್ಮಶ್ರೀ ಬಾಣಸಿಗ ಸಂಜೀವ್ ಕಪೂರ್ ಮತ್ತು ಬಾಣಸಿಗ ರಣವೀರ್ ಬ್ರಾರ್ ಅವರಂತಹ ತಜ್ಞರನ್ನು ಸಹ ಹೊಂದಿದೆ.

5. ವಿಶೇಷ ತರಗತಿಗಳನ್ನು ನಡೆಸುವ ವಿಶ್ವದ ಪಾಕಶಾಲೆಯ ಮಾಸ್ಟರ್ಸ್:

ಸಂಸ್ಥೆ ಪ್ರಪಂಚದ 55ಕ್ಕೂ ಹೆಚ್ಚು ದೇಶಗಳೊಂದಿಗೆ ಜಾಗತಿಕ ಸಂಪರ್ಕವನ್ನು ಹೊಂದಿದೆ. ಅಲ್ಲಿ ಪಾಕಶಾಲೆಯ ಮಾಸ್ಟರ್‌ಕ್ಲಾಸ್‌ಗಳು ಮತ್ತು ಇತರ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಟಲಿಯ ಚೆಫ್ ವಿನ್ಸೆಂಜೊ ಒಲಿವೆರಿ, ಫ್ರಾನ್ಸ್ನ ಮ್ಯಾಗ್ಡಾಲಾ ಕಾಸಿಮನ್, ಬಾಣಸಿಗ ಫಾರೂಕ್ ಬಿನ್ ಒತ್ಮನ್ ಅವರಂತಹ ಅಂತರರಾಷ್ಟ್ರೀಯ ಬಾಣಸಿಗರು ವಿದ್ಯಾರ್ಥಿಗಳಿಗೆ ಮಾಸ್ಟರ್‌ಕ್ಲಾಸ್ ನೀಡಲು ಸಂಸ್ಥೆಗೆ ಭೇಟಿ ನೀಡುತ್ತಾರೆ.

6. ಪ್ರಪಂಚದ ಆಹಾರ ಮತ್ತು ಪಾನೀಯ ಸಂಸ್ಕೃತಿಯನ್ನು ಅನ್ವೇಷಿಸಲು ಶೈಕ್ಷಣಿಕ ಪ್ರವಾಸ:

IIIHM ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸಗಳನ್ನು ನಡೆಸುತ್ತದೆ. ಟೀ ಟೂರ್, ವೈನ್ ಟೂರ್, ಸ್ಕಾಚ್ ಟೂರ್ ಮತ್ತು ಪಾಕಶಾಲೆಯ ಪ್ರವಾಸಗಳು IIIHM ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿರುವ ಅಪರೂಪದ ಅವಕಾಶಗಳಾಗಿವೆ. IIIHM ತನ್ನ ಕ್ಯಾಂಪಸ್‌ಗಳಿಂದ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ ವಿಶ್ವದ ಏಕೈಕ ಕಾಲೇಜು, ವೈನ್‌ಗಳ ತಯಾರಿಕೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಇಟಲಿ, ಸ್ಪೇನ್ ಮತ್ತು ಫ್ರಾನ್ಸ್ನ ದ್ರಾಕ್ಷಿತೋಟಗಳಿಗೆ ಹೋಗಲು ಉಚಿತ ಅವಕಾಶಗಳನ್ನು ಕಲ್ಪಿಸುತ್ತದೆ. ಫ್ರೆಂಚ್ ಪಾಕಶಾಲೆಯ ಪ್ರವಾಸವು ವಿದ್ಯಾರ್ಥಿಗಳಿಗೆ ಫ್ರಾನ್ಸ್ನ ಪಾಕಶಾಲೆಯ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಒಳ್ಳೆಯ ಅನುಭವವನ್ನು ನೀಡುತ್ತದೆ. ಇದರ ಜತೆಗೆ ಕುರ್ಸಿಯಾಂಗ್‌ಗೆ ಚಹಾ ಪ್ರವಾಸ ಕೂಡ ಕೈಗೊಳ್ಳಲು ಅವಕಾಶ ನೀಡುತ್ತದೆ, ಇದು ಚಹಾ ಸಂಸ್ಕೃತಿಯ ಕುರಿತು ಪ್ರಮುಖ ಒಳನೋಟಗಳನ್ನು ನೀಡುತ್ತದೆ.

7. ಅಂತರರಾಷ್ಟ್ರೀಯ ಹೋಟೆಲ್ ಬ್ರ‍್ಯಾಂಡ್‌ಗಳಲ್ಲಿ ಇಂಟರ್ನ್ಶಿಪ್

IIIHM ವಿದ್ಯಾರ್ಥಿಗಳು ತಮ್ಮ ಇಂಟರ್ನ್ಶಿಪ್‌ಗಳನ್ನು ಪ್ರಪಂಚದ ಕೆಲವು ಪ್ರತಿಷ್ಠಿತ ಹೋಟೆಲ್ ಬ್ರ‍್ಯಾಂಡ್‌ಗಳಲ್ಲಿ ಮಾಡಬಹುದಾಗಿದೆ. ಇಂಟರ್ನ್ಶಿಪ್ ಮೂಲಕ ಪ್ರಾಯೋಗಿಕ ತರಬೇತಿಯು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮತ್ತು ನೈಜ-ಸಮಯದ ಅನುಭವವನ್ನು ಪಡೆಯಲು ಸಹಾಯ ಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಅದೇ ಹೋಟೆಲ್‌ಗಳಿಂದ ವಿದ್ಯಾರ್ಥಿಗಳನ್ನು ಸಹ ನೇಮಿಸಿಕೊಳ್ಳಲಾಗುತ್ತದೆ. IIIHMನ ಜಾಗತಿಕ ಮನ್ನಣೆ ಮತ್ತು ನೆಟ್‌ವರ್ಕ್ ವಿದ್ಯಾರ್ಥಿಗಳಿಗೆ ಇಂತಹ ಪ್ರತಿಷ್ಠಿತ ಇಂಟರ್ನ್ಶಿಪ್ ಕಾರ್ಯಕ್ರಮಗಳಿಗೆ ಹೋಗಲು ಅವಕಾಶ ನೀಡುತ್ತದೆ.

8. ಯುರೋಪಿಯನ್ ಒಕ್ಕೂಟದ ಸಹಯೋಗದೊಂದಿಗೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು:

IIIHMಯು ಯುರೋಪಿಯನ್ ಯೂನಿಯನ್‌ನ ಎರಾಸ್ಮಸ್ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದೊಂದಿಗೆ ಸಹಯೋಗ ಹೊಂದಿದ್ದು, ಅಲ್ಲಿ IIIHM ವಿದ್ಯಾರ್ಥಿಗಳು ಆಹಾರ ಸಂರಕ್ಷಣೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಆತಿಥ್ಯ ಉದ್ಯಮದಲ್ಲಿ ಆಹಾರ ವ್ಯರ್ಥವನ್ನು ಕಡಿಮೆ ಮಾಡುವುದನ್ನು ಅರಿಯಲು ಸ್ವೀಡನ್, ಫ್ರಾನ್ಸ್ ಮತ್ತು ಟರ್ಕಿಯಂತಹ ದೇಶಗಳಿಗೆ ಭೇಟಿ ನೀಡುವ ಅವಕಾಶವನ್ನು ಹೊಂದಿದ್ದಾರೆ.

9. IIIHMಗೆ ಗೌರವ ತಂದ ಹಳೆಯ ವಿದ್ಯಾರ್ಥಿಗಳು:

ಭಾರತ, ಯುಕೆ, ಮಧ್ಯಪ್ರಾಚ್ಯ, ಸಿಂಗಾಪುರ, ಮಾಲ್ಡೀವ್ಸ್, ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಲ್ಲಿ ಪ್ರತಿಷ್ಠಿತ ಹೋಟೆಲ್ ಬ್ರಾಂಡ್‌ಗಳೊಂದಿಗೆ ಮ್ಯಾನೇಜರ್ ಹುದ್ದೆಗಳಲ್ಲಿ ಹಲವಾರು IIIHM ಹಳೆಯ ವಿದ್ಯಾರ್ಥಿಗಳು ಸಂಸ್ಥೆಯನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಗ್ಲೋಬಲ್ ಅಲುಮ್ನಿ ಕನೆಕ್ಟ್ ಪ್ರೋಗ್ರಾಂ ಯಶಸ್ವಿ ಆತಿಥ್ಯ ವೃತ್ತಿಪರರಾಗಲು ಬಯಸುವ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. ಅಂತರಾಷ್ಟ್ರೀಯ ಹಾಸ್ಪಿಟಾಲಿಟಿ ಬ್ರ‍್ಯಾಂಡ್‌ಗಳಲ್ಲಿ ಕೆಲಸ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳು ಭವಿಷ್ಯದ ಪೀಳಿಗೆಗೆ ಆಶಾದಾಯಕವಾಗಿದ್ದಾರೆ.

ಇದನ್ನೂಓದಿ: ಹೊಸ ಶಿಕ್ಷಣ ನೀತಿಯಡಿಯಲ್ಲಿ ವಿದ್ಯಾರ್ಥಿಗಳಿಗೆ ಡಿಜಿ ಲಾಕರ್ ವ್ಯವಸ್ಥೆ, ಇದು ವಿದ್ಯಾರ್ಥಿಗಳಿಗೆ ಹೇಗೆ ಪ್ರಯೋಜನಕಾರಿ?

10. ಉದ್ಯಮಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು:

IIIHMನ ವೃತ್ತಿ-ಸಿದ್ಧ ಪಠ್ಯಕ್ರಮವು ನಿರಂತರವಾಗಿ ಬದಲಾಗುತ್ತಿರುತ್ತದೆ. ಅದಕ್ಕಾಗಿ ಮ್ಯಾನೇಜ್‌ಮೆಂಟ್ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನಂತಹ ವಿಷಯಗಳು, ವಿದ್ಯಾರ್ಥಿಗಳು ವೃತ್ತಿಜೀವನದ ಜಗತ್ತಿನಲ್ಲಿ ಕಾಲಿಟ್ಟಾಗ ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ಜ್ಞಾನ ಮತ್ತು ತಿಳುವಳಿಕೆಯೊಂದಿಗೆ ಸಜ್ಜುಗೊಳಿಸುತ್ತವೆ. ಅತಿಥ್ಯ ಕ್ಷೇತ್ರವು ಗ್ರಾಹಕರು ಅಥವಾ ಅತಿಥಿಗಳ ಸಂತೃಪ್ತಿಗಾಗಿ ಮೀಸಲಾಗಿದೆ ಮತ್ತು IIIHMನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಆಹ್ಲಾದಕರ ಸ್ವಭಾವ ಮತ್ತು ನಡವಳಿಕೆಯಿಂದ ಗ್ರಾಹಕರ ಹೃದಯಗಳನ್ನು ಗೆಲ್ಲುವುದು ಹೇಗೆಂದು ಕಲಿಸಲಾಗುತ್ತದೆ, ಜತೆಗೆ ಯಾವುದೇ ಪರಿಸ್ಥಿತಿಯನ್ನು ಶ್ರದ್ಧೆಯಿಂದ ನಿಭಾಯಿಸಲು ಕಲಿಸುತ್ತದೆ. ಈ ಉದ್ಯಮವನ್ನು ಕ್ರಮೇಣವಾಗಿ ಆವರಿಸಿಕೊಳ್ಳುತ್ತರುವ ಡಿಜಿಟಲ್ ಕ್ರಾಂತಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಸಲುವಾಗಿ, IIIHM ತನ್ನ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆಯನ್ನು (AI) ಪರಿಚಯಿಸಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ