Mansukh Mandaviya
Union Health Minister
ಮನ್ಸುಖ್ ಮಾಂಡವಿಯಾ ಪ್ರಸ್ತುತ ಕೇಂದ್ರ ಆರೋಗ್ಯ ಸಚಿವರಾಗಿದ್ದಾರೆ. ಅವರು ಗುಜರಾತ್‌ನ ಹಿರಿಯ ನಾಯಕರು ಹಾಗೂ ಇಲ್ಲಿನ ರಾಜಕೀಯದಲ್ಲಿ ವಿಶೇಷ ಸ್ಥಾನ ಹೊಂದಿದ್ದಾರೆ. ಅವರು ಗುಜರಾತ್ ಭಾವನಗರ ಜಿಲ್ಲೆಯ ಪಲೀತಾನಾ ತಾಲೂಕಿನ ಹನೋಲ್ ಎಂಬ ಗ್ರಾಮದಲ್ಲಿ ಜುಲೈ 01, 1972 ರಂದು ಜನಿಸಿದರು. ತಂದೆ ಲಕ್ಷ್ಮಣಭಾಯಿ ಮಾಂಡವಿಯಾ, ಒಬ್ಬ ರೈತರು. ಮಾಂಡವಿಯಾ, ಪಾಟಿದಾರ್ ಸಮುದಾಯದ ಲೆಉವಾ ಪಟೇಲ್ ಸಮುದಾಯದಿಂದ ಬಂದವರು. ಮೊದಲ ಬಾರಿ 2012 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು, ನಂತರ 2018 ರಲ್ಲಿ ರಾಜ್ಯಸಭೆಗೆ ಮರು ಆಯ್ಕೆಯಾದರು. ಗುಜರಾತ್ ಸೌರಾಷ್ಟ್ರ ಪ್ರದೇಶದಿಂದ ಬಂದಿರುವ ಅವರು ನರೇಂದ್ರ ಮೋದಿ ಸರ್ಕಾರದ ಪ್ರಮುಖ ಭಾಗವಾಗಿದ್ದಾರೆ. ಜುಲೈ 5, 2016 ರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಶಿಪ್ಪಿಂಗ್ ಮತ್ತು ರಾಸಾಯನಿಕ ಗೊಬ್ಬರಗಳ ರಾಜ್ಯ ಮಂತ್ರಿಯನ್ನಾಗಿ ನೇಮಿಸಲಾಯಿತು. ರಾಜ್ಯಶಾಸ್ತ್ರದಲ್ಲಿ ಎಂಎ ಪದವಿಯನ್ನು ಪಡೆದಿದ್ದಾರೆ. ಆರ್‌ಎಸ್‌ಎಸ್ ವಿದ್ಯಾರ್ಥಿ ಘಟಕ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರೂ ಆಗಿದ್ದರು. ಆ ನಂತರ ಅವರು ಬಿಜೆಪಿ ಸೇರಿದರು. ವಿಶೇಷವೆಂದರೆ 2002ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ಶಾಸಕರಾಗಿದ್ದು ದಾಖಲೆಯಾಗಿದೆ.