Assembly Election Results 2022 : ಗುಜರಾತ್​ನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು; ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಜಯಭೇರಿ

| Updated By: ಗಂಗಾಧರ​ ಬ. ಸಾಬೋಜಿ

Updated on:Dec 08, 2022 | 8:08 PM

Gujarat Himachal Pradesh Assembly Election Results 2022: ದೇಶದ ಗಮನ ಸೆಳೆದಿರುವ ಗುಜರಾತ್​ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣಾ ಫಲಿತಾಂಶಕ್ಕೆ ಹೊರಬಿದ್ದಿದ್ದು, ಹಿಮಾಚಲದಲ್ಲಿ ಕಾಂಗ್ರೆಸ್ ಮತ್ತು ಗುಜರಾತ್​ನಲ್ಲಿ ಬಿಜೆಪಿ ಬಹುಮತ ಸಾಧಿಸಿದೆ.

Assembly Election Results 2022 : ಗುಜರಾತ್​ನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು; ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಜಯಭೇರಿ
Assembly Election Results 2022

ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳಿಗೆ ಇತ್ತೀಚೆಗಷ್ಟೇ ಮತದಾನ ನಡೆದಿತ್ತು. ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಮುನ್ನಡೆ ಸಾಧಿಸಬಹುದು ಎಂದು ಮತಗಟ್ಟೆ ಸಮೀಕ್ಷೆಗಳು (Exit Polls) ಮುನ್ಸೂಚನೆ ನೀಡಿವೆ. ಆದರೆ ಗುಜರಾತ್​ನಲ್ಲಿ (Gujarat) ಆಮ್ ಆದ್ಮಿ ಪಾರ್ಟಿ ಮತ್ತು ಹಿಮಾಚಲ ಪ್ರದೇಶದಲ್ಲಿ (Himachal Pradesh) ಕಾಂಗ್ರೆಸ್​ ಪಕ್ಷಗಳು ಬಿಜೆಪಿಗೆ ಪೈಪೋಟಿ ನೀಡಿವೆ. ಗುಜರಾತ್​ನಲ್ಲಿ ಒಟ್ಟು 182 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಧಿಕಾರಕ್ಕೆ ಬರಲು ಯಾವುದೇ ಪಕ್ಷಕ್ಕೆ 92 ಸದಸ್ಯ ಬಲ ಅಗತ್ಯವಿದೆ. ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಧಿಕಾರಕ್ಕೆ ಬರಲು ಯಾವುದೇ ಪಕ್ಷಕ್ಕೆ 35 ಸದಸ್ಯ ಬಲದ ಅಗತ್ಯವಿದೆ. ಈಗಾಗಲೇ ಗುಜರಾತ್​​ನಲ್ಲಿ ಬಿಜೆಪಿ ದಾಖಲೆಯ ಗೆಲುವಿನ ಓಟ ನಡೆಸಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಭಾರೀ ಮುನ್ನಡೆ ಸಾಧಿಸಿದೆ. ಇಡೀ ದೇಶ ಕಾತರದಿಂದ ಕಾಯುತ್ತಿರುವ 2 ರಾಜ್ಯಗಳ ಚುನಾವಣೆ ಫಲಿತಾಂಶದ ತಾಜಾ ಮಾಹಿತಿ ಇಲ್ಲಿದೆ.

LIVE NEWS & UPDATES

The liveblog has ended.
  • 08 Dec 2022 02:56 PM (IST)

    Gujarat Election Result 2022 LIVE: ಗುಜರಾತ್​ನ ಬುಡಕಟ್ಟು ಪ್ರದೇಶದಲ್ಲಿ ಬಿಜೆಪಿ ಮುನ್ನಡೆ

    ಗುಜರಾತ್​ನಲ್ಲಿ ಗುಡ್ಡಗಾಡುಗಳಲ್ಲಿ ವಾಸವಿರುವ ಪರಿಶಿಷ್ಟ ಪಂಗಡಕ್ಕೆ ಸೇರುವ ಬುಡಕಟ್ಟು ಜನಾಂಗಗಳಿಗೆ ಸೇರಿದ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಇಂಥ 27 ವಿಧಾನಸಭಾ ಕ್ಷೇತ್ರಗಳ ಪೈಕಿ 24ರಲ್ಲಿ ಬಿಜೆಪಿ ಗೆಲುವಿನ ಸನಿಹಕ್ಕೆ ಬಂದಿದೆ. ಸೂರತ್, ತಾಪಿ ಮತ್ತು ಭರೂಚ್ ಜಿಲ್ಲೆಗಳಲ್ಲಿ ಬಿಜೆಪಿಯನ್ನು ಮತದಾರರು ಒಪ್ಪಿಕೊಂಡಿದ್ದಾರೆ. ಈ ಜಿಲ್ಲೆಗಳಲ್ಲಿ ಈ ಮೊದಲು ಕಾಂಗ್ರೆಸ್ ಮೇಲುಗೈ ಸಾಧಿಸುತ್ತಿತ್ತು.

  • 08 Dec 2022 02:51 PM (IST)

    Gujarat Election Result 2022 LIVE: ಬಿಟ್ಟಿ ಕೊಡ್ತೀವಿ ಎನ್ನುವವರನ್ನು ನಂಬಲಿಲ್ಲ ಜನ: ಆಪ್​ ಸೋಲನ್ನು ಲೇವಡಿ ಮಾಡಿದ ಅಮಿತ್ ಶಾ

    ದೆಹಲಿ: ಗುಜರಾತ್​ನಲ್ಲಿ ಬಿಜೆಪಿ ನಿಚ್ಚಳ ಗೆಲುವಿನತ್ತ ದಾಪುಗಾಲು ಹಾಕಿದೆ. ಬಿಜೆಪಿಗೆ ಗುಜರಾತ್​ನಲ್ಲಿ ಪ್ರಬಲ ಪ್ರತಿರೋಧ ಒಡ್ಡಬಹುದು ಎಂದು ನಿರೀಕ್ಷಿಸಿದ್ದ ಆಮ್ ಆದ್ಮಿ ಪಕ್ಷವು ಮಧ್ಯಾಹ್ನ 2:50ರ ಸಮಯದಲ್ಲಿ ಕೇವಲ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಆಪ್ ಸೋಲಿನ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಬಿಟ್ಟಿ ಕೊಡುಗೆಗಳ ಆಮಿಷ ಒಡ್ಡಿದವರನ್ನು ಗುಜರಾತ್​ನ ಮತದಾರರು ತಿರಸ್ಕರಿಸಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಮೋದಿ ಅವರ ನಾಯಕತ್ವದಲ್ಲಿ ಗುಜರಾತ್ ಅದ್ಭುತ ಪ್ರಗತಿ ಸಾಧಿಸಿದೆ. ಹೀಗಾಗಿಯೇ ಮಹಿಳೆಯರೂ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರು ಬಿಜೆಪಿಯನ್ನು ಅಶೀರ್ವದಿಸಿದ್ದಾರೆ ಎಂದು ಹೇಳಿದ್ದಾರೆ.

  • 08 Dec 2022 02:40 PM (IST)

    Himachal Pradesh Election Result 2022 LIVE: ಚಂಡೀಗಢಕ್ಕೆ ತೆರಳಲು ಕಾಂಗ್ರೆಸ್ ಶಾಸಕರಿಗೆ ಸೂಚನೆ

    ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಬಹುಮತ ಪಡೆದಿದ್ದು, ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ತನ್ನ ಶಾಸಕರಿಗೆ ಆಪರೇಷನ್ ಕಮಲದ ಗಾಳ ಹಾಕಬಹುದು ಎಂಬ ಕಾರಣಕ್ಕೆ ಎಲ್ಲ ಶಾಸಕರಿಗೂ ಚಂಡೀಗಢಕ್ಕೆ ತೆರಳುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಧಿಕಾರಕ್ಕೆ ಬರಲು ಯಾವುದೇ ಪಕ್ಷಕ್ಕೆ 35 ಸದಸ್ಯ ಬಲದ ಅಗತ್ಯವಿದೆ. ಕಾಂಗ್ರೆಸ್ 39, ಬಿಜೆಪಿ 26 ಜೊತೆಗೆ ಮೂವರು ಪಕ್ಷೇತರರು ಮುನ್ನಡೆ ಸಾಧಿಸಿದ್ದಾರೆ.

  • 08 Dec 2022 02:35 PM (IST)

    Gujarat Election Result 2022 LIVE: ಹಾವೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

    ಹಾವೇರಿ: ಬಿಜೆಪಿಯು ಗುಜರಾತ್​ನಲ್ಲಿ ಗೆಲುವು ಸಾಧಿಸಿದ್ದನ್ನು ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿದರು. ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾವೇರಿಯಲ್ಲಿ ನರೇಂದ್ರ ಮೋದಿ ಪರ ಘೋಷಣೆ ಕೂಗಿ ಸಂಭ್ರಮಿಸಲಾಯಿತು. ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಉಪಸ್ಥಿತರಿದ್ದರು.

  • 08 Dec 2022 02:31 PM (IST)

    Gujarat Election Result 2022 LIVE: ಕರ್ನಾಟಕದ ಮೇಲೆ ಗುಜರಾತ್​ ಫಲಿತಾಂಶದ ಪರಿಣಾಮ ಇಲ್ಲ; ಕಾಂಗ್ರೆಸ್ ನಾಯಕರ ವಿಶ್ವಾಸ

    ಬೆಂಗಳೂರು: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ನಿಚ್ಚಳ ಬಹುಮತ ಸಾಧಿಸಿರುವುದು ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಪೂರಕವಾದ ಫಲಿತಾಂಶ ಬಂದಿದೆ. ಹಿಮಾಚಲ ಪ್ರದೇಶದ ಫಲಿತಾಂಶ ಮುಂದಿಟ್ಟು ಕಾರ್ಯಕರ್ತರಲ್ಲಿ ಬಲ ತುಂಬಲು ಕಾಂಗ್ರೆಸ್ ಪಕ್ಷವು ಚಿಂತನೆ ನಡೆಸಿದೆ. ಹಿಮಾಚಲದಲ್ಲಿ ಮೋದಿ ಮ್ಯಾಜಿಕ್ ಏಕೆ ನಡೆಯಲಿಲ್ಲ ಎಂಬುದನ್ನೇ ಮುಖ್ಯವಾಗಿ ಪ್ರಸ್ತಾಪಿಸಿ ಕರ್ನಾಟಕದಲ್ಲಿಯೂ ಅದೇ ರೀತಿ ಆಡಳಿತ ವಿರೋಧಿ ಅಲೆ ಇರುವುದು ಕಾಂಗ್ರೆಸ್​ಗೆ ಸಹಾಯವಾಗಲಿದೆ ಎಂದು ಬಿಂಬಿಸಲು ಕಾಂಗ್ರೆಸ್ ನಾಯಕರು ತಂತ್ರ ಹೆಣೆಯುತ್ತಿದ್ದಾರೆ.

  • 08 Dec 2022 02:16 PM (IST)

    Gujarat Election Result 2022 LIVE: ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ; 157 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

    ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ

    ಬಿಜೆಪಿ- 157

    ಕಾಂಗ್ರೆಸ್-16

    ಆಮ್ ಆದ್ಮಿ ಪಕ್ಷ- 5

    ಇತರೆ- 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

  • 08 Dec 2022 01:16 PM (IST)

    Gujarat Election Result 2022 LIVE: ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಡಿ. 12ರಂದು ಪ್ರಮಾಣವಚನ ಸ್ವೀಕಾರ

    ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಭೂಪೇಂದ್ರ ಪಟೇಲ್​ಗೆ ಭರ್ಜರಿ ಗೆಲುವು

    ಡಿ. 12ರಂದು ಪ್ರಮಾಣವಚನ ಸ್ವೀಕಾರ

    ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಭಾಗಿ

  • 08 Dec 2022 01:12 PM (IST)

    Himachal Pradesh Result 2022 LIVE: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಕಾರ್ತಕರ್ತರ ಸಂಭ್ರಮಾಚರಣೆ

  • 08 Dec 2022 12:23 PM (IST)

    Gujarat Election Result 2022 LIVE: ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್, ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್​ಗೆ ಭರ್ಜರಿ ಗೆಲುವು

    ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್ 50,000ಕ್ಕೂ ಹೆಚ್ಚು ಅಂತರದ ಗೆಲುವು ಸಾಧಿಸಿದ್ದಾರೆ.

    ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್​ಗೆ 20,245 ಮತಗಳ ಅಂತರದ ಭರ್ಜರಿ ಗೆಲುವು ಕಂಡಿದ್ದಾರೆ.

  • 08 Dec 2022 12:13 PM (IST)

    Gujarat Election Result 2022 LIVE: ಗುಜರಾತ್​ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ; ಕಾಂಗ್ರೆಸ್​ಗೆ ಮುಖಭಂಗ

    ಗುಜರಾತ್​ನಲ್ಲಿ ಬಿಜೆಪಿ ಈ ಬಾರಿ ದಿಗ್ವಿಜಯ ಸಾಧಿಸುವುದು ಬಹುತೇಕ ನಿಶ್ಚಿತವಾಗಿದೆ. ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿ ಬಿಜೆಪಿ ಗುಜರಾತ್​ನಲ್ಲಿ ಜಯಭೇರಿ ಬಾರಿಸಲಿದೆ. 182 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತ್​ನಲ್ಲಿ ಬಿಜೆಪಿ ಈಗಾಗಲೇ 154 ಕ್ಷೇತ್ರಗಳಲ್ಲಿ ಭಾರೀ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಬಿಜೆಪಿಯ ಎದುರು ಕಾಂಗ್ರೆಸ್​ಗೆ ಮತ್ತೊಮ್ಮೆ ಮುಖಭಂಗವಾಗುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಗುಜರಾತ್​ನಲ್ಲಿ ಬಿಜೆಪಿ ಕಾರ್ಯಕರ್ತರು ಗರ್ಭಾ ನೃತ್ಯ ಮಾಡಿ, ಡೋಲು ಬಾರಿಸಿ ರಸ್ತೆಗಳಲ್ಲಿ, ಮೈದಾನಗಳಲ್ಲಿ, ಬಿಜೆಪಿ ಕಚೇರಿಗಳ ಬಳಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

    Gujarat Election Results: ಗುಜರಾತ್​​ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಲು ಬಿಜೆಪಿ ಸಜ್ಜು; ಡೋಲು ಬಾರಿಸಿ, ನೃತ್ಯ ಮಾಡಿ ಕಾರ್ಯಕರ್ತರ ಸಂಭ್ರಮಾಚರಣೆ

  • 08 Dec 2022 11:42 AM (IST)

    Gujarat Election Result 2022 LIVE: ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ; 155 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

    ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ

    ಬಿಜೆಪಿ- 155

    ಕಾಂಗ್ರೆಸ್-18

    ಆಮ್ ಆದ್ಮಿ ಪಕ್ಷ- 6

    ಇತರೆ- 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

    ಈ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ

  • 08 Dec 2022 11:40 AM (IST)

    Himachal Pradesh Result 2022 LIVE: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ; 39 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ

    ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ

    ಬಿಜೆಪಿ- 26 ಕಾಂಗ್ರೆಸ್-39 ಇತರೆ- 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

  • 08 Dec 2022 10:36 AM (IST)

    Gujarat Election Result 2022 LIVE: ಗುಜರಾತ್​​ನಲ್ಲಿ ಬಿಜೆಪಿ ದಿಗ್ವಿಜಯ ಬಹುತೇಕ ಖಚಿತ; ಕಾರ್ಯಕರ್ತರ ಸಂಭ್ರಮ

    ಭಾರತೀಯ ಜನತಾ ಪಕ್ಷ (ಬಿಜೆಪಿ) ಗುಜರಾತ್‌ನಲ್ಲಿ ತನ್ನ ಅತ್ಯುತ್ತಮ ಪ್ರದರ್ಶನದ ಹಾದಿಯಲ್ಲಿದೆ. ಗುಜರಾತ್​​ನಲ್ಲಿ ಬಿಜೆಪಿ 155 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್​ಗೆ ಮತ್ತೊಮ್ಮೆ ಭಾರೀ ಮುಖಭಂಗವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

  • 08 Dec 2022 10:35 AM (IST)

    Gujarat Election Result 2022 LIVE: ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ; 157 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

    ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ

    ಬಿಜೆಪಿ- 157

    ಕಾಂಗ್ರೆಸ್-16

    ಆಮ್ ಆದ್ಮಿ ಪಕ್ಷ- 7

    ಇತರೆ- 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

  • 08 Dec 2022 10:23 AM (IST)

    Gujarat Election Result 2022 LIVE: ಗುಜರಾತ್​ನಲ್ಲಿ ಭರ್ಜರಿ ಗೆಲುವಿನತ್ತ ಬಿಜೆಪಿ

  • 08 Dec 2022 10:14 AM (IST)

    Gujarat Election Result Live: ಗುಜರಾತ್​ನಲ್ಲಿ ಕಾಂಗ್ರೆಸ್ ಹಿನ್ನಡೆಗೆ ಆಪ್ ಕೂಡ ಕಾರಣ

    ಗುಜರಾತ್​ನಲ್ಲಿ ಕಾಂಗ್ರೆಸ್ ಪಕ್ಷವು ಈ ಬಾರಿ ಅಧಿಕಾರದ ಸನಿಹಕ್ಕೆ ಸುಳಿಯುವುದಿಲ್ಲ ಎನ್ನುವುದು ಸೂರ್ಯ ನೆತ್ತಿಗೇರಿದಂತೆ ಸ್ಪಷ್ಟವಾಗುತ್ತಿದೆ. ಇದಕ್ಕೆ ಕಾರಣಗಳೇನಿರಬಹುದು ಎಂಬ ವಿಶ್ಲೇಷಣೆಗಳೂ ಈಗಾಗಲೇ ಆರಂಭವಾಗಿದೆ. ಗುಜರಾತ್​ನಲ್ಲಿ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್​ಗೆ ಮಾರಕ ಹೊಡೆತ ನೀಡಿದೆ. ಪಾಟಿದಾರ್ ಸಮುದಾಯವು ನಿರ್ಣಾಯಕ ಸಂಖ್ಯೆಯಲ್ಲಿರುವ ಜೆಟ್​ಪುರ್, ಧೊರಜಿ, ಕಮ್​ರೇಜ್, ಕರ್ಣ್​ರಾಜ್ ಮತ್ತು ನಿಕೋಲ್ ಕ್ಷೇತ್ರಗಳಲ್ಲಿ ಆಪ್ ಮುನ್ನಡೆ ಸಾಧಿಸಿದೆ. ವೀರಗ್ರಾಮ್ ಕ್ಷೇತ್ರದಲ್ಲಿ ಆಪ್​ನ ಅಮರ್​ಸಿನ್ಹಾ ಠಾಕೂರ್ ಎದುರು ಬಿಜೆಪಿಯ ಹಾರ್ದಿಕ್ ಪಟೇಲ್ ಅಲ್ಪ ಮತಗಳ ಮುನ್ನಡೆ ಸಾಧಿಸಿದ್ದಾರೆ.

  • 08 Dec 2022 10:10 AM (IST)

    Election Result 2022 LIVE: ಗುಜರಾತ್​ನಲ್ಲಿ ಬಿಜೆಪಿ, ಹಿಮಾಚಲದಲ್ಲಿ ಕಾಂಗ್ರೆಸ್ ಮುನ್ನಡೆ

    ಗುಜರಾತ್​ನಲ್ಲಿ ಪಕ್ಷಗಳ ಬಲಾಬಲ ಹೀಗಿದೆ. ಬಿಜೆಪಿ 144, ಕಾಂಗ್ರೆಸ್ 24, ಆಪ್ 10, ಇತರರು 4.

    ಹಿಮಾಚಲ ಪ್ರದೇಶದಲ್ಲಿ ಪಕ್ಷಗಳ ಬಲಾಬಲ ಹೀಗಿದೆ. ಬಿಜೆಪಿ 31, ಕಾಂಗ್ರೆಸ್ 34, ಇತರರು 3.

    ಗುಜರಾತ್​ನಲ್ಲಿ ಆಮ್ ಆದ್ಮಿ ಪಕ್ಷವು ಖಾತೆ ತೆರೆಯುವಲ್ಲಿ ಯಶಸ್ವಿಯಾಗಬಹುದು ಎಂಬ ನಿರೀಕ್ಷೆ ನಿಜವಾಗಿದೆ. ಆದರೆ ದೆಹಲಿಗೆ ಸಮೀಪವೇ ಇರುವ ಹಿಮಾಚಲ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಜನರ ಬೆಂಬಲ ಸಿಕ್ಕಿಲ್ಲ.

  • 08 Dec 2022 10:03 AM (IST)

    Gujarat Election Result 2022 LIVE: ಗುಜರಾತ್: ಬಿಜೆಪಿ ಕಾರ್ಯಕರ್ತರಲ್ಲಿ ಮನೆ ಮಾಡಿದ ಸಂಭ್ರಮ

    ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮುನ್ನಡೆ ದಾಖಲಿಸಿದೆ. ಗುಜರಾತ್​ನಲ್ಲಿ ಬಿಜೆಪಿಯು ದಾಖಲೆಯ 150 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರು ಮಲ್ಲೇಶ್ವರದಲ್ಲಿರುವ ಬಿಜೆಪಿ ಕರ್ನಾಟಕ ರಾಜ್ಯ ಕಚೇರಿ ಎದುರು ಬೃಹತ್ ಎಲ್​ಇಡಿ ವಾಹನದಲ್ಲಿ ‘ಟಿವಿ9’ ಸುದ್ದಿಯನ್ನು ಪ್ರಸಾರ ಮಾಡಲಾಗುತ್ತಿದೆ. ಗುಜರಾತ್​ನ ರಾಜಧಾನಿ ಗಾಂಧಿನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.

  • 08 Dec 2022 09:48 AM (IST)

    Gujarat Election Result 2022 LIVE: ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ; 149 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

    ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ; 149 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

    ಬಿಜೆಪಿ- 149

    ಕಾಂಗ್ರೆಸ್-23

    ಆಮ್ ಆದ್ಮಿ ಪಕ್ಷ- 9

    ಇತರೆ- 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

  • 08 Dec 2022 09:46 AM (IST)

    Himachal Pradesh Result 2022 LIVE: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ; ಬಿಜೆಪಿ- ಕಾಂಗ್ರೆಸ್​ ನಡುವೆ ತೀವ್ರ ಹಗ್ಗಜಗ್ಗಾಟ

    ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ ಬಿಜೆಪಿ- 33 ಕಾಂಗ್ರೆಸ್-32 ಇತರೆ- 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

  • 08 Dec 2022 09:18 AM (IST)

    ಬಿಜೆಪಿ ಗೆದ್ದರೆ ಭಾರತದ ರಾಜಕಾರಣದಲ್ಲಿ ಹೊಸ ದಾಖಲೆ

    ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭೆಗಳಲ್ಲಿ ಬಿಜೆಪಿಯು ಬಹುಮತ ಗಳಿಸಿ ಅಧಿಕಾರಕ್ಕೆ ಬಂದರೆ ಹಲವು ಹೊಸ ದಾಖಲೆಗಳು ನಿರ್ಮಾಣವಾಗುತ್ತವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

  • 08 Dec 2022 09:10 AM (IST)

    Gujarat Election Result 2022 LIVE: ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ; 151 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

    ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ; 140 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

    ಬಿಜೆಪಿ- 151

    ಕಾಂಗ್ರೆಸ್-21

    ಆಮ್ ಆದ್ಮಿ ಪಕ್ಷ- 8

    ಇತರೆ- 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

  • 08 Dec 2022 09:10 AM (IST)

    Himachal Pradesh Result 2022: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ; 30 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ

    Himachal Pradesh Result 2022: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ ಬಿಜೆಪಿ- 28 ಕಾಂಗ್ರೆಸ್-30 ಇತರೆ- 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

  • 08 Dec 2022 09:07 AM (IST)

    Gujarat Election Result 2022: ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ; ಬಿಜೆಪಿ 133 ಸ್ಥಾನಗಳಲ್ಲಿ ಮುನ್ನಡೆ

    ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ; ಬಿಜೆಪಿ 133 ಸ್ಥಾನಗಳಲ್ಲಿ ಮುನ್ನಡೆ

    ಬಿಜೆಪಿ- 133

    ಕಾಂಗ್ರೆಸ್-37

    ಆಮ್ ಆದ್ಮಿ ಪಕ್ಷ- 4

    ಇತರೆ- 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

  • 08 Dec 2022 09:03 AM (IST)

    Gujarat Election Result 2022: ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ; 126 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

    ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ

    ಬಿಜೆಪಿ- 126

    ಕಾಂಗ್ರೆಸ್-43

    ಆಮ್ ಆದ್ಮಿ ಪಕ್ಷ- 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

  • 08 Dec 2022 08:43 AM (IST)

    Gujarat Election Result 2022: ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ; 111 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

    ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ

    ಬಿಜೆಪಿ- 111

    ಕಾಂಗ್ರೆಸ್- 51

    ಆಮ್ ಆದ್ಮಿ ಪಕ್ಷ- 5 ಸ್ಥಾನಗಳಲ್ಲಿ ಮುನ್ನಡೆ

  • 08 Dec 2022 08:37 AM (IST)

    Gujarat Election Result 2022: ಗುಜರಾತ್ ಚುನಾವಣೆಯಲ್ಲಿ ಬಿಜೆಪಿ 106 ಸ್ಥಾನಗಳಲ್ಲಿ ಮುನ್ನಡೆ

    ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ

    ಬಿಜೆಪಿ- 106

    ಕಾಂಗ್ರೆಸ್-43

    ಆಮ್ ಆದ್ಮಿ ಪಕ್ಷ- 6 ಸ್ಥಾನಗಳಲ್ಲಿ ಮುನ್ನಡೆ

  • 08 Dec 2022 08:34 AM (IST)

    ಹಿಮಾಚಲದಲ್ಲಿ ಜಿದ್ದಾಜಿದ್ದಿ ಪೈಪೋಟಿ: ಕಾಂಗ್ರೆಸ್ 22, ಬಿಜೆಪಿ 20 ಸ್ಥಾನಗಳಲ್ಲಿ ಮುನ್ನಡೆ

    ಹಿಮಾಚಲ ಪ್ರದೇಶದಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಹುಮತದ ತೂಗುಯ್ಯಾಲೆ ಆರಂಭವಾಗಿದೆ. ಮುಂಜಾನೆ 8:30ರ ಹೊತ್ತಿಗೆ ಕಾಂಗ್ರೆಸ್​ 22 ಮತ್ತು ಬಿಜೆಪಿ 20 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿತ್ತು.

  • 08 Dec 2022 08:30 AM (IST)

    ಗುಜರಾತ್ ಚುನಾವಣೆ ಫಲಿತಾಂಶ; ಬಿಜೆಪಿ 120 ಸ್ಥಾನಗಳಲ್ಲಿ ಮುನ್ನಡೆ

    ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ 2022

    ಆರಂಭಿಕ ಟ್ರೆಂಡ್‌ಗಳಲ್ಲಿ ಬಿಜೆಪಿ 120 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

  • 08 Dec 2022 08:27 AM (IST)

    ಗುಜರಾತ್​ನಲ್ಲಿ ಬಿಜೆಪಿಗೆ 135-145 ಸ್ಥಾನ ಖಚಿತ; ಹಾರ್ದಿಕ್ ಪಟೇಲ್ ವಿಶ್ವಾಸ

    ಗುಜರಾತ್​ನ ವಿರಂಗಾಮ್‌ನಿಂದ ಸ್ಪರ್ಧಿಸುತ್ತಿರುವ ಬಿಜೆಪಿಯ ಸ್ಟಾರ್ ಅಭ್ಯರ್ಥಿಗಳಲ್ಲಿ ಒಬ್ಬರಾದ ಹಾರ್ದಿಕ್ ಪಟೇಲ್ ಅವರು ಪ್ರಸ್ತುತ ಬಿಜೆಪಿ 135-145 ಸ್ಥಾನಗಳಲ್ಲಿ ಬಹುಮತವನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಬಹುಮತವನ್ನು ರಚಿಸಲು ಒಂದು ಪಕ್ಷಕ್ಕೆ ಕೇವಲ 92 ಸ್ಥಾನಗಳ ಅಗತ್ಯವಿದ್ದರೂ, ಚುನಾವಣಾ ಆಯೋಗದ ಫಲಿತಾಂಶಗಳ ಪ್ರಕಟಣೆಗಾಗಿ ಕಾಯುತ್ತಿರುವ ಬಿಜೆಪಿ ನಾಯಕರು ಈಗಾಗಲೇ ವಿಜಯದ ಮೂಡ್‌ನಲ್ಲಿದ್ದಾರೆ.

  • 08 Dec 2022 08:25 AM (IST)

    ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ; 3 ನಿರ್ಣಾಯಕ ಸ್ಥಾನಗಳಿವು

    ಡಾಲ್ಹೌಸಿ: ಹಿಮಾಚಲ ಪ್ರದೇಶದ ಮಾಜಿ ಸಚಿವೆ ಮತ್ತು ಕಾಂಗ್ರೆಸ್ ನಾಯಕಿ ಆಶಾ ಕುಮಾರಿ ಅವರು ಬಿಜೆಪಿಯ ಡಿಎಸ್ ಠಾಕೂರ್ ಮತ್ತು ಎಎಪಿಯ ಮನೀಶ್ ಸರೀನ್ ವಿರುದ್ಧ ಸ್ಪರ್ಧಿಸಿದ್ದಾರೆ.

    ಶಿಮ್ಲಾ ಗ್ರಾಮಾಂತರ: ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಶಿಮ್ಲಾ ಗ್ರಾಮಾಂತರದಿಂದ ಮರು ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ರವಿ ಮೆಹ್ತಾ ಅವರನ್ನು ಕಣಕ್ಕಿಳಿಸಿದೆ.

    ಶಿಮ್ಲಾ ಅರ್ಬನ್: ಬಿಜೆಪಿಯ ‘ಚಾಯ್‌ವಾಲಾ’ ಅಭ್ಯರ್ಥಿ ಸಂಜಯ್ ಸೂದ್ ವಿರುದ್ಧ ಕಾಂಗ್ರೆಸ್‌ನ ಹರೀಶ್ ಜನಾರ್ಥ ಸೆಣಸಿದ್ದಾರೆ.

  • 08 Dec 2022 08:17 AM (IST)

    ವಿಜಯೋತ್ಸವಕ್ಕೆ ಬಿಜೆಪಿ ಸಿದ್ಧತೆ, ವಿಜೇತರ ಸ್ಥಳಾಂತರಕ್ಕೆ ಕಾಂಗ್ರೆಸ್ ಚಿಂತನೆ

    ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ (Gujarat Assembly elections Result) ಕ್ಷಣಗಣನೆ ಆರಂಭವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮುಂದಿನ ಹೆಜ್ಜೆಯ ಬಗ್ಗೆ ಚಿಂತನೆ ನಡೆಸುತ್ತಿವೆ. ಫಲಿತಾಂಶ ಘೋಷಣೆಗೆ ಮೊದಲೇ ಬಿಜೆಪಿ ವಿಜಯೋತ್ಸವಕ್ಕೆ ಸಿದ್ಧತೆ ಶುರು ಮಾಡಿದೆ. ಗೆದ್ದ ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆಯಬಹುದು ಎಂಬ ಭೀತಿಯಿಂದ ಕಾಂಗ್ರೆಸ್ ಪಕ್ಷವು ವಿಜೇತರನ್ನು ರಾಜಸ್ಥಾನಕ್ಕೆ ಕಳುಹಿಸಲು ಮುಂದಾಗಿದೆ.

    ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

  • 08 Dec 2022 08:10 AM (IST)

    ಗುಜರಾತ್ ವಿಧಾನಸಭಾ ಮತ ಎಣಿಕೆ ಶುರು; ಬಿಜೆಪಿಗೆ ಮುನ್ನಡೆ

    ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ

    ಅಂಚೆ ಮತಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ

  • 08 Dec 2022 07:41 AM (IST)

    ಗುಜರಾತ್​​ನಲ್ಲಿ ನೆಲೆ ನಿಲ್ಲುತ್ತಾ ಆಪ್?

    ಗುಜರಾತ್‌ನಲ್ಲಿ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆಯನ್ನು ನಡೆಸಲು ಆಕ್ರಮಣಕಾರಿ ಪ್ರಚಾರವನ್ನು ಆರಂಭಿಸಿದ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಸವಾಲು ಹಾಕಲು ಭರ್ಜರಿ ಪ್ರಚಾರ ನಡೆಸಿತ್ತು. ಆದರೆ, ಅದರ ಪ್ರಯತ್ನದ ಫಲ ಏನಾಗಲಿದೆ ಎಂಬುದನ್ನು ಚುನಾವಣಾ ಫಲಿತಾಂಶ ನಿರ್ಧರಿಸುತ್ತದೆ.

  • 08 Dec 2022 07:35 AM (IST)

    ಹಿಮಾಚಲ ಪ್ರದೇಶದಲ್ಲಿ ಭಾರೀ ಪೈಪೋಟಿ ಸಾಧ್ಯತೆ

    ಹಿಮಾಚಲ ಪ್ರದೇಶದ ಫಲಿತಾಂಶಗಳ ಬಗ್ಗೆ ಈ ಬಾರಿ ನಿರೀಕ್ಷೆ ಹೆಚ್ಚಾಗಿದೆ. ಎಕ್ಸಿಟ್ ಪೋಲ್‌ಗಳು ಈ ರಾಜ್ಯದಲ್ಲಿ ನಿಕಟ ಪೈಪೋಟಿ ಇರಲಿದೆ ಎಂದು ಊಹಿಸಿದೆ. ಹಿಮಾಚಲದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಪಣ ತೊಟ್ಟು ಪ್ರಚಾರದ ಅಖಾಡಕ್ಕೆ ಇಳಿದಿದ್ದರು. ಕಾಂಗ್ರೆಸ್ ವಿರುದ್ಧ ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ, ಗ್ಯಾಸ್ ಸಬ್ಸಿಡಿ ಮತ್ತು ಪರಿಹಾರ ಸೇರಿದಂತೆ ಹಲವಾರು ಭರವಸೆಗಳೊಂದಿಗೆ ಬಿಜೆಪಿ ಚುನಾವಣೆ ಎದುರಿಸಿತ್ತು. 2017ರ ಚುನಾವಣೆಯಲ್ಲಿ 68 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದಿತ್ತು.

  • 08 Dec 2022 07:31 AM (IST)

    ಗುಜರಾತ್​​ನಲ್ಲಿ ಮತದಾನದ ಪ್ರಮಾಣ ಕುಸಿತ

    ಗುಜರಾತ್‌ನಲ್ಲಿ 1998ರಿಂದ ಅಧಿಕಾರದಲ್ಲಿರುವ ಬಿಜೆಪಿ 1995ರಿಂದ ಯಾವುದೇ ಚುನಾವಣೆಯಲ್ಲಿ ಸೋತಿಲ್ಲ. 2001ರಿಂದ 2014ರವರೆಗೆ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಗುಜರಾತ್ ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. 2017ರಲ್ಲಿ 68.39% ಮತದಾರರು ಮತ ಚಲಾಯಿಸಿದ್ದರು. ಈ ಬಾರಿ  64.33% ಅರ್ಹ ಮತದಾರರು ತಮ್ಮ ಮತದಾನ ಮಾಡಿದ್ದರು. ಈ ಬಾರಿ ಗುಜರಾತ್​​ನಲ್ಲಿ ಮತದಾನದ ಪ್ರಮಾಣ ಇಳಿಕೆಯಾಗಿದೆ.

  • 08 Dec 2022 07:27 AM (IST)

    ಎಕ್ಸಿಟ್​ ಪೋಲ್ ಹೇಳುವುದೇನು?

    ಈ ಬಾರಿ ಕೂಡ ಎಕ್ಸಿಟ್ ಪೋಲ್‌ಗಳ ಬಗ್ಗೆ ಎಲ್ಲರ ಗಮನ ನೆಟ್ಟಿದೆ. ಆಮ್ ಆದ್ಮಿ ಪಕ್ಷ ಕೇವಲ ಗುಜರಾತ್‌ನಲ್ಲಿ ತನ್ನ ಅಸ್ತಿತ್ವವನ್ನು ದಾಖಲಿಸುತ್ತದೆ ಎಂದು ಭವಿಷ್ಯ ನುಡಿದಿದೆ. ಗುಜರಾತ್‌ನಲ್ಲಿ ಎಎಪಿ ಅಲ್ಲಿನ ರಾಜಕೀಯದಲ್ಲಿ ಬದಲಾವಣೆಯನ್ನು ತರುತ್ತದೆ ಮತ್ತು ಬಿಜೆಪಿಗೆ ಕಾಂಗ್ರೆಸ್‌ಗಿಂತ ಹೆಚ್ಚು ಸ್ಪರ್ಧೆ ನೀಡುತ್ತದೆ ಎಂದು ಹೇಳಲಾಗಿದೆ.

  • 08 Dec 2022 07:25 AM (IST)

    ಕಾಂಗ್ರೆಸ್​ಗೆ ಅಳಿವು-ಉಳಿವಿನ ಪ್ರಶ್ನೆ

    ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್ 2017ರಲ್ಲಿ 77 ಸ್ಥಾನಗಳನ್ನು ಗೆದ್ದಿತ್ತು. ಹಿಮಾಚಲ ಪ್ರದೇಶದಲ್ಲಿ ಕೂಡ ಕಾಂಗ್ರೆಸ್ ಛಾಪು ಮೂಡಿಸುವ ಭರವಸೆ ಹೊಂದಿದೆ. ಆದರೆ, ಹಿಮಾಚಲ ಪ್ರದೇಶಕ್ಕಿಂತ ಹೆಚ್ಚು ಮತದಾರರನ್ನು ಹೊಂದಿದ್ದ ದೆಹಲಿ ನಾಗರಿಕ ಚುನಾವಣೆಯಲ್ಲಿ ಕಾಂಗ್ರೆಸ್ 9 ಸ್ಥಾನಗಳನ್ನು ಮಾತ್ರ ಗೆದ್ದಿದೆ.

    ಕಳೆದ 2 ವರ್ಷಗಳಲ್ಲಿ ಕಾಂಗ್ರೆಸ್ ತನ್ನ ಗುಜರಾತ್‌ನ ಇಬ್ಬರು ಪ್ರಮುಖ ನಾಯಕರಾದ ಅಹ್ಮದ್ ಪಟೇಲ್ ಮತ್ತು ಮಾಧವ ಸಿಂಗ್ ಸೋಲಂಕಿಯನ್ನು ಕಳೆದುಕೊಂಡಿತು. ಗುಜರಾತ್ ಕಾಂಗ್ರೆಸ್‌ನ ನಾಯಕರಿಗೆ ಅಹ್ಮದ್ ಪಟೇಲ್ ಮಾರ್ಗದರ್ಶಕರಾಗಿದ್ದರು. 2017ರಲ್ಲಿ ಮುಂಚೂಣಿಯಿಂದ ನೇತೃತ್ವ ವಹಿಸಿದ್ದ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯಲ್ಲಿ ನಿರತರಾಗಿದ್ದರಿಂದ ಈ ಬಾರಿ ಚುನಾವಣೆಯಲ್ಲಿ ಹೆಚ್ಚು ಪ್ರಚಾರಕ್ಕೆ ಇಳಿದಿರಲಿಲ್ಲ.

  • 08 Dec 2022 07:20 AM (IST)

    ಗುಜರಾತ್​​ನಲ್ಲಿ ಬಿಜೆಪಿಗೆ ಕೇಜ್ರಿವಾಲ್ ಪಕ್ಷದ ಪೈಪೋಟಿ

    ಸುಮಾರು 3 ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಕಣಕ್ಕಿಳಿದಿರುವ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದತ್ತ ಎಲ್ಲರ ಕಣ್ಣು ನೆಟ್ಟಿದೆ. ಈ ಬಾರಿ ಗೆಲ್ಲಲೇಬೇಕೆಂದು ಬಿಜೆಪಿಯ ಹಿರಿಯ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಲವರು ಹಿಮಾಚಲ ಪ್ರದೇಶ, ಗುಜರಾತ್​ನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಚುನಾವಣೆ ಘೋಷಣೆಯಾದ ನಂತರ ಪ್ರಧಾನಿ ಮೋದಿ ಗುಜರಾತ್​​ನಲ್ಲಿ 30ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸಿದ್ದಾರೆ.

  • 08 Dec 2022 07:15 AM (IST)

    ಗುಜರಾತ್​, ಹಿಮಾಚಲದಲ್ಲಿ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ

    ಗುಜರಾತ್‌ನಲ್ಲಿ 182 ಸ್ಥಾನಗಳಿವೆ. ಬಹುಮತದ ಸಂಖ್ಯೆ 92 ಆಗಿದೆ.

    ಹಿಮಾಚಲ ಪ್ರದೇಶದಲ್ಲಿ 68 ಸ್ಥಾನಗಳಿವೆ ಮತ್ತು ಗೆಲುವಿಗೆ 35 ಸ್ಥಾನಗಳ ಅಗತ್ಯವಿದೆ.

  • Published On - Dec 08,2022 6:51 AM

    Follow us
    ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
    ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
    ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
    ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
    ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
    ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
    ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
    ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
    ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
    ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
    ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
    ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
    ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
    ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
    ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
    ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
    ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
    ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
    ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
    ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ