Arabhavi Election Results: ಅರಭಾವಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಗೆಲುವಿನ ದಾಖಲೆ ಬರೆದ ಬಾಲಚಂದ್ರ ಜಾರಕಿಹೊಳಿ
Arabhavi Assembly Election Results 2023 Live Counting Updates: 2004 ಮತ್ತು 2008ರಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಗೆದ್ದ ಜಾರಕಿಹೊಳಿ. 2013ರ ವೇಳೆಗೆ ಅವರು ಬಿಜೆಪಿ ಸೇರಿದರು. ಇದು ಅರಭಾವಿ ಕ್ಷೇತ್ರದಲ್ಲಿ ಜೆಡಿಎಸ್ ಪತನಕ್ಕೆ ಕಾರಣವಾಯಿತು

Arabhavi Assembly Election Results 2023: ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಅರಭಾವಿ (Arabhavi Assembly Constituency), ಜಾತ್ಯತೀತ ಜನತಾದಳದ ಕಡೆಗೆ ವಾಲಿ ಕೊನೆಗೆ ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಾಡಾಗಿದೆ. ಇದಕ್ಕೆ ಕಾರಣವಾಗಿದ್ದು ಹಾಲಿ ಶಾಸಕ ಬಾಲಚಂದ್ರ ಜಾರಕಿಹೊಳಿ. ಈ ಬಾರಿಯೂ ಬಾಲಚಂದ್ರ ಜಾರಕಿಹೊಳಿ ಗೆದ್ದು ಬೀಗಿದ್ದಾರೆ. 2004ರ ಚುನಾವಣೆ ಮೂಲಕ ವಿಧಾನಸಭೆಗೆ ಕಾಲಿಟ್ಟ ಬಾಲಚಂದ್ರ ಜಾರಕಿಹೊಳಿ ಇಲ್ಲಿ ಸತತ ಗೆಲುವು ದಾಖಲಿಸಿದ್ದಾರೆ. 2004 ಮತ್ತು 2008ರಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಗೆದ್ದ ಜಾರಕಿಹೊಳಿ. 2013ರ ವೇಳೆಗೆ ಅವರು ಬಿಜೆಪಿ ಸೇರಿದರು. ಇದು ಅರಭಾವಿ ಕ್ಷೇತ್ರದಲ್ಲಿ ಜೆಡಿಎಸ್ ಪತನಕ್ಕೆ ಕಾರಣವಾಯಿತು. ಬಿಜೆಪಿ ಸೇರಿದ ಬಾಲಚಂದ್ರ ಜಾರಕಿಹೊಳಿ , 2013ರ ಚುನಾವಣೆಯಲ್ಲಿ ಬರೋಬ್ಬರಿ 75,221 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2018ರಲ್ಲಿ ಬಾಲಚಂದ್ರ ಜಾರಕಿಹೊಳಿ 47,328 ಮತಗಳ ಅಂತರದಿಂದ ಗೆದ್ದಿದ್ದರು. ಈಗಲೂ ಈ ಕ್ಷೇತ್ರದಲ್ಲಿ ಜಾರಕಿಹೊಳಿಯವರದ್ದೇ ಹವಾ ಇದೆ.
ಈ ಬಾರಿ ಜೆಡಿಎಸ್ ಅಭ್ರ್ಥಿ ಪ್ರಕಾಶ ಕಾಸಶೆಟ್ಟಿ, ಎಎಪಿಯ ಕೊಟ್ಟಲಗಿ, ಬಿಜೆಪಿಯಿಂದ ಬಾಲಚಂದ್ರ ಜಾರಕಿಹೊಳಿ ಮತ್ತು ಕಾಂಗ್ರೆಸ್ ಪಕ್ಷದಿಂದ ಅರವಿಂದ್ ಮಹಾದೇವರಾವ್ ದಳವಾಯಿ ಸ್ಪರ್ಧಿಸುತ್ತಿದ್ದಾರೆ.
2011ರ ಜನಗಣತಿ ಪ್ರಕಾರ ಕ್ಷೇತ್ರದ ಒಟ್ಟು ಜನಸಂಖ್ಯೆ 3.09 ಲಕ್ಷ. ಇದರಲ್ಲಿ ಶೇಕಡ 50.35ರಷ್ಟು ಮಹಿಳೆಯರಿದ್ದಾರೆ. ಈ ಕ್ಷೇತ್ರದಲ್ಲಿ 60 ಸಾವಿರ ಲಿಂಗಾಯತ ಮತದಾರರಿದ್ದರೆ, ಕುರುಬರ 40 ಸಾವಿರ, ಉಪ್ಪಾರರ 40 ಸಾವಿರ ಮತದಾರರಿದ್ದಾರೆ.
Published On - 2:06 am, Sat, 13 May 23