Zameer Ahmed Khan win: ಚಾಮರಾಜಪೇಟೆಯಲ್ಲಿ ಮಾಜಿ ಪೊಲೀಸ್​​ಗೆ ಚಳ್ಳೆಹಣ್ಣು ತಿನ್ನಿಸಿ, ಗೆಲುವಿನ ನಗೆ ಬೀರಿದ ಜಮೀರ್​​ ಭಾಯ್!​​

|

Updated on: May 13, 2023 | 11:52 AM

Chamarajpet Assembly Election Result 2023 Live Zameer Ahmed Khan: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಮತದಾನದಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಶೇ. 49.42ರಷ್ಟು ಮತದಾನವಾಗಿತ್ತು.

Zameer Ahmed Khan win:  ಚಾಮರಾಜಪೇಟೆಯಲ್ಲಿ ಮಾಜಿ ಪೊಲೀಸ್​​ಗೆ ಚಳ್ಳೆಹಣ್ಣು ತಿನ್ನಿಸಿ, ಗೆಲುವಿನ ನಗೆ ಬೀರಿದ ಜಮೀರ್​​ ಭಾಯ್!​​
ಚಾಮರಾಜಪೇಟೆಯಲ್ಲಿ ಗೆಲುವಿನ ನಗೆ ಬೀರಿದ ಜಮೀರ್​​ ಭಾಯ್!​​
Follow us on

Chamarajpet Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಶೇ. 49.42ರಷ್ಟು ಮತದಾನವಾಗಿತ್ತು. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.

ತಾಜಾ ಫಲಿತಾಂಶ: ಮೂರನೇ ಸ್ಥಾನಕ್ಕೆ ಕುಸಿದ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್!

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ಜಡ್ ಜಮೀರ್ ಅಹಮದ್ ಖಾನ್ ಗೆ ಭಾರೀ ಗೆಲುವು. ಜೆಡಿಎಸ್ ಅಭ್ಯರ್ಥಿ ಸಿ ಗೋವಿಂದರಾಜು ಎದುರು ಭಾರೀ ಅಂತರದ ಗೆಲುವು. 47 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು. ಮೂರನೇ ಸ್ಥಾನಕ್ಕೆ ಕುಸಿದ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್.

ಕಾಂಗ್ರೆಸ್‌ ಅಭ್ಯರ್ಥಿ ಜಮೀರ್ ಅಹಮದ್‌ ಖಾನ್ (B.Z. Zameer Ahmed Khan) ಅವರ ಕೋಟೆಯಾದ ಚಾಮರಾಜಪೇಟೆಗೆ ಲಗ್ಗೆ ಹಾಕಲು ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್‌ ಕಸರತ್ತು ನಡೆಸಿತ್ತು.  ಹಳೆಯ ದೋಸ್ತ್ ಜಮೀರ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದರು ಎಚ್‌.ಡಿ. ಕುಮಾರಸ್ವಾಮಿ. ಆದರೆ ಇದೇ ಕ್ಷೇತ್ರದಿಂದ ‘ಹ್ಯಾಟ್ರಿಕ್’ ಜಯ ಸಾಧಿಸಿರುವ ಜಮೀರ್ ಅವರನ್ನು ಮಣಿಸಲು ಬಿಜೆಪಿಯು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಕಣಕ್ಕಿಳಿಸಿತ್ತು. ಮೇಲ್ನೋಟಕ್ಕೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆಯಂತೆ ಕಂಡುಬಂದರೂ ಜೆಡಿಎಸ್‌ ಸಹ ‘ಕಾಂಗ್ರೆಸ್ ಕೋಟೆ’ ಕೆಡವಿ ಮತ್ತೆ ವಶಕ್ಕೆ ಪಡೆಯುವ ತವಕದಲ್ಲಿತ್ತು. ತಂತ್ರಗಾರಿಕೆಯಲ್ಲಿ ಒಂದು ಹೆಜ್ಜೆ ಮುಂದಿರುವ ಜೆಡಿಎಸ್, ಕಳೆದ ಚುನಾವಣೆಯಲ್ಲಿ ಜಮೀರ್ ಅವರನ್ನು ಗೆಲ್ಲಿಸಲು ಶ್ರಮಿಸಿದ್ದ ಗೋವಿಂದ್‌ ರಾಜ್ ಅವರನ್ನೇ ಕರೆತಂದು ಟಿಕೆಟ್ ನೀಡಿದೆ.

ಒಂದು ಕಾಲದ ಆಪ್ತ ಜಮೀರ್ ಸೋಲಿಸಲು ಗೋವಿಂದರಾಜ್ ಪಣತೊಟ್ಟಂತೆ ಸಂಚರಿಸುತ್ತಿದ್ದಾರೆ. ಇನ್ನು ಹಳೇ ಗೆಳೆಯ ಜಮೀರ್ ವಿರುದ್ಧ ಸೇಡು ತೀರಿಸಿಕೊಳ್ಳುವ ಉಮೇದಿನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಇದ್ದಾರೆ. ಕ್ಷೇತ್ರದಲ್ಲಿ ಸವಾಲಿಗೆ ಪ್ರತಿಸವಾಲು ಕಂಡುಬರುತ್ತಿದೆ. ರಾಜಧಾನಿಯ ಸೆರಗಿನಲ್ಲಿರುವ ಕ್ಷೇತ್ರದಲ್ಲಿ ಕೊಳೆಗೇರಿಗಳು ಸಾಕಷ್ಟಿವೆ. ಅಲ್ಪಸಂಖ್ಯಾತರು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಎಎಪಿ ಪಕ್ಷದಲ್ಲಿದ್ದ ಭಾಸ್ಕರ್‌ ರಾವ್‌ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಗೆ ಬಂದು ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಭಾಸ್ಕರ್‌ ರಾವ್ ಡಿಸಿಪಿಯಾಗಿದ್ದ ವೇಳೆ ಈ ಭಾಗದಲ್ಲಿ ಕೆಲಸ ಮಾಡಿದ್ದರು. ಅವರಿಗೆ ಕ್ಷೇತ್ರದ ಒಳನೋಟದ ಅರಿವಿದೆ. ‘ಕ್ಷೇತ್ರಕ್ಕೆ ಅನುದಾನ ಹರಿದು ಬಂದಿದೆ. ಆದರೆ, ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಕ್ಷೇತ್ರದಲ್ಲಿ ಬದಲಾವಣೆ ತರುತ್ತೇನೆ’ ಎನ್ನುತ್ತಲೇ ಭಾಸ್ಕರ್ ರಾವ್‌ ಸಂಚಲನ ಸೃಷ್ಟಿಸಿದ್ದಾರೆ. ಈ ಮಧ್ಯೆ, ‘ಐದು ವರ್ಷವೂ ನಿಮ್ಮ ಜೊತೆಗಿದ್ದೇನೆ. ಚುನಾವಣೆ ಬಂದಾಗ ಬರುವ ವ್ಯಕ್ತಿ ನಾನಲ್ಲ’ ಎಂದು ಹೇಳುವ ಮೂಲಕ ಜಮೀರ್ ಭಾವನಾತ್ಮಕವಾಗಿ ಮತ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಫಲಿತಾಂಶದ ಹಿನ್ನೋಟ:
2008, 2013ರ ಚುನಾವಣೆಯಲ್ಲಿ ಜಮೀರ್ ಅಹಮದ್‌ ಜೆಡಿಎಸ್ ನಿಂದ ಸ್ಪರ್ಧಿಸಿ ಜಯಿಸಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಕೋವಿಡ್-19 ವೇಳೆ ಕ್ಷೇತ್ರದ ಜನರು ಸಂಕಷ್ಟ ಎದುರಿಸಿದ್ದರು. ಜನರ ನೆರವಿಗೆ ಬಂದವರಿಗೆ ಹೆಚ್ಚು ವರವಾಗುವ ಸಾಧ್ಯತೆಯಿದೆ ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯವಾಗಿದೆ.

ಚಾಮರಾಜಪೇಟೆ ಕ್ಷೇತ್ರದಲ್ಲಿರುವ ಒಟ್ಟು 2,29,898 ಮಂದಿ ಮತದಾರರು ಇದ್ದಾರೆ. 1,17,899 ಪುರುಷರು – 1,11,960 ಮಹಿಳೆಯರು ಮತ್ತು 39 ಮಂದಿ ಇತರರು ಇದ್ದಾರೆ .

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 3:14 am, Sat, 13 May 23