
Chikkodi-Sadalga Assembly Election Results 2023: ಚಿಕ್ಕೋಡಿ ಕ್ಷೇತ್ರ (Chikkodi-Sadalga Assembly Constituency)ದಲ್ಲಿ ಪ್ರಕಾಶ್ ಹುಕ್ಕೇರಿ ಅವರ ಮಗ ಗಣೇಶ್ ಹುಕ್ಕೇರಿ ಗೆಲುವು ಸಾಧಿಸಿದ್ದಾರೆ. ಚಿಕ್ಕೋಡಿ-ಸದಲಗಾ ಸಾಮಾನ್ಯ ಮೀಸಲು ಕ್ಷೇತ್ರವಾಗಿದ್ದು. 1957ರಲ್ಲಿ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಿತ್ತು. ಅಂದಿನಿಂದ ಇಂದಿನವರೆಗೆ 15 ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅವರಲ್ಲಿ ಕಾಂಗ್ರೆಸ್ ಶಾಸಕರು 9 ಬಾರಿ ಮತ್ತು ಜನತಾ ಪಕ್ಷ ಎರಡು ಬಾರಿ ಪ್ರತಿನಿಧಿಸಿದೆ. ಜನತಾ ದಳ, ಬಿಜೆಪಿ, ಜೆಡಿಯು ಮತ್ತು ಪಕ್ಷೇತರರು ಕ್ಷೇತ್ರದಿಂದ ತಲಾ ಒಮ್ಮೆ ಆಯ್ಕೆಯಾಗಿದ್ದಾರೆ.
ಮಹಾರಾಷ್ಟ್ರ ಗಡಿಯಲ್ಲಿರುವ ಚಿಕ್ಕೋಡಿ ಕ್ಷೇತ್ರದಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಇಲ್ಲಿ ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಮತಗಳು ನಿರ್ಣಾಯಕ. ಹಾಗಾಗಿ, ಎಲ್ಲ ಪಕ್ಷಗಳೂ ಈ ಕ್ಷೇತ್ರದಲ್ಲಿ ಲಿಂಗಾಯತ ಅಭ್ಯರ್ಥಿಗಳಿಗೇ ಹೆಚ್ಚಾಗಿ ಮಣೆ ಹಾಕುತ್ತವೆ. 2018ರಲ್ಲಿ ಕಾಂಗ್ರೆಸ್ ಪಕ್ಷದ ಗಣೇಶ್ ಹುಕ್ಕೇರಿ ಇಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ ಎರಡನೇ ಸ್ಥಾನಗಳಿಸಿದ್ದರು. 2008ರಲ್ಲಿ ಮತ್ತು 2013ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಕಾಶ್ ಬಾಬಣ್ಣ ಹುಕ್ಕೇರಿ ಇಲ್ಲಿ ಗೆದ್ದಿದ್ದಾರೆ. ಹುಕ್ಕೇರಿ ಕುಟುಂಬದ ಬಿಗಿ ಹಡಿತದಲ್ಲಿರುವ ಕ್ಷೇತ್ರ ಇದಾಗಿದ್ದು ಪ್ರಕಾಶ್ ಹುಕ್ಕೇರಿ ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿದ್ದಾರೆ. ಪ್ರಕಾಶ್ ಹುಕ್ಕೇರಿ ಚಿಕ್ಕೋಡಿಯಿಂದ ಐದು ಬಾರಿ ಶಾಸಕ ಮತ್ತು ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದವರು. ಅವರು ತಮ್ಮ ರಾಜಕೀಯ ಜೀವನದಲ್ಲಿ ರಾಜ್ಯ ವಿಧಾನಸಭೆ, ವಿಧಾನ ಪರಿಷತ್ತು ಮತ್ತು ಲೋಕಸಭೆಗೆ ಚುನಾವಣೆಗಳನ್ನು ಗೆದ್ದಿದ್ದಾರೆ. ಗಣೇಶ್ ಹುಕ್ಕೇರಿ ಪ್ರಕಾಶ್ ಹುಕ್ಕೇರಿ ಅವರ ಮಗ.
ಈ ಬಾರಿ ಜೆಡಿಎಸ್ ಪಕ್ಷದ ಸುಹಾಸ್ ಸದಾಶಿವ ವಾಳಕೆ, ಎಎಪಿ ಪಕ್ಷದ ಶ್ರೀಕಾಂತ್ ಪಾಟೀಲ್, ಕಾಂಗ್ರೆಸ್ ಪಕ್ಷದ ಗಣೇಶ್ ಹುಕ್ಕೇರಿ, ಬಿಜೆಪಿಯ ರಮೇಶ್ ಕತ್ತಿ ಕಣದಲ್ಲಿದ್ದಾರೆ.
Published On - 1:56 am, Sat, 13 May 23