AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜಿ ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ ನಾಡಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ

ಒಂದು ಕಾಲದಲ್ಲಿ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಜಿಲ್ಲೆ 1998 ರಿಂದ ಈಚೆಗೆ ಕಮಲ ಅರಳಿದೆ. ಈಗ ಮತ್ತೆ ಕಾಂಗ್ರೆಸ್​ ಬಾವುಟ ಹಾರಿಸಲು ಜಿಲ್ಲೆಗೆ ಪ್ರಿಯಾಂಕಾ ಗಾಂಧಿ ಲಗ್ಗೆ ಇಡುತ್ತಿದ್ದಾರೆ.

ಅಜ್ಜಿ ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ ನಾಡಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ
ಪ್ರಿಯಂಕಾ ಗಾಂಧಿ
ವಿವೇಕ ಬಿರಾದಾರ
| Edited By: |

Updated on:Apr 26, 2023 | 10:35 AM

Share

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ಕಾಂಗ್ರೆಸ್ (Congress) ಕೇಂದ್ರ ನಾಯಕರು ಕರ್ನಾಟಕ ಟೂರ್​ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್​ ನಾಯಕ ರಾಹುಲ್‌ಗಾಂಧಿ (Rahul gandhi) ಅವರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ನಡೆಸಿದ್ದರು. ರಾಹುಲ್‌ಗಾಂಧಿ ಅವರು ದೆಹಲಿಗೆ ವಾಪಸಾದ ಬೆನ್ನಲ್ಲೇ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಕರ್ನಾಟಕಕ್ಕೆ ಬಂದಿದ್ದಾರೆ. ನಿನ್ನೆ (ಏ.25) ಮೈಸೂರು (Mysore) ಜಿಲ್ಲೆಯಲ್ಲಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಿದ್ದರು. ಇಂದು (ಏ.26) ಮಾಜಿ ಪ್ರಧಾನಿ ದಿವಂತ ಇಂದಿರಾಗಾಂಧಿ (Indira Gandhi) ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಚಿಕ್ಕಮಗಳೂರಿಗೆ ಭೇಟಿ ನೀಡಲಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು (Chikkamagaluru) 1998 ರಿಂದ ಈಚೆಗೆ ಕಮಲ ಅರಳಿದೆ. ಈಗ ಮತ್ತೆ ಕಾಂಗ್ರೆಸ್​ ಬಾವುಟ ಹಾರಿಸಲು ಜಿಲ್ಲೆಗೆ ಪ್ರಿಯಾಂಕಾ ಗಾಂಧಿ ಲಗ್ಗೆ ಇಡುತ್ತಿದ್ದಾರೆ.

ಪ್ರಿಯಾಂಕಾ ಗಾಂಧಿಯವರು ಇಂದು ಪಂಚಪೀಠಗಳಲ್ಲಿ ಒಂದಾದ ರಂಭಾಪುರಿ ಮಠ ಮತ್ತು ಶೃಂಗೇರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಜಿಲ್ಲೆಯ ಎನ್​ಆರ್​ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ ಡಿ ರಾಜೇಗೌಡ ಪರ ಮತ ಪ್ರಚಾರ ಮಾಡಲಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಲಿಂಗಾಯತ ಸಮಾವೇಶದಲ್ಲಿ ಸಿಟಿ ರವಿ ಪರ ಪತ್ನಿ ಪಲ್ಲವಿ ರವಿ ಮತಯಾಚನೆ

ಚಾಮರಾಜನಗರದಲ್ಲಿ ಪ್ರಿಯಾಂಕಾ ಪ್ರಚಾರ

ಬಳಿಕ ಮಧ್ಯಾಹ್ನ 2 ಗಂಟೆಗೆ ಹನೂರಿನ ಜಿ.ವಿ. ಗೌಡ ಪ್ರಥಮ ದರ್ಜೆ ಕಾಲೇಜು ಸಮೀಪದ ಆವರಣದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ ಭಾಗಿಯಾಗಲಿದ್ದಾರೆ.

ಇಂದಿರಾಗಾಂಧಿಗೆ ರಾಜಕೀಯ ಪುನರ್​ಜನ್ಮ ನೀಡಿತ್ತು ಕಾಫಿ ನಾಡು

ರಾಷ್ಟ್ರ ರಾಜಕಾರಣದ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದ್ದ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ಈಗ ಉಡುಪಿ-ಚಿಕ್ಕಮಗಳೂರು ಕ್ಷೇತ್ರ. ತುರ್ತು ಪರಿಸ್ಥಿತಿ ಬಳಿಕ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರನ್ನು ಗೆಲ್ಲಿಸಿ ಕಾಂಗ್ರೆಸ್‌ ಪಕ್ಷಕ್ಕೂ ಪುನರ್ಜನ್ಮ ನೀಡಿದ ಕಾರಣಕ್ಕೆ ಇಡೀ ರಾಷ್ಟ್ರದ ಗಮನ ಸೆಳೆದ ಹೆಗ್ಗಳಿಕೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕಿದೆ.

41 ವರ್ಷಗಳ ಹಿಂದೆ 1977ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಮತ್ತು ಇಂದಿರಾ ಗಾಂಧಿಯವರಿಗೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿಯವರ ಅಜ್ಜಿ ಇಂದಿರಾಗಾಂಧಿ ಅವರು ಜಯ ಗಳಿಸಿದ್ದರು.

ಆ ಸಂದರ್ಭದಲ್ಲಿ ಇಂದಿರಾಗಾಂಧಿಯವರಿಗೆ ವೀರೇಂದ್ರ ಪಾಟೀಲ್‌ ನೇರ ಎದುರಾಳಿಯಾಗಿದ್ದರು. ಉಳಿದಂತೆ 26 ಜನ ಕಣದಲ್ಲಿದ್ದರು. ಇನ್ನು ಇಂದಿರಾಗಾಂಧಿಯವರ ವಿರುದ್ಧ ಪ್ರಚಾರ ನಡೆಸಿದ್ದವರಲ್ಲಿ ಜಾರ್ಜ್ ಫರ್ನಾಂಡೀಸ್ ಪುಮುಖರಾಗಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:02 am, Wed, 26 April 23