AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೀ 2 ದಿನ ಮದ್ಯದಂಗಡಿ ಬಂದ್​​: ಸರ್ಕಾರಕ್ಕೆ ಲಾಸ್​ ಆಗಿದ್ದೆಷ್ಟು ಗೊತ್ತಾ?

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಲಾಗಿತ್ತು. ಎರಡು ದಿನ ಮದ್ಯ ನಿಷೇಧ ಹಿನ್ನೆಲೆ ಸರ್ಕಾರದ ಬೊಕ್ಕಸಕ್ಕೆ ಸುಮಾರು 150 ಕೋಟಿಗೂ ಅಧಿಕ ನಷ್ಟವಾಗಿದೆ.

ಬರೀ 2 ದಿನ ಮದ್ಯದಂಗಡಿ ಬಂದ್​​: ಸರ್ಕಾರಕ್ಕೆ ಲಾಸ್​ ಆಗಿದ್ದೆಷ್ಟು ಗೊತ್ತಾ?
ಮದ್ಯ
ಗಂಗಾಧರ​ ಬ. ಸಾಬೋಜಿ
|

Updated on: May 11, 2023 | 4:54 PM

Share

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮದ್ಯ (Liquor) ನಿಷೇಧ ಮಾಡಲಾಗಿತ್ತು. ಎರಡು ದಿನ ಮದ್ಯ ನಿಷೇಧ ಹಿನ್ನೆಲೆ ಸರ್ಕಾರದ ಬೊಕ್ಕಸಕ್ಕೆ ಸುಮಾರು 150 ಕೋಟಿಗೂ ಅಧಿಕ ನಷ್ಟವಾಗಿದೆ. ಚುನಾವಣೆ ಹಿನ್ನೆಲೆ‌ ಎರಡು ದಿನ ರಾಜ್ಯಾದ್ಯಂತ ‌ಬಾರ್ ಹಾಗೂ ವೈನ್ ಶಾಪ್ ಕ್ಲೋಸ್ ಆಗಿತ್ತು. ಪ್ರತಿ ದಿನ 12,500 ಮದ್ಯದ ಅಂಗಡಿಗಳಿಂದ ₹80 ರಿಂದ ₹90 ಕೋಟಿ ರೂ. ಆದಾಯವಾಗುತ್ತಿತ್ತು. ಎರಡು ದಿನ ಅಂಗಡಿ ಬಂದ್​​ ಮಾಡಿದ್ದರಿಂದ ಕೇವಲ ಸರ್ಕಾರಕ್ಕೆ ಮಾತ್ರವಲ್ಲದೇ ಬಾರ್ ಮಾಲೀಕರಿಗೂ ನಷ್ಟ ಆಗಿದೆ. ಒಂದು‌ ಬಾರ್​​​ಗೆ ದಿನ‌ಕ್ಕೆ ₹1.5 ಲಕ್ಷಕ್ಕೂಅಧಿಲ ಆದಾಯ ಬರುತ್ತೆ.

ಒಂದು ಎಂಆರ್​ಪಿ ಶಾಪ್​ಗೆ 3 ಲಕ್ಷ ಆದಾಯ ಬರುತ್ತೆ. ಎರಡು ದಿನದಲ್ಲಿ 12,500 ಮಧ್ಯದಂಗಡಿಗಳಿಂದ ಒಟ್ಟು 200 ಕೋಟಿಗೂ ಅಧಿಕ ಬಿಸಿನೆಸ್ ಆಗುತ್ತಿತ್ತು. ಆದರೆ ಎರಡು ದಿನ ಬಂದ್​ ಆಗಿ ಒಟ್ಟು 350 ಕೋಟಿ ರೂಪಾಯಿ ಬಿಸನೆಸ್ ಲಾಸ್​ ಆಗಿದೆ.

ಇದನ್ನೂ ಓದಿ: ಮದ್ಯ ಮಾರಾಟಕ್ಕೆ ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ 200 ಮದ್ಯದಂಗಡಿಗಳ ವಿರುದ್ಧ ಕ್ರಮ

ಮೇ 13ರಂದು ಮತ ಎಣಿಕೆ ಹಿನ್ನೆಲೆ ನಾಳೆ ರಾತ್ರಿಯಿಂದ ಮತ್ತೆ ಒಂದು ದಿನ ಮದ್ಯದಂಗಡಿ ಬಂದ್ ಆಗಲಿದ್ದು, ಮತ್ತೆ ಮದ್ಯದಂಗಡಿಗಳು ನಷ್ಟ ಅನುಭವಿಸಲಿವೆ.

ಮೇ 8 , 9 , 10 ರಂದು ಡ್ರೈ ಡೇ ಆಚಾರಿಸುವಂತೆ ಸೂಚನೆ

ಮೇ 8ರ ಸಂಜೆ 6 ಗಂಟೆಯಿಂದ ಮೇ 11ರ ಬೆಳಗ್ಗೆ 6 ಗಂಟೆಯವರೆಗೂ ಮದ್ಯ ಮಾರಟಕ್ಕೆ ನಿರ್ಬಂಧ ಹೇರಲಾಗಿತ್ತು. ಮೇ 8 , 9 , 10 ರಂದು ಡ್ರೈ ಡೇ ಆಚಾರಿಸುವಂತೆ ಮದ್ಯ ಮಾರಾಟದ ಅಂಗಡಿ ಮಾಲೀಕರಿಗೆ ಚುನಾವಣಾ ಆಯೋಗ ಸೂಚನೆ ನೀಡಿತ್ತು.

ಇದನ್ನೂ ಓದಿ: ರಾಜ್ಯದ ಹಲವು ಬೂತ್​ಗಳಲ್ಲಿ ರಾತ್ರಿ 10:15 ಗಂಟೆವರೆಗೂ ಮತದಾನ: ಎಡಿಜಿಪಿ ಅಲೋಕ್​ ಕುಮಾರ್ ಟ್ವೀಟ್​

ಅಲ್ಲದೇ ಮತ ಎಣಿಕೆಗೂ ಸಮಸ್ಯೆಯಾಗದಂತೆ ಮೇ 13 ರ ಬೆಳಗ್ಗೆ 6 ಗಂಟೆಯಿಂದ ಮೇ.14 ರ ಬೆಳ್ಳಗ್ಗೆ 6 ಗಂಟೆವರೆಗೂ ಮದ್ಯ ನಿರ್ಬಂಧಿಸಲಾಗಿದೆ.

ಚುನಾವಣೆ ಮುಗಿಯುವ ಹೊತ್ತಿಗೆ ಒಟ್ಟು 384.46 ಕೋಟಿ ವಶ

ಚುನಾವಣೆ ಸಮಯದಲ್ಲಿ ಅಧಿಕಾರಿಗಳು ಒಟ್ಟು 384.46 ಕೋಟಿ ಮೌಲ್ಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಹಣ, ಮದ್ಯ, ಉಡುಗೊರೆ ಸೇರಿ ಒಟ್ಟು 384.46 ಕೋಟಿಗೆ ಏರಿಕೆಯಾಗಿದೆ.

  • ನಗದು : 153.17 ಕೋಟಿ
  • ಉಡುಗೊರೆ : 24.26 ಕೋಟಿ ಮೌಲ್ಯದ್ದು
  • ಮದ್ಯ : 84.93 ಕೋಟಿ ಮೌಲ್ಯದ 22,62,855 ಲೀಟರ್ ವಶಕ್ಕೆ
  • ಡ್ರಗ್ಸ್ : 24.3 ಕೋಟಿ ಮೌಲ್ಯದ 1,995.ಕೆಜಿ ವಶಕ್ಕೆ
  • ಚಿನ್ನ : 93.28 ಕೋಟಿ ಮೌಲ್ಯದ 182.28 KG ವಶಕ್ಕೆ
  • ಬೆಳ್ಳಿ : 4.79 ಕೋಟಿ ಮೌಲ್ಯದ 691.94 ಕೆಜಿ ವಶಕ್ಕೆ

ಕರ್ನಾಟಕ ಚುನಾವಣೆ 2023 ಲೈವ್​ ಅಪ್ಡೇಟ್ಸ್​ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಚುನಾವಣೆ ತಾಜಾ & ವಿಶೇಷ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ