ರಾಯಚೂರಿನ ಮಾನ್ವಿ (ಎಸ್ ಟಿ ಮೀಸಲು) ವಿಧಾನಸಭಾ ಕ್ಷೇತ್ರದಲ್ಲಿ ನಾಯಕ ಜನಾಂಗದ (Nayak community) ನಾಯಕರದ್ದೇ ಪಾರುಪತ್ಯೆಯಾಗಿತ್ತು. ಆಪ್ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳೆಲ್ಲ ಅದೇ ಸಮುದಾಯದವರಾಗಿದ್ದರು. ಕಾಂಗ್ರೆಸ್ ಪಕ್ಷದ ಹಂಪಯ್ಯ ನಾಯಕ್ ((J Hampayya Nayak) ) ಅವರ ಗೆಲುವು ಸಾಧಿಸಿದ್ದಾರೆ. ಹಾಲಿ ಶಾಸಕರಾಗಿದ್ದ ಜೆಡಿಎಸ್ ರಾಜಾ ವೆಂಕಟಪ್ಪ ನಾಯಕ್ (Raja Venkatappa Nayak) ದುರ್ಬಲ ಎದುರಾಳಿಗಳಿಂದಾಗಿ 2018ರಲ್ಲಿ ಗೆಲುವು ಸಾಧಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ ತನುಶ್ರೀ ಅವರು ವೆಂಕಟಪ್ಪ ನಾಯಕ್ ಗೆ ಭಾರೀ ಪೈಪೋಟಿ ಒಡ್ಡಿದ್ದರು. ತನುಶ್ರೀ, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗಿಂತ ಹೆಚ್ಚು ಮತ ಗಳಿಸಿ ಎರಡನೇ ಸ್ಥಾನದಲ್ಲಿದ್ದರು. ತನುಶ್ರೀ ಅವರು ಈ ಬಾರಿ ಸ್ಪರ್ಧಿಸಿರಲಿಲ್ಲ. ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಜೆ ಹಂಪಯ್ಯ ನಾಯಕ್ ಅವರಿಗೆ ಟಿಕೆಟ್ ನೀಡಿತ್ತು. ಬಿಜೆಪಿ ಪರವಾಗಿ ಮಾಜಿ ಸಂಸದ ಬಿವಿ ನಾಯಕ್ (BV Nayak) ಕಣಕ್ಕಿಳಿದಿದ್ದರು.
ಮಾಜಿ ಸಂಸದ ದಿವಂಗತ ವೆಂಕಟೇಶ್ ನಾಯಕ್ ಮಗನಾಗಿರುವ ಬಿವಿ ನಾಯಕ್ ಹಾಗೆ ನೋಡಿದರೆ ದೇವದುರ್ಗ ತಾಲ್ಲೂಕಿನವರು. ಮಾನ್ವಿಯಲ್ಲಿ ಜನಪ್ರಿಯನಲ್ಲದಿದ್ದರೂ ಬಿಜೆಪಿ ಟಿಕೆಟ್ ನೀಡಿತ್ತು. ಅರವಿಂದ್ ಕೇಜ್ರಿವಾಲ್ ಅವರ ಆಪ್ ಪಕ್ಷದ ಅಭ್ಯರ್ಥಿ ರಾಜಾ ಶ್ಯಾಂಸುಂದರ್ ನಾಯಕ್ ಕ್ಷೇತ್ರದಲ್ಲಿ ಬಿರುಸಿನಿಂದ ಓಡಾಡಿ ಪ್ರಚಾರ ನಡೆಸಿದ್ದರು.
ಈ ಬಾರಿಯ ಚುನಾವಣೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಎಂದು ಬಿಂಬಿಸಲಾಗಿತ್ತು. ರಾಜಾ ವೆಂಕಟಪ್ಪ ಕ್ಷೇತ್ರದಲ್ಲಿ ಜನಾನುರಾಗಿಯಾಗಿದ್ದರು. ಸಮ್ಮಿಶ್ರ ಸರ್ಕಾರ ಪತನಗೊಂಡಾಗ ಅವರಿಗೆ ಜನರ ಅನುಕಂಪವೂ ಸಿಕ್ಕಿತ್ತು. ನಾಯಕ್ ಸಮುದಾಯದ ವೋಟುಗಳು ಹಂಚಿಹೋಗಿದ್ದರಿಂದ ಮುಸ್ಲಿಂ ಮತ್ತು ದಲಿತ ಸಮುದಾಯದ ವೋಟುಗಳು ನಿರ್ಣಾಯಕವಾದವು.
Published On - 12:38 am, Sat, 13 May 23