Koppal Lok Sabha Election Result 2024: ಕೊಪ್ಪಳದಲ್ಲಿ ಕಾಂಗ್ರೆಸ್‌ನ ರಾಜಶೇಖರ್ ಹಿಟ್ನಾಳ್ಗೆ ಗೆಲುವು
Koppal Lok Sabha Election Results 2024 Live Counting Updates: ಕೊಪ್ಪಳ ಲೋಕಸಭಾ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಜೋರಾಗಿದೆ. ಈ ಬಾರಿ ಬಿಜೆಪಿ ಹೊಸಬರಿಗೆ ಮಣೆ ಹಾಕಿತ್ತು. ಆ ಮೂಲಕ ಹಾಲಿ ಸಂಸದ ಸಂಗಣ್ಣ ಕರಡಿ ಬದಲಿಗೆ ಡಾ.ಬಸವರಾಜ ಕ್ಯಾವಟರ್ ಅವರನ್ನು ಕಣಕ್ಕೆ ಇಳಿಸಿತ್ತು. ಕಳೆದ ಬಾರಿ ಸ್ಪರ್ಧಿಸಿದ್ದ ಕೆ.ರಾಜಶೇಖರ್ ಹಿಟ್ನಾಳ್ ಅವರಿಗೆ ಕಾಂಗ್ರೆಸ್ ಮತ್ತೆ ಮಣೆ ಹಾಕಿ, ತಂತ್ರದಲ್ಲಿ ಯಶಸ್ಸು ಕಂಡಿದೆ.
ಕೊಪ್ಪಳ, ಜೂನ್ 04: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ (Koppal Lok Sabha Constituency) ಕಾಂಗ್ರೆಸ್ ಅಭ್ಯರ್ಥಿಗೆ ಜಯದ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ್ ಹಿಟ್ನಾಳ್ ಅವರು 45000 ಮತಗಳ ಅಂತರದಿಂದ ಗೆದಿದ್ದಾರೆ. ಈ ಮೂಲಕ ರಾಜಶೇಖರ್ ಅವರು ಎರಡನೇ ಪ್ರಯತ್ನದಲ್ಲಿ ವಿಜಯಪತಾಕೆ ಹಾರಿಸಿದ್ದಾರೆ.
ಕೊಪ್ಪಳ ಲೋಕಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಸಾಮಾನ್ಯ ವರ್ಗದ ಸಂಸತ್ ಸ್ಥಾನವಾಗಿದೆ. ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಭಾಗಗಳೊಂದಿಗೆ ಇಡೀ ಕೊಪ್ಪಳ ಜಿಲ್ಲೆಯನ್ನು ಒಳಗೊಂಡಿದೆ. ಸಿಂಧನೂರು, ಮಸ್ಕಿ (ಎಸ್‌ಟಿ), ಕುಷ್ಟಗಿ, ಕನಕಗಿರಿ (ಎಸ್‌ಸಿ), ಗಂಗಾವತಿ, ಯಲಬುರ್ಗಾ, ಕೊಪ್ಪಳ ಮತ್ತು ಸಿರುಗುಪ್ಪ (ಎಸ್‌ಟಿ) ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 15 ಲಕ್ಷ ಮತದಾರರು ಸೇರಿದಂತೆ ಒಟ್ಟು 22 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕೊಪ್ಪಳವು ಗಮನಾರ್ಹ ಚುನಾವಣಾ ಉಪಸ್ಥಿತಿಯನ್ನು ಹೊಂದಿದೆ. ಕ್ಷೇತ್ರವು ಸುಮಾರು 770,000 ಪುರುಷ ಮತದಾರರನ್ನು ಮತ್ತು ಸುಮಾರು 764,000 ಮಹಿಳಾ ಮತದಾರರನ್ನು ಹೊಂದಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಜೋರಾಗಿದೆ. ಈ ಭಾರಿ ಬಿಜೆಪಿ ಹೊಸಬರಿಗೆ ಮಣೆ ಹಾಕಿತ್ತು. ಈ ಮೂಲಕ ಹಾಲಿ ಸಂಸದ ಸಂಗಣ್ಣ ಕರಡಿ ಬದಲಿಗೆ ಡಾ.ಬಸವರಾಜ ಕ್ಯಾವಟರ್ ಅವರನ್ನು ಕಣಕ್ಕೆ ಇಳಿಸಿತ್ತು. ಆದರೆ, ಬಿಜೆಪಿ ಈ ತಂತ್ರದಲ್ಲಿ ಸೋಲುಂಡಿದೆ.
ಬಳ್ಳಾರಿ ಮತ್ತು ಕೊಪ್ಪಳ ಭಾಗದಲ್ಲಿ ವರ್ಚಸ್ಸು ಹೊಂದಿರುವ ಗಾಲಿ ಜನಾರ್ದನ ರೆಡ್ಡಿ ಅವರ ಬೆಂಬಲ ಮೇಲೆ ಬಿಜೆಪಿ ಕೂಡ ಕಣಕ್ಕಿಳಿದಿದೆ. ಬಿಜೆಪಿ ತೊರೆದು ತಮ್ಮದೇ ಪಕ್ಷವಾದ ಕರ್ನಾಟಕ ರಾಜ್ಯ ಪ್ರಗತಿ ಪಕ್ಷವನ್ನು ಸ್ಥಾಪಿಸಿದ್ದರು. 2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದರು.
ಐತಿಹಾಸಿಕವಾಗಿ ಕಾಂಗ್ರೆಸ್ ಪಕ್ಷವು ಈ ಕ್ಷೇತ್ರದಲ್ಲಿ ಹೆಚ್ಚು ಪ್ರಾಬಲ್ಯ ಸಾಧಿಸಿದೆ. 2014 ರವರೆಗೆ ನಡೆದ ಒಟ್ಟು 16 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ಕೇವಲ ಎರಡು ಬಾರಿ ಗೆಲುವು ಸಾಧಿಸಿದೆ. 1952 ರಲ್ಲಿ ನಡೆದ ಚೊಚ್ಚಲ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ವಾಮಿ ಶಿವಮೂರ್ತಿ ವಿಜಯಶಾಲಿಯಾಗಿದ್ದರು.
ಕೊಪ್ಪಳವು ಹಿಂದೆ ಹೈದರಾಬಾದ್ ರಾಜ್ಯದ ಭಾಗವಾಗಿತ್ತು. ಇದನ್ನು ಕುಷ್ಟಗಿ ಲೋಕಸಭಾ ಕ್ಷೇತ್ರವೆಂದು ಕರೆಯಲಾಗುತ್ತಿತ್ತು. ನಂತರ, 1957 ರಲ್ಲಿ, ಇದು ಮೈಸೂರು ರಾಜ್ಯದ ಭಾಗವಾಯಿತು. ಅಂತಿಮವಾಗಿ, 1977 ರ ಚುನಾವಣೆಯಿಂದ ಕೊಪ್ಪಳ ಕರ್ನಾಟಕದ ಭಾಗವಾಯಿತು. 2009ರಲ್ಲಿ ಶಿವರಾಮಗೌಡ ಸಂಸದರಾಗಿ ಆಯ್ಕೆಯಾಗುವುದರೊಂದಿಗೆ ಬಿಜೆಪಿ ತನ್ನ ಮೊದಲ ಗೆಲುವು ಸಾಧಿಸಿಕೊಂಡಿತ್ತು.
2019ರ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಅಮರಪ್ಪ 5,84,997 ಮತಗಳಿಂದ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ್ ಬಸವರಾಜ್ 5,47,573 ಮತಗಳನ್ನು ಪಡೆದುಕೊಂಡಿದ್ದರು. ಅದೇ ರೀತಿ 2014ರಲ್ಲಿ ಬಿಜೆಪಿಯ ಕರಡಿ ಸಂಗಣ್ಣ ಅಮರಪ್ಪ ಅವರು ಕಾಂಗ್ರೆಸ್‌ನ ಬಸವರಾಜ ಹಿಟ್ನಾಳ್ ಅವರನ್ನು ಸುಮಾರು 32,000 ಮತಗಳಿಂದ ಸೋಲಿಸಿ ವಿಜಯಶಾಲಿಯಾಗಿದ್ದರು.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:47 am, Tue, 4 June 24