Lok Sabha Election Date 2024: ಏಪ್ರಿಲ್ 19 ರಂದು ಮೊದಲ ಹಂತದ ಮತದಾನ, 21 ರಾಜ್ಯಗಳ 102 ಕ್ಷೇತ್ರಗಳಿಗೆ ಚುನಾವಣೆ
ಭಾರತೀಯ ಚುನಾವಣಾ ಆಯೋಗವು ಈಗಾಗಲೇ ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ್ದು, 7 ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ದೇಶದಲ್ಲಿ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಾಗಿದೆ. ಮೊದಲ ಹಂತದಲ್ಲಿ ಏಪ್ರಿಲ್ 19 ರಂದು ಮತದಾನ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಭಾರತೀಯ ಚುನಾವಣಾ ಆಯೋಗ ಈಗಾಗಲೇ ಲೋಕಸಭೆ (Lok Sabha Election) ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ್ದು, ದೇಶದ 543 ಲೋಕಸಭಾ ಸ್ಥಾನಗಳಿಗೆ 7 ಹಂತಗಳಲ್ಲಿ ಮತದಾನ (Voting) ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಏಪ್ರಿಲ್ 19 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ಹಂತದ ಅಧಿಸೂಚನೆಯನ್ನು ಮಾರ್ಚ್ 20 ರಂದು ಹೊರಡಿಸಲಾಗಿದೆ. ಮಾರ್ಚ್ 27 ರ ಸಂಜೆಯವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಮಾರ್ಚ್ 28 ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುತ್ತಿದ್ದು, ಅಭ್ಯರ್ಥಿಗಳು ನಾಮಪತ್ರಗಳನ್ನು ಮಾರ್ಚ್ 30 ರವರೆಗೆ ಹಿಂಪಡೆಯಲು ಅವಕಾಶವಿದೆ. ಮೊದಲ ಹಂತದ ಚುನಾವಣೆಯಲ್ಲಿ 21 ರಾಜ್ಯಗಳ 102 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.
21 ರಾಜ್ಯಗಳೆಂದರೆ ಅರುಣಾಚಲ ಪ್ರದೇಶ, ಬಿಹಾರ, ಅಸ್ಸಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿ ಆಗಿವೆ. ಮೊದಲ ಹಂತದ ಚುನಾವಣೆಯಲ್ಲಿ, ಅರುಣಾಚಲ ಪ್ರದೇಶ-2, ಬಿಹಾರ-4, ಅಸ್ಸಾಂ-4, ಛತ್ತೀಸ್‌ಗಢ-1, ಮಧ್ಯಪ್ರದೇಶ-6, ಮಹಾರಾಷ್ಟ್ರ-5, ಮಣಿಪುರ-2, ಮೇಘಾಲಯ-2, ಮಿಜೋರಾಂ-1 , ನಾಗಾಲ್ಯಾಂಡ್-1, ರಾಜಸ್ಥಾನ-12, ಸಿಕ್ಕಿಂ-1, ತಮಿಳುನಾಡು-39, ತ್ರಿಪುರ-1, ಉತ್ತರ ಪ್ರದೇಶ-8, ಉತ್ತರಾಖಂಡ-5, ಪಶ್ಚಿಮ ಬಂಗಾಳ-3, ಅಂಡಮಾನ್ ಮತ್ತು ನಿಕೋಬಾರ್-1, ಜಮ್ಮು-ಕಾಶ್ಮೀರ-1, ಲಕ್ಷದ್ವೀಪ- 1 ಮತ್ತು ಪುದುಚೇರಿ-1 ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ ದೇಶದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಪ್ರಸಕ್ತ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ನಮ್ಮಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ. 10.5 ಲಕ್ಷ ಮತಗಟ್ಟೆಗಳಿವೆ. ಇಲ್ಲಿಯವರೆಗೆ ನಾವು 17 ಲೋಕಸಭೆ ಚುನಾವಣೆಗಳು ಮತ್ತು 400 ಕ್ಕೂ ಹೆಚ್ಚು ರಾಜ್ಯಗಳ ಚುನಾವಣೆಗಳನ್ನು ನಡೆಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
State Name | Constituency Name | Phase | Date |
Andaman & Nicobar | Andaman & Nicobar Islands | Phase 1 | 19-Apr-24 |
Arunachal Pradesh | Arunachal East | Phase 1 | 19-Apr-24 |
Arunachal Pradesh | Arunachal West | Phase 1 | 19-Apr-24 |
Assam | Kaziranga | Phase 1 | 19-Apr-24 |
Assam | Sonitpur | Phase 1 | 19-Apr-24 |
Assam | Lakhimpur | Phase 1 | 19-Apr-24 |
Assam | Dibrugarh | Phase 1 | 19-Apr-24 |
Assam | Jorhat | Phase 1 | 19-Apr-24 |
Bihar | Aurangabad | Phase 1 | 19-Apr-24 |
Bihar | Gaya | Phase 1 | 19-Apr-24 |
Bihar | Jamui | Phase 1 | 19-Apr-24 |
Bihar | Nawada | Phase 1 | 19-Apr-24 |
Chhattisgarh | Bastar | Phase 1 | 19-Apr-24 |
Jammu & Kashmir | Udhampur | Phase 1 | 19-Apr-24 |
Lakshadweep | Lakshadweep | Phase 1 | 19-Apr-24 |
Madhya Pradesh | Balaghat | Phase 1 | 19-Apr-24 |
Madhya Pradesh | Chhindwara | Phase 1 | 19-Apr-24 |
Madhya Pradesh | Jabalpur | Phase 1 | 19-Apr-24 |
Madhya Pradesh | Mandla | Phase 1 | 19-Apr-24 |
Madhya Pradesh | Shahdol | Phase 1 | 19-Apr-24 |
Madhya Pradesh | Sidhi | Phase 1 | 19-Apr-24 |
Maharashtra | Bhandara-Gondiya | Phase 1 | 19-Apr-24 |
Maharashtra | Chandrapur | Phase 1 | 19-Apr-24 |
Maharashtra | Gadchiroli-Chimur | Phase 1 | 19-Apr-24 |
Maharashtra | Nagpur | Phase 1 | 19-Apr-24 |
Maharashtra | Ramtek | Phase 1 | 19-Apr-24 |
Manipur | Inner Manipur | Phase 1 | 19-Apr-24 |
Manipur | Outer Manipur | Phase 1 | 19-Apr-24 |
Meghalaya | Shillong | Phase 1 | 19-Apr-24 |
Meghalaya | Tura | Phase 1 | 19-Apr-24 |
Mizoram | Mizoram | Phase 1 | 19-Apr-24 |
Nagaland | Nagaland | Phase 1 | 19-Apr-24 |
Puducherry | Puducherry | Phase 1 | 19-Apr-24 |
Rajasthan | Alwar | Phase 1 | 19-Apr-24 |
Rajasthan | Bharatpur | Phase 1 | 19-Apr-24 |
Rajasthan | Bikaner | Phase 1 | 19-Apr-24 |
Rajasthan | Churu | Phase 1 | 19-Apr-24 |
Rajasthan | Dausa | Phase 1 | 19-Apr-24 |
Rajasthan | Ganganagar | Phase 1 | 19-Apr-24 |
Rajasthan | Jaipur | Phase 1 | 19-Apr-24 |
Rajasthan | Jaipur Rural | Phase 1 | 19-Apr-24 |
Rajasthan | Jhunjhunu | Phase 1 | 19-Apr-24 |
Rajasthan | Karauli-Dholpur | Phase 1 | 19-Apr-24 |
Rajasthan | Nagaur | Phase 1 | 19-Apr-24 |
Rajasthan | Sikar | Phase 1 | 19-Apr-24 |
Sikkim | Sikkim | Phase 1 | 19-Apr-24 |
Tamil Nadu | Arakkonam | Phase 1 | 19-Apr-24 |
Tamil Nadu | Arani | Phase 1 | 19-Apr-24 |
Tamil Nadu | Chennai Central | Phase 1 | 19-Apr-24 |
Tamil Nadu | Chennai North | Phase 1 | 19-Apr-24 |
Tamil Nadu | Chennai South | Phase 1 | 19-Apr-24 |
Tamil Nadu | Chidambaram | Phase 1 | 19-Apr-24 |
Tamil Nadu | Coimbatore | Phase 1 | 19-Apr-24 |
Tamil Nadu | Cuddalore | Phase 1 | 19-Apr-24 |
Tamil Nadu | Dharmapuri | Phase 1 | 19-Apr-24 |
Tamil Nadu | Dindigul | Phase 1 | 19-Apr-24 |
Tamil Nadu | Erode | Phase 1 | 19-Apr-24 |
Tamil Nadu | Kallakurichi | Phase 1 | 19-Apr-24 |
Tamil Nadu | Kancheepuram | Phase 1 | 19-Apr-24 |
Tamil Nadu | Kanniyakumari | Phase 1 | 19-Apr-24 |
Tamil Nadu | Karur | Phase 1 | 19-Apr-24 |
Tamil Nadu | Krishnagiri | Phase 1 | 19-Apr-24 |
Tamil Nadu | Madurai | Phase 1 | 19-Apr-24 |
Tamil Nadu | Mayiladuthurai | Phase 1 | 19-Apr-24 |
Tamil Nadu | Nagapattinam | Phase 1 | 19-Apr-24 |
Tamil Nadu | Namakkal | Phase 1 | 19-Apr-24 |
Tamil Nadu | Nilgiris | Phase 1 | 19-Apr-24 |
Tamil Nadu | Perambalur | Phase 1 | 19-Apr-24 |
Tamil Nadu | Pollachi | Phase 1 | 19-Apr-24 |
Tamil Nadu | Ramanathapuram | Phase 1 | 19-Apr-24 |
Tamil Nadu | Salem | Phase 1 | 19-Apr-24 |
Tamil Nadu | Sivaganga | Phase 1 | 19-Apr-24 |
Tamil Nadu | Sriperumbudur | Phase 1 | 19-Apr-24 |
Tamil Nadu | Tenkasi | Phase 1 | 19-Apr-24 |
Tamil Nadu | Thanjavur | Phase 1 | 19-Apr-24 |
Tamil Nadu | Theni | Phase 1 | 19-Apr-24 |
Tamil Nadu | Thoothukkudi | Phase 1 | 19-Apr-24 |
Tamil Nadu | Tiruchirappalli | Phase 1 | 19-Apr-24 |
Tamil Nadu | Tirunelveli | Phase 1 | 19-Apr-24 |
Tamil Nadu | Tiruppur | Phase 1 | 19-Apr-24 |
Tamil Nadu | Tiruvallur | Phase 1 | 19-Apr-24 |
Tamil Nadu | Tiruvannamalai | Phase 1 | 19-Apr-24 |
Tamil Nadu | Vellore | Phase 1 | 19-Apr-24 |
Tamil Nadu | Viluppuram | Phase 1 | 19-Apr-24 |
Tamil Nadu | Virudhunagar | Phase 1 | 19-Apr-24 |
Tripura | Tripura West | Phase 1 | 19-Apr-24 |
Uttar Pradesh | Bijnor | Phase 1 | 19-Apr-24 |
Uttar Pradesh | Kairana | Phase 1 | 19-Apr-24 |
Uttar Pradesh | Moradabad | Phase 1 | 19-Apr-24 |
Uttar Pradesh | Muzaffarnagar | Phase 1 | 19-Apr-24 |
Uttar Pradesh | Nagina | Phase 1 | 19-Apr-24 |
Uttar Pradesh | Pilibhit | Phase 1 | 19-Apr-24 |
Uttar Pradesh | Rampur | Phase 1 | 19-Apr-24 |
Uttar Pradesh | Saharanpur | Phase 1 | 19-Apr-24 |
Uttarakhand | Almora | Phase 1 | 19-Apr-24 |
Uttarakhand | Garhwal | Phase 1 | 19-Apr-24 |
Uttarakhand | Hardwar | Phase 1 | 19-Apr-24 |
Uttarakhand | Nainital Udhamsingh Nagar | Phase 1 | 19-Apr-24 |
Uttarakhand | Tehri Garhwal | Phase 1 | 19-Apr-24 |
West Bengal | Alipurduars | Phase 1 | 19-Apr-24 |
West Bengal | Coochbehar | Phase 1 | 19-Apr-24 |
West Bengal | Jalpaiguri | Phase 1 | 19-Apr-24 |
ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 11 ಚುನಾವಣೆಗಳನ್ನು ನಡೆಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ಎಲ್ಲೆಡೆ ಶಾಂತಿಯುತವಾಗಿ ಚುನಾವಣೆ ನಡೆದಿದೆ. ಸುಳ್ಳು ಸುದ್ದಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕ್ರಮದಲ್ಲಿ ಹೆಚ್ಚಳವಾಗಿದೆ. ಇಡೀ ವಿಶ್ವವೇ ಭಾರತದ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಈ ಬಾರಿ 1.82 ಕೋಟಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. 49.7 ಕೋಟಿ ಪುರುಷ ಮತದಾರರು ಮತ್ತು 47.1 ಕೋಟಿ ಮಹಿಳಾ ಮತದಾರರಿದ್ದಾರೆ. 85 ವರ್ಷ ಮೇಲ್ಪಟ್ಟವರ ಸಂಖ್ಯೆ 82 ಲಕ್ಷ. 100 ವರ್ಷಕ್ಕಿಂತ ಮೇಲ್ಪಟ್ಟ 2 ಲಕ್ಷ 18 ಸಾವಿರ ಜನರಿದ್ದಾರೆ. 1.82 ಕೋಟಿ ಪ್ರಥಮ ಬಾರಿ ಮತದಾರರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ