ನವದೆಹಲಿ, ಜೂನ್ 1: ಲೋಕಸಭೆಗೆ ನಡೆದ ಚುನಾವಣೆಯ (Lok Sabha Elections) ಏಳು ಹಂತಗಳ ಮತದಾನ ಕೊನೆಗೊಂಡಿದ್ದು ಇದೀಗ ಎಕ್ಸಿಟ್ ಪೋಲ್ (Exit Poll) ಪ್ರಕಟವಾಗುತ್ತಿದೆ. ಟಿವಿ9, ಇಂಡಿಯಾ ಟುಡೇ ಸೇರಿದಂತೆ ವಿವಿಧ ಏಜೆನ್ಸಿಗಳು ನಡೆಸಿರುವ ಮತಗಟ್ಟೆ ಸಮೀಕ್ಷೆ ವಿವರಗಳ ಕ್ಷಣ ಕ್ಷಣದ ಅಪ್ಡೇಟ್ಸ್ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಲಭ್ಯವಿದೆ. ಲೋಕಸಭಾ ಚುನಾವಣೆಯ ಅಂತಿಮ ಹಂತದಲ್ಲಿ ಸಂಜೆ 5 ಗಂಟೆಯವರೆಗೆ ಶೇಕಡಾ 58.34ರಷ್ಟು ಮತದಾನವಾಗಿದೆ. ಬಿಹಾರ 48.86%, ಚಂಡೀಗಢ 62.80%, ಒಡಿಶಾ 62.46%, ಹಿಮಾಚಲ ಪ್ರದೇಶ 66.56%, ಜಾರ್ಖಂಡ್ 67.95%, ಪಂಜಾಬ್ 55.20%, ಯುಪಿಯಲ್ಲಿ ಶೇ 54ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇಕಡಾ 69.89ರಷ್ಟು ಮತದಾನವಾಗಿದೆ. 8 ರಾಜ್ಯ, ಕೇಂದ್ರಾಡಳಿತ ಪ್ರದೇಶ ಸೇರಿ 57 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.
ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
80 ಲೋಕಸಭಾ ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ, ಬಿಜೆಪಿ ಮೈತ್ರಿಕೂಟದ ಎನ್‌ಡಿಎ 69 ರಿಂದ 74 ಸ್ಥಾನ ಗಳಿಸುವ ಸಾಧ್ಯತೆ ಇದೆ. ಇಂಡಿಯಾ ಪಡೆ 6ರಿಂದ 11 ಸ್ಥಾನ ಗೆಲ್ಲಲಿದೆ ಅಂತ ಮ್ಯಾಟ್ರೀಜ್ ಮತ್ತದಾನೋತ್ತರ ಸಮೀಕ್ಷೆ ಹೇಳಿದೆ.
ವಿವರಗಳಿಗೆ ಓದಿ: ಎಕ್ಸಿಟ್ ಪೋಲ್: ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ದಿಗ್ವಿಜಯ ಸಾಧ್ಯತೆ
ಸಿ-ವೋಟರ್ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಎನ್‌ಡಿಎಗೆ 23 ರಿಂದ 25, ಕಾಂಗ್ರೆಸ್‌ಗೆ 3 ರಿಂದ 5 ಸ್ಥಾನ ದೊರೆಯುವ ಸಾಧ್ಯತೆ ಇದೆ.
ಹೆಚ್ಚಿನ ಎಲ್ಲ ಎಕ್ಸಿಟ್ ಪೋಲ್ಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚು ಸ್ಥಾನ ದೊರೆತಿದೆ.
#Karnataka #ExitPollResults ಬಹುತೇಕ ಎಕ್ಸಿಟ್ ಪೋಲ್ಗಳು ಹೇಳೋದು ಒಂದೇ; ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚು ಸ್ಥಾನ#NDA #Congress #BJP #ExitPollpredictions @BJP4Karnataka @BasanagoudaBJP @RAshokaBJP @BYVijayendra https://t.co/iHwq6oqWIe
— TV9 Kannada (@tv9kannada) June 1, 2024
ಟುಡೇಸ್ ಚಾಣಕ್ಯ ಮತಗಟ್ಟೆ ಸಮೀಕ್ಷೆಯ ಪ್ರಕಾರ, ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿಗೆ 24 ಸ್ಥಾನ ದೊರೆಯಲಿದೆ. ಕಾಂಗ್ರೆಸ್‌ಗೆ ಸ್ಥಾನ ದೊರೆಯಲಿದೆ.
#TCPoll
Karnataka LS 2024
Seat Projection
BJP+ 24 ± 4 Seats
Congress 4 ± 4 Seats
Others NIL#News24TodaysChanakyaAnalysis@news24tvchannel— Today’s Chanakya (@TodaysChanakya) June 1, 2024
ಎನ್ಡಿಟಿವಿ ಮತಗಟ್ಟೆ ಸಮೀಕ್ಷೆಯಲ್ಲಿ ಎನ್‌ಡಿಎಗೆ 350 + ಸ್ಥಾನ ದೊರೆಯುವ ಭರವಸೆ ವ್ಯಕ್ತಪಡಿಸಲಾಗಿದೆ.
Exit Polls: NDA set to win 350+ seats
Congratulations @narendramodi ji Once Again 🚩#ExitPoll pic.twitter.com/gBEils1CKz
— Elvish Army (Fan Account) (@elvisharmy) June 1, 2024
ಇದುವರೆಗೂ ಬಿಜೆಪಿ ಸಂಸದರೇ ಇಲ್ಲದ ತಮಿಳುನಾಡಿನಲ್ಲಿ ಕೂಡ ಈ ಬಾರಿ 1ರಿಂದ 3 ಸ್ಥಾನಗಳು ಬಿಜೆಪಿ ಪಾಲಾಗಲಿವೆ ಎಂದು ಎಕ್ಸಿಟ್ ಪೋಲ್ ಹೇಳಿದೆ.
ಮಧ್ಯಪ್ರದೇಶದಲ್ಲಿ 29 ಲೋಕಸಭಾ ಸ್ಥಾನಗಳಿವೆ. ಇಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಟಿವಿ9, ಪೋಲ್‌ಸ್ಟ್ರಾಟ್ ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಕಲಿ ಕಮಲ್ ನಾಥ್ ಅವರ ಭದ್ರಕೋಟೆಯಲ್ಲಿ ಬಿಜೆಪಿ ಈ ಬಾರಿ ಭರ್ಜರಿ ಪ್ರದರ್ಶನ ನೀಡಲಿದೆ. ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಛಿಂದ್ವಾರಾ ಕ್ಷೇತ್ರದಲ್ಲಿ ಸೋಲಬಹುದು ಎಂದು ಸಮೀಕ್ಷೆ ಹೇಳಿದೆ.
ಟಿವಿ9, ಪೋಲ್‌ಸ್ಟ್ರಾಟ್ ಮತ್ತು ಪೀಪಲ್ಸ್ ಇನ್‌ಸೈಟ್‌ನ ಎಕ್ಸಿಟ್ ಪೋಲ್‌ನಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲ್ಲಬಹುದು ಎನ್ನಲಾಗಿದೆ. ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಬಹುದು ಎಂದೂ ಉಲ್ಲೇಖಿಸಲಾಗಿದೆ.
ಯಾವುದೇ ಎಕ್ಸಿಟ್ ಪೋಲ್ ಬಗ್ಗೆ ನಂಬಿಕೆ ಇಲ್ಲ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕದಲ್ಲಿ ಡಬ್ಬಲ್ ಡಿಜಿಟ್ ಹೋಗಿಯೇ ಹೋಗುತ್ತದೆ. ಈಗ ಪ್ರಕಟವಾಗುತ್ತಿರುವ ಚುನಾವಣಾ ಸಮೀಕ್ಷೆ ಬಗ್ಗೆ ನನಗೆ ವಿಶ್ವಾಸ ಇಲ್ಲ. ಕೆಲವರ ಅಭಿಪ್ರಾಯ ಮಾತ್ರ ಸಂಗ್ರಹಿಸಿರುತ್ತಾರೆ ಅಷ್ಟೇ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನ ನಂತರ ಕೇರಳದ ಅಂಕಿಅಂಶಗಳೂ ಹೊರಬಿದ್ದಿವೆ. ಇಲ್ಲಿ 20 ಲೋಕಸಭಾ ಸ್ಥಾನಗಳಿವೆ. ಕಾಂಗ್ರೆಸ್ 13 ಸ್ಥಾನಗಳನ್ನು ಪಡೆಯಬಹುದು. ಸಿಪಿಐ (ಎಂ) 2 ಸ್ಥಾನಗಳನ್ನು ಪಡೆದರೆ, ಸಿಪಿಐ 1 ಸ್ಥಾನವನ್ನು ಪಡೆಯಬಹುದು. ಇಲ್ಲಿ ಬಿಜೆಪಿ ಖಾತೆ ತೆರೆಯುತ್ತಿದೆ. ಬಿಜೆಪಿ 1 ಸ್ಥಾನವನ್ನು ಪಡೆಯಬಹುದು.
ಕರ್ನಾಟಕದಲ್ಲಿ ಬಿಜೆಪಿ ಸೋಲನ್ನು ಎದುರಿಸುತ್ತಿದೆ. 2019 ರಲ್ಲಿ ಅದು 25 ಸ್ಥಾನಗಳನ್ನು ಗೆದ್ದಿತ್ತು, ಆದರೆ ನಿರ್ಗಮನ ಸಮೀಕ್ಷೆಗಳ ಪ್ರಕಾರ ಈ ಚುನಾವಣೆಯಲ್ಲಿ ಅದು 18 ಸ್ಥಾನಗಳನ್ನು ಪಡೆಯಬಹುದು. ಅದೇ ಸಮಯದಲ್ಲಿ ಕಾಂಗ್ರೆಸ್ 8 ಸ್ಥಾನಗಳನ್ನು ಪಡೆಯಬಹುದು. ಜೆಡಿಎಸ್ 2 ಸ್ಥಾನ ಪಡೆಯಬಹುದು ಎಂದು ಟಿವಿ9 ಪೋಲ್‌ಸ್ಟ್ರಾಟ್ ಸಮೀಕ್ಷೆ ಭವಿಷ್ಯ ನುಡಿದಿದೆ.
ವಿವರಗಳಿಗೆ ಓದಿ: ಕರ್ನಾಟಕದಲ್ಲಿ ಗ್ಯಾರಂಟಿ ‘ಕೈ’ ಹಿಡಿದನೇ ಮತದಾರ? ಟಿವಿ9 ಪೋಲ್‌ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ವಿವರ ಇಲ್ಲಿದೆ
ತೆಲಂಗಾಣದ ಎಕ್ಸಿಟ್ ಪೋಲ್ ಕೂಡ ಪ್ರಕಟವಾಗಿದೆ. ಇಲ್ಲಿ ಬಿಜೆಪಿ ಎರಡನೇ ದೊಡ್ಡ ಪಕ್ಷವಾಗಬಹುದು. 7 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕಾಂಗ್ರೆಸ್ 8 ಸ್ಥಾನ ಗಳಿಸಬಹುದು. ಎಐಎಂಐಎಂ ಮುಖ್ಯಸ್ಥ ಓವೈಸಿ ಹೈದರಾಬಾದ್‌ನಿಂದ ಚುನಾವಣೆ ಗೆಲ್ಲಬಹುದು ಎಂದು ಸಮೀಕ್ಷೆ ಫಲಿತಾಂಶಗಳು ತಿಳಿಸಿವೆ.
ಆಂಧ್ರಪ್ರದೇಶದಲ್ಲಿ 25 ಲೋಕಸಭಾ ಸ್ಥಾನಗಳಿವೆ. ಇಲ್ಲಿ ಬಿಜೆಪಿ 2, ಕಾಂಗ್ರೆಸ್ 0, ವೈಎಸ್‌ಆರ್‌ಸಿಪಿ 13 ಮತ್ತು ಟಿಡಿಪಿ 9 ಸ್ಥಾನಗಳನ್ನು ಪಡೆಯಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ತಿಳಿಸಿವೆ.
ಬಹುತೇಕ ಎಲ್ಲ ಎಕ್ಸಿಟ್ಪೋಲ್ಗಳಲ್ಲಿಯೂ ಎನ್‌ಡಿಎ ಮೈತ್ರಿಕೂಟ ಭರ್ಜರಿ ಬಹುಮತ ಸಾಧಿಸುವ ಸುಳಿವು ದೊರೆತಿದೆ. ಕೆಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ಸ್ವೀಪ್ ಮಾಡಿರುವ ಬಗ್ಗೆಯೂ ಕೆಲವು ಸಮೀಕ್ಷೆಗಳು ಉಲ್ಲೇಖಿಸಿವೆ. ಯಾವೆಲ್ಲ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್? ತಿಳಿಯಲಿ ಲಿಂಕ್ ಕ್ಲಿಕ್ ಮಾಡಿ
ಟಿವಿ9 ಪೋಲ್‌ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ ಐದು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ಸ್ವೀಪ್ ಸಾಧನೆ ಮಾಡಿದೆ. ಆ ಕುರಿತ ವಿವರಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ: ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ, ಟಿವಿ9 ಪೋಲ್‌ಸ್ಟ್ರಾಟ್ ಎಕ್ಸಿಟ್ ಪೋಲ್ ವಿವರ ಇಲ್ಲಿದೆ
ನ್ಯೂಸ್‌ಎಕ್ಸ್ ಮತದಾನೋತ್ತರ ಸಮೀಕ್ಷೆ ಪ್ರಕಾರ ಎನ್‌ಡಿಎಗೆ 371, ಇಂಡಿಯಾ ಮೈತ್ರಿಕೂಟಕ್ಕೆ 125, ಇತರರಿಗೆ 47 ಸ್ಥಾನ ದೊರೆಯಲಿದೆ.
ಟಿವಿ9 ಪೋಲ್‌ಸ್ಟ್ರಾಟ್ ಎಕ್ಸಿಟ್ ಪೋಲ್ ಪ್ರಕಾರ ಈ ಬಾರಿ ಕೇರಳದಲ್ಲಿ ಬಿಜೆಪಿಗೆ ಒಂದು ಸ್ಥಾನ ದೊರೆಯಲಿದೆ.
ಜನ್‌ಕೀ ಬಾತ್ ಮತದಾನೋತ್ತರ ಸಮೀಕ್ಷೆಯಲ್ಲಿ ಎನ್‌ಡಿಎಗೆ 377, ಇಂಡಿಯಾಗೆ 151, ಇತರರಿಗೆ 15 ಸ್ಥಾನದ ಭವಿಷ್ಯ ನುಡಿಯಲಾಗಿದೆ.
ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ ಎನ್‌ಡಿಎ 353 ರಿಂದ 368 ಸ್ಥಾನ, ಇಂಡಿಯಾ ಮೈತ್ರಿಕೂಟ 118-133 ಸ್ಥಾನ, ಇತರರು 43-48 ಸ್ಥಾನ ಗಳಿಸಲಿದೆ.
ರಿಪಬ್ಲಿಕ್ ಟಿವಿ, ಪಿಎಂಎಆರ್‌ಕ್ಯೂ ಮತದಾನೋತ್ತರ ಸಮೀಕ್ಷೆಯಂತೆ ಬಿಜೆಪಿಗೆ 359 ಸ್ಥಾನ, ಇಂಡಿಯಾ ಮೈತ್ರಿಕೂಟಕ್ಕೆ 154 ಸ್ಥಾನ ಸಾಧ್ಯತೆ ಘೋಷಿಸಲಾಗಿದೆ. ಇತರರಿಗೆ 30 ಸ್ಥಾನ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಲೋಕ್‌ಪೋಲ್ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಎನ್‌ಡಿಎಗೆ 325 ರಿಂದ 335, ಇಂಡಿಯಾ ಮೈತ್ರಿಕೂಟಕ್ಕೆ 155-165, ಇತರರಿಗೆ 48-55ದ ಮುನ್ಸೂಚನೆ ನೀಡಲಾಗಿದೆ.
ಟಿವಿ9 ಪೋಲ್‌ಸ್ಟ್ರಾಟ್ ಎಕ್ಸಿಟ್ ಪೋಲ್ ಬಿಡುಗಡೆಯಾಗಿದೆ. ಇದರ ಪ್ರಕಾರ, ಕೇಂದ್ರದಲ್ಲಿ ಮೂರನೇ ಬಾರಿಗೆ ಮೋದಿ ಸರ್ಕಾರ ಬರುವುದು ಖಚಿತವಾಗಿದೆ. ಆದಾಗ್ಯೂ ಈ ಬಾರಿ ಕಾಂಗ್ರೆಸ್, ‘ಇಂಡಿಯಾ’ ಮೈತ್ರಿಕೂಟದ ಬಲ ತುಸು ವೃದ್ಧಿಯಾಗಿದೆ. ಮತಗಟ್ಟೆ ಸಮೀಕ್ಷೆಯ ಪೂರ್ಣ ವಿವರ ಇಲ್ಲಿದೆ. ಟಿವಿ9 ಪೋಲ್‌ಸ್ಟ್ರಾಟ್ ಎಕ್ಸಿಟ್ ಪೋಲ್ ಅಂಕಿಅಂಶಗಳ ವಿವರಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ, ಟಿವಿ9 ಪೋಲ್‌ಸ್ಟ್ರಾಟ್ ಎಕ್ಸಿಟ್ ಪೋಲ್ ವಿವರ ಇಲ್ಲಿದೆ
ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷಾ ವರದಿ ಪ್ರಕಟವಾಗಿದ್ದು, ಟಿವಿ9 ಪೋಲ್‌ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿ ಈ ಬಾರಿ 18 ಸ್ಥಾನಗಳನ್ನು ಪಡೆಯಲಿದ್ದು, ಎನ್‌ಡಿಎ 20 ಸ್ಥಾನಗಳನ್ನು ಪಡೆಯಲಿದೆ. ಅತ್ತ ಕಾಂಗ್ರೆಸ್ ಕೇವಲ 8 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ. ಕಳೆದ ಬಾರಿ 1 ಸ್ಥಾನವನ್ನಷ್ಟೇ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಬಲ ವೃದ್ಧಿಸಿಕೊಂಡಿದೆ. ಜೆಡಿಎಸ್ 2 ಸ್ಥಾನ ಗಳಿಸಲಿದೆ. ಪಕ್ಷೇತರರು ರಾಜ್ಯದಲ್ಲಿ ಒಂದು ಸ್ಥಾನ ಕೂಡ ಗಳಿಸಿಲ್ಲ.
ವಿವರಗಳಿಗೆ ಓದಿ: ಕರ್ನಾಟಕದಲ್ಲಿ ಗ್ಯಾರಂಟಿ ‘ಕೈ’ ಹಿಡಿದನೇ ಮತದಾರ? ಟಿವಿ9 ಪೋಲ್‌ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ವಿವರ ಇಲ್ಲಿದೆ
ಲೋಕಸಭಾ ಚುನಾವಣೆಯ ಅಂತಿಮ ಹಂತದಲ್ಲಿ ಸಂಜೆ 5 ಗಂಟೆಯವರೆಗೆ ಶೇಕಡಾ 58.34ರಷ್ಟು ಮತದಾನವಾಗಿದೆ. ಬಿಹಾರ 48.86%, ಚಂಡೀಗಢ 62.80%, ಒಡಿಶಾ 62.46%, ಹಿಮಾಚಲ ಪ್ರದೇಶ 66.56%, ಜಾರ್ಖಂಡ್ 67.95%, ಪಂಜಾಬ್ 55.20%, ಯುಪಿಯಲ್ಲಿ ಶೇ.54ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇಕಡಾ 69.89ರಷ್ಟು ಮತದಾನವಾಗಿದೆ. 8 ರಾಜ್ಯ, ಕೇಂದ್ರಾಡಳಿತ ಪ್ರದೇಶ ಸೇರಿ 57 ಕ್ಷೇತ್ರಗಳಲ್ಲಿ ನಡೆದ ಮತದಾನ ನಡೆದಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಇಂಡಿಯಾ ಮೈತ್ರಿಕೂಟವು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯ ನಂತರ ಮಾತನಾಡಿದ ಅವರು, ನಿರುದ್ಯೋಗ, ಬೆಲೆ ಏರಿಕೆ, ಜಿಎಸ್‌ಟಿಯ ಭೂಕಂಪ ಸಂಭವಿಸಿದೆ ಎಂದು ಅವರು ಹೇಳಿದರು.
ಇಂಡಿಯಾ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ 295 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಭೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ಬಗ್ಗೆ ಚರ್ಚಿಸಿದ್ದೇವೆ. ಎರಡೂವರೆ ಗಂಟೆ ಕಾಲ ಮೈತ್ರಿಕೂಟದ ನಾಯಕರು ಚರ್ಚಿಸಿದ್ದೇವೆ. ಇಂಡಿಯಾ ಮೈತ್ರಿಕೂಟ 295 ಕ್ಷೇತ್ರ ಗೆಲ್ಲಲಿದೆ. ಇದು ಜನತೆ ಮಾಡಿರುವ ಸರ್ವೆ, ಜನರು ನಮಗೆ ಮಾಹಿತಿ ನೀಡಿದ್ದಾರೆ. ಆಡಳಿತದಲ್ಲಿರುವ ಸರ್ಕಾರಗಳು ಸರ್ವೆ ನಡೆಸುತ್ತಿರುತ್ತವೆ. ಆದರೆ ನಮ್ಮದು ಸತ್ಯದ ಸರ್ವೆ, ನಾವು 295 ಸ್ಥಾನ ಗೆಲ್ಲುತ್ತೇವೆ ಎಂದರು.
ಟಿವಿ9, ಆಜ್ತಕ್, ಅಬಿಪಿ ನ್ಯೂಸ್, ಝೀ ನ್ಯೂಸ್, ಇಂಡಿಯಾ ಟಿವಿ ಸೇರಿದಂತೆ ಅನೇಕ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ನಡೆಸಿವೆ.
Published On - 6:25 pm, Sat, 1 June 24