AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾದಲ್ಲಿ ಗೆಲುವಿನತ್ತ ಬಿಜೆಪಿ; ಮೊದಲ ಬಾರಿಗೆ ಮಗಧ ನಾಡಿನಲ್ಲಿ ಕಮಲ ಬಾವುಟ?

Odisha Assembly Election Results 2024: ಒಡಿಶಾ ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿಯುವ ಸನ್ನಾಹದಲ್ಲಿದೆ. ಅಲ್ಲಿಯ 147 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾಗಿರುವ 74 ಸ್ಥಾನಗಳನ್ನು ಗೆಲ್ಲುವತ್ತ ಬಿಜೆಪಿ ಸಾಗಿದೆ. ಮಧ್ಯಾಹ್ನ 12 ಗಂಟೆ ವೇಳೆ ಬಿಜೆಪಿ 78 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ಸರಳ ಬಹುಮತ ಗಳಿಸುವ ಸಾಧ್ಯತೆ ಇದೆ. ಒಡಿಶಾದಲ್ಲಿ ಬಿಜೆಡಿ ಸತತ ಐದು ಬಾರಿ ಅಧಿಕಾರದಲ್ಲಿದೆ. ಕಾಂಗ್ರೆಸ್ ಪಕ್ಷ 2000ರವರೆಗೆ ಎಂಟು ಬಾರಿ ಅಧಿಕಾರದಲ್ಲಿತ್ತು.

ಒಡಿಶಾದಲ್ಲಿ ಗೆಲುವಿನತ್ತ ಬಿಜೆಪಿ; ಮೊದಲ ಬಾರಿಗೆ ಮಗಧ ನಾಡಿನಲ್ಲಿ ಕಮಲ ಬಾವುಟ?
ಒಡಿಶಾ ಬಿಜೆಪಿ ನಾಯಕ ಮನಮೋಹನ್ ಸಮಾಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 04, 2024 | 1:12 PM

Share

ಭುವನೇಶ್ವರ್, ಜೂನ್ 4: ಭಾರತೀಯ ಜನತಾ ಪಕ್ಷ ಒಡಿಶಾದಲ್ಲಿ (Odisha assembly elections) ಕೇಸರಿ ಬಾವುಟ ಹಾರಿಸುವ ಸಾಧ್ಯತೆ ಕಾಣುತ್ತಿದೆ. ಲೋಕಸಭೆ ಚುನಾವಣೆಯ ಜೊತೆ ನಡೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಒಡಿಶಾದೂ ಒಂದು. 147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ ಬಹುಮತಕ್ಕೆ 74 ಸ್ಥಾನಗಳ ಅವಶ್ಯಕತೆ ಇದೆ. ಮಧ್ಯಾಹ್ನ 12 ಗಂಟೆಗೆ ಬಂದಿರುವ ಟ್ರೆಂಡ್ ಪ್ರಕಾರ ಬಿಜೆಪಿ 78 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. 2000ರಿಂದ 23 ವರ್ಷ ಕಾಲ ಸತತವಾಗಿ ಅಧಿಕಾರದಲ್ಲಿದ್ದ ಬಿಜೆಡಿ 54 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ಕಾಂಗ್ರೆಸ್ ಪಕ್ಷ 11 ಸ್ಥಾನಗಳಲ್ಲಿ ಮಾತ್ರ ಮುನ್ನಡೆಯ ತೃಪ್ತಿ ಹೊಂದಿದೆ.

ಬಿಜೆಪಿ ಗೆದ್ದರೆ ಇತಿಹಾಸ…

ಒಡಿಶಾ ರಾಜ್ಯದಲ್ಲಿ ಹಿಂದಿನ 16 ವಿಧಾನಸಭೆಯಲ್ಲಿ ಬಿಜೆಪಿಯಾಗಲೀ ಅದರ ಹಿಂದಿನ ಅವತಾರವಾದ ಜನಸಂಘವಾಗಲೀ ಒಮ್ಮೆಯೂ ಅಧಿಕಾರ ಪಡೆದಿಲ್ಲ. ಈಗ 17ನೇ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆ ರಾಜ್ಯದಲ್ಲಿ ಕೇಸರಿ ಬಾವುಟ ಹಾರಾಡುವಂತಿದೆ.

ಇದನ್ನೂ ಓದಿ: Andhra Pradesh Election Results 2024 Updates: 175 ಅಸೆಂಬ್ಲಿ ಸ್ಥಾನಗಳಲ್ಲಿ ಟಿಡಿಪಿ 30 ಮತ್ತು 2 ಲೋಕಸಭೆ ಸ್ಥಾನಗಳಲ್ಲಿ ಮುನ್ನಡೆ

ಸತತ ಆರನೇ ಬಾರಿ ಚುನಾವಣೆ ಗೆಲ್ಲುವ ಬಿಜು ಜನತಾ ದಳದ ಆಸೆಗೆ ಬಿಜೆಪಿ ತಣ್ಣೀರು ಎರಚಿದಂತಿದೆ. 2000ರ ಚುನಾವಣೆಯಲ್ಲಿ ಬಿಜೆಪಿ 38 ಸ್ಥಾನಗಳನ್ನು ಗೆದ್ದಿತ್ತು. ಒಡಿಶಾ ಇತಿಹಾಸದಲ್ಲಿ ಬಿಜೆಪಿ ಅಷ್ಟು ಸ್ಥಾನಗಳನ್ನು ಗೆದ್ದಿದ್ದು ಅದರ ಗರಿಷ್ಠ ಮಟ್ಟವಾಗಿತ್ತು. 2004ರಲ್ಲಿ ಬಿಜೆಪಿ 32 ಸ್ಥಾನ ಜಯಿಸಿತ್ತು. ಅದಾದ ಬಳಿಕ ಬಿಜೆಪಿ ಈಗ ಸರ್ವಶ್ರೇಷ್ಠ ಪ್ರದರ್ಶನ ತೋರಿದೆ. ಎರಡು ದಶಕಗಳ ಬಿಜೆಡಿ ಆಡಳಿತವನ್ನು ಬಿಜೆಪಿ ಕೊನೆಗಾಣಿಸುತ್ತಿದೆ.

2000ರಲ್ಲಿ ಬಿಜೆಡಿ ಅಧಿಕಾರ ಹಿಡಿಯುವ ಮುನ್ನ ನಡೆದ 11 ಚುನಾವಣೆಯಲ್ಲಿ ಎಂಟು ಬಾರಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರ ಪಡೆದಿತ್ತು. ಜನತಾ ಪಕ್ಷ 1977ರಲ್ಲಿ ಅಧಿಕಾರಕ್ಕೆ ಬಂದಿತು. 2000ರ ಹೊತ್ತಿಗೆ ಜನತಾ ಪಕ್ಷ ವಿವಿಧ ಹೋಳುಗಳಾಗಿ ಕೊನೆಗೆ ಬಿಜು ಜನತಾ ದಳ ಒಡಿಶಾದಲ್ಲಿ ನೆಲೆ ನಿಂತಿತು. 2000ರಿಂದ 23 ವರ್ಷ ಕಾಲ ನವೀನ್ ಪಾಟ್ನಾಯಕ್ ನೇತೃತ್ವದಲ್ಲಿ ಬಿಜೆಡಿ ಸತತವಾಗಿ ಆಡಳಿತ ನಡೆಸಿ ಇತಿಹಾಸ ಸೃಷ್ಟಿಸಿತ್ತು. ಈಗ ಬಿಜೆಪಿಯಿಂದ ಹೊಸ ಅಧ್ಯಾಯ ಆರಂಭವಾಗುತ್ತಿದೆ.

ಇದನ್ನೂ ಓದಿ: ಲೋಕಸಭೆ ಫಲಿತಾಂಶ: ಮತ ಎಣಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಚುನಾವಣಾ ಆಯೋಗದ ನಿಯಮಗಳೇನು? ಇಲ್ಲಿದೆ ವಿವರ

ನವೀನ್ ಪಾಟ್ನಾಯಕ್ ವರ್ಚಸ್ಸು ಕಡಿಮೆ ಆಯಿತಾ?

ಒಡಿಶಾದಲ್ಲಿ ಐದು ಅವಧಿ ಸಿಎಂ ಆಗಿದ್ದ ನವೀನ್ ಪಾಟ್ನಾಯಕ್ ಅವರು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಮೋಡಿ ಮಾಡಿದ್ದರು. ಭ್ರಷ್ಟಾಚಾರ ಸೇರಿದಂತೆ ಯಾವುದೇ ಕಳಂಕ ಇಲ್ಲದೆ ಸ್ವಚ್ಛ ಆಡಳಿತವನ್ನು ಪಾಟ್ನಾಯಕ್ ನೀಡಿದ್ದರು. ಆದರೆ, ಇತ್ತೀಚೆಗೆ ಅವರು ಅನಾರೋಗ್ಯಗೊಂಡಿರುವ ಸುದ್ದಿ ದಟ್ಟವಾಗಿ ಹಬ್ಬಿತ್ತು. ಇದು ಅವರ ವರ್ಚಸ್ಸು ಕಡಿಮೆ ಆಗಿರಬಹುದಾದ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Tue, 4 June 24