ಲೋಕಸಭೆ ಫಲಿತಾಂಶ: ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ಗೆ ಕೈಕೊಟ್ಟ ‘ಗ್ಯಾರಂಟಿ’!
ಲೋಕಸಭೆ ಚುನಾವಣೆ ಫಲಿತಾಂಶ 2024: ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ದೇಶದಲ್ಲಿ ಅತಂತ್ರ ಲೋಕಸಭೆಯ ಸುಳಿವು ದೊರೆತಿದೆ. ಆದಾಗ್ಯೂ ಎನ್ಡಿಎ ಮಿತ್ರಪಕ್ಷಗಳು ಸರಳ ಬಹುಮತದ ಗೆರೆ ದಾಟಿ ಮುನ್ನಡೆ ಕಾಯ್ದುಕೊಂಡಿವೆ. ಆದರೆ, ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಆಡಳಿತಾರೂಢ ಕಾಂಗ್ರೆಸ್ಗೆ ಗ್ಯಾರಂಟಿ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಕೈಹಿಡಿದಂತಿಲ್ಲ.
ಬೆಂಗಳೂರು, ಜೂನ್ 4: ಲೋಕಸಭೆ ಚುನಾವಣೆಯ ಮತ ಎಣಿಕೆ (Lok Sabha Election result) ಪ್ರಗತಿಯಲ್ಲಿದ್ದು, ಫಲಿತಾಂಶ ಬಹುತೇಕ ನಿಕ್ಕಿಯಾಗುತ್ತಿದೆ. ಈ ಮಧ್ಯೆ ಕರ್ನಾಟಕ (Karnataka) ಮತ್ತು ತೆಲಂಗಾಣದಲ್ಲಿ ‘ಗ್ಯಾರಂಟಿ’ ಯೋಜನೆಗಳು (Guarantee Schemes) ‘ಕೈ’ಹಿಡಿಯಬಹುದು ಎಂದು ಭಾವಿಸಿದ್ದ ಆಡಳಿತಾರೂಢ ಕಾಂಗ್ರೆಸ್ಗೆ ತುಸು ಹಿನ್ನಡೆಯಾಗಿದೆ. ಕರ್ನಾಟಕದಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಕಾಂಗ್ರೆಸ್ 10 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 16ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಎಸ್ 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಮತ್ತೊಂದೆಡೆ, ತೆಲಂಗಾಣದಲ್ಲಿ ಸಹ ಕಾಂಗ್ರೆಸ್ ಕೇವಲ 8 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 8 ಸ್ಥಾನಗಳಲ್ಲಿ ಮುನ್ನಡೆಯಲ್ಲದೆ. ಇತರರು 1 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.
ಕರ್ನಾಟದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಹೋದರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪ್ರತಿಸ್ಪರ್ಧಿ ಬಿಜೆಪಿಯ ಡಾ. ಸಿಎನ್ ಮಂಜುನಾಥ್ ವಿರುದ್ಧ ಸುಮಾರು 1 ಲಕ್ಷ ಮತಗಳ ಹಿನ್ನಡೆಯಲ್ಲಿದ್ದಾರೆ. ಸ್ವತಃ ಡಿಸಿಎಂ ಸಹೋದರನೇ ಸೋಲಿನತ್ತ ಸಾಗಿರುವುದು ಕಾಂಗ್ರೆಸ್ ಮುಖಭಂಗಕ್ಕೆ ಕಾರಣವಾಗಿದೆ.
ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ಡಾ. ಸಿಎನ್ ಮಂಜುನಾಥ್ 1 ಲಕ್ಷ ಲೀಡ್ ದಾಟಿದ ಬೆನ್ನಲ್ಲೇ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ#LokSabhaResult #DrCNManjunath #BJP #Guarantee #Telangana #KannadaNews pic.twitter.com/tI5jmt2CvQ
— TV9 Kannada (@tv9kannada) June 4, 2024
ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಸಿಎನ್ ಮಂಜುನಾಥ್ 1ಲಕ್ಷ ಲೀಡ್ ದಾಟಿದ ಬೆನ್ನಲ್ಲೇ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಮತ್ತೊಂದೆಡೆ, ಡಿಕೆ ಸುರೇಶ್ಗೆ ಹಿನ್ನಡೆಯ ಕಾರಣ ಡಿಕೆ ಶಿವಕುಮಾರ್ ಮನೆಯತ್ತ ನಾಯಕರು, ಬೆಂಬಲಿಗರು, ಕಾರ್ಯಕರ್ತರು ಸುಳಿಯುತ್ತಿಲ್ಲ. ಸದಾ ಬೆಂಬಲಿಗರಿಂದ ಗಿಜುಗುಡುತ್ತಿದ್ದ ಡಿಕೆಶಿ ನಿವಾಸ ಬಿಕೋ ಎನ್ನುತ್ತಿದೆ. ಅತ್ತ ಮನೆಯಿಂದ ಹೊರಗೆ ಬಾರದ ಡಿಕೆ ಬ್ರದರ್ಸ್, ಮನೆಯಲ್ಲೇ ಕುಳಿತು ಫಲಿತಾಂಶ ವೀಕ್ಷಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ
ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ