Stock Market Updates: ಇದು ಪಕ್ಕಾ ಬಿಸಿನೆಸ್; ಬೆಳಗಿನ ಮೊದಲ 5 ನಿಮಿಷದಲ್ಲಿ ಷೇರುಪೇಟೆ ಪ್ರಪಾತಕ್ಕೆ ಬೀಳಲು ಏನು ಕಾರಣ?

Stock Market Falling, Know the reasons: ನಿನ್ನೆ ಸೋಮವಾರ ಸಿಕ್ಕಾಪಟ್ಟೆ ಏರಿದ್ದ ಷೇರು ಮಾರುಕಟ್ಟೆ ಇಂದು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ರಭಸವಾಗಿ ಕುಸಿತ ಕಂಡಿದೆ. ವ್ಯವಹಾರ ಆರಂಭವಾದ ಮೊದಲ 15 ನಿಮಿಷದಲ್ಲಿ ಹೆಚ್ಚಿನ ಡ್ಯಾಮೇಜ್ ಆಗಿದೆ. 9 ಲಕ್ಷ ಕೋಟಿ ರೂನಷ್ಟು ನಷ್ಟವಾಗಿದೆ. ಅನುಭವಿಗಳು ಹೇಳುವ ಪ್ರಕಾರ ಇದಕ್ಕೆ ಕಾರಣ ಪ್ರಾಫಿಟ್ ಬುಕಿಂಗ್. ಷೇರುಬೆಲೆ ದಿಢೀರ್ ಉಬ್ಬಿದಾಗ ಅದು ಕಡಿಮೆಗೊಳ್ಳುವ ಮುನ್ನ ಲಾಭಕ್ಕೆ ಮಾರುವುದು ಸಹಜ ತಂತ್ರ.

Stock Market Updates: ಇದು ಪಕ್ಕಾ ಬಿಸಿನೆಸ್; ಬೆಳಗಿನ ಮೊದಲ 5 ನಿಮಿಷದಲ್ಲಿ ಷೇರುಪೇಟೆ ಪ್ರಪಾತಕ್ಕೆ ಬೀಳಲು ಏನು ಕಾರಣ?
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Jun 04, 2024 | 11:37 AM

ಮುಂಬೈ, ಜೂನ್ 4: ಷೇರು ಮಾರುಕಟ್ಟೆ ಇಂದು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಅಕ್ಷರಶಃ ರಕ್ತದೋಕುಳಿ (Share market blood bath) ಕಂಡಿತು. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಎಲ್ಲಾ ಸೂಚ್ಯಂಕಗಳು ಪ್ರಪಾತಕ್ಕೆ ಬಿದ್ದವು. ಕೇವಲ 15 ನಿಮಿಷದಲ್ಲಿ ಹೂಡಿಕೆದಾರರಿಗೆ (investors’ money) 9 ಲಕ್ಷ ಕೋಟಿ ರೂ ನಷ್ಟವಾಯಿತು. ಅದಾದ ಬಳಿಕ ಕ್ರಮೇಣವಾಗಿ ಷೇರು ಮಾರುಕಟ್ಟೆ ಮತ್ತೆ ಸಕಾರಾತ್ಮಕವಾಗಿ ವರ್ತಿಸಲು ಆರಂಭಿಸಿದೆ. ಒಂದೊಂದೇ ಷೇರುಗಳು ಹಸಿರು ಬಣ್ಣಕ್ಕೆ ತಿರುಗುತ್ತಿವೆ. ಆದರೆ, ಆರಂಭದ 15 ನಿಮಿಷದಲ್ಲಿ ಮಾರುಕಟ್ಟೆ ಆಗಿದ್ದಾದರೂ ಏನು?

ಪ್ರಾಫಿಟ್ ಬುಕಿಂಗ್ ಎಂಬ ತಂತ್ರ; ಇದು ಪಕ್ಕಾ ಬಿಸಿನೆಸ್

ಷೇರು ಮಾರುಕಟ್ಟೆ ಎಂಬುದು ಜನರು ಲಾಭಕ್ಕೆ ವ್ಯವಹರಿಸುವ ಒಂದು ಅಡ್ಡೆ. ಇಲ್ಲಿ ರೀಟೇಲ್ ಹೂಡಿಕೆದಾರರು (ಜನಸಾಮಾನ್ಯರು), ದೊಡ್ಡ ಹೂಡಿಕೆದಾರರು, ಮ್ಯೂಚುವಲ್ ಫಂಡ್ಸ್ ಹೂಡಿಕೆದಾರರು ಹೀಗೆ ಇರುತ್ತಾರೆ. ಎಲ್ಲರೂ ಕೂಡ ಲಾಭದ ಅವಕಾಶಕ್ಕೆ ಕಾಯುತ್ತಿರುತ್ತಾರೆ. ಶನಿವಾರ ಎಕ್ಸಿಟ್ ಪೋಲ್ ರಿಸಲ್ಟ್ ಬಂದಿತು. ಷೇರು ಮಾರುಕಟ್ಟೆ ಏರುತ್ತದೆ ಎಂಬುದು ಖಾತ್ರಿಯಾಯಿತು. ನಿರೀಕ್ಷೆಯಂತೆ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹರಿದುಬರತೊಡಗಿದವು. ಪರಿಣಾಮವಾಗಿ ಮಾರುಕಟ್ಟೆ ಉಬ್ಬಿತು.

ಇದನ್ನೂ ಓದಿ: ನಿನ್ನೆ ಉಬ್ಬಿದ್ದ ಷೇರುಪೇಟೆ ಇವತ್ತು ಪ್ರಪಾತಕ್ಕೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಪ್ರಮುಖ ಸೂಚ್ಯಂಕಗಳ ಕುಸಿತ

ಬಹಳಷ್ಟು ಹೂಡಿಕೆದಾರರಿಗೆ ಇದು ಲಾಭದ ಸಮಯ. ಕೃತಕವಾಗಿ ಮತ್ತು ಭಾವನಾತ್ಮಕವಾಗಿ ಉಬ್ಬಿದ ಷೇರುಪೇಟೆಯಿಂದ ಲಾಭ ಪಡೆಯಬೇಕಾದರೆ ಷೇರು ಮಾರಬೇಕು. ಈಗ ಮಂಗಳವಾರ ಬೆಳಗಿನ ಅವಧಿಯಲ್ಲಿ ಆಗಿದ್ದೂ ಅದೇ. ಅದುವೇ ಪ್ರಾಫಿಟ್ ಬುಕಿಂಗ್. ಒಂದೇ ದಿನದಲ್ಲಿ ಸಖತ್ತಾಗಿ ಏರಿದ್ದ ಷೇರುಗಳನ್ನು ಮಾರಿ ಬಹಳಷ್ಟು ಜನರು ಲಾಭ ಮಾಡಿಕೊಂಡಿದ್ದಾರೆ.

ಮಾರಾಟ ಹೆಚ್ಚಾದಾಗ ಮತ್ತು ಅದನ್ನು ಖರೀದಿಸಲು ಜನರ ಸಂಖ್ಯೆ ಕಡಿಮೆ ಇದ್ದಾಗ ಷೇರುಮೌಲ್ಯ ಕಡಿಮೆ ಆಗುತ್ತದೆ. ಇದು ಯಾವುದೇ ಬಿಸಿನೆಸ್​ನಲ್ಲೂ ಇರುವ ಸ್ವಾಭಾವಿಕ ಅಂಶ. ಮೊದಲ 15 ನಿಮಿಷದಲ್ಲಿ ಇದೇ ಆಗಿದ್ದು. ಸಾಕಷ್ಟು ಜನರು ಲಾಭದ ಆಸೆಗೆ ಷೇರು ಮಾರಲು ಹೋಗಿದ್ದಾರೆ. ಪರಿಣಾಮವಾಗಿ ಪೇಟೆ ಕುಸಿತ ಕಂಡಿದೆ. ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಹೆಚ್ಚಾಗಿ ಮಾರಾಟ ಮಾಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಐಪಿಒದಲ್ಲಿ ಷೇರು ಖರೀದಿಸಿ ಲಿಸ್ಟಿಂಗ್​ನಲ್ಲಿ ಮಾರಿದಾಗ ಎಷ್ಟು ತೆರಿಗೆ ಕಟ್ಟಬೇಕು?

ಷೇರು ಕುಸಿತ ಆಗುತ್ತಿರುವಂತೆಯೇ ತಳದಿಂದ ಷೇರುಗಳ ಖರೀದಿ ಆರಂಭವಾಗಿದೆ. ಪರಿಣಾಮವಾಗಿ ಕ್ರಮೇಣವಾಗಿ ಷೇರುಮೌಲ್ಯ ಹೆಚ್ಚಾಗತೊಡಗಿದೆ. ದಿನಾಂತ್ಯದೊಳಗೆ ಸೂಚ್ಯಂಕಗಳು ಒಂದಷ್ಟು ಚೇತರಿಕೆ ಕಾಣಬಹುದು. 2019ರಲ್ಲೂ ಲೋಕಸಭೆ ಚುನಾವಣೆಯ ಫಲಿತಾಂಶದ ದಿನ ಇದೇ ರೀತಿ ಪೇಟೆ ಕುಸಿತ ಕಂಡಿತ್ತು. ಬಳಿಕ ಚೇರಿಕೆ ಕಂಡಿತ್ತು. ಷೇರು ಮಾರುಕಟ್ಟೆ ಅಕ್ಷರಶಃ ಬಿಸಿನೆಸ್ ಅಡ್ಡೆ ಎನ್ನುವುದು ಇದಕ್ಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:28 am, Tue, 4 June 24

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ