ಶಿವಮೊಗ್ಗ ಲೋಕಸಭಾ ಚುನಾವಣೆ 2024 ಫಲಿತಾಂಶ: ಬಿವೈ ರಾಘವೇಂದ್ರ ಗೆಲುವು, ಗೀತಾಗೆ ಸೋಲು

| Updated By: ವಿವೇಕ ಬಿರಾದಾರ

Updated on: Jun 04, 2024 | 2:53 PM

Shivamogga Lok Sabha Election Results 2024: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಶಿವಮೊಗ್ಗದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ವೈ ರಾಘವೇಂದ್ರ ಗೆದ್ದಿದ್ದಾರೆ. ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಗೀತಾ ಶಿವರಾಜ್‌ಕುಮಾರ್‌ ಅವರಿಗೆ ಸೋಲಾಗಿದೆ.

ಶಿವಮೊಗ್ಗ ಲೋಕಸಭಾ ಚುನಾವಣೆ 2024 ಫಲಿತಾಂಶ: ಬಿವೈ ರಾಘವೇಂದ್ರ ಗೆಲುವು, ಗೀತಾಗೆ ಸೋಲು
ಗೀತಾ ಶಿವರಾಜ್​ಕುಮಾರ್, ಬಿವೈ ರಾಘವೇಂದ್ರ, ಕೆಎಸ್​ ಈಶ್ವರಪ್ಪ
Follow us on

ಶಿವಮೊಗ್ಗ, ಜೂನ್​ 04: ಶಿವಮೊಗ್ಗ ಲೋಕಸಭೆ ಕ್ಷೇತ್ರ (Shivamogga Lok Sabha Constituency) ದಲ್ಲಿ ಬಿಎಸ್​ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಅವರ ಗೆಲುವಾಗಿದೆ. ನಟ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಅವರಿಗೆ ಸೋಲಾಗಿದೆ.

ಇಲ್ಲಿಯವರೆಗೆ ಹತ್ತು ಬಾರಿ ಕಾಂಗ್ರೆಸ್‌ಗೆ ಶಿವಮೊಗ್ಗದ ಜನರು ಕರುಣೆ ತೋರಿದ್ದರೆ, ಆರು ಬಾರಿ ಬಿಜೆಪಿಯತ್ತ ಒಲವು ತೋರಿದ್ದಾರೆ. ವಿಶೇಷವೆಂದರೆ ಕಳೆದ ನಾಲ್ಕು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಬೇರೆ ಪಕ್ಷಗಳಿಗೆ ಸಾಧ್ಯವಾಗಲೇ ಇಲ್ಲ. 2009ರಲ್ಲಿ ಬಂಗಾರಪ್ಪರ ಕೋಟೆಯನ್ನು ಬೇಧಿಸಿದ ಯಡಿಯೂರಪ್ಪರ ಪುತ್ರ ರಾಘವೇಂದ್ರ, ಸತತ ಮೂರು ಬಾರಿ ಆಯ್ಕೆಯಾಗಿದ್ದಾರೆ. ಮಧ್ಯೆ ಕೆಲ ವರ್ಷಗಳ ಮಟ್ಟಿಗೆ ಯಡಿಯೂರಪ್ಪ ಅವರು ಶಿವಮೊಗ್ಗವನ್ನು ಪ್ರತಿನಿಧಿಸಿದ್ದರು.

2009ರಿಂದ ಇಲ್ಲಿಯವರೆಗೆ ಒಟ್ಟು ನಾಲ್ಕು ಬಾರಿ ಶಿವಮೊಗ್ಗ ಲೋಕಸಭೆ ಚುನಾವಣೆ ನಡೆದಿದೆ. ನಾಲ್ಕೂ ಬಾರಿಯೂ ಯಡಿಯೂರಪ್ಪ ವರ್ಸಸ್‌ ಬಂಗಾರಪ್ಪ ಎನ್ನುವಂತಾಗಿದೆ. 2009ರಲ್ಲಿ ಬಂಗಾರಪ್ಪರನ್ನು ರಾಘವೇಂದ್ರ ಸೋಲಿಸಿದರೆ, ನಂತರದ 2014, 2018, 2019ರಲ್ಲಿ ಬಂಗಾರಪ್ಪರ ಮಕ್ಕಳೇ ಸ್ಪರ್ಧಿಸಿ ಸೋತಿದ್ದಾರೆ. ಒಮ್ಮೆ ಗೀತಾ ಶಿವರಾಜ್‌ಕುಮಾರ್‌ ಹಾಗೂ ಎರಡು ಬಾರಿ ಮಧು ಬಂಗಾರಪ್ಪ ಸ್ಪರ್ಧಿಸಿದ್ದರು.

ಮತ್ತಷ್ಟು ಓದಿ: LS Election 2024 Result day holiday: ಜೂನ್ 4ಕ್ಕೆ ಚುನಾವಣಾ ಫಲಿತಾಂಶ; ಅಂದು ಇದೆಯಾ ರಜೆ?

ಈ ಬಾರಿಯೂ ಬಿ.ವೈ ರಾಘವೇಂದ್ರಗೆ ಗೀತಾ ಶಿವರಾಜ್‌ಕುಮಾರ್‌ ಪೈಪೋಟಿ ನೀಡುತ್ತಿದ್ದಾರೆ. ಇದರ ಜತೆಗೆ ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ.ಎಸ್‌ ಈಶ್ವರಪ್ಪ ಸ್ಪರ್ಧಿಸಿರುವುದರಿಂದ ಅಖಾಡಕ್ಕೆ ಇನ್ನಷ್ಟು ರಂಗೇರಿದೆ.

2014ರಲ್ಲಿ ಯಡಿಯೂರಪ್ಪ ಅವರು ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 3.50 ಲಕ್ಷ ಮತಗಳಿಂದ ಗೆದ್ದಿದ್ದರೆ, 2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ವಿರುದ್ಧ ರಾಘವೇಂದ್ರ ಅವರು 2.20 ಲಕ್ಷ ಮತಗಳಿಂದ ವಿಜಯಗಳಿಸಿದ್ದರು. ಈ ಬಾರಿ ಎರಡು ಕುಟುಂಬದ ಜಟ್ಟಿ ಕಾಳಗದಲ್ಲಿ ಯಾರು ಗೆಲ್ಲುತ್ತಾರೆ ಎಂದು ನೋಡಬೇಕು.

ಈ ಲೋಕಸಭಾ ಕ್ಷೇತ್ರವು ಶಿವಮೊಗ್ಗ ಜಿಲ್ಲೆಯ ಏಳು ಹಾಗೂ ಉಡುಪಿ ಜಿಲ್ಲೆಯ ಒಂದು ವಿಧಾನಸಭೆ ಕ್ಷೇತ್ರವನ್ನು ಒಳಗೊಂಡಿದೆ. ಶಿವಮೊಗ್ಗ ನಗರ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ. ಶಿಕಾರಿಪುರ, ಸೊರಬ, ಸಾಗರ ಹಾಗೂ ಬೈಂದೂರು ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 17.29 ಲಕ್ಷ ಮತದಾರರು ಇದ್ದರು. ಇವರಲ್ಲಿ ಶೇ.78.33ಮಂದಿ ಮತ ಚಲಾಯಿಸಿದ್ದಾರೆ.

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:51 am, Tue, 4 June 24