ರಾಜಸ್ಥಾನ, ಛತ್ತೀಸ್ಗಢದಲ್ಲಿ ‘ಕೈ’ಜಾರಿಹೋಗಲಿದೆ ಆಡಳಿತ: ರಾಹುಲ್ ಗಾಂಧಿ ಹಳೆಯ ವಿಡಿಯೋ ವೈರಲ್
ಕಳೆದ ಅಕ್ಟೋಬರ್ ತಿಂಗಳಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ‘ರಾಜಸ್ಥಾನದಲ್ಲೂ ಸರ್ಕಾರ ಕಾಂಗ್ರೆಸ್ ಕೈಜಾರಿಹೋಗಲಿದೆ. ಛತ್ತೀಸ್ಗಢದಿಂದಲೂ ಕೈತಪ್ಪಿಹೋಗಲಿದೆ. ತೆಲಂಗಾಣದಿಂದಲೂ ಕೈಜಾರಿಹೋಗಲಿದೆ’ ಎಂದು ಹೇಳಿದ್ದರು. ತಕ್ಷಣ ತಪ್ಪಿನ ಅರಿವಾಗಿ, ‘ಕ್ಷಮಿಸಿ, ಉಲ್ಟಾ ಹೇಳಿಬಿಟ್ಟೆ’ ಎಂದು ನಸುನಗಾಡಿದ್ದರು.
ನವದೆಹಲಿ, ಡಿಸೆಂಬರ್ 3: ಐದು ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯ ಪೈಕಿ ರಾಜಸ್ಥಾನ, ಛತ್ತೀಸ್ಗಢ, ಮಧ್ಯ ಪ್ರದೇಶ ಹಾಗೂ ತೆಲಂಗಾಣದ ಮತ ಎಣಿಕೆ ಪ್ರಗತಿಯಲ್ಲಿದೆ. ರಾಜಸ್ಥಾನ, ಛತ್ತೀಸ್ಗಢ ಹಾಗೂ ಮಧ್ಯ ಪ್ರದೇಶಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದ್ದರೆ ತೆಲಂಗಾಣದಲ್ಲಿ ಕಾಂಗ್ರಸ್ (Congress) ಪಕ್ಷವು ಸರ್ಕಾರ ರಚಿಸುವತ್ತ ಸಾಗುತ್ತಿದೆ. ಇದೇ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಈ ಹಿಂದೆ ಬಾಯ್ತಪ್ಪಿ ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ‘ರಾಜಸ್ಥಾನದಲ್ಲೂ ಸರ್ಕಾರ ಕಾಂಗ್ರೆಸ್ ಕೈಜಾರಿಹೋಗಲಿದೆ. ಛತ್ತೀಸ್ಗಢದಿಂದಲೂ ಕೈತಪ್ಪಿಹೋಗಲಿದೆ. ತೆಲಂಗಾಣದಿಂದಲೂ ಕೈಜಾರಿಹೋಗಲಿದೆ’ ಎಂದು ಹೇಳಿದ್ದರು. ತಕ್ಷಣ ತಪ್ಪಿನ ಅರಿವಾಗಿ, ‘ಕ್ಷಮಿಸಿ, ಉಲ್ಟಾ ಹೇಳಿಬಿಟ್ಟೆ’ ಎಂದು ನಸುನಗಾಡಿದ್ದರು.
ರಾಹುಲ್ ಗಾಂಧಿಯವರು ತಪ್ಪಿ ಆಡಿದ್ದ ಮಾತುಗಳನ್ನು ಅನೇಕರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದರು.
‘ಸತ್ಯ ಹೊರಬಿದ್ದಿದೆ. ಕಾಂಗ್ರೆಸ್ ಸರ್ಕಾರ ರಾಜಸ್ಥಾನ ಮತ್ತು ಛತ್ತೀಸ್‌ಗಢವನ್ನು ತೊರೆಯಲಿದೆ’ ಎಂದು ವ್ಯಕ್ತಿಯೊಬ್ಬರು ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದರು. ರಾಹುಲ್ ಗಾಂಧಿಯವರ ಹಳೆಯ ವಿಡಿಯೋ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
सच जुबां से निकल ही गया “राजस्थान और छत्तीसगढ़ से कांग्रेस सरकार जा रही है” @RahulGandhi pic.twitter.com/vh950sUY99
— Social Tamasha (@SocialTamasha) October 9, 2023
ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ರಾಜಸ್ಥಾನ ಹಾಗೂ ಮಧ್ಯ ಪ್ರದೇಶದಲ್ಲಿ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿವೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಗಂಟೆ ವೇಳೆಗೆ ಮಧ್ಯ ಪ್ರದೇಶದಲ್ಲಿ ಬಿಜೆಪಿ 144 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಬಹುಮತಕ್ಕೆ 116 ಸ್ಥಾನ ಅಗತ್ಯ. ರಾಜಸ್ಥಾನದಲ್ಲಿ ಕಮಲ ಪಡೆಯು 116 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಬಹುಮತಕ್ಕೆ 100 ಸ್ಥಾನ ಬೇಕಿದೆ.
ಮತ್ತೊಂದೆಡೆ, ತೆಲಂಗಾಣದಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆಗೆ ಕಾಂಗ್ರೆಸ್ 66 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಆಡಳಿತಾರೂಢ ಬಿಆರ್ಎಸ್ 45 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ರಾಜ್ಯದಲ್ಲಿ ಬಹುಮತಕ್ಕೆ 60 ಸ್ಥಾನ ಬೇಕು. ಛತ್ತೀಸ್ಗಢದಲ್ಲಿ ಕಾಂಗ್ರೆಸ್ 39 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಬಿಜೆಪಿ 49 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಬಹುಮತಕ್ಕೆ 46 ಸ್ಥಾನ ಬೇಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ