AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸಾವಿಗೆ ನರೇಂದ್ರ ಮೋದಿಯವರ ಕಿರುಕುಳವೇ ಕಾರಣ: ಸ್ಟಾಲಿನ್ ಪುತ್ರ ಉದಯನಿಧಿ

Tamil Nadu Assembly Elections 2021: ಮೋದಿಯವರೇ, ನಿಮಗೆ ಹೆದರಿ, ನಿಮ್ಮ ಮುಂದೆ ತಲೆಬಾಗಲು ನಾನು ತಮಿಳುನಾಡಿನ ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅಲ್ಲ. ನಾನು ಉದಯನಿಧಿ ಸ್ಟಾಲಿನ್, ಕಲೈಂಗರ್ (ಕರುಣಾನಿಧಿ) ಅವರ ಮೊಮ್ಮಗ ಎಂದು ಹೇಳಿದ್ದಾರೆ ಉದಯನಿಧಿ ಸ್ಟಾಲಿನ್.

ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸಾವಿಗೆ ನರೇಂದ್ರ ಮೋದಿಯವರ ಕಿರುಕುಳವೇ ಕಾರಣ: ಸ್ಟಾಲಿನ್ ಪುತ್ರ ಉದಯನಿಧಿ
ಉದಯನಿಧಿ ಸ್ಟಾಲಿನ್
ರಶ್ಮಿ ಕಲ್ಲಕಟ್ಟ
|

Updated on: Apr 02, 2021 | 1:20 PM

Share

ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರ ಕಿರುಕುಳ ಮತ್ತು ಒತ್ತಡದಿಂದಲೇ ಕೇಂದ್ರ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಸಾವಿಗೀಡಾಗಿದ್ದು ಎಂದು ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ಗುರುವಾರ ಚುನಾವಣಾ ಕಾರ್ಯಕ್ರಮವೊಂದರಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಉದಯನಿಧಿ, ಸುಷ್ಮಾ ಸ್ವರಾಜ್ ಎಂಬ ವ್ಯಕ್ತಿಯೊಬ್ಬರಿದ್ದರು, ಆಕೆ ಮೋದಿಯವರ ಒತ್ತಡ ತಡೆಯಲಾರದೆ ಮೃತಪಟ್ಟಿದ್ದರು. ಅರುಣ್ ಜೇಟ್ಲಿ ಎಂಬ ವ್ಯಕ್ತಿಯೊಬ್ಬರಿದ್ದರು, ಮೋದಿಯವರ ಕಿರುಕುಳದಿಂದ ಅವರು ಅಸುನೀಗಿದ್ದರು ಎಂದಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ಹಿರಿಯ ನಾಯಕರಾದ ವೆಂಕಯ್ಯ ನಾಯ್ಡು ಅವರನ್ನು ದೂರ ತಳ್ಳಿದ್ದಾರೆ ಎಂದು ಉದಯನಿಧಿ ಆರೋಪಿಸಿದ್ದಾರೆ. ಮೋದಿಯವರು ಎಲ್ಲರನ್ನೂ ಬದಿಗೆ ತಳ್ಳಿದರು. ಮೋದಿಯವರೇ, ನಿಮಗೆ ಹೆದರಿ, ನಿಮ್ಮ ಮುಂದೆ ತಲೆಬಾಗಲು ನಾನು ತಮಿಳುನಾಡಿನ ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅಲ್ಲ. ನಾನು ಉದಯನಿಧಿ ಸ್ಟಾಲಿನ್, ಕಲೈಂಗರ್ (ಕರುಣಾನಿಧಿ) ಅವರ ಮೊಮ್ಮಗ ಎಂದು ಹೇಳಿದ್ದಾರೆ.

ಆದಾಗ್ಯೂ, ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್, ಚುನಾವಣಾ ಪ್ರಚಾರಕ್ಕಾಗಿ ನಮ್ಮ ಅಮ್ಮನ ಹೆಸರು ಬಳಸಬೇಡಿ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಬಾನ್ಸುರಿ, ಉದಯನಿಧಿ ಜೀ, ನಿಮ್ಮ ಚುನಾವಣಾ ಪ್ರಚಾರಕ್ಕಾಗಿ ನನ್ನ ಅಮ್ಮನ ಹೆಸರು ಎಳೆದು ತರಬೇಡಿ. ನಿಮ್ಮ ಹೇಳಿಕೆ ತಪ್ಪು. ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಅಮ್ಮನಿಗೆ ಮಹತ್ತಾದ ಗೌರವ ಮತ್ತು ಮನ್ನಣೆ ನೀಡಿದ್ದರು. ನಮ್ಮ ಕಷ್ಟಕಾಲದಲ್ಲಿ ಪ್ರಧಾನಿ ಮತ್ತು ಬಿಜೆಪಿ ನಮ್ಮ ಹಿಂದೆ ಅಚಲವಾಗಿ ನಿಂತಿತ್ತು. ನಿಮ್ಮ ಹೇಳಿಕೆಯಿಂದ ನೋವಾಗಿದೆ ಎಂದು ಹೇಳಿದ್ದಾರೆ. ಈ ಟ್ವೀಟ್​ನಲ್ಲಿ ಅವರು ಎಂ.ಕೆ.ಸ್ಟಾಲಿನ್ ಮತ್ತು ಬಿಜೆಪಿ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.

ಉದಯನಿಧಿ ಹೇಳಿಕೆ ಬಗ್ಗೆ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಬಾನ್ಸುರಿ ಸ್ವರಾಜ್, ಅವರ ಹೇಳಿಕೆ ನಿಂದನೀಯ ಮತ್ತು ಅಗೌರವದಿಂದ ಕೂಡಿತ್ತು. ರಾಜಕೀಯ ವಿಷಯಗಳನ್ನಿಟ್ಟುಕೊಂಡು ಚುನಾವಣೆ ಸ್ಪರ್ಧಿಸುವ ಬದಲು ಅವರು ನನ್ನ ಅಮ್ಮ ಮತ್ತು ಅರುಣ್ ಜೇಟ್ಲಿ ಅವರ ಹೆಸರು ಎಳೆತಂದು ಪ್ರಧಾನಿ ಮೋದಿಯವರ ಮೇಲೆ ವಾಗ್ದಾಳಿ ನಡೆಸುತ್ತಾರೆ, ಇದು ತಪ್ಪು. ಅವರ  ಹೇಳಿಕೆಯಿಂದ ನಮ್ಮ ಕುಟುಂಬಕ್ಕೆ ನೋವಾಗಿದೆ. ಇದು ನನ್ನ ಅಮ್ಮನ ನೆನಪನ್ನು ಅಪವಿತ್ರಗೊಳಿಸುವುದು ಮಾತ್ರವಲ್ಲದೆ ಡಿಎಂಕೆ ಚುನಾವಣಾ ಪ್ರಚಾರ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ .

ಉದಯನಿಧಿ ಹೇಳಿಕೆ ಖಂಡಿಸಿದ ಅರುಣ್ ಜೇಟ್ಲಿ ಪುತ್ರಿ ತನ್ನ ಅಪ್ಪನ ಬಗ್ಗೆ ಮಾತನಾಡಿದ ಉದಯನಿಧಿ ವಿರುದ್ಧ ಅರುಣ್ ಜೇಟ್ಲಿ ಪುತ್ರಿ ಸೋನಲಿ ಜೇಟ್ಲಿ ಭಕ್ಷಿ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು, ಉದಯನಿಧಿ ಸ್ಟಾಲಿನ್ ಅವರೇ, ನಿಮಗೆ ಚುನಾವಣೆಯ ಒತ್ತಡ ಇದೆ ಎಂದು ಗೊತ್ತು. ಆದರೆ ನೀವು ನಮ್ಮ ಅಪ್ಪನಿಗೆ ಅಗೌರವ ತೋರಿ ಸುಳ್ಳು ಹೇಳುವಾಗ ನನಗೆ ಮೌನ ವಹಿಸಲು ಅಸಾಧ್ಯ. ನಮ್ಮಪ್ಪ ಅರುಣ್ ಜೇಟ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯದಾಚೆಯೂ ವಿಶೇಷ ಸಂಬಂಧವನ್ನು ಹೊಂದಿದ್ದರು. ಆ ರೀತಿಯ ಸೌಹಾರ್ದವನ್ನು ಪಡೆಯಲು ಪುಣ್ಯ ಮಾಡಿರಬೇಕು ಎಂದಿದ್ದಾರೆ.

ಇದನ್ನೂ ಓದಿ: Tamil Nadu: ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಅವರ ಅಳಿಯ ಶಬರೀಶನ್ ನಿವಾಸದ ಮೇಲೆ ಐಟಿ ದಾಳಿ 

(Sushma Swaraj Arun Jaitley died due to PM Narendra Modi torture says DMK leader Udhayanidhi Stalin in Tamilnadu)

ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್
37 ಎಸೆತಗಳಲ್ಲಿ ಶತಕ: ಟಿಮ್ ಡೇವಿಡ್ ಆರ್ಭಟದ ವಿಡಿಯೋ ಇಲ್ಲಿದೆ
37 ಎಸೆತಗಳಲ್ಲಿ ಶತಕ: ಟಿಮ್ ಡೇವಿಡ್ ಆರ್ಭಟದ ವಿಡಿಯೋ ಇಲ್ಲಿದೆ
ಶುಕ್ರವಾರ ರಾತ್ರಿ ಅಂಗಡಿ ಮುಚ್ಚುವ ವೇಳೆ ನುಗ್ಗಿದ ದರೋಡೆಕೋರರು
ಶುಕ್ರವಾರ ರಾತ್ರಿ ಅಂಗಡಿ ಮುಚ್ಚುವ ವೇಳೆ ನುಗ್ಗಿದ ದರೋಡೆಕೋರರು
ಧ್ಯಾನ ಮಾಡುವುದರಿಂದ ಮಾನಸಿಕ ಯಾತನೆ ಕಡಿಮೆಯಾಗುತ್ತದೆ: ಹಸೀನಾ
ಧ್ಯಾನ ಮಾಡುವುದರಿಂದ ಮಾನಸಿಕ ಯಾತನೆ ಕಡಿಮೆಯಾಗುತ್ತದೆ: ಹಸೀನಾ
‘ಡೆವಿಲ್’ ಸಿನಿಮಾ ಶೂಟ್​ ಮುಗಿಸಿ ಬೆಂಗಳೂರಿಗೆ ಮರಳಿದ ದರ್ಶನ್
‘ಡೆವಿಲ್’ ಸಿನಿಮಾ ಶೂಟ್​ ಮುಗಿಸಿ ಬೆಂಗಳೂರಿಗೆ ಮರಳಿದ ದರ್ಶನ್
VIDEO: ಟೀಮ್ ಇಂಡಿಯಾ ದೊಡ್ಡ ಎಡವಟ್ಟು: ಮೈದಾನದಲ್ಲೇ ಜಡೇಜಾ ಆಕ್ರೋಶ
VIDEO: ಟೀಮ್ ಇಂಡಿಯಾ ದೊಡ್ಡ ಎಡವಟ್ಟು: ಮೈದಾನದಲ್ಲೇ ಜಡೇಜಾ ಆಕ್ರೋಶ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ