BSF Recruitment 2022: ಗಡಿ ಭದ್ರತಾ ಪಡೆಯ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
BSF Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BSF ನ ಅಧಿಕೃತ ವೆಬ್‌ಸೈಟ್ bsf.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
BSF Recruitment 2022: ಭಾರತೀಯ ಸೇನೆಯ ಗಡಿ ಭದ್ರತಾ ಪಡೆಯ ಸೀನಿಯರ್ ಏರ್‌ಕ್ರಾಫ್ಟ್ ಮೆಕ್ಯಾನಿಕ್ ಮತ್ತು ಇತರ ಹುದ್ದೆಗಳಿಗೆ (BSF Recruitment 2022) ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BSF ನ ಅಧಿಕೃತ ವೆಬ್‌ಸೈಟ್ bsf.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
- ಒಟ್ಟು ಹುದ್ದೆಗಳ ಸಂಖ್ಯೆ- 40
- ಸೀನಿಯರ್ ಏರ್‌ಕ್ರಾಫ್ಟ್ ಮೆಕ್ಯಾನಿಕ್: 10 ಹುದ್ದೆಗಳು
- ಸೀನಿಯರ್ ರೇಡಿಯೋ ಮೆಕ್ಯಾನಿಕ್: 6 ಹುದ್ದೆಗಳು
- ಸಹಾಯಕ ರೇಡಿಯೋ ಮೆಕ್ಯಾನಿಕ್: 1 ಹುದ್ದೆ
- ಹಿರಿಯ ಫ್ಲೈಟ್ ಗನ್ನರ್: 5 ಹುದ್ದೆಗಳು
- ಜೂನಿಯರ್ ಫ್ಲೈಟ್ ಗನ್ನರ್: 4 ಹುದ್ದೆಗಳು
- ಜೂನಿಯರ್ ಫ್ಲೈಟ್ ಇಂಜಿನಿಯರ್: 7
- ಹುದ್ದೆಗಳು ಇನ್‌ಸ್ಪೆಕ್ಟರ್/ಸ್ಟೋರ್‌ಮ್ಯಾನ್: 3 ಹುದ್ದೆಗಳು
- ಸಬ್ ಇನ್‌ಸ್ಪೆಕ್ಟರ್: 4 ಹುದ್ದೆಗಳು
ಅರ್ಹತಾ ಮಾನದಂಡಗಳು: ಆಯಾ ವಿಭಾಗಗಳಿಗೆ ಸಂಬಂಧಿತ ವಿಷಯದಲ್ಲಿ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿರಬೇಕು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.
ಪ್ರಮುಖ ದಿನಾಂಕ: ಈ ಹುದ್ದೆಗಳ ನೇಮಕಾತಿ ಕುರಿತಾದ ಜಾಹೀರಾತು ಪ್ರಕಟವಾದ 30 ದಿನಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿ ಕಳುಹಿಸಬೇಕಾದ ವಿಳಾಸ: Deputy Inspector General (Estt), HQ DG BSF, Block No. 10, CGO Complex, Lodhi Road, New Delhi, PIN – 110003.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.