ಮೆಗಾ ವರ್ಚುವಲ್ ಉದ್ಯೋಗ ಮೇಳ ಜುಲೈ 23ಕ್ಕೆ: ನೀವಿರುವ ಸ್ಥಳದಿಂದಲೇ ಪಾಲ್ಗೊಳ್ಳಿ

ಆಸಕ್ತರು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಮೂಲಕ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳಬಹುದು. ಅರ್ಹ ಅಭ್ಯರ್ಥಿಗಳನ್ನು ಮೇಳದ ಅವಧಿಯಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮೆಗಾ ವರ್ಚುವಲ್ ಉದ್ಯೋಗ ಮೇಳ ಜುಲೈ 23ಕ್ಕೆ: ನೀವಿರುವ ಸ್ಥಳದಿಂದಲೇ ಪಾಲ್ಗೊಳ್ಳಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 22, 2021 | 10:46 PM

ಬೆಂಗಳೂರು: ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವು ಮೆರಿಟ್ಯೂಡ್ ಸ್ಕಿಲ್ ಡೆವಲಪ್​ಮೆಂಟ್ ಸಹಯೋಗದಲ್ಲಿ ಜುಲೈ 23ರಂದು (ಶುಕ್ರವಾರ) ಮೆಗಾ ವರ್ಚುವಲ್ ಉದ್ಯೋಗ ಮೇಳವನ್ನು ಆಯೋಜಿಸಿದೆ. ಆಸಕ್ತರು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಮೂಲಕ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳಬಹುದು. ಅರ್ಹ ಅಭ್ಯರ್ಥಿಗಳನ್ನು ಮೇಳದ ಅವಧಿಯಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಎಲ್ಲ ನಿರುದ್ಯೋಗಿ ಯುವಕ, ಯುವತಿಯರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದು ಕೌಶಲ ಅಭಿವೃದ್ಧಿ ನಿಗಮವು ತಿಳಿಸಿದೆ. ಮೇಳದಲ್ಲಿ 20 ಕಂಪನಿಗಳು ಪಾಲ್ಗೊಳ್ಳುತ್ತಿದ್ದು, 1000 ಮಂದಿಗೆ ಉದ್ಯೋಗಾವಕಾಶಗಳಿವೆ. ಜುಲೈ 23ರ ಮಧ್ಯಾಹ್ನ 12.30ಕ್ಕೆ ವರ್ಚುವಲ್ ಸಂದರ್ಶನಗಳು ನಡೆಯಲಿವೆ.

8ನೇ ತರಗತಿ, ಎಸ್​ಎಸ್​ಎಲ್​ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಪದವೀಧರರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಆಸಕ್ತರು ನೋಂದಣಿಗೆ ಬಳಸಬಹುದಾದ ಲಿಂಕ್: https://tinyurl.com/ksdcmegavjf

ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ ಭಾರತೀಯ ಸೇನೆಯು ಇಲಾಖಾ ರಹಿತ ಅಧಿಕಾರಿಗಳ ಹುದ್ದೆಗಾಗಿ ಆನ್​ಲೈನ್​ (Online) ಮೂಲಕ ಅರ್ಜಿ ಆಹ್ವಾನ ಮಾಡಿವೆ. ಆಸಕ್ತರು ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್​ 20ರವರೆಗೆ ಅವಕಾಶವಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಲೆಫ್ಟಿನೆಂಟ್​ ಶ್ರೇಣಿ (Lieutenant Rank)ಯಲ್ಲಿ ನೇಮಕ ಮಾಡಲಾಗುತ್ತದೆ ಮತ್ತು ಇವರಿಗೆ ನೀಡಲಾಗುವ ವೇತನ, ಭತ್ಯೆಗಳು, ಸವಲತ್ತುಗಳೆಲ್ಲ ಸಾಮಾನ್ಯ ಸೇನಾ ಅಧಿಕಾರಿಗಳಿಗೆ ಇರುವಂತೆ ಇರುತ್ತದೆ. ಹಾಗಿದ್ದಾಗ್ಯೂ ಈ ಪ್ರಾದೇಶಿಕ ಸೇನೆ ಪಾರ್ಟ್ ಟೈಂ ಆಗಿದ್ದು, ವರ್ಷದಲ್ಲಿ ಎರಡು ತಿಂಗಳು ತರಬೇತಿ ಇರುತ್ತದೆ.

ಹುದ್ದೆ ನೇಮಕಾತಿಗೆ ಆಯ್ಕೆ ಆಗಬೇಕಾದರೆ ಪರೀಕ್ಷೆ ಲಿಖಿತವಾಗಿ ಬರೆಯಬೇಕು. ಸೆಪ್ಟೆಂಬರ್​ 26ರಂದು ಆಫ್​ಲೈನ್​ ಪರೀಕ್ಷೆ ನಡೆಯಲಿದ್ದು, ಕೊನೆಯಲ್ಲಿ ನೇಮಕಗೊಂಡ ಅಭ್ಯರ್ಥಿಗಳಿಗೆ 56, 100 ರಿಂದ 1,77,500 ರೂ .ನೀಡಲಾಗುತ್ತದೆ.

(Karnataka Skill Development Corporation Organises Job Fair for Unemployed)

ಇದನ್ನೂ ಓದಿ: Infosys: ಉದ್ಯೋಗಿಗಳು ಮತ್ತೆ ಕಚೇರಿಯಿಂದಲೇ ಕೆಲಸ ಆರಂಭಿಸುವ ಸುಳಿವು ನೀಡಿದ ಇನ್ಫೋಸಿಸ್

ಇದನ್ನೂ ಓದಿ: Indian Army Recruitment 2021: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ನೀಡಿದ ಭಾರತೀಯ ಸೇನೆ; 1 ಲಕ್ಷ ರೂ.ವರೆಗೂ ವೇತನ ಪಡೆಯಬಹುದು

Published On - 10:43 pm, Thu, 22 July 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?