UPSC Recruitment 2022: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ನಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
UPSC Recruitment 2022: ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 1 ರವರೆಗೆ ಅಧಿಕೃತ ವೆಬ್ಸೈಟ್ upsc.gov.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
UPSC Recruitment 2022: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸಹಾಯಕ ನಿರ್ದೇಶಕ, ಉಪ ನಿರ್ದೇಶಕ, ವೈಜ್ಞಾನಿಕ ಅಧಿಕಾರಿ (ನಾನ್ ಡಿಸ್ಟ್ರಕ್ಟಿವ್) ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗಾಗಿ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 1 ರವರೆಗೆ ಅಧಿಕೃತ ವೆಬ್ಸೈಟ್ upsc.gov.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
- ಒಟ್ಟು ಹುದ್ದೆಗಳ ಸಂಖ್ಯೆ- 37
- ಸಹಾಯಕ ನಿರ್ದೇಶಕ- 2 ಹುದ್ದೆಗಳು
- ಉಪ ನಿರ್ದೇಶಕ- 4 ಹುದ್ದೆಗಳು
- ವೈಜ್ಞಾನಿಕ ಅಧಿಕಾರಿ (ನಾನ್-ಡೆಸ್ಟ್ರಕ್ಟಿವ್)- 1 ಹುದ್ದೆ
- ಫೋಟೋಗ್ರಾಫಿಕ್ ಆಫೀಸರ್- 1 ಹುದ್ದೆ
- ಹಿರಿಯ ಫೋಟೋಗ್ರಾಫಿಕ್ ಅಧಿಕಾರಿ- 1 ಹುದ್ದೆ
- ಜೂನಿಯರ್ ಸೈಂಟಿಫಿಕ್ ಆಫೀಸರ್ (ಭೌತಶಾಸ್ತ್ರ)- 1 ಹುದ್ದೆ
- ಜೂನಿಯರ್ ಸೈಂಟಿಫಿಕ್ ಆಫೀಸರ್ (ನ್ಯೂಟ್ರಾನ್ ಆಕ್ಟಿವೇಶನ್ ಅನಾಲಿಸಿಸ್)- 1 ಹುದ್ದೆ
- ಭಾರತೀಯ ಮಾಹಿತಿ ಸೇವೆಯ ಹಿರಿಯ ಶ್ರೇಣಿ- 22 ಹುದ್ದೆಗಳು
- ರೈಲ್ವೇ ಪದವಿ ಕಾಲೇಜಿನ ಪ್ರಿನ್ಸಿಪಾಲ್- 1 ಹುದ್ದೆ
- ರಾಷ್ಟ್ರೀಯ ಅಟ್ಲಾಸ್ ಮತ್ತು ವಿಷಯಾಧಾರಿತ ಮ್ಯಾಪಿಂಗ್ ಸಂಸ್ಥೆಯಲ್ಲಿ ನಿರ್ದೇಶಕ- 1 ಹುದ್ದೆ
- ಕಾರ್ಯನಿರ್ವಾಹಕ ಇಂಜಿನಿಯರ್ (ಸಿವಿಲ್)/ಸರ್ವೇಯರ್ ಆಫ್ ವರ್ಕ್ಸ್ (ಸಿವಿಲ್)- 2 ಹುದ್ದೆಗಳು
ಅರ್ಹತಾ ಮಾನದಂಡ: ಇಲ್ಲಿ ಆಯಾ ಹುದ್ದೆಗಳಿಗೂ ವಿಭಿನ್ನ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದ್ದು. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯ ಮೂಲಕ ಅರ್ಹತಾ ಮಾನದಂಡಗಳು, ಶೈಕ್ಷಣಿಕ ಅರ್ಹತೆಗಳು, ವೇತನ ಶ್ರೇಣಿ ಮತ್ತು ಇತರ ವಿವರಗಳನ್ನು ಪರಿಶೀಲಿಸಬಹುದು.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ. 25. ಪಾವತಿಸಬೇಕು. ಹಾಗೆಯೇ SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.