ಈ ವಾರ ಸಲ್ಮಾನ್​ ಖಾನ್​ ಸಿನಿಮಾ ಅಬ್ಬರ; ಪೈಪೋಟಿ ನೀಡಲಿವೆ ಕನ್ನಡದ ಹಲವು ಚಿತ್ರಗಳು

Kisi Ka Bhai Kisi Ki Jaan: ಏಪ್ರಿಲ್​ 21ರಂದು ಅದ್ದೂರಿಯಾಗಿ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ಬಿಡುಗಡೆ ಆಗಲಿದೆ. ಇದರ ಜೊತೆ ಕನ್ನಡದ 8 ಸಿನಿಮಾಗಳು ತೆರೆಕಾಣುತ್ತಿವೆ.  

ಈ ವಾರ ಸಲ್ಮಾನ್​ ಖಾನ್​ ಸಿನಿಮಾ ಅಬ್ಬರ; ಪೈಪೋಟಿ ನೀಡಲಿವೆ ಕನ್ನಡದ ಹಲವು ಚಿತ್ರಗಳು
ಸಲ್ಮಾನ್ ಖಾನ್

Updated on: Apr 20, 2023 | 4:31 PM

ಶುಕ್ರವಾರ ಬಂತೆಂದರೆ ಸಿನಿಪ್ರಿಯರಿಗೆ ಹಬ್ಬ. ಬಿಡುಗಡೆ ಆಗುವ ಹೊಸ ಸಿನಿಮಾಗಳಲ್ಲಿ ಯಾವುದು ಚೆನ್ನಾಗಿದೆ ಎಂಬುದನ್ನು ತಿಳಿದುಕೊಂಡು ಮೊದಲ ದಿನವೇ ನೋಡುವ ಬಯಕೆ ಪ್ರೇಕ್ಷಕರಿಗೆ ಇರುತ್ತದೆ. ಹಾಗಾಗಿ ಪ್ರತಿ ಶುಕ್ರವಾರಕ್ಕಾಗಿ ಕಾಯುತ್ತಾರೆ ಸಿನಿಮಾಸಕ್ತರು. ಹಬ್ಬ ಹರಿದಿನಗಳ ಸಂದರ್ಭದಲ್ಲಿ ವಿಶೇಷ ಸಿನಿಮಾಗಳು ರಿಲೀಸ್​ ಆಗುತ್ತವೆ. ಈ ವಾರ ರಂಜಾನ್​ ಪ್ರಯುಕ್ತ ಸಲ್ಮಾನ್​ ಖಾನ್​ (Salman Khan) ನಟನೆಯ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ (Kisi Ka Bhai Kisi Ki Jaan) ಬಿಡುಗಡೆ ಆಗುತ್ತಿದೆ. ಏಪ್ರಿಲ್​ 21ರಂದು ಎಲ್ಲೆಲ್ಲೂ ಸಲ್ಲು ಸಿನಿಮಾ ಅಬ್ಬರಿಸಲಿದೆ. ಆ ಚಿತ್ರಕ್ಕೆ ಪೈಪೋಟಿ ನೀಡಲು ಬೇರೆ ಯಾವುದೇ ದೊಡ್ಡ ಸಿನಿಮಾ ಬರುತ್ತಿಲ್ಲ. ಆದರೆ ಕನ್ನಡದ ಹಲವು ಸಿನಿಮಾಗಳು (New Kannada Movies) ರಿಲೀಸ್​ ಆಗುತ್ತಿವೆ. ಬೇರೆ ಬೇರೆ ಕಾರಣಗಳಿಗಾಗಿ ಈ ಚಿತ್ರಗಳು ಗಮನ ಸೆಳೆಯುತ್ತಿವೆ.

ಮಾಸ್ ಅಭಿಮಾನಿಗಳಿಗೆ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’:

ಸಲ್ಮಾನ್​ ಖಾನ್​ ಅವರು ಮಾಸ್​ ಪ್ರೇಕ್ಷಕರನ್ನು ರಂಜಿಸುತ್ತಾರೆ. ಫ್ಯಾಮಿಲಿ ಪ್ರೇಕ್ಷಕರಿಗೂ ಅವರ ಸಿನಿಮಾಗಳೆಂದರೆ ಇಷ್ಟ. ಈ ಎರಡೂ ವರ್ಗದ ಅಭಿಮಾನಿಗಳನ್ನು ಗಮನದಲ್ಲಿ ಇಟ್ಟುಕೊಂಡು ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​​’ ಸಿನಿಮಾ ಸಿದ್ಧವಾದಂತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್​ ಬಿಡುಗಡೆ ಆಗಿ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಫರ್ಹಾದ್​ ಸಮ್ಜಿ ಅವರು ನಿರ್ದೇಶನ ಮಾಡಿದ್ದಾರೆ. ಸಲ್ಮಾನ್​ ಖಾನ್​ ಅವರ ಹೋಮ್​ ಬ್ಯಾನರ್​ನಲ್ಲೇ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಚಿತ್ರ ನಿರ್ಮಾಣ ಆಗಿದೆ. ಟಾಲಿವುಡ್​ ನಟ ದಗ್ಗುಬಾಟಿ ವೆಂಕಟೇಶ್​, ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.

Kisi Ka Bhai Kisi Ki Jaan: ‘ವಯಸ್ಸಾದವರ ಮೇಲೆ ಸಲ್ಮಾನ್​ ಖಾನ್​ ಕೈ ಎತ್ತಲ್ಲ’: ಜಗಪತಿ ಬಾಬು

ಇದನ್ನೂ ಓದಿ
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಕನ್ನಡದಲ್ಲಿ ಸ್ಟಾರ್​ ನಟರ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿಲ್ಲ. ‘ಬಿಸಿಲು ಕುದುರೆ’, ‘ಚಾಂದಿನಿ ಬಾರ್​’, ‘ಇಂಗ್ಲಿಷ್​ ಮಂಜ’, ‘ಮಾವು ಬೇವು’, ‘ಮಗಳೇ’, ‘ನನ್ನಾಕಿ’, ‘ನೋಡದ ಪುಟಗಳು’, ‘ರಂಜಾನ್​’ ಸಿನಿಮಾಗಳು ತೆರೆಕಾಣುತ್ತಿವೆ. ಇಷ್ಟೆಲ್ಲ ಸಿನಿಮಾಗಳು ಏಕಕಾಲಕ್ಕೆ ಥಿಯೇಟರ್​ಗೆ ಬಂದರೆ ಯಾವುದನ್ನು ನೋಡೋದು ಯಾವುದನ್ನು ಬಿಡೋದು ಎಂಬ ಗೊಂದಲ ಪ್ರೇಕ್ಷಕರಿಗೆ ಖಂಡಿತಾ ಆಗುತ್ತದೆ. ಕಳೆದ ವಾರ ಬಿಡುಗಡೆ ಆದ ‘ಶಿವಾಜಿ ಸುರತ್ಕಲ್​ 2’ ಚಿತ್ರ ಕೂಡ ಹಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ತಮಿಳಿನ ‘ಎನ್ನೈ ಮುಗದಾನ್​’, ‘ಯಾತಿಸೈ’ ಚಿತ್ರಗಳು ಏಪ್ರಿಲ್​ 21ರಂದು ಬಿಡುಗಡೆ ಆಗುತ್ತಿವೆ. ತೆಲುಗಿನಲ್ಲಿ ‘ಹೆಲೋ ಮೀರಾ’, ‘ವಿರೂಪಾಕ್ಷ’ ಸಿನಿಮಾಗಳು ತೆರೆಕಾಣುತ್ತಿವೆ. ಇಂಗ್ಲಿಷ್​ನ ‘ಇವಿಲ್​ ಡೆಡ್​ ರೈಸ್​’ ಸಿನಿಮಾ ಕೂಡ ಪೈಪೋಟಿ ನೀಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.