ಕನ್ನಡ, ತೆಲುಗಿನ ನಂತರ ಹಿಂದಿಯಲ್ಲಿ ರಿಮೇಕ್ ಆಗಲಿದೆ ವಿಜಯ್ ಸೇತುಪತಿ, ತ್ರಿಷಾ ನಟನೆಯ ಈ ಸೂಪರ್ ಹಿಟ್ ಚಿತ್ರ!

| Updated By: shivaprasad.hs

Updated on: Sep 23, 2021 | 5:54 PM

ಕಾಲಿವುಡ್​ನ ಸೂಪರ್ ಹಿಟ್ ಚಿತ್ರ ‘96’ ಇದೀಗ ಬಾಲಿವುಡ್​ನತ್ತ ಹೊರಟಿದೆ. ಈ ಹಿಂದೆ ಈ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ರಿಮೇಕ್ ಆಗಿತ್ತು.

ಕನ್ನಡ, ತೆಲುಗಿನ ನಂತರ ಹಿಂದಿಯಲ್ಲಿ ರಿಮೇಕ್ ಆಗಲಿದೆ ವಿಜಯ್ ಸೇತುಪತಿ, ತ್ರಿಷಾ ನಟನೆಯ ಈ ಸೂಪರ್ ಹಿಟ್ ಚಿತ್ರ!
96 ಚಿತ್ರದಲ್ಲಿ ತ್ರಿಷಾ, ವಿಜಯ್ ಸೇತುಪತಿ
Follow us on

ಸದ್ಯಕ್ಕೆ ಭಾರತೀಯ ಚಿತ್ರರಂಗವು ಹಲವು ರಿಮೇಕ್ ಚಿತ್ರಗಳತ್ತ ಆಸಕ್ತಿ ತೋರಿಸಿದೆ. ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳು, ಹಿಂದಿ ಅಥವಾ ಇತರ ಭಾಷೆಗಳಲ್ಲಿ ರಿಮೇಕ್ ಆಗುತ್ತಿವೆ. ಈಗ ತಮಿಳಿನ ಸೂಪರ್ ಹಿಟ್ ಚಿತ್ರ ‘96’ ಹಿಂದಿಗೆ ರಿಮೇಕ್ ಆಗಲು ಸಜ್ಜಾಗಿದೆ. ಈ ಚಿತ್ರವು ಈಗಾಗಲೇ ಕನ್ನಡದಲ್ಲಿ ಹಾಗೂ ತೆಲುಗಿನಲ್ಲಿ ರಿಮೇಕ್ ಆಗಿ ವಿಮರ್ಷಕರಿಂದ ಮೆಚ್ಚುಗೆ ಪಡೆದಿತ್ತು. ಆದರೆ ಮೂಲ ಚಿತ್ರವು ಪ್ರೇಕ್ಷಕರಿಂದಲೂ ಮೆಚ್ಚುಗೆ ಗಳಿಸಿ ಹಿಟ್ ಸಾಲಿಗೆ ಸೇರಿತ್ತು. ಇದೀಗ ‘96’ ಪಯಣ ಬಾಲಿವುಡ್​ನತ್ತ ಹೊರಟಿದ್ದು, ಖ್ಯಾತ ನಿರ್ಮಾಪಕ ಅಜಯ್​ ಕಪೂರ್ ಚಿತ್ರದ ಹಕ್ಕುಗಳನ್ನು ಪಡೆದಿದ್ದಾರೆ.

ತಮಿಳಿನಲ್ಲಿ ಖ್ಯಾತ ನಟ ವಿಜಯ್ ಸೇತುಪತಿ ಹಾಗೂ ತ್ರಿಷಾ ಜೋಡಿಯಾಗಿ ನಟಿಸಿದ್ದ ‘96’ ಚಿತ್ರ ಸೂಪರ್ ಹಿಟ್ ಆಗಿತ್ತು. 2018ರಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ಬಾಕ್ಸಾಫೀಸ್​ನಲ್ಲೂ ಒಳ್ಳೆ ಗಳಿಕೆ ಮಾಡಿತ್ತು. ಚಿತ್ರದಲ್ಲಿ ವಿಜಯ್ ಸೇತುಪತಿ ರಾಮಚಂದ್ರನ್ ಪಾತ್ರದಲ್ಲಿ ಹಾಗೂ ತ್ರಿಷಾ ಜಾನಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರರಂಗಕ್ಕೆ ಹೊಸ ಮಾದರಿಯ ಪ್ರೇಮ ಕತೆಯನ್ನು ಕಟ್ಟಿಕೊಟ್ಟ ಈ ಚಿತ್ರಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿತ್ತು.

ಈ ಕ್ಲಾಸಿಕಲ್ ಹಿಟ್ ಸಿನಿಮಾವನ್ನು ತೆಲುಗಿನಲ್ಲಿ ರೀಮೇಕ್ ಮಾಡಲಾಗಿತ್ತು. ಅದರಲ್ಲಿ ಸಮಂತಾ ಹಾಗೂ ಶರ್ವಾನಂದ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಆದರೆ, ತೆಲುಗಿನಲ್ಲಿ ಈ ಚಿತ್ರ ತಮಿಳಿನಷ್ಟು ಹಿಟ್ ಆಗಲಿಲ್ಲ. ಕನ್ನಡದಲ್ಲಿ ಈ ಚಿತ್ರವನ್ನು ‘99’ ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ಅದರಲ್ಲಿ ಗಣೇಶ್ ಹಾಗೂ ಭಾವನಾ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ , ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರಸ್ತುತ ಇದು ಅಜಯ್ ಕಪೂರ್ ನಿರ್ಮಾಣದಲ್ಲಿ ಹಿಂದಿಯಲ್ಲೂ ತಯಾರಾಗಲಿದೆ. ಆದರೆ ಚಿತ್ರದ ಉಳಿದ ಮಾಹಿತಿಗಳನ್ನು ಅವರು ಬಿಟ್ಟುಕೊಟ್ಟಿಲ್ಲ. ಅದನ್ನು ಸದ್ಯದಲ್ಲೇ ತಿಳಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.

‘96’ ಚಿತ್ರದ ಹಿಂದಿ ರಿಮೇಕ್ ಕುರಿತು ವಿಜಯ್ ಸೇತುಪತಿ ಟ್ವೀಟ್ ಮುಖಾಂತರ ಸಂತಸ ವ್ಯಕ್ತಪಡಿಸಿದ್ದು, ‘ಒಬ್ಬ ನಟನಾಗಿ ಕತೆಗಳನ್ನು ಹೇಳುವುದು ಬಹಳ ಸಂತೋಷ. ಅದರಲ್ಲೂ ಅವು ಮತ್ತಷ್ಟು ಜನರಿಗೆ ತಲುಪುತ್ತಿರುವುದು ಅತ್ಯಂತ ಸಂತಸದ ವಿಚಾರ. 96 ಚಿತ್ರ ನನಗೆ ಬಹಳ ಒಳ್ಳೆಯ ಅನುಭವ ನೀಡಿದೆ. ನಿರ್ಮಾಪಕ ಅಜಯ್ ಕಪೂರ್ ಅವರ ಹಿಂದಿ ರಿಮೇಕ್​ಗೂ ಶುಭಾಶಯಗಳು’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

‘ತೆರೆ ಹಿಂದೆಯೂ ನಗ್ನಳಾಗುವಂತೆ ಸೂಚಿಸಿದ್ದರು’; ಮಲ್ಲಿಕಾ ಶೆರಾವತ್​ ಬಿಚ್ಚಿಟ್ಟ ನಟರ ಕರಾಳ ಮುಖ

‘ಮದುವೆ ಆಗಿಲ್ಲ ಅಂತ ಸುಳ್ಳು ಹೇಳಬೇಕು’: ನಟ ಆರ್​. ಮಾಧವನ್​ ಮೇಲೆ ಹೇರಲಾಗಿತ್ತು ಒತ್ತಡ

ತನ್ನದೇ ಭಾಷೆಯಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದ ರಾಯನ್ ರಾಜ್ ಸರ್ಜಾ; ವಿಡಿಯೋ ನೋಡಿ

(96 Movie will remade in Bollywood rights are bagged by Ajay Kapoor Vijay Sethupati wishes team)

Published On - 5:52 pm, Thu, 23 September 21