
ನಟ ಸಂಜಯ್ ದತ್ ಅವರು ಮೊದಲು ಸಾಕಷ್ಟು ಬೇಡಿಕೆ ಹೊಂದಿರೋ ನಟ ಆಗಿದ್ದರು. ಅವರ ಕಾಲ್ಶೀಟ್ ಸುಲಭದಲ್ಲಿ ಸಿಗುತ್ತಿರಲಿಲ್ಲ. ಆ ಬಳಿಕ ಅವರ ಬಗ್ಗೆ ಇರೋ ಚಿತ್ರಣ ಬದಲಾಯಿತು ಎಂಬುದು ಬೇರೆ ವಿಚಾರ. ಅದೇನೇ ಇರಲಿ 2000ನೇ ಇಸವಿ ಸಂದರ್ಭದಲ್ಲಿ ನಿರ್ದೇಶಕರೊಬ್ಬರು ಸಂಜಯ್ ದತ್ ಅವರನ್ನು ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಕರೆಸೋ ಪ್ಲ್ಯಾನ್ ಮಾಡಿದ್ದರು. ಅವರನ್ನು ಕರೆತರಲು ಸಾಹಸಪಟ್ಟು ಖಿನ್ನತೆಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗಿತ್ತು.
ಅವರು ಬೇರಾರೂ ಅಲ್ಲ ಬಾಲಿವುಡ್ನ ಹಿರಿಯ ನಿರ್ದೇಶಕ ಮಹೇಶ್ ಮಂಜ್ರೇಕರ್. 2000ನೇ ಇಸ್ವಿಯಲ್ಲಿ ಅವರು ನಿರ್ದೇಶನ ಮಾಡಿದ ‘ನಿದಾನ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಸಂಜಯ್ ದತ್ ಅವರ ಕಾಲ್ಶೀಟ್ ಪಡೆಯಲು ಪ್ರಯತ್ನಿಸಿ ಮಹೇಶ್ ಮಂಜ್ರೇಕರ್ಗೆ ಸುಸ್ತಾಗಿತ್ತು. ಕೊನೆಗೂ ಸಂಜಯ್ ದತ್ ಶೂಟ್ಗೇನೋ ಬಂದರು. ಆದರೆ, 8 ಗಂಟೆ ಆಗಲೇ ತಡವಾಗಿತ್ತು.
‘ಸಂಜಯ್ ದತ್ ನನ್ನ ಫೇವರಿಟ್ ಹೀರೋ. ಅವರಂತೆ ಉದ್ದ ಕೂದಲು ಬಿಡಲು ನನಗೆ ಇಷ್ಟ ಆಗಿತ್ತು. ನಾನು ನಿದಾನ್ ಹೆಸರಿನ ಸಿನಿಮಾ ಮಾಡುತ್ತಿದ್ದೆ. ಹುಡುಗಿಯೊಬ್ಬಳಿಗೆ ಎಚ್ಐವಿ ತಗಲೋ ಕಥೆ ಇದು. ಅವಳು ಸಂಜಯ್ ದತ್ನ ದೊಡ್ಡ ಅಭಿಮಾನಿ ಎಂಬುದು ಚಿತ್ರದ ಕಥೆ. ಹೀಗಾಗಿ, ಅವರು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಬೇಕಿತ್ತು’ ಎಂದಿದ್ದಾರೆ ಮಹೇಶ್.
ಸಂಜಯ್ ದತ್ ಮ್ಯಾನೇಜರ್ ಬಳಿ ಮಾತನಾಡಿದೆ. ಅವರ ಬಳಿ ಡೇಟ್ಸ್ ಇಲ್ಲ ಎಂದು ಹೇಳಿದರು. ಆಗ ಜಾಕಿ ಶ್ರಾಫ್ ಹಾಗೂ ಸಂಜಯ್ ದತ್ ಒಟ್ಟಾಗಿ ನಟಿಸುತ್ತಿದ್ದಾರೆ ಅನ್ನೋದು ಗೊತ್ತಾಯಿತು. ಅವರ ಬಳಿ ಭೇಟಿಗೆ ಅವಕಾಶ ಕೇಳಿದೆ. ಒಂದು ತಿಂಗಳು ಬಿಟ್ಟು ಸಂಜಯ್ ದತ್ನ ಭೇಟಿ ಮಾಡೋ ಅವಕಾಶ ಸಿಕ್ಕಿತು. ಅದಕ್ಕೂ ಮೊದಲು ಒಮ್ಮೆ ಸಂಜಯ್ನ ಭೇಟಿ ಮಾಡಿದ್ದೆ. ಆಗ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುವ ಭರವಸೆ ನೀಡಿದ್ದರು. ಆದರೆ, ನಂತರ ಅವರು ನನ್ನ ಗುರುತು ಹಿಡಿಯಲೇ ಇಲ್ಲ’ ಎಂದಿದ್ದರು ಮಹೇಶ್.
ಇದನ್ನೂ ಓದಿ: ಹಾಲಿವುಡ್ ಸಿನಿಮಾದಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್; ಸಿಕ್ತು ಬಿಗ್ ನ್ಯೂಸ್
‘ನಾನು ಅವರ ಬಳಿ ಡೇಟ್ ಕೇಳಿದಾಗ ಅವರು ಮುಂದಕ್ಕೆ ಹಾಕುತ್ತಲೇ ಬರುತ್ತಿದ್ದರು. ನನಗೆ ಒಂದು ಹಂತದಲ್ಲಿ ಖಿನ್ನತೆ ಉಂಟಾಯಿತು. ಒಂದು ದಿನ ಅವರು ಸಿನಿಮಾ ಸೆಟ್ಗೆ ಬರೋದಾಗಿ ಹೇಳಿದರು. ಆದರೆ, ಒಂದೇ ದಿನ ಎಂದು ಹೇಳಿದರು. ನಾವಿಲ್ಲಿ 3 ದಿನಕ್ಕಾಗುವಷ್ಟು ಪ್ಲ್ಯಾನ್ ಮಾಡಿಕೊಂಡಿದ್ದೆವು. ಮಧ್ಯಾಹ್ನ ಬರುತ್ತೇನೆ ಎಂದವರು ರಾತ್ರಿ 10 ಗಂಟೆಗೆ ಬಂದರು. ಮಧ್ಯರಾತ್ರಿವರೆಗೆ ಮಾತ್ರ ಇರೋದಾಗಿ ಹೇಳಿದರು. 2 ಗಂಟೆಯಲ್ಲಿ ಶೂಟ್ ಸಾಧ್ಯ ಇರಲಿಲ್ಲ. ನಂತರ ಮುಂಜಾನೆ 4 ಗಂಟೆವರೆಗೆ ಶೂಟ್ ಮಾಡಿದೆವು’ ಎಂದಿದ್ದರು ಮಹೇಶ್. ನಂತರ ‘ವಾಸ್ತವ್’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದರು. ಈ ಸಿನಿಮಾ ಯಶಸ್ಸು ಕಂಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.