ರಜನಿಕಾಂತ್ ಕಾಲಿಗೆ ಬೀಳಲು ಬಂದ ಆಮಿರ್ ಖಾನ್; ತಡೆದು ನಿಲ್ಲಿಸಿದ ಸೂಪರ್ ಸ್ಟಾರ್

ಬಹುನಿರೀಕ್ಷಿತ ‘ಕೂಲಿ’ ಸಿನಿಮಾದಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ಅವರು ಅಭಿನಯಿಸಿದ್ದಾರೆ. ರಜನಿಕಾಂತ್ ಮೇಲಿನ ಅಭಿಮಾನದಿಂದ ಅವರು ಈ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದಾರೆ. ಉಪೇಂದ್ರ, ನಾಗಾರ್ಜುನ, ರಚಿತಾ ರಾಮ್, ಶ್ರುತಿ ಹಾಸನ್, ಸತ್ಯರಾಜ್ ಮುಂತಾದವರು ಕೂಡ ‘ಕೂಲಿ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ರಜನಿಕಾಂತ್ ಕಾಲಿಗೆ ಬೀಳಲು ಬಂದ ಆಮಿರ್ ಖಾನ್; ತಡೆದು ನಿಲ್ಲಿಸಿದ ಸೂಪರ್ ಸ್ಟಾರ್
Aamir Khan, Rajinikanth

Updated on: Aug 03, 2025 | 8:04 AM

ನಟ ರಜನಿಕಾಂತ್ (Rajinikanth) ಅವರಿಗೆ ಎಲ್ಲ ಭಾಷೆಯ ಚಿತ್ರರಂಗದವರು ಕೂಡ ಗೌರವ ನೀಡುತ್ತಾರೆ. ರಜನಿಕಾಂತ್ ಅವರಿಗೆ ಈಗ 74 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಕೂಡ ಅವರು ಸಖತ್ ಆ್ಯಕ್ಟೀವ್ ಆಗಿ, ಆ್ಯಕ್ಷನ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ‘ಕೂಲಿ’ ಸಿನಿಮಾ (Coolie Movie) ಬಿಡುಗಡೆ ಆಗಲಿದೆ. ಅದ್ದೂರಿಯಾಗಿ ಟ್ರೇಲರ್ ರಿಲೀಸ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಬಹುತಾರಾಗಣ ಇದೆ. ಬಾಲಿವುಡ್ ನಟ ಆಮಿರ್ ಖಾನ್ ಕೂಡ ಒಂದು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಆಮಿರ್ ಖಾನ್ (Aamir Khan) ಅವರು ರಜನಿಕಾಂತ್ ಕಾಲಿಗೆ ಬೀಳಲು ಮುಂದಾದರು.

ಆಮಿರ್ ಖಾನ್ ಅವರಿಗೆ ‘ಕೂಲಿ’ ಸಿನಿಮಾದಲ್ಲಿ ವಿಶೇಷ ಗೆಟಪ್ ಇದೆ. ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಅವರ ಅದೇ ಗೆಟಪ್​​ನಲ್ಲಿ ಬಂದಿದ್ದು ವಿಶೇಷವಾಗಿತ್ತು. ಅವರ ಆಗಮನ ಆಗುತ್ತಿದ್ದಂತೆಯೇ ಇನ್ನುಳಿದ ಕಲಾವಿದರು ಎದ್ದು ನಿಂತು ಗೌರವ ಸೂಚಿಸಿದರು. ನೆರೆದಿದ್ದ ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಿಸಿದರು. ಆಮಿರ್ ಖಾನ್ ಅವರು ರಜನಿಕಾಂತ್ ಬಳಿ ತೆರಳಿ ಕಾಲಿಗೆ ನಮಸ್ಕರಿಸಲು ಬಗ್ಗಿದರು.

ಇದನ್ನೂ ಓದಿ
ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ
59ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಮೇಲೆ ಆಮಿರ್​​​ಗೆ ಲವ್? ಯಾರು ಈ ಗೌರಿ?
ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್

ಆದರೆ ರಜನಿಕಾಂತ್ ಅವರು ಕೂಡಲೇ ಆಮಿರ್ ಖಾನ್ ಅವರ ತೋಳುಗಳನ್ನು ಹಿಡಿದು ಮೇಲಕ್ಕೆ ಎತ್ತಿದರು. ಬಳಿಕ ಅವರಿಗೆ ಹ್ಯಾಂಡ್​ ಶೇಕ್ ನೀಡಿ, ತಬ್ಬಿಕೊಂಡರು. ಇಬ್ಬರು ಸ್ಟಾರ್ ಕಲಾವಿದರ ಸಮಾಗಮದಿಂದ ಅಭಿಮಾನಿಗಳಿಗೆ ತುಂಬ ಖುಷಿ ಆಯಿತು. ದೊಡ್ಡ ಪರದೆ ಮೇಲೆ ಅವರಿಬ್ಬರ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಆಮಿರ್ ಖಾನ್ ಅವರ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ವಿಶೇಷ ನಿರೀಕ್ಷೆ ಇದೆ.

ಕೂಲಿ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಮಿರ್ ಖಾನ್ ಎಂಟ್ರಿ:

ಅಂದಹಾಗೆ, ಆಮಿರ್ ಖಾನ್ ಅವರು ‘ಕೂಲಿ’ ಸಿನಿಮಾವನ್ನು ಒಪ್ಪಿಕೊಂಡಿದ್ದೇ ರಜನಿಕಾಂತ್ ಮೇಲಿನ ಅಭಿಮಾನಕ್ಕಾಗಿ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರ ಅವರು, ‘ರಜನಿಕಾಂತ್ ಅವರಿಗಾಗಿಯೇ ನಾನು ಈ ಸಿನಿಮಾ ಒಪ್ಪಿಕೊಂಡೆ. ಅವರ ನಗು, ಕಣ್ಣು, ಎನರ್ಜಿ ನನಗೆ ಇಷ್ಟ. ನಾನು ಕಥೆ ಕೂಡ ಕೇಳಲಿಲ್ಲ. ಹಣವನ್ನೂ ಕೇಳಲಿಲ್ಲ. ಡೇಟ್ಸ್ ಬಗ್ಗೆಯೂ ವಿಚಾರಿಸಲಿಲ್ಲ. ಯಾವಾಗ ಶೂಟಿಂಗ್ ಅಂತ ಮಾತ್ರ ಕೇಳಿದೆ’ ಎಂದರು.

ಇದನ್ನೂ ಓದಿ: ಮನೆಯ ನಾಯಿಗೆ ಶಾರುಖ್ ಖಾನ್ ಎಂದು ಹೆಸರು ಇಟ್ಟಿದ್ದ ಆಮಿರ್ ಖಾನ್

ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ‘ಕೂಲಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ನೀಡಿದ್ದಾರೆ. ರಜನಿಕಾಂತ್ ಜೊತೆ ಶ್ರುತಿ ಹಾಸನ್, ಉಪೇಂದ್ರ, ರಚಿತಾ ರಾಮ್, ನಾಗಾರ್ಜುನ, ಆಮಿರ್ ಖಾನ್, ಪೂಜಾ ಹೆಗ್ಡೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆಗಸ್ಟ್ 14ರಂದು ಅದ್ದೂರಿಯಾಗಿ ಈ ಚಿತ್ರ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.