ಅಧಿಕೃತವಾಗಿ ಪ್ರೇಯಸಿಯ ಫೋಟೋ ಹಂಚಿಕೊಂಡ ಅಭಿಷೇಕ್, ಮದ್ವೆ ಯಾವಾಗ ಎಂದ ಫ್ಯಾನ್ಸ್..!

ತಮ್ಮ ಲವ್​ ಬಗ್ಗೆ ಎಲ್ಲೂ ಒಂದು ಸುಳಿವು ಕೊಡದಂತೆ ಗುಟ್ಟಾಗಿ ಇಟ್ಟುಕೊಂಡಿದ್ದ ಅಭಿಷೇಕ್ ಹಾಗೂ ಅವಿವಾ ಇದೀಗ ಎಂಗೇಜ್​ ಆಗಿದ್ದಾರೆ. ಸಹ ಸದ್ದಿಲ್ಲದೇ ಉಂಗುರ ಬದಲಿಸಿಕೊಂಡಿದ್ದು, ಇದೀಗ ಅಭಿಷೇಕ್ ಅಧಿಕೃತವಾಗಿ ಸಾಮಾಜಿ ಜಾಲತಾಣಗಳಲ್ಲಿ ಪ್ರೇಯಸಿಯ ಫೋಟೋ ಹಂಚಿಕೊಂಡಿದ್ದಾರೆ.

ಅಧಿಕೃತವಾಗಿ ಪ್ರೇಯಸಿಯ ಫೋಟೋ ಹಂಚಿಕೊಂಡ ಅಭಿಷೇಕ್, ಮದ್ವೆ ಯಾವಾಗ ಎಂದ ಫ್ಯಾನ್ಸ್..!
Abhishek Ambareesh
Edited By:

Updated on: Dec 13, 2022 | 4:42 PM

ಯಂಗ್‌ ರೆಬೆಲ್‌ ಸ್ಟಾರ್‌, ನಟ ಅಭಿಷೇಕ್‌ ಅಂಬರೀಷ್‌​ (Abhishek Ambareesh) ಹಾಗೂ ಮಾಡೆಲ್​ ಅವಿವಾ ಬಿದ್ದಪ್ಪ (Aviva Bidapa) ಅವರ ನಿಶ್ಚಿತಾರ್ಥ ನೆರವೇರಿದೆ. ಈ ಜೋಡಿ ತಮ್ಮ ಐದು ವರ್ಷದ ಲವ್​ ಬಗ್ಗೆ ಎಲ್ಲೂ ಒಂದು ಸುಳಿವು ಕೊಡದಂತೆ ಗುಟ್ಟಾಗಿ ಕಾಪಾಡಿಕೊಂಡು ಬಂದಿತ್ತು. ಎಂಗೇಜ್​ಮೆಂಟ್ ಸಹ ಸದ್ದಿಲ್ಲದೇ ನೆರವೇರಿದೆ. ಇದೀಗ ಅಭಿಷೇಕ್ ಅಧಿಕೃತವಾಗಿ ಸಾಮಾಜಿ ಜಾಲತಾಣಗಳಲ್ಲಿ ಪ್ರೇಯಸಿಯ ಫೋಟೋ ಹಂಚಿಕೊಂಡಿದ್ದಾರೆ.

ಇದನ್ನೂ ಒದಿ: Abhishek Ambareesh Engagement: ಅವಿವಾಗೆ ಪುಣೆಯಲ್ಲಿ ಸ್ಪೆಷಲ್ ಉಂಗುರ ರೆಡಿ ಮಾಡಿಸಿದ ಅಭಿ, ಇದರ ಬೆಲೆ ಅಬ್ಬಬ್ಬಾ…!

ಇದೀಗ ಅಭಿಷೇಕ್ ಅಂಬರೀಷ್ ಇನ್ಸ್ಟಾಗ್ರಾಮ್ ನಲ್ಲಿ ಅವಿವಾ ಬಿದ್ದಪ್ಪ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ. ಅಭಿ ಫ್ಯಾನ್ಸ್ ಈ ಪೋಸ್ಟ್​ಗೆ ಶುಭ ಹಾರೈಸಿ ಮದ್ವೆ ಯಾವಾಗ ಎಂದು ಕಮೆಂಟ್ ಮಾಡಿ ಕೇಳುತಿದ್ದಾರೆ.


ಅಂಬಿ ಪುತ್ರ ಅಭಿಷೇಕ್ 2019ಕ್ಕೆ `ಅಮರ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಭರವಸೆಯ ನಟನಾಗಿ ಎಂಟ್ರಿ ಕೊಟ್ರು. ಈ ಚಿತ್ರದ ಮುಂಚೆಯೇ ಅವಿವಾ ಮತ್ತು ಅಭಿಷೇಕ್ ಗೆಳೆತನವಿತ್ತು. ಬಳಿಕ ಆ ಗೆಳೆತನ ಪ್ರೀತಿಗೆ ತಿರುಗಿದೆ. ಈಗ ತಮ್ಮ ಪ್ರೀತಿಯ ವಿಚಾರವನ್ನ ಎರಡು ಕುಟುಂಬಕ್ಕೂ ತಿಳಿಸಿ, ಒಪ್ಪಿಗೆ ಮೇರೆಗೆ ಈ ಜೋಡಿ ಎಂಗೇಜ್ ಆಗಿದ್ದು, ನಾಲ್ಕೈದು ತಿಂಗಳಲ್ಲೇ ಸಪ್ತಪದಿ ತುಳಿಯಲಿದೆ ಎಂದು ತಿಳಿದುಬಂದಿದೆ.

ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಮತ್ತು ಅಭಿಷೇಕ್ ನಿಶ್ಚಿತಾರ್ಥಕ್ಕೆ ಇಡೀ ಸ್ಯಾಂಡಲ್‌ವುಡ್ ಮತ್ತು ರಾಜಕೀಯ ರಂಗವೇ ಸಾಕ್ಷಿಯಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ