ಭೀಕರ ಅಪಘಾತಕ್ಕೆ ಒಳಗಾದ ನಟ ಅಜಿತ್ ಕುಮಾರ್; ಶಾಕಿಂಗ್ ವಿಡಿಯೋ ವೈರಲ್

ಪ್ರಸಿದ್ಧ ನಟ ಅಜಿತ್ ಕುಮಾರ್ ಅವರು ಮತ್ತೊಮ್ಮೆ ಕಾರ್ ರೇಸಿಂಗ್ ಸಮಯದಲ್ಲಿ ಅಪಘಾತಕ್ಕೀಡಾಗಿದ್ದಾರೆ. ಇದು ಕೆಲವೇ ತಿಂಗಳಲ್ಲಿ ಮೂರನೇ ಅಪಘಾತ. ಬೆಲ್ಜಿಯಂನಲ್ಲಿ ನಡೆದ ಈ ಅಪಘಾತದಲ್ಲಿ ಅವರಿಗೆ ಗಂಭೀರ ಗಾಯಗಳಾಗಿಲ್ಲ. ಆದರೆ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಈ ಹಿಂದೆ ಸ್ಪೇನ್ ಮತ್ತು ದುಬೈನಲ್ಲೂ ಅವರು ಅಪಘಾತಕ್ಕೀಡಾಗಿದ್ದರು.

ಭೀಕರ ಅಪಘಾತಕ್ಕೆ ಒಳಗಾದ ನಟ ಅಜಿತ್ ಕುಮಾರ್; ಶಾಕಿಂಗ್ ವಿಡಿಯೋ ವೈರಲ್
ಅಜಿತ್ ಕುಮಾರ್

Updated on: Apr 20, 2025 | 8:34 AM

ನಟ ಅಜಿತ್ ಕುಮಾರ್ (Ajith Kumar) ಅವರಿಗೆ ನಟನೆಯ ಜೊತೆಗೆ ವಿವಿಧ ಸ್ಪೋರ್ಟ್ಸ್​ಗಳ ಬಗ್ಗೆ ಆಸಕ್ತಿ ಇದೆ. ಶೂಟಿಂಗ್, ರೇಸಿಂಗ್ ಹೀಗೆ ವಿವಿಧ ಗೇಮ್​ಗಳನ್ನು ಅಜಿತ್ ಕುಮಾರ್ ಅವರು ಆಡುತ್ತಾರೆ. ಅದರಲ್ಲೂ ಇತ್ತೀಚೆಗೆ ಅವರಿಗೆ ರೇಸಿಂಗ್ ಬಗ್ಗೆ ಸಾಕಷ್ಟು ಆಸಕ್ತಿ ಬೆಳೆದುಕೊಂಡಿದೆ. ಈಗ ಅಜಿತ್ ಕುಮಾರ್ ಅವರು ರೇಸ್ ಟ್ರ್ಯಾಕ್​ನಲ್ಲಿ ಓಡಿಸುತ್ತಿದ್ದ ಕಾರು ಮತ್ತೆ ಅಪಘಾತಕ್ಕೆ ಒಳಗಾಗಿದೆ. ಅದೃಷ್ಟವಶಾತ್ ಅಜಿತ್  ಅವರಿಗೆ ಯಾವುದೇ ಪ್ರಾಣಾಪಾಯ ಆಗಿಲ್ಲ. ಈ ರೀತಿ ಆಗುತ್ತಿರುವುದು ಇದು ಮೂರನೇ ಬಾರಿ.

ಅಜಿತ್ ಕುಮಾರ್ ಅವರು ತಮ್ಮದೇ ಕಾರ್ ರೇಸಿಂಗ್ ಟೀಂ ಹೊಂದಿದ್ದಾರೆ. ಅವರು ತಮ್ಮ ತಂಡದ ಜೊತೆ ಇತ್ತೀಚೆಗೆ ಹೆಚ್ಚೆಚ್ಚು ಕಾರ್ ರೇಸ್ ಪ್ರ್ಯಾಕ್ಟಿಸ್ ಮಾಡುತ್ತಿದ್ದಾರೆ. ಅವರು ಏಪ್ರಿಲ್ 19ರಂದು ತರಬೇತಿ ಪಡೆಯುತ್ತಿರುವಾಗ ಕಾರು ಹೋಗಿ ಕಟ್ಟೆಗೆ ಗುದ್ದಿದೆ. ಮಳೆಯ ಕಾರಣಕ್ಕೆ ಟ್ರ್ಯಾಕ್ ಒದ್ದೆ ಆಗಿತ್ತು. ಈ ವೇಳೆ ಕಾರು ಅಜಿತ್ ನಿಯಂತ್ರಣಕ್ಕೆ ಸಿಕ್ಕಿಲ್ಲ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಬೆಲ್ಜಿಯಂನಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ
ಉಪೇಂದ್ರ ಮಗಳಿಗೆ ಹುಟ್ಟುಹಬ್ಬದ ಸಂಭ್ರಮ; ಐಶ್ವರ್ಯಾಗೆ ಈಗೆಷ್ಟು ವರ್ಷ?
ಬಿಗ್ ಬಾಸ್ ಮನೆಯಲ್ಲಿದ್ದಾಗ ವೋಟ್ ಹಾಕಿದ ಫ್ಯಾನ್ಸ್​ಗೆ ತ್ರಿವಿಕ್ರಂ ಅವಮಾನ
ಪ್ರಿಯಾಂಕಾ ಪತಿ ನಿಕ್ ಜೋನಸ್​ನ ಭೇಟಿ ಮಾಡಿದ ಸಿತಾರಾ ಕುಟುಂಬ
ಪೂಜಾ ಹೆಗ್ಡೆಗೆ ಕರ್ನಾಟಕದ ಕನೆಕ್ಷನ್ ಹೇಗೆ? ನಿಜಕ್ಕೂ ಅವರು ಇಲ್ಲಿಯವರಾ?


ಅಜಿತ್ ಅವರ ಕಾರು ಈ ರೀತಿ ಅಪಘಾತಕ್ಕೆ ಒಳಗಾಗುತ್ತಿರುವುದು ಇದು ಮೂರನೇ ಬಾರಿ. ಹೀಗಾಗಿ, ಅಭಿಮಾನಿಗಳಲ್ಲಿ ಈ ಬಗ್ಗೆ ಆತಂಕ ಮೂಡಿದೆ. ಅಜಿತ್ ಅವರು ಮೊಟ್ಟ ಮೊದಲ ಬಾರಿಗೆ ತೀವ್ರವಾಗಿ ಗಾಯಗೊಂಡಿದ್ದು ಫೆಬ್ರವರಿ 23ರಂದು. ಸ್ಪೇನ್​ನಲ್ಲಿ ಕಾರ್ ರೇಸ್​ನಲ್ಲಿ ಭಾಗವಹಿಸಿದಾಗ ಅಪಘಾತ ಸಂಭವಿಸಿತ್ತು. ದುಬೈನಲ್ಲೂ ಇದೇ ರೀತಿಯ ಘಟನೆ ನಡೆಯಿತು. ಅಜಿತ್ ಅವರು ಹೆಚ್ಚು ಜಾಗರೂಕರಾಗಬೇಕು ಎಂದು ಅನೇಕರು ಕೋರಿಕೊಂಡಿದ್ದಾರೆ.

ಇದನ್ನೂ ಓದಿ: ಸೋತ ಅಜಿತ್ ಚಿತ್ರಕ್ಕೆ ಶಾಕ್ ಕೊಟ್ಟ ಇಳಯರಾಜ; ಕ್ಷಮೆಯ ಜೊತೆ 5 ಕೋಟಿ ರೂಪಾಯಿಗೆ ಡಿಮ್ಯಾಂಡ್

ಸಿನಿಮಾ ವಿಚಾರಕ್ಕೆ ಬರೋದಾದರೆ ಅಜಿತ್ ಅವರು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಏಪ್ರಿಲ್ 10ರಂದು ರಿಲೀಸ್ ಆಯಿತು. ಈ ಚಿತ್ರ ಹೇಳಿಕೊಳ್ಳುವಂಥ ಯಶಸ್ಸು ಕಾಣಲಿಲ್ಲ. ಅಧಿಕ್ ರವಿಚಂದ್ರನ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ  ಬಾಕ್ಸ್ ಆಫೀಸ್​ನಲ್ಲಿ ಕೇವಲ 200 ಕೋಟಿ ರೂಪಾಯಿ ಗಳಿಕೆ ಮಾಡುತ್ತಿದೆ. ಸಿನಿಮಾ ಬಜೆಟ್​ಗೆ ಹೋಲಿಕೆ ಮಾಡಿದರೆ ಈ ಗಳಿಕೆ ತುಂಬಾನೇ ಕಡಿಮೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.