ಅಭಿಮಾನಿಗಳೊಟ್ಟಿಗೆ ಕೂತು ಸಿನಿಮಾ ನೋಡಲು ನಾನಿಗೆ ಅನುಮತಿ ನಿರಾಕರಣೆ

ನಾನಿ ನಟನೆಯ ‘ದಿ ಪ್ಯಾರಡೈಸ್’ ಸಿನಿಮಾದ ಪ್ರೀಮಿಯರ್ ಶೋಗಳು ಇಂದು ಹಲವೆಡೆ ಪ್ರದರ್ಶನಗೊಳ್ಳುತ್ತಿವೆ. ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡುತ್ತಿರುವ ನಟ ನಾನಿ, ಅಭಿಮಾನಿಗಳೊಟ್ಟಿಗೆ ಕೂತು ಸಿನಿಮಾ ನೋಡಲು ಬಯಸಿದ್ದರು. ಇದಕ್ಕಾಗಿ ಖುದ್ದು ತೆಲಂಗಾಣ ಸಿಎಂ ಬಳಿ ಅನುಮತಿ ಕೋರಿದ್ದರು. ಆದರೆ ಹೈದರಾಬಾದ್ ಪೊಲೀಸರು ನಾನಿಗೆ ಅನುಮತಿ ನಿರಾಕರಿಸಿದ್ದಾರೆ.

ಅಭಿಮಾನಿಗಳೊಟ್ಟಿಗೆ ಕೂತು ಸಿನಿಮಾ ನೋಡಲು ನಾನಿಗೆ ಅನುಮತಿ ನಿರಾಕರಣೆ
The Paradise Movie

Updated on: Sep 23, 2026 | 3:40 PM

ಮುಖ್ಯಾಂಶಗಳು

  • ದಿ ಪ್ರಾರಡೈಸ್ ಸಿನಿಮಾದ ಪ್ರೀಮಿಯರ್ ಶೋ
  • ಅಭಿಮಾನಿಗಳೊಟ್ಟಿಗೆ ಕೂತು ಸಿನಿಮಾ ನೋಡಲು ಬಯಸಿದ್ದ ನಟ ನಾನಿ
  • ಪೊಲೀಸರು ನಾನಿಗೆ ಅನುಮತಿ ನಿರಾಕರಿಸಿದ್ದಾರೆ.

ತೆಲುಗಿನ ಜನಪ್ರಿಯ ನಟ ನಾನಿ ನಟಿಸಿರುವ ‘ದಿ ಪ್ಯಾರಡೈಸ್’ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದ ಪ್ರೀಮಿಯರ್ ಶೋ ಇಂದು (ಸೆಪ್ಟೆಂಬರ್ 23) ಹಮ್ಮಿಕೊಳ್ಳಲಾಗಿದೆ. ಆಂಧ್ರ, ತೆಲಂಗಾಣ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ‘ದಿ ಪ್ಯಾರಡೈಸ್’ ಸಿನಿಮಾದ ಪ್ರೀಮಿಯರ್ ಶೋಗಳನ್ನು ಹಮ್ಮಿಕೊಳ್ಳಲಾಗಿದೆ. ನಾನಿ ಸಹ ಕಳೆದ ಕೆಲ ವಾರಗಳಿಂದಲೂ ಸಿನಿಮಾದ ಬಗ್ಗೆ ಭರ್ಜರಿ ಪ್ರಚಾರ ಮಾಡುತ್ತಲೇ ಇದ್ದಾರೆ. ಇಂದು ಆಂಧ್ರ, ತೆಲಂಗಾಣದ ಹಲವೆಡೆ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿದ್ದು, ಅಭಿಮಾನಿಗಳ ಜೊತೆಗೆ ಕೂತು ಪ್ರೀಮಿಯರ್ ಶೋ ನೋಡುವ ಆಸೆಯನ್ನು ನಟ ನಾನಿ ವ್ಯಕ್ತಪಡಿಸಿದ್ದರು. ಆದರೆ ಅವರಿಗೆ ಅವಕಾಶ ನಿರಾಕರಿಸಲಾಗಿದೆ.

ಹೈದರಾಬಾದ್​​ನ ಆರ್​​ಟಿಟಿ ರಸ್ತೆಯಲ್ಲಿ ಅಭಿಮಾನಿಗಳೊಟ್ಟಿಗೆ ಸಿನಿಮಾ ನೋಡುವ ಆಸೆಯನ್ನು ನಾನಿ ವ್ಯಕ್ತಪಡಿಸಿದ್ದರು. ಅದರಂತೆ ಸಿಎಂ ರೇವಂತ್ ರೆಡ್ಡಿ ಅವರಿಗೆ ಕರೆ ಮಾಡಿ ಅನುಮತಿಯನ್ನು ಸಹ ಕೋರಿದ್ದರು. ನಾನಿ, ಅನುಮತಿ ಕೋರಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದ ಸಿಎಂ, ಸ್ಥಳೀಯ ಪೊಲೀಸರ ಅನುಮತಿ ಪಡೆಯುವಂತೆ ಸೂಚಿಸಿದ್ದರಂತೆ. ಅದರಂತೆ ಸ್ಥಳೀಯ ಪೊಲೀಸರು ನಾನಿಯ ಬೇಡಿಕೆಯನ್ನು ಪರಾಮರ್ಶಿಸಿ ಅನುಮತಿ ನಿರಾಕರಿಸಿದ್ದಾರೆ.

ಸ್ಟಾರ್ ನಟ ನಾನಿ ಚಿತ್ರಮಂದಿರಕ್ಕೆ ಬಂದರೆ ಜನಗಳನ್ನು ನಿಯಂತ್ರಿಸುವುದು ಸಮಸ್ಯೆ ಆಗುತ್ತದೆ ಹಾಗೂ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ ಹಾಗೂ ಇದೇ ದಿನ ಗಣೇಶ ವಿಸರ್ಜನೆಗಳು ಸಹ ಇರುವ ಕಾರಣ ಭದ್ರತೆಗೆ ಸಮಸ್ಯೆ ಆಗಬಹುದೆಂಬ ಎಂಬ ಕಾರಣಕ್ಕೆ ಪೊಲೀಸರು ನಾನಿ ಅಭಿಮಾನಿಗಳೊಟ್ಟಿಗೆ ಕುಳಿತು ಸಿನಿಮಾ ನೋಡುವ ಕೋರಿಕೆಯನ್ನು ನಿರಾಕರಿಸಿದ್ದಾರೆ. ಈ ಹಿಂದೆ ಸ್ಟಾರ್ ನಟರು ಚಿತ್ರಮಂದಿರಗಳಿಗೆ ಬಂದಾಗ ಸಾಕಷ್ಟು ಸಮಸ್ಯೆಗಳಾಗಿದ್ದವು, ಅವನ್ನೆಲ್ಲ ಪರಿಗಣಿಸಿ ನಾನಿಗೆ ಪೊಲೀಸರು ಅನುಮತಿ ನಿರಾಕಾರ ಮಾಡಿದ್ದಾರೆ.

ಇದನ್ನೂ ಓದಿ:‘ನನ್ನ ಚಿತ್ರಗಳಿಗೆ ಪ್ಯಾನ್ ಇಂಡಿಯಾ ಟ್ಯಾಗ್ ಬೇಡ’; ಕಾರಣ ಕೊಟ್ಟ ನಾನಿ

ಈ ಬಗ್ಗೆ ಸಿಎಂ ರೇವಂತ್ ರೆಡ್ಡಿ ಅವರಿಗೆ ಟ್ವೀಟ್ ಮಾಡಿರುವ ನಟ ನಾನಿ, ‘ಸಾರ್ವಜನಿಕ ಸುರಕ್ಷತೆಯ ಮಹತ್ವವನ್ನು, ಅದರಲ್ಲೂ ವಿಶೇಷವಾಗಿ ಗಣೇಶ ವಿಸರ್ಜನೆಯ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಆಗಬೇಕಿರುವ ಕಾರ್ಯಗಳನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಪೊಲೀಸ್ ಇಲಾಖೆಯ ಮೇಲೆ ಯಾವುದೇ ಹೆಚ್ಚುವರಿ ಹೊರೆ ಹೇರಲು ಅಥವಾ ನಡೆಯುತ್ತಿರುವ ವ್ಯವಸ್ಥೆಗಳಿಗೆ ಯಾವುದೇ ರೀತಿಯ ಅಡಚಣೆ ಉಂಟುಮಾಡಲು ನಾವು ಬಯಸುವುದಿಲ್ಲ. ಪೊಲೀಸ್ ಇಲಾಖೆಯ ಅಂತಿಮ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಮತ್ತು ಅದಕ್ಕೆ ಬದ್ಧರಾಗಿರುತ್ತೇವೆ. ಸುರಕ್ಷತೆ ಅಥವಾ ಜನಸಂದಣಿ ನಿರ್ವಹಣೆಯ ದೃಷ್ಟಿಯಿಂದ ಏನಾದರೂ ತೊಡಕುಗಳು ಉಂಟಾದಲ್ಲಿ, ನಾವು ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಆ ಭೇಟಿಯನ್ನು ಕೈಬಿಡಲು ಸಂತೋಷಪಡುತ್ತೇವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us