ದಕ್ಷಿಣ ಭಾರತದಲ್ಲಿ ಸ್ಟಾರ್ ಹೀರೋಗಳ ಸಂಖ್ಯೆ ದೊಡ್ಡದಿದೆ. ಇಲ್ಲಿನ ಸಿನಿಮಾಗಳ ಬಿಸ್ನೆಸ್ ಕೂಡ ಸಣ್ಣದೇನಲ್ಲ. ‘ಕೆಜಿಎಫ್ 2’ (KGF Chapter 2), ‘ಆರ್ಆರ್ಆರ್’ ಸೇರಿ ಅನೇಕ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಈ ಬಿಸ್ನೆಸ್ಗೆ ತಕ್ಕಂತೆ ಸೆಲೆಬ್ರಿಟಿಗಳು ಸಂಭಾವನೆ ಪಡೆಯುತ್ತಾರೆ. ದಕ್ಷಿಣದಲ್ಲಿ ಹಲವು ಸೆಲೆಬ್ರಿಟಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಈ ಸಾಲಿನಲ್ಲಿ ಅಲ್ಲು ಅರ್ಜುನ್, ಯಶ್, ಪ್ರಭಾಸ್ ಸೇರಿ ಅನೇಕರು ಇದ್ದಾರೆ. ಅದೇ ರೀತಿ ಹಲವು ಸೆಲೆಬ್ರಿಟಿಗಳು ಪ್ರೈವೆಟ್ ಜೆಟ್ ಹೊಂದಿದ್ದಾರೆ ಆ ಬಗ್ಗೆ ಇಲ್ಲಿದೆ ವಿವರ.
ತೆಲುಗಿನಲ್ಲಿ ಹೆಚ್ಚು ಸಂಭಾವನೆ ಪಡೆಯೋ ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ಮಹೇಶ್ ಬಾಬು, ಅಕ್ಕಿನೇನಿ ನಾಗಾರ್ಜುನ, ಚಿರಂಜೀವಿ ಬಳಿ ಪ್ರೈವೆಟ್ ಜೆಟ್ ಇದೆ. ಆಗಾಗ ಈ ಜೆಟ್ನಲ್ಲಿ ಇವರು ಸುತ್ತಾಟ ನಡೆಸುತ್ತಾರೆ. ಇವರ ಜೊತೆ ತೆರಳೋ ಸೆಲೆಬ್ರಿಟಿಗಳು ಕೆಲವೊಮ್ಮೆ ಈ ಫೋಟೋ ಹಂಚಿಕೊಂಡಿದ್ದಿದೆ. ಈ ಮೊದಲು ‘ಪುಷ್ಪ’ ಸಿನಿಮಾದ ಪ್ರಚಾರದ ವೇಳೆ ನಟಿ ರಶ್ಮಿಕಾ ಮಂದಣ್ಣ ಅವರು ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಫೋಟೋ ಹಂಚಿಕೊಂಡಿದ್ದರು. ಇದು ಅಲ್ಲು ಅರ್ಜುನ್ ಅವರ ಜೆಟ್ ಎನ್ನಲಾಗಿದೆ.
ದೇಶದ ವಿವಿಧ ಕಡೆಗಳಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ ಆಗಲು ಈ ಸೆಲೆಬ್ರಿಟಿಗಳು ಪ್ರೈವೆಟ್ ಜೆಟ್ ಬಳಕೆ ಮಾಡಿದ್ದು ಇದೆ. ರಾಮ್ ಚರಣ್ ಅವರು ಮುಕೇಶ್ ಅಂಬಾನಿ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ರಾಮ್ ಚರಣ್ ಖಾಸಗಿ ಜೆಟ್ನಲ್ಲಿ ತೆರಳಿದ್ದರು. ಈ ಫೋಟೋಗಳನ್ನು ರಾಮ್ ಚರಣ್ ಪತ್ನಿ ಉಪಾಸನಾ ಅವರ ಮೇಕಪ್ ಆರ್ಟಿಸ್ಟ್ ಹಂಚಿಕೊಂಡಿದ್ದರು.
ಟಾಲಿವುಡ್ ಸಿನಿಮಾಗೆ ದೊಡ್ಡ ಮಾರುಕಟ್ಟೆ ಇದೆ. ಹಲವು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ 100-150 ಕೋಟಿ ರೂಪಾಯಿ ಚಾರ್ಜ್ ಮಾಡೋ ಸೆಲೆಬ್ರಿಟಿಗಳು ಟಾಲಿವುಡ್ನಲ್ಲಿ ಇದ್ದಾರೆ. ಇತ್ತೀಚೆಗೆ ಪ್ರಭಾಸ್ ಅವರು ಲಂಡನ್ನಲ್ಲಿ ಪ್ರತಿ ತಿಂಗಳು 60 ಲಕ್ಷ ರೂಪಾಯಿ ಬಾಡಿಗೆ ನೀಡಿ ಒಂದು ಮನೆಯನ್ನು ಬಾಡಿಗೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಪ್ರಭಾಸ್ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ನಾಯಕಿ, ಸಿನಿಮಾ ಯಾವುದು? ನಟಿ ಯಾರು?
ಪ್ರಭಾಸ್ ಅವರು ಪ್ರತಿ ಚಿತ್ರಕ್ಕೆ 150 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ರಾಮ್ ಚರಣ್ ಅವರು 50-60 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಮಹೇಶ್ ಬಾಬು ಅವರು ಪ್ರತಿ ಸಿನಿಮಾಗೆ 60-80 ಕೋಟಿ ರೂಪಾಯಿ ಪಡೆಯುತ್ತಾರೆ. ಅವರು ರಾಜಮೌಳಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದು, ಈ ಚಿತ್ರಕ್ಕೆ ಅವರು ಪಡಯೋ ಸಂಭಾವನೆ 100 ಕೋಟಿ ರೂಪಾಯಿ ಮೀರಲಿದೆ ಎನ್ನಲಾಗುತ್ತಿದೆ. ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರಕ್ಕೆ 100 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ