Prabhas: ಪ್ರಚಾರಕ್ಕೆ ಬಳಕೆ ಆಗ್ತಿದ್ಯ ಪ್ರಭಾಸ್ ಮದುವೆ ವಿಚಾರ? ಮೂಡಿತು ಅನುಮಾನ
ವಿಶಾಲ್ ನಟನೆಯ ‘ರತ್ನಮ್’ ಸಿನಿಮಾ ಏಪ್ರಿಲ್ 19ರಂದು ರಿಲೀಸ್ ಆಗಿದೆ. ಹರಿ ಅವರು ಈ ಸಿನಿಮಾನ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ರೀತಿಯಲ್ಲಿ ಮೂಡಿ ಬರಲಿದೆ. ಈ ಸಿನಿಮಾದ ಪ್ರಚಾರದಲ್ಲಿ ಅವರು ಹೈದರಾಬಾದ್ನಲ್ಲಿದ್ದಾರೆ. ಅವರಿಗೆ ಮದುವೆ ಬಗ್ಗೆ ಕೇಳಲಾಗಿದೆ.

ಪ್ರಭಾಸ್ (Prabhas) ಅವರು ಟಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರು ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ ಹೊರತಾಗಿಯೂ ಮದುವೆ ಆಗೋದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಅವರಿಗೆ ಪದೇ ಪದೇ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಆದರೆ, ಇದಕ್ಕೆ ಅವರು ಉತ್ತರಿಸೋ ಗೋಜಿಗೆ ಹೋಗಿಲ್ಲ. ಪ್ರಭಾಸ್ ಅವರ ಮದುವೆ ವಿಚಾರ ಪ್ರಚಾರಕ್ಕೆ ಬಳಕೆ ಆಗುತ್ತಿದೆಯೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಅದಕ್ಕೆ ಕಾರಣವೂ ಇದೆ.
ವಿಶಾಲ್ ನಟನೆಯ ‘ರತ್ನಮ್’ ಸಿನಿಮಾ ಏಪ್ರಿಲ್ 19ರಂದು ರಿಲೀಸ್ ಆಗಿದೆ. ಹರಿ ಅವರು ಈ ಸಿನಿಮಾನ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ರೀತಿಯಲ್ಲಿ ಮೂಡಿ ಬರಲಿದೆ. ಈ ಸಿನಿಮಾದ ಪ್ರಚಾರದಲ್ಲಿ ಅವರು ಹೈದರಾಬಾದ್ನಲ್ಲಿದ್ದಾರೆ. ಅವರಿಗೆ ಮದುವೆ ಬಗ್ಗೆ ಕೇಳಲಾಗಿದೆ.
‘ಸರಿಯಾದ ಸಮಯ ಬಂದಾಗ ನಾನು ಮದುವೆ ಆಗುತ್ತೇನೆ. ಪ್ರಭಾಸ್ ಮದುವೆ ಆದ ಬಳಿಕವೇ ನಾನು ವಿವಾಹ ಆಗೋದು. ಒಂದೊಮ್ಮೆ ನಾನು ಮದುವೆ ಆದರೆ ಪ್ರಭಾಸ್ಗೆ ಮೊದಲು ಆಮಂತ್ರಣ ಪತ್ರ ನೀಡುತ್ತೇನೆ’ ಎಂದು ವಿಶಾಲ್ ಅವರು ಹೇಳಿಕೊಂಡಿದ್ದಾರೆ. ಈ ಹೇಳಿಕೆ ಸದ್ಯ ಚರ್ಚೆ ಹುಟ್ಟುಹಾಕಿದೆ.
ಯಾವುದೇ ಹೀರೋಗಳಿಗೆ ಮದುವೆ ವಿಚಾರ ತೆಗೆದರೆ ಪ್ರಭಾಸ್ ಅವರ ಮದುವೆ ವಿಚಾರ ಬರುತ್ತದೆ. ಇದನ್ನು ಎಲ್ಲರೂ ಪ್ರಚಾರಕ್ಕೆ ಬಳಕೆ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆಯನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕೇಳಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ನಾಯಕಿ, ಸಿನಿಮಾ ಯಾವುದು? ನಟಿ ಯಾರು?
ಪ್ರಭಾಸ್ ಅವರು ಸದ್ಯ ‘ಸಲಾರ್’ ಸಿನಿಮಾದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ಹೊಸ ಸಿನಿಮಾ ಕೆಲಸಗಳು ಭರ್ಜರಿಯಾಗಿ ಸಾಗುತ್ತಿವೆ. ‘ಕಲ್ಕಿ 2898 ಎಡಿ’ ಸಿನಿಮಾ ಈ ವರ್ಷ ರಿಲೀಸ್ ಆಗಲಿದೆ. ಮೇ 9ರಂದು ಚಿತ್ರ ಬಿಡುಗಡೆ ಆಗೋ ಸಾಧ್ಯತೆ ಇದೆ. ಇದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಚುನಾವಣೆ ಸಮಯವಾಗಿರುವುದರಿಂದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಲಿದೆ ಎಂದು ವರದಿ ಆಗಿದೆ. ಸದ್ಯ ಚಿತ್ರತಂಡ ಯಾವುದೇ ಪ್ರಚಾರ ಕಾರ್ಯದಲ್ಲಿ ಭಾಗಿ ಆಗುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ