ನಟ ಆರ್​. ಮಾಧವನ್​ ಇಂಗ್ಲಿಷ್​ ಉಚ್ಚಾರಣೆ ಕೇಳಿದ್ರಾ?; ವೈರಲ್​ ಆಯ್ತು ಹಳೆಯ ವಿಡಿಯೋ

| Updated By: ರಾಜೇಶ್ ದುಗ್ಗುಮನೆ

Updated on: Jul 05, 2021 | 6:21 PM

ಮಾಧವನ್​ ಕಾರು ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಲ್ಲಿ ಅವರ ಇಂಗ್ಲಿಷ್​ ಅದ್ಭುತವಾಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.

ನಟ ಆರ್​. ಮಾಧವನ್​ ಇಂಗ್ಲಿಷ್​ ಉಚ್ಚಾರಣೆ ಕೇಳಿದ್ರಾ?; ವೈರಲ್​ ಆಯ್ತು ಹಳೆಯ ವಿಡಿಯೋ
ಮಾಧವನ್
Follow us on

ನಟ ಆರ್​. ಮಾಧವನ್​ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಜಾಹೀರಾತು ಇಂಡಸ್ಟ್ರಿಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಅವರು ಈ ಮೊದಲು ಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಈಗ ಅವರ ಹಳೆಯ ಜಾಹೀರಾತಿನ ವಿಡಿಯೋ ಒಂದು ವೈರಲ್​ ಆಗಿದೆ. ​ಈ ವಿಡಿಯೋದಲ್ಲಿ ಮಾಧವನ್​ ಇಂಗ್ಲಿಷ್​ ಉಚ್ಚಾರಣೆ ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಮಾಧವನ್​ ಕಾರು ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಲ್ಲಿ ಅವರ ಇಂಗ್ಲಿಷ್​ ಅದ್ಭುತವಾಗಿದೆ. ಲೇಡಿ ಲವ್​ ಬಗ್ಗೆ ಮಾತನಾಡುವ ಮಾಧವನ್​, ‘ನನ್ನ ಪ್ರಿಯತಮೆ ಡೈಮಂಡ್​ ಅಥವಾ ದೊಡ್ಡ ಮನೆ ಬಗ್ಗೆ ಚಿಂತೆ ನಡೆಸಿಲ್ಲ. ಅವಳು ವಿಶ್ವವನ್ನು ನೋಡಬೇಕು ಎಂದು ಬಯಸಲಿಲ್ಲ. ನಿಖಿಲ್​ ನೀನೆ ನನಗೆ ವಿಶ್ವ ಎಂದಳು. ಲಕ್ಸುರಿ ಕಾರನ್ನು ಖರೀದಿಸಿ ಆಕೆಗೆ ಕೀ ನೀಡಿದರೆ, ‘ನಾನು ನನ್ನ ಈ ಸಣ್ಣಕಾರಿನಲ್ಲೇ ಖುಷಿಯಾಗಿದ್ದೇನೆ’ ಎನ್ನುವುದೇ. ಆಕೆ ಸುಳ್ಳುಗಾರ್ತಿ’ ಎಂದು ಮಾಧವನ್​ ತಮ್ಮ ಅದ್ಭುತ ಇಂಗ್ಲಿಷ್​ ಮೂಲಕ ಜಾಹೀರಾತನ್ನು ಪ್ರಸ್ತುತ ಪಡಿಸಿದ್ದಾರೆ.

ಈ ವಿಡಿಯೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದು ಬ್ರಿಟಿಷ್​ ಉಚ್ಚಾರಣೆ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಅದ್ಭುತ ಇಂಗ್ಲಿಷ್​ ಆ್ಯಕ್ಸೆಂಟ್​ ಎಂದು ಶ್ಲಾಘಿಸಿದ್ದಾರೆ.

ಮಾಧವನ್​ ಅವರ ಪತ್ನಿ ಸರಿತಾ ಅವರು ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಕೊವಿಡ್​ನ ಈ ಕಡುಕಷ್ಟದ ಸಂದರ್ಭದಲ್ಲಿ ಶಾಲೆಗಳು ಬಂದ್​ ಆಗಿವೆ. ಹಾಗಾಗಿ, ಸರಿತಾ ಅವರು ಬಡಮಕ್ಕಳಿಗೆ ಆನ್​ಲೈನ್​ ಮೂಲಕ ಪಾಠ ಹೇಳಿಕೊಡುತ್ತಿದ್ದಾರೆ. ಈ ವಿಡಿಯೋವನ್ನು ಮಾಧವನ್​ ಇತ್ತೀಚೆಗೆ ಶೇರ್​ ಮಾಡಿಕೊಂಡಿದ್ದರು. ಪತ್ನಿ ಮಾಡುತ್ತಿರುವ ಈ ಕೆಲಸದ ಮುಂದೆ ತಾವು ಅಸಮರ್ಥ ಎನಿಸುತ್ತಿದೆ ಎಂದು ಹೇಳಿದ್ದರು.

ಏಪ್ರಿಲ್​ನಲ್ಲಿ ಮಾಧವನ್​ ಅವರಿಗೆ ಕೊರೊನಾ ವೈರಸ್​ ಪಾಸಿಟಿವ್​ ಆಗಿತ್ತು. ಈಗ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ಮನೆಯಲ್ಲೇ ಇದ್ದಾರೆ. ದೇವರ ದಯೆಯಿಂದ ನಾವೆಲ್ಲ ಈಗ ಸದೃಢ ಮತ್ತು ಸುರಕ್ಷತೆಯಿಂದ ಇದ್ದೇವೆ ಎಂದು ಅವರು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ ಮಾಧವನ್​ ನಟನೆ ಮತ್ತು ನಿರ್ದೇಶನದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ರಿಲೀಸ್​ ಆಗಿರುವ ಟ್ರೇಲರ್​ ಭಾರಿ ಕೌತುಕ ಮೂಡಿಸಿದೆ. ಟ್ರೇಲರ್​ನಲ್ಲಿ​ ಮಾಧವನ್​ ಅವರ ಕೆಲಸ ಕಂಡು ಎಲ್ಲರೂ ಶಹಭಾಷ್​ ಎಂದಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್ ನೋಡಿರುವ ನರೇಂದ್ರ ಮೋದಿ, ಅಮಿತಾಬ್​ ಬಚ್ಚನ್​, ಪ್ರಿಯಾಂಕಾ ಚೋಪ್ರಾ, ಹೃತಿಕ್​ ರೋಷನ್​, ಅಭಿಷೇಕ್​ ಬಚ್ಚನ್​ ಮುಂತಾದವರು ಫಿದಾ ಆಗಿದ್ದಾರೆ.

ಇದನ್ನೂ ಓದಿ: Rocketry Trailer: ದೇಶದ್ರೋಹ ಆರೋಪ ಹೊತ್ತಿದ್ದ ನಂಬಿ ನಾರಾಯಣ್​ ಬಗ್ಗೆ ಮಾಧವನ್​ ಸಿನಿಮಾ! ‘ರಾಕೆಟ್ರಿ’ ಚಿತ್ರದ ರಿಯಲ್​ ಕಥೆ ಏನು?

Madhavan: ಹೆಂಡತಿ ಎದುರು ನಾನು ಅಸಮರ್ಥ; ನಟ ಮಾಧವನ್​ ಬಹಿರಂಗವಾಗಿ ಹೀಗೆ ಹೇಳಲು ಕಾರಣ ಏನು?