
ನಟ ಹಾಗೂ ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ (Thalapthy Vijay) ಅವರು ಈಗ ರಾಜಕೀಯಕ್ಕೆ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಇದಕ್ಕೂ ಮುನ್ನ ತಮಿಳುನಾಡಿನ ನಾನಾ ಕಡೆಗಳಲ್ಲಿ ಅವರು ರ‍್ಯಾಲಿ, ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ವಿಜಯ್ ಅವರು ಮಧುರೈನಲ್ಲಿ ಆಗಸ್ಟ್ 21ರಂದು ದೊಡ್ಡ ಮಟ್ಟದ ಸಮಾವೇಶ ಆಯೋಜಿಸಿದ್ದರು. ಇದಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದಾರೆ. ಈ ವೇಳೆ ಅವರು ಹಲವು ಘೋಷಣೆಗಳನ್ನು ಮಾಡಿದರು. ನೆರೆದ ಜನರನ್ನು ನೋಡಿ ಅವರು ಭಾವುಕರಾದರು.
ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳು ಇವೆ. ಎಲ್ಲಾ ಕ್ಷೇತ್ರಗಳಲ್ಲಿ ಇವರ ಪಕ್ಷ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ‘ನಾವು ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದೇವೆ. ನಿಮ್ಮ ಮನೆಯಿಂದ ಸ್ಪರ್ಧಿಸುವ ಅಭ್ಯರ್ಥಿ ಮತ್ತು ನಾನು ಇಬ್ಬರೂ ಒಂದೇ ಎಂದುಕೊಳ್ಳಿ. ಅವರಿಗೆ ಮತ ಹಾಕುವುದು ನನಗೆ ಮತ ಹಾಕಿದಂತೆ’ ಎಂದು ದಳಪತಿ ವಿಜಯ್ ಹೇಳಿದ್ದಾರೆ. ಮಧುರೈನ ಪೂರ್ವ ಕ್ಷೇತ್ರದಿಂದ ವಿಜಯ್ ಸ್ಪರ್ಧೆ ಮಾಡೋದಾಗಿ ಹೇಳಿದ್ದಾರೆ. ಅಲ್ಲದೆ ಯಾವುದೇ ಪಕ್ಷದ ಜೊತೆ ಮೈತ್ರಿ ಕೂಡ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ದಳಪತಿ ವಿಜಯ್ ಕೊನೆಯ ಸಿನಿಮಾಗೆ ಪಡೆದ ಸಂಭಾವನೆ ಇಷ್ಟೊಂದಾ?
ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ನೇರವಾಗಿ ಟೀಕೆ ಮಾಡುವ ಕೆಲಸವನ್ನು ವಿಜಯ್ ಮಾಡಿದ್ದಾರೆ. ‘ಕಳೆದ 4 ವರ್ಷಗಳಲ್ಲಿ ಸಾರ್ವಜನಿಕ ನೀತಿ, ನಿರೂಪಣೆ ಮತ್ತು ದುರಾಡಳಿತದ ಬಗ್ಗೆ ನಾವು ಪ್ರಶ್ನಿಸಿದಾಗ ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರಿಗೆ ಕಾಳಜಿ ಇದ್ದಿದ್ದರೆ ಅವರು ಪ್ರತಿಯೊಂದು ದೂರಿಗೂ ಉತ್ತರಿಸುತ್ತಿದ್ದರು’ ಎಂದು ವಿಜಯ್ ಟೀಕಿಸಿದ್ದಾರೆ.
#ThalapathyVijay gets emotional by seeing the lakhs of crowd gathered for him ❣️pic.twitter.com/AB0P9qKZMO
— AmuthaBharathi (@CinemaWithAB) August 21, 2025
“I am contesting in all 234 constituencies. The candidate standing from your household is none other than me. That candidate and I are one and the same. Voting for them is like voting for me.”#ThalapathyVijay pic.twitter.com/IIsqvs11pL
— Gulte (@GulteOfficial) August 21, 2025
ಸಮಾವೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದರು. ಇದರಿಂದ ವಿಜಯ್ ಕೂಡ ಖುಷಿಯಾದರು. ಅವರು ಭಾವುಕರಾಗಿರುವುದು ಸ್ಪಷ್ಟವಾಗಿ ಕಂಡುಬಂತು. ವಿಜಯ್ ಅವರ ಕೊನೆಯ ಚಿತ್ರ ಎನ್ನಲಾದ ‘ಜನ ನಾಯಗನ್’ ಕೆಲಸಗಳು ನಡೆಯುತ್ತಿವೆ. ಈ ಚಿತ್ರ 2026ರ ಸಂಕ್ರಾಂತಿಗೆ ರಿಲೀಸ್ ಆಗಲಿದೆ. ಆ ಬಳಿಕ ಅವರು ರಾಜಕೀಯ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಚುನಾವಣೆಯಲ್ಲಿ ಅವರ ಪಕ್ಷ ಎಷ್ಟು ಸ್ಥಾನ ಗೆಲ್ಲುತ್ತದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:01 am, Fri, 22 August 25