ಫೈಟಿಂಗ್​ ದೃಶ್ಯದ ಶೂಟಿಂಗ್​ ವೇಳೆ ವಿಶಾಲ್​ಗೆ ಗಾಯ; ಘಟನೆ ಬಗ್ಗೆ ವಿಡಿಯೋ ಸಮೇತ ವಿವರಿಸಿದ​ ನಟ

| Updated By: ಮದನ್​ ಕುಮಾರ್​

Updated on: Feb 12, 2022 | 12:22 PM

ನಿರ್ಮಾಣ ಹಂತದಲ್ಲಿ ಇರುವ ಕಟ್ಟಡವೊಂದರಲ್ಲಿ ಈ ದೃಶ್ಯದ ಶೂಟಿಂಗ್​ ನಡೆಯುತ್ತಿತ್ತು. ನೂರಾರು ಸಹ-ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡುತ್ತಿದ್ದರು.

ಫೈಟಿಂಗ್​ ದೃಶ್ಯದ ಶೂಟಿಂಗ್​ ವೇಳೆ ವಿಶಾಲ್​ಗೆ ಗಾಯ; ಘಟನೆ ಬಗ್ಗೆ ವಿಡಿಯೋ ಸಮೇತ ವಿವರಿಸಿದ​ ನಟ
ಚಿತ್ರೀಕರಣದ ವೇಳೆ ಗಾಯಗೊಂಡ ವಿಶಾಲ್​
Follow us on

ಕಾಲಿವುಡ್​ನ (Kollywood) ಖ್ಯಾತ ನಟ ವಿಶಾಲ್​ (Actor Vishal) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಅವರ ಅಭಿಮಾನಿಗಳಿಗೆ ಒಂದು ಬ್ಯಾಡ್​ ನ್ಯೂಸ್​ ಕೇಳಿಬಂದಿದೆ. ‘ಲಾಠಿ’ ಸಿನಿಮಾದ ಶೂಟಿಂಗ್​ ವೇಳೆ ವಿಶಾಲ್​ ಗಾಯ ಮಾಡಿಕೊಂಡಿದ್ದಾರೆ. ಈ ವಿಷಯ ಲೀಕ್​ ಆಗುತ್ತಿದ್ದಂತೆಯೇ ಅವರ ಫ್ಯಾನ್ಸ್​ ಆತಂಕಕ್ಕೆ ಒಳಗಾದರು. ಹೈದರಾಬಾದ್​ನಲ್ಲಿ ‘ಲಾಠಿ’ ಸಿನಿಮಾದ (Laththi Movie) ಶೂಟಿಂಗ್​ ನಡೆಯುತ್ತಿತ್ತು. ಸಾಹಸ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ವೇಳೆ ವಿಶಾಲ್​​ ಅವರಿಗೆ ಗಾಯಗಳಾಗಿವೆ. ಕೂಡಲೇ ಅವರು ಆಸ್ಪತ್ರೆಗೆ ತೆರಳಿದರು. ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಶೂಟಿಂಗ್​ ಸಮಯದಲ್ಲಿ ದುರ್ಘಟನೆ ನಡೆದ ಅನೇಕ ಉದಾಹರಣೆಗಳಿವೆ. ಹಾಗಾಗಿ ಇಂಥ ವಿಷಯ ಕೇಳಿಬಂದಾಗ ಅಭಿಮಾನಿಗಳಿಗೆ ಸಹಜವಾಗಿಯೇ ಆತಂಕ ಆಗುತ್ತದೆ. ಒಟ್ಟಾರೆ ಘಟನೆ ಹೇಗೆ ನಡೆಯಿತು ಎಂಬುದನ್ನು ವಿಶಾಲ್​ ಅವರು ವಿಡಿಯೋ ಸಮೇತ ವಿವರಿಸಿದ್ದಾರೆ. ಆ ಮೂಲಕ ಅಭಿಮಾನಿಗಳ ಆತಂಕವನ್ನು ದೂರ ಮಾಡಲು ಅವರು ಪ್ರಯತ್ನಿಸಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದು ಶೀಘ್ರದಲ್ಲೇ ಚಿತ್ರೀಕರಣಕ್ಕೆ ಮರಳುವುದಾಗಿ ತಿಳಿಸಿದ್ದಾರೆ.

ವಿಶಾಲ್​ ಅವರ ಸಿನಿಮಾಗಳಲ್ಲಿ ಆ್ಯಕ್ಷನ್​ ದೃಶ್ಯಗಳು ಭರ್ಜರಿಯಾಗಿ ಇರುತ್ತವೆ. ಈ ಬಾರಿ ಅವರ ‘ಲಾಠಿ’ ಚಿತ್ರಕ್ಕೆ ಪೀಟರ್​ ಹೇನ್​ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ‘ಈ ಸಾಹಸ ದೃಶ್ಯವನ್ನು ಚಿತ್ರೀಕರಿಸುವಾಗ ಹಲವು ಹೇರ್​ಲೈನ್​ ಫ್ರ್ಯಾಕ್ಚರ್​ ಆಗಿದೆ. ವಿಶ್ರಾಂತಿ ಪಡೆಯಲು ಕೇರಳಕ್ಕೆ ತೆರಳಿದ್ದೇನೆ. ಕೊನೇ ಹಂತದ ಶೂಟಿಂಗ್​ಗೆ ಮಾರ್ಚ್​ ಮೊದಲ ವಾರದಲ್ಲಿ ಬಂದು ಸೇರಿಕೊಳ್ಳುತ್ತೇನೆ’ ಎಂದು ವಿಶಾಲ್​ ಟ್ವೀಟ್​ ಮಾಡಿದ್ದಾರೆ.

ನಿರ್ಮಾಣ ಹಂತದಲ್ಲಿ ಇರುವ ಕಟ್ಟಡವೊಂದರಲ್ಲಿ ಈ ದೃಶ್ಯದ ಶೂಟಿಂಗ್​ ನಡೆಯುತ್ತಿತ್ತು. ನೂರಾರು ಸಹ-ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡುತ್ತಿದ್ದರು. ಮಗುವನ್ನು ಎತ್ತಿಕೊಂಡು ಆಳವಾದ ಜಾಗಕ್ಕೆ ಧುಮುಕುವ ಸೀನ್​ನಲ್ಲಿ ವಿಶಾಲ್​ ನಟಿಸುತ್ತಿದ್ದರು. ಈ ವೇಳೆ ಅವರಿಗೆ ಗಾಯಗಳಾದವು. ಈ ಸಿನಿಮಾದಲ್ಲಿ ಅವರು ಪೊಲೀಸ್​ ಅಧಿಕಾರಿ ಪಾತ್ರ ಮಾಡಿದ್ದಾರೆ. ಈ ಮೊದಲು ಕೂಡ ಬೇರೆ ಸಿನಿಮಾಗಳ ಸಾಹಸ ದೃಶ್ಯಗಳ ಶೂಟಿಂಗ್​ ಸಂದರ್ಭದಲ್ಲಿ ವಿಶಾಲ್​ ಗಾಯಗೊಂಡಿದ್ದುಂಟು.

‘ಲಾಠಿ’ ಚಿತ್ರಕ್ಕೆ ಎ. ವಿನೋದ್​ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ಸುನೈನಾ ನಟಿಸುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿ ಬಹುಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಕನ್ನಡ ಚಿತ್ರರಂಗದ ಜೊತೆ ವಿಶಾಲ್​ ಅವರು ಒಡನಾಟ ಹೊಂದಿದ್ದಾರೆ. ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ‘ಪುನೀತ ನಮನ’ ಕಾರ್ಯಕ್ರಮದಲ್ಲೂ ವಿಶಾಲ್​ ಭಾಗಿ ಆಗಿದ್ದರು. ಅಪ್ಪು ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರಿಗೆ ಅವರು ಸಾಂತ್ವನ ಹೇಳಿದ್ದರು. ಪುನೀತ್​ ನೋಡಿಕೊಳ್ಳುತ್ತಿದ್ದ ಬಡ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಇನ್ಮುಂದೆ ತಾವು ಹೊತ್ತುಕೊಳ್ಳಲು ಸಿದ್ಧ ಎಂದು ವಿಶಾಲ್​ ಹೇಳಿದ್ದರು.

ಇದನ್ನೂ ಓದಿ:

ಶಕ್ತಿಧಾಮ ನೋಡಿಕೊಳ್ಳುವ ಬಗ್ಗೆ ಅಶ್ವಿನಿ​ ಜತೆ ವಿಶಾಲ್​ ಚರ್ಚೆ; ಪುನೀತ್​​ ಕುಟುಂಬದಿಂದ ಅನುಮತಿ ಸಿಗೋದು ಯಾವಾಗ?

Photos: ಶಿವಣ್ಣನ ಜತೆ ವಿಶಾಲ್​ ಮಾತುಕತೆ; ಪುನೀತ್​ ಫೋಟೋಗೆ ಹಾರ ಹಾಕಿ ನಮಿಸಿದ ತಮಿಳು ನಟ

Published On - 12:13 pm, Sat, 12 February 22