Kavya Gowda: ಪ್ರೀತಿ ವಿಚಾರ ಬಿಚ್ಚಿಟ್ಟ ಕಿರುತೆರೆ ನಟಿ ಕಾವ್ಯಾ ಗೌಡ; ದುಬೈನಲ್ಲಿ ಸಖತ್​ ಫೋಟೋಶೂಟ್​

|

Updated on: Apr 24, 2021 | 6:31 PM

ಸಾಲು ಸಾಲು ಪೋಟೋಗಳನ್ನು ಪೋಸ್ಟ್​ ಮಾಡಿರುವ ಕಾವ್ಯಾ ಗೌಡ ಉದ್ದನೆಯ ಸಾಲುಗಳನ್ನು ಬರೆದಿದ್ದಾರೆ. ಅಲ್ಲದೆ, ನಿನ್ನನ್ನು ಪಡೆಯಲು ನಾನೆಷ್ಟು ಲಕ್ಕಿ ಎಂದು ಕೂಡ ಹೇಳಿಕೊಂಡಿದ್ದಾರೆ.

Kavya Gowda: ಪ್ರೀತಿ ವಿಚಾರ ಬಿಚ್ಚಿಟ್ಟ ಕಿರುತೆರೆ ನಟಿ ಕಾವ್ಯಾ ಗೌಡ; ದುಬೈನಲ್ಲಿ ಸಖತ್​ ಫೋಟೋಶೂಟ್​
ಪ್ರೀತಿ ವಿಚಾರ ಬಿಚ್ಚಿಟ್ಟ ಕಾವ್ಯಾ ಗೌಡ
Follow us on

ರಾಧಾ ರಮಣ ಧಾರಾವಾಹಿ ಮೂಲಕ ಚಿರಪರಿಚಿತರಾದ ನಟಿ ಕಾವ್ಯಾ ಗೌಡ ಈಗ ಪ್ರೀತಿ ವಿಚಾರ ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ದುಬೈಗೆ ತೆರಳಿದ್ದ ಅವರು ಅಲ್ಲಿಂದಲೇ ತಮ್ಮ ಲೈಫ್​ ಪಾರ್ಟರ್​​ಅನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ತಾವು ಮದುವೆ ಆಗುತ್ತಿರುವ ಹುಡುಗನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಹುಡುಗನ ಹೆಸರನ್ನು ಅವರು ಎಲ್ಲಿಯೂ ಬಹಿರಂಗಪಡಿಸಿಲ್ಲ

ಸಾಲು ಸಾಲು ಪೋಟೋಗಳನ್ನು ಪೋಸ್ಟ್​ ಮಾಡಿರುವ ಕಾವ್ಯಾ ಗೌಡ ಉದ್ದನೆಯ ಸಾಲುಗಳನ್ನು ಬರೆದಿದ್ದಾರೆ. ಅಲ್ಲದೆ, ನಿನ್ನನ್ನು ಪಡೆಯಲು ನಾನೆಷ್ಟು ಲಕ್ಕಿ ಎಂದು ಕೂಡ ಹೇಳಿಕೊಂಡಿದ್ದಾರೆ. ಹೆಲ್ಲೋ ಮೈ ಮುದ್ದು ಮಾ. ನಿನ್ನ ಜತೆ ಪ್ರಯಾಣ ಬೆಳೆಸಲು ನಾನು ಕಾಯುತ್ತಿದ್ದೆ. ನಿನ್ನ ಜತೆ ಕಳೆದಿದ್ದು ನನ್ನ ಜೀವನ ಅತ್ಯುತ್ತಮ ಕ್ಷಣಗಳು. ನನ್ನ ಜೀವನದಲ್ಲಿ ನಿನ್ನಂತ ಅದ್ಭುತ ವ್ಯಕ್ತಿಯನ್ನು ನಾನೆಂದು ಭೇಟಿ ಮಾಡಿಯೇ ಇರಲಿಲ್ಲ. ನಿನ್ನ ಎಲ್ಲಾ ಗುಣಗಳು ನಂಗೆ ಇಷ್ಟ. ನನ್ನ ಜೀವನವನ್ನು ಇಷ್ಟೊಂದು ಕಲರ್​ಫುಲ್​ ಮಾಡಿದ್ದಕ್ಕೆ ಧನ್ಯವಾದಗಳು.

ಜೀವನದಲ್ಲಿ ಉತ್ತಮವಾದದ್ದು ಸಿಗಲು ಕಾಯಬೇಕು ಎನ್ನುವ ಮಾತಿದೆ. ನನ್ನ ಜೀವನದಲ್ಲಿ ನೀನು ಸಿಕ್ಕ ನಂತರ ಆ ಕಾಯುವಿಕೆ ಕೊನೆಗೊಂಡಿದೆ. ಜಗತ್ತುಕೊಟ್ಟ ಅತಿ ದೊಡ್ಡ ಉಡುಗರೆ ನೀನು ಎಂದು ಬರೆದುಕೊಂಡಿದ್ದಾರೆ.

2015ರಲ್ಲಿ ತೆರೆಕಂಡ ಶುಭ ವಿವಾಹ ಧಾರಾವಾಹಿ ಮೂಲಕ ಕಾವ್ಯಾ ಗೌಡ ತಮ್ಮ ಕಿರುತೆರೆ ಪಯಣ ಆರಂಭಿಸಿದರು. ನಂತರ ರಾಧಾ ರಮಣದಲ್ಲಿ ರಾಧಾ ಆಗಿ ಕಾಣಿಸಿಕೊಂಡರು. ಗಾಂಧಾರಿ ಧಾರಾವಾಹಿಯಲ್ಲೂ ಕಾವ್ಯಾ ನಟಿಸಿದ್ದರು. 2018ರಲ್ಲಿ ತೆರೆಕಂಡ ಬಕಾಸುರ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟರು.

ಇದನ್ನೂ ಓದಿ: ಗ್ರ್ಯಾಂಡ್​ ಆಗಿ ನೆರವೇರಿದ ಚಂದನ್​-ಕವಿತಾ ನಿಶ್ಚಿತಾರ್ಥ; ಇಲ್ಲಿವೆ ನೋಡಿ ಫೋಟೋಗಳು