ಇವರು ಈಗ ದಕ್ಷಿಣದ ಸ್ಟಾರ್ ನಟಿ; ಕನ್ನಡದಲ್ಲೂ ಬಣ್ಣ ಹಚ್ಚಿದ ಇವರನ್ನು ಗುರುತಿಸುತ್ತೀರಾ?
ಕನ್ನಡ ಸಿನಿಮಾಗಳಲ್ಲೂ ಅವರು ನಟಿಸಿ ಫೇಮಸ್ ಆಗಿದ್ದಾರೆ. ತೆಲುಗಿನಲ್ಲಿ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ ಹಾಗೂ ಇತರ ಸ್ಟಾರ್ ಹೀರೋಗಳೊಂದಿಗೆ ಬಣ್ಣ ಹಚ್ಚಿದ್ದಾರೆ.

ಮೇಲಿನ ಫೋಟೋದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಜೊತೆ ಒಂದು ಬಾಲಕಿ ಇದ್ದಾರೆ. ಬಾಲ ಕಲಾವಿದೆಯಾಗಿ ಬೆಳ್ಳಿತೆರೆಗೆ ಪರಿಚಯವಾದ ಈ ಹುಡುಗಿ ನಂತರ ನಾಯಕಿಯಾಗಿ ದಕ್ಷಿಣ ಚಿತ್ರರಂಗದಲ್ಲಿ ಮಿಂಚಿದರು. ಕನ್ನಡ ಸಿನಿಮಾಗಳಲ್ಲೂ ಅವರು ನಟಿಸಿ ಫೇಮಸ್ ಆಗಿದ್ದಾರೆ. ತೆಲುಗಿನಲ್ಲಿ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ ಹಾಗೂ ಇತರ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದಾರೆ. ಕನ್ನಡದಲ್ಲಿ ರವಿಚಂದ್ರನ್ (Ravichandran) ಮೊದಲಾದ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಜನಿಕಾಂತ್ ಜೊತೆ ಹಲವು ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ಈ ನಟಿ ಬೇರಾರೂ ಅಲ್ಲ ಮೀನಾ.
ಮೀನಾ 1982ರಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡರು. ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ನಾಲ್ಕು ವರ್ಷಗಳ ಕಾಲ ಹಲವು ಚಿತ್ರಗಳಲ್ಲಿ ಬಾಲ ನಟಿಯಾಗಿ ಮಿಂಚಿದರು. 1990ರಲ್ಲಿ ಪೂರ್ಣಪ್ರಮಾಣದ ನಟಿಯಾಗಿ ಮೀನಾ ಗುರುತಿಸಿಕೊಂಡರು. ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಸೌಂದರ್ಯ ಮತ್ತು ನಟನೆಯಿಂದ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಮದುವೆಯ ನಂತರವೂ ಪೋಷಕ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬಾಲ ಕಲಾವಿದೆಯಾಗಿ, ನಾಯಕಿಯಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಿಂಚಿದ ಮೀನಾ ಬಾಲ್ಯದ ಫೋಟೋ ವೈರಲ್ ಆಗುತ್ತಿದೆ. ರಜನಿಕಾಂತ್ ಅವರ ಸಿನಿಮಾದಲ್ಲಿ ಮೀನಾ ಮಗಳ ಪಾತ್ರ ಮಾಡಿದ್ದರು. ಆಗ ಮೀನಾಗೆ ಕೇವಲ 7 ವರ್ಷ. ಈ ಸಂದರ್ಭದಲ್ಲಿ ತೆಗೆದ ಫೋಟೋ ವೈರಲ್ ಆಗುತ್ತಿದೆ.
ಮೀನಾ ಅವರು ಕನ್ನಡಿಗರಿಗೂ ಚಿರ ಪರಿಚಿತರು. 1995ರಲ್ಲಿ ತೆರೆಗೆ ಬಂದ ರವಿಚಂದ್ರನ್ ನಟನೆಯ ‘ಪುಟ್ನಂಜ’ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಆ ಬಳಿಕ ‘ಚೆಲುವ’, ‘ಮೊಮ್ಮಗ’, ‘ಶ್ರೀ ಮಂಜುನಾಥ’, ‘ಗ್ರಾಮ ದೇವತೆ’, ‘ಸ್ವಾತಿ ಮುತ್ತು’ ಮೊದಲಾದ ಕನ್ನಡ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: ಟೀಕೆ ಬೆನ್ನಲ್ಲೇ ವರಸೆ ಬದಲಿಸಿದ ‘ಆದಿಪುರುಷ್’ ತಂಡ; ಮೊದಲು ಹೇಳಿದ್ದೊಂದು, ಈಗ ಹೇಳೋದೊಂದು
ಮೀನಾ 2009ರಲ್ಲಿ ವಿದ್ಯಾಸಾಗರ್ ಹೆಸರಿನ ಸಾಫ್ಟ್‌ವೇರ್ ಇಂಜಿನಿಯರ್ ಅವರನ್ನು ವಿವಾಹವಾದರು. ಕೊವಿಡ್ ಸಂದರ್ಭದಲ್ಲಿ ವಿದ್ಯಾ ಸಾಗರ್ ನಿಧನರಾದರು. ಈ ವೇಳೆ ಮೀನಾ ದುಃಖದಲ್ಲಿ ಕೈ ತೊಳೆದರು. ಆ ನೋವಿನಿಂದ ಚೇತರಿಸಿಕೊಂಡಿರುವ ಮೀನಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:00 pm, Wed, 21 June 23